'ಎಲ್ಲೇ ಬರ ಬಂದ್ರೂ, ಯಾವ ಕೆರೆ ಬತ್ತಿದ್ರೂ ಗೌಡರ ಕಣ್ಣಲ್ಲಿ ಮಾತ್ರ ನೀರು ಬತ್ತಲ್ಲ'

Published : Jan 12, 2021, 02:45 PM IST
'ಎಲ್ಲೇ ಬರ ಬಂದ್ರೂ, ಯಾವ ಕೆರೆ ಬತ್ತಿದ್ರೂ ಗೌಡರ ಕಣ್ಣಲ್ಲಿ ಮಾತ್ರ ನೀರು ಬತ್ತಲ್ಲ'

ಸಾರಾಂಶ

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಎಚ್‌ಡಿ ದೇವೇಗೌಡ ಅವರು ಪದೇ-ಪದೇ ಕಣ್ಣೀರು ಹಾಕುತ್ತಿರುವುದಕ್ಕೆ ಬಿಜೆಪಿ ಅಧ್ಯಕ್ಷ ಲೇವಡಿ ಮಾಡಿದ್ದಾರೆ.  

ಹಾಸನ, (ಜ.12): ರಾಜ್ಯದಲ್ಲಿ ಎಲ್ಲೇ ಬರ ಬಂದರೂ, ಯಾವ ಕೆರೆ ಬತ್ತಿದರೂ ಹಾಸನದಲ್ಲಿ ಮಾತ್ರ ಗೌಡರ ಕಣ್ಣಲ್ಲಿ ನೀರು ಬತ್ತುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

ಹಾಸನದಲ್ಲಿ ಮಂಗಳವಾರ ನಡೆದ ಜನಸೇವಕ್ ಕಾರ್ಯಕ್ರಮದಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಕಾಲಕ್ಕೆ ತಕ್ಕಂತೆ ಕಣ್ಣೀರು ಸುರಿಯುತ್ತೆ. ಕಣ್ಣೀರಿನಿಂದ ಜನರ ಮನಸನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯ ಜನತೆ ಸಾಬೀತು ಮಾಡಿದ್ದಾರೆ ಎನ್ನುವ ಮೂಲಕ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೆ ಟಾಂಗ್ ಕೊಟ್ಟರು. 

ಕಾಂಗ್ರೆಸ್‌ಗೆ 3 ಶಾಪಗಳು ಇವೆಯಂತೆ: ಯಾವುವು..?

ಇನ್ನು ಕಾಂಗ್ರೆಸ್​ಗೆ ಮೂರು ಶಾಪ ತಟ್ಟಿದೆ. ಮೊದಲನೆಯದ್ದು ಗಾಂಧಿ, ಎರಡನೇ ಶಾಪ ಅಂಬೇಡ್ಕರ್, ಮೂರನೇದು ಗೋ ಶಾಪ. ಆದ್ದರಿಂದ ಆರು ದಶಕಗಳ ಕಾಲ ದೇಶವನ್ನಾಳಿದ್ದ ಕಾಂಗ್ರೆಸ್ ಇಂದು ಅವನತ್ತಿಯತ್ತ ಸಾಗಿದೆ ಎಂದು ಹೇಳಿದರು.

ಸ್ವತಂತ್ರ ಬಂದ ನಂತರ ಗಾಂಧಿ ಚಿಂತನೆಯನ್ನ ಕಾಂಗ್ರೆಸ್​ ಉಳಿಸಲಿಲ್ಲ. ಗಾಂಧಿ ವಿಚಾರವನ್ನು ಕೈ ಬಿಟ್ಟಿದೆ. ಇನ್ನು ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದ್ದು ಇದೇ ಕಾಂಗ್ರೆಸ್. ಅಂಬೇಡ್ಕರ್​ರ ಶವ ಸಂಸ್ಕಾರಕ್ಕೂ ಕಾಂಗ್ರೆಸ್ ದೆಹಲಿಯಲ್ಲಿ ಅವಕಾಶ ನೀಡಲಿಲ್ಲ. ಕಾಂಗ್ರೆಸ್ ಪ್ರಥಮ ಚಿಹ್ನೆ ಆಕಳು ಮತ್ತು ಗೋವು. ಆದ್ರೆ ನಂತರದ ದಿನದಲ್ಲಿ ಕಾಂಗ್ರೆಸ್ ಗೋಹತ್ಯೆಗೆ ಪ್ರೋತ್ಸಾಹ ನೀಡಿತು. ಈ ಮೂರೂ ಶಾಪಗಳು ಇದೀಗ ಕಾಂಗ್ರೆಸ್​ಗೆ ತಟ್ಟಿದೆ ಎಂದರು.

ಗಾಂಧೀಜಿ ಚಿಂತನೆಯ ಗ್ರಾಮ ಸ್ವಾರಾಜ್ ಕನಸನ್ನು ಜಾರಿಗೆ ತಂದವರು‌ ನರೇಂದ್ರ ಮೋದಿ. ಆದ್ದರಿಂದ ಗಾಂಧಿ ಶಾಪ ಕಾಂಗ್ರೆಸ್​ಗೆ ತಟ್ಟಿದೆ. ಕಾಂಗ್ರೆಸ್ ಅಧಿಕಾರದ ದರ್ಪ ಅಹಂಕಾರದಿಂದ ಇಂದು ಸೋತಿದೆ. ಅದ್ದರಿಂದ ನಾವುಗಳು ಅಧಿಕಾರಿದ ದರ್ಪ- ಅಹಂನ್ನು ದೂರ ಇಟ್ಟು ಜನ ಸೇವಕರಾಗಿ‌ ಕೆಲಸ ಮಾಡಿದರೆ ಮಾತ್ರ ಜನಮಾನಸದಲ್ಲಿ‌ ಉಳಿಯಲು ಸಾಧ್ಯ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