ಬಳ್ಳಾರಿಗೆ ವಿಮಾನ ನಿಲ್ದಾಣ, ಎರಡು ಹೊಸ ಕ್ರಿಕೆಟ್‌ ಕ್ರೀಡಾಂಗಣ: ಕ್ಯಾಬಿನೆಟ್‌ ಸಭೆಯ ಮುಖ್ಯಾಂಶ

By Govindaraj S  |  First Published Nov 3, 2022, 6:12 PM IST

Karnataka Cabinet Meeting Highlights: ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಬಳ್ಳಾರಿಯಲ್ಲಿ ಹೊಸ ವಿಮಾನ ನಿಲ್ದಾಣ ಮಾಡಲು ಸಂಪುಟ ಅನುಮೋದನೆ ನೀಡಿದೆ. 


ಬೆಂಗಳೂರು (ನ.03): ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಬಳ್ಳಾರಿಯಲ್ಲಿ ಹೊಸ ವಿಮಾನ ನಿಲ್ದಾಣ ಮಾಡಲು ಸಂಪುಟ ಅನುಮೋದನೆ ನೀಡಿದೆ. ಜೊತೆಗೆ ಸಭೆಯಲ್ಲಿ ಅನೇಕ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಗಣಿ ಪ್ರದೇಶದಿಂದ ಸಂಗ್ರಹವಾಗುವ KMRC Fundನಲ್ಲಿ ಬರುವ ಹಣ ಬಳಕೆ ಮಾಡಿ ವಿಮಾನ ನಿಲ್ದಾಣ ಮಾಡಲಾಗುವುದು. 2008ರಲ್ಲಿ ವಿಮಾನ ನಿಲ್ದಾಣ ಗುತ್ತಿಗೆ ಪಡದಿದ್ದ Marg Ltd Chennai ಅವರ ಗುತ್ತಿಗೆ ರದ್ದು ಮಾಡಲಾಗುವುದು. 

ರಾಜ್ಯದ ಎರಡು ಕಡೆ ಹೊಸ ಕ್ರಿಕೆಟ್ ಕ್ರೀಡಾಂಗಣ ಮಾಡಲು ಸಂಪುಟ ಅನುಮೋದನೆ ನೀಡಿದ್ದು, ಬಳ್ಳಾರಿಯಲ್ಲಿ ಕ್ರೀಡಾಂಗಣ ಮಾಡಲು 19.26 ಎಕರೆ ಜಮೀನು KSCAನವರಿಗೆ ನೀಡಲು ತಿರ್ಮಾನಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ಕ್ರೀಡಾಂಗಣ ಮಾಡಲು 23.25 ಎಕರೆ ಜಮೀನು ‌KSCAಗೆ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಬೆಂಗಳೂರು ಹೊರವಲಯದ ರಸ್ತೆ ಅಭಿವೃದ್ಧಿ ಹಾಗೂ ಕಾಮಗಾರಿಗೆ ಬೇಕಾದ ಭೂಸ್ವಾಧೀನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ವರ್ತೂರು ಬಳಿ ಎಲಿವೇಟೆಡ್ ಕಾಮಗಾರಿ ನಿರ್ಮಾಣ ಮಾಡಲಾಗುವುದು. 

