'ಮಗಳ ಬಾಳಲ್ಲಿ ನಡೆಯಬಾರದ್ದು ನಡೆದು ಹೋಗಿದೆ' ಮುಂದಿನ ಸಿಎಂ ಡಿಕೆಶಿಯೇ!

By Suvarna News  |  First Published Oct 23, 2020, 5:53 PM IST

ಆರ್ ಆರ್ ನಗರದಲ್ಲಿ ರಂಗೇರಿದ  ಚುನಾವಣಾ ಕಣ/ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದ ಸಭೆ/  ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದ ಕುಸುಮಾ ತಂದೆ/ ಒಕ್ಕಲಿಗ ಸಮುದಾಯದವರೇ ಗೆಲ್ಲಬೇಕು


ಬೆಂಗಳೂರು(ಅ. 23)  ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಂದೆ ಹನುಮಂತರಾಯಪ್ಪ  ಕಾಂಗ್ರೆಸ್ ಒಕ್ಕಲಿಗರ ಸಭೆಯಲ್ಲಿ ಮಾತನಾಡಿದ್ದಾರೆ. ಬಿಜೆಪಿಯಲ್ಲಿ ಮುನಿರಾಜುಗೌಡ ಗೆ ಟಿಕೆಟ್ ನೀಡಿದ್ರೆ ಈ ಸಭೆ ನಡೆಯುತ್ತಿರಲಿಲ್ಲ. ನಮ್ಮ ಸಮುದಾಯದವರೇ ಮೂರು ಜನ ನಿಂತಿದ್ರೆ, ಯಾರು ಬೇಕಾದರೂ ಗೆಲ್ಲಲಿ ಅಂತ ಸುಮ್ಮನಾಗುತ್ತಿದ್ದೇವು ಎಂದಿದ್ದಾರೆ.

ಬಿಜೆಪಿಯಲ್ಲಿ ಮುನಿರತ್ನ ನಾಯ್ಡುಗೆ ಟಿಕೆಟ್ ಕೊಟ್ಟಿದ್ದಾರೆ. ನನ್ನ ಮಗಳನ್ನ ನಮ್ಮ ಸಮುದಾಯ ಗೆಲ್ಲಿಸಿಕೊಂಡು ಬರಬೇಕು.. ನನ್ನ ಮಗಳಿಗೆ ಸಣ್ಣ ವಯಸ್ಸಿನಲ್ಲೇ ನಡೆಯಬಾರದು ನಡೆದುಹೋಗಿದೆ. ಇಲ್ಲಿ ಎಲ್ಲರಿಂದ ಅವಮಾನ, ನಿಂದನೆಯಿಂದ ವಿದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡಿದ್ದಳು. ಈಗ ನನ್ನ ಮಗಳು ಆರ್ ಆರ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾಳೆ. ಮುಂದೆ ಡಿ ಕೆ ಶಿವಕುಮಾರ್ ಸಿಎಂ ಆಗಬೇಕಾದ್ರೆ ಎರಡು ಕ್ಷೇತ್ರದಲ್ಲಿ ಗೆಲ್ಲಬೇಕು. ಈ ಸಲವಾದರೂ ನಮ್ಮ ಸಮುದಾಯ ಎಲ್ಲ ಒಗ್ಗಟ್ಟಾಗಬೇಕು ಎಂದರು.

Tap to resize

Latest Videos

'ಅಶೋಕಣ್ಣ, ಸಿಟಿ ರವಿಅಣ್ಣಗೆ ಪ್ರಮೋಶನ್ ಸಿಗಲಿ' 

ಮುನಿರತ್ನ ಯಾವೊಬ್ಬ ಒಕ್ಕಲಿಗ ನಾಯಕನನ್ನ ಬೆಳಿಸಿಲ್ಲ. ಒಕ್ಕಲಿಗರು ಕಂಡ್ರೆ ಅವರಿಗೆ ಆಗಲ್ಲ. ನಮ್ಮ ಸಮುದಾಯದ ಮತಗಳು ಹಂಚಿ‌ ಹೋಗಬಾರದು ಎಂದು ಮನವಿ ಮಾಡಿಕೊಂಡರು.ಡಿಕೆಶಿ ಮುಂದಿನ ಸಿಎಂಳ ಸಭೆಯಲ್ಲಿ ಮಾತನಾಡಿದ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗಲಿದ್ದು ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು .

click me!