
ಬೆಂಗಳೂರು(ಮೇ 27) ಸಚಿವ ಸಂಪುಟ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಯಿಂದ ರಾಜೀನಾಮೆ ಮಾತುಗಳನ್ನಾಡಿದ್ದಾರೆ ಎಂಬ ಸುದ್ದಿ ಬಂದಿದೆ. ಲಘು ಧಾಟಿಯಲ್ಲಿ ಹೇಳಿದ ಸಚಿವ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ ಎಂದಿದ್ದಾರೆ.
ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸಂಬಂಧಿಸಿದ ವಿಚಾರದ ಕುರಿತ ಚರ್ಚೆ ವೇಳೆ ರಾಜೀನಾಮೆ ವಿಚಾರ ಚರ್ಚೆಯಾಗಿದೆ. ಹಾಸನ ಆಸ್ಪತ್ರೆಯಲ್ಲಿ ಕೈಗೊಂಡ ವ್ಯವಸ್ಥೆ ಬಗ್ಗೆ ಡಿಸಿಎಂ ಡಾ. ಅಶ್ವತ್ಥ ನಾರಾಯಣ ವಿವರಣೆ ನೀಡುತ್ತಿದ್ದರು.
ಸೈನಿಕನ ವಿರುದ್ಧ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ
ಈ ವೇಳೆ ನೀನು ಬರೀ ರೆಕಾರ್ಡ್ ನಲ್ಲಿ ಇರೋದನ್ನೇ ಹೇಳುತ್ತಿದ್ದಿಯಾ. ಯಾವುದೂ ಅನುಷ್ಠಾನ ಆಗಿಲ್ಲ. ಹೇಳಿದ್ದೆಲ್ಲಾ ಅನುಷ್ಠಾನ ಆಗಿದೆ ಅಂತಾದರೆ ನಾನು ರಾಜೀನಾಮೆ ಕೊಟ್ಟುಬಿಡ್ತೇನೆ ಎಂದು ಮಾಧುಸ್ವಾಮಿ ಎದ್ದು ನಿಂತಿದ್ದಾರೆ. ಈ ವೇಳೆ ಹೇ ಸುಮ್ಮನಿರಪ್ಪ ನೀನು ಎಂದು ಸಿಎಂ ಯಡಿಯೂರಪ್ಪ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.
ಏನ್ಮಾಡೋದು...ಅಧಿಕಾರಿಗಳು ಬರೆದುಕೊಟ್ಟಿದ್ದನ್ನು ಓದಿದ್ದಾರೆ. ನಾವು ರಾಜಕಾರಣಿಗಳು ಐದು ವರ್ಷ ಇರುತ್ತೇವೆ. ಅಧಿಕಾರಿಗಳು ತಾನೇ ಪರ್ಮನೆಂಟ್ ಅಲ್ಲಿ ಇರೋದು ಎಂದು ಅಶೋಕ್ ಫುಲ್ ಸ್ಟಾಪ್ ಹಾಕುವ ಮಾತುಗಳನ್ನು ಆಡಿದ್ದಾರೆ. ಸಿಎಂ ಯಡಿಯೂರಪ್ಪ ಮತ್ತು ಅಶೋಕ ಮಾತಿನಿಂದ ಮಾಧುಸ್ವಾಮಿ ವಿಚಾರವನ್ನು ಅಲ್ಲಿಗೆ ಕೈಬಿಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.