Tap to resize

Latest Videos

ಇದನ್ನೂ ಓದಿ: ದಮ್‌ ಇದ್ದರೆ ಬಿಜೆಪಿ ವಿಜಯ ಯಾತ್ರೆ ತಡೀರಿ: ಸಿಎಂ ಬೊಮ್ಮಾಯಿ

1.3 ರಿಂದ 1.9 ಗೆ ಅಗಲ ವಿಸ್ತರಣೆಗೆ ಅನುಮತಿ ಕೊಡಲಾಗಿದೆ. ಕಾಮಗಾರಿಗೆ ಬೇಕಾದ ಭೂಸ್ವಾಧೀನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, 2059 ಕೋಟಿ ರೂ ವೆಚ್ಚದ ಯೋಜನೆ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಬ್ಯಾಟರಾಯನಪುರ ಗ್ರಾಮದಲ್ಲಿ ಹಣ್ಣು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಟೆಂಡರ್ ಕ್ಯಾನ್ಸಲ್ ಮಾಡಿ ಮರು ಟೆಂಡರ್ ಕರೆಯಲು ಸಂಪುಟ ಒಪ್ಪಿಗೆ ನೀಡಿದ್ದು, ಕೆಎಎಸ್ ಅಧಿಕಾರಿಗಳಾದ ನಾಗರಾಜ್, ಅರುಣ ಪ್ರಭ, ಅಪರ್ಣ ಮೇಲಿನಿ ಲೋಕಾಯುಕ್ತ ಕೇಸ್ ಕೈ ಬಿಡಲು ಸಂಪುಟ ತೀರ್ಮಾನ ಮಾಡಲಾಗಿದೆ.

ಚನ್ನಪಟ್ಟಣ ತಾಲ್ಲೂಕಿನ ತಗಚಿಗೆರೆಯಲ್ಲಿ ಗೃಹ ಮಂಡಳಿಗೆ ಭೂಮಿ ಕೊಡಲಾಗಿತ್ತು. ಭೂಮಿಯ ರೈತರು ಹೆಚ್ಚು ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು. ಅವರಿಗೆ ನಿವೇಶನ ನೀಡಲು ಸಂಪುಟ ಒಪ್ಪಿಗೆ ನೀಡಿದ್ದು, ಗೋಕಾಕ್ ತಾಲೂಕಿನ ಕೌಜಲಗಿ ಸುತ್ತಮುತ್ತ ಲಿಫ್ಟ್ ಇರಿಗೇಶನ್‌ಗಾಗಿ 32 ಕೋಟಿ ಅನುದಾನಕ್ಕೆ ಒಪ್ಪಿಗೆ ಕೊಡಲಾಗಿದೆ. ಅಲ್ಲದೇ ಸಾರ್ವಜನಿಕ ಸಾರಿಗೆ ವಾಹನಗಳಿಗೆ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆಗೆ ಕೇಂದ್ರ ಸಹಭಾಗಿತ್ವದಲ್ಲಿ 20.36 ಕೋಟಿ ವೆಚ್ಚದಲ್ಲಿ ಅಳವಡಿಕೆಗೆ ಒಪ್ಪಿಗೆಯನ್ನು ಸಚಿವ ಸಂಪುಟ ನೀಡಿದೆ.

ಇದನ್ನೂ ಓದಿ: ಪಿಸಿಎಎಸ್ DGP ಸೇರಿ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸಿದ ಸರ್ಕಾರ!

ಇನ್ನು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡಲು ಸಂಪುಟ ಸಭೆಯಲ್ಲಿ ತಿರ್ಮಾನಿಸಲಾಗಿದ್ದು, ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮಕ್ಕೆ ಸಂಪುಟ ಅನುಮೋದನೆ ನೀಡಲಾಗಿದೆ. ಮೊದಲು ತುಮಕೂರು, ಧಾರವಾಡದಲ್ಲಿ ವಿಶೇಷ ಹೂಡಿಕೆ ವಲಯ ಸ್ಥಾಪನೆ ಮಾಡಲಾಗುತ್ತಿದ್ದು, ಆರಂಭದಲ್ಲಿ KIADBಯಿಂದಲೇ ಮಾನಿಟರ್ ಮಾಡಲು ನಿರ್ಧಾರ ಮಾಡಲಾಗಿದೆ. ಗುಜರಾತ್‌ನಲ್ಲಿರುವ ವ್ಯವಸ್ಥೆ ಸ್ವಲ್ಪ ಬದಲಾವಣೆ ಮೂಲಕ ರಾಜ್ಯದಲ್ಲಿ ಜಾರಿ ಮಾಡಲಾಗುತ್ತಿದ್ದು, 262 ಹೊಸ 108 ಆಂಬ್ಯುಲೆನ್ಸ್ ಖರೀದಿಗೆ ಅನುಮೋದನೆ ನೀಡಿದೆ. ಹಾಗೂ ಖರೀದಿಗೆ 98.9 ಕೋಟಿ ರೂ ನೀಡಲು ಸಂಪುಟ ಒಪ್ಪಿಗೆ ಅಸ್ತು ಎಂದಿದೆ.

click me!