ಬೆಂಗಳೂರು (ಮೇ.28): ನನ್ನ ಮುಂದೆ ಇರುವುದು ಕೋವಿಡ್ ನಿರ್ವಹಣೆ ಕೆಲಸ ಮಾತ್ರ. ಯಾರೋ ಎಲ್ಲಿಗೋ ಹೋಗಿ ಬಂದಿರಬಹುದು. ಆದರೆ, ಅವರಿಗೆ ಉತ್ತರ ಕೊಟ್ಟು ಕಳಿಸಿದ್ದಾರಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೊರೋನಾ ನಿಯಂತ್ರಿಸುವುದು ಮತ್ತು ಜನ ಹಿತ ಕಾಪಾಡುವುದು ನನ್ನ ಆದ್ಯತೆ. ಕೋವಿಡ್ ಎದುರಿಸುವುದು ಮೊದಲ ಕೆಲಸ. ಬೇರೆ ಯಾವುದರ ಬಗ್ಗೆಯೂ ನನ್ನ ಗಮನ ಇಲ್ಲ. ಸಚಿವರು, ಶಾಸಕರು ಒಟ್ಟಾಗಿ ಈ ಕೋವಿಡ್ ಸಮಸ್ಯೆಯನ್ನು ಎದುರಿಸಲು ಆದ್ಯತೆ ನೀಡಬೇಕಿದೆ’ ಎಂದು ಹೇಳಿದರು.
ತಕ್ಷಣ ರಾಜೀನಾಮೆ ಕೊಡಲಿ : ಸಚಿವರೋರ್ವರ ವಿರುದ್ಧ ರೇಣುಕಾಚಾರ್ಯ ಗರಂ ...
‘ನಾಯಕತ್ವ ಬದಲಾವಣೆ ಸಂಬಂಧ ಕೆಲವರು ದೆಹಲಿಗೆ ಹೋಗಿ ಬಂದಿದ್ದಾರಲ್ಲ?’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾರೋ ಒಬ್ಬರು ಎಲ್ಲಿಗೋ ಹೋಗಿ ಬಂದಿರಬಹುದು. ಅವರಿಗೆ ಉತ್ತರ ನೀಡಿ ಕಳುಹಿಸಿದ್ದಾರಲ್ಲ ..’ ಎಂದು ತೀಕ್ಷ್ಣವಾಗಿ ಹೇಳಿದರು. ‘ಶಾಸಕಾಂಗ ಪಕ್ಷದ ಸಭೆ ಕರೆಯುತ್ತೀರಾ?’ ಎಂಬ ಪ್ರಶ್ನೆಗೆ, ‘ಅದರ ಬಗ್ಗೆ ನಿಮ್ಮ (ಮಾಧ್ಯಮ) ಜತೆ ಚರ್ಚಿಸುವ ಅಗತ್ಯ ಇಲ್ಲ’ ಎಂದರು.