'ಅಶೋಕಣ್ಣ, ಸಿಟಿ ರವಿ ಅಣ್ಣಗೆ ಪ್ರಮೋಶನ್ ಸಿಗಲಿ'

By Suvarna News  |  First Published Oct 23, 2020, 4:28 PM IST

ಆರ್ ಆರ್ ನಗರದಲ್ಲಿ ರಂಗೇರಿದ  ಚುನಾವಣಾ ಕಣ/ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದ ಸಭೆ/ ಬಂಡೆ ಎನ್ನುವವರಿಗೆ ಟಾಂಗ್ ಕೊಟ್ಟ ಡಿಕೆಶಿ, ರವಿ,  ಅಶ್ವಥ್ ನಾರಾಯಣ್ ಗೆ ಪ್ರಮೋಷನ್ ಸಿಗಲಿ


ಬೆಂಗಳೂರು(ಅ. 23)  ರಾಜರಾಜೇಶ್ವರಿ ನಗರ ಚುನಾವಣಾ ಕಣದಲ್ಲಿ ನಾಯಕರ ಓಡಾಡ, ಪ್ರಚಾರದ ಭರಾಟೆ ಜೋರಾಗಿಯೇ ಇದೆ.  ಕಾಂಗ್ರೆಸ್ ಆರ್.ಆರ್.ನಗರದಲ್ಲಿ ಒಕ್ಕಲಿಗ ಸಮುದಾಯದ ಸಭೆ ನಡೆಸಿದೆ.  ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.

ನನ್ನನ್ನ ಒಕ್ಕಲಿಗ ಪ್ರತಿನಿಧಿಯೆಂದು ಗುರುತಿಸಿದ್ದೀರಿ. ಜೈಲಿನಲ್ಲಿದ್ದಾಗ ನನ್ನನ್ನ ಬೆಂಬಲಿಸಿದ್ದೀರಿ. ಇದನ್ನ ನಾನು ಯಾವತ್ತೂ ಮರೆಯುವುದಿಲ್ಲ. ನನ್ನನ್ನ ಬಂಧಿಸಿದಾಗ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆ ಶಾಂತಯುತವಾಗಿ ನಡೆಯಿತು ಎಂದರು.

Tap to resize

Latest Videos

ಏಳು ಜನ್ಮ ಬಂದರೂ ಡಿಕೆಶಿ-ನಾನು ಸರಿಸಾಟಿಯಾಗಲೂ ಸಾಧ್ಯವೇ ಇಲ್ಲ

ಪೊಲೀಸ್ ಆಯುಕ್ತರೇ ಸ್ಟೇಟ್ ಮೆಂಟ್ ಕೊಟ್ರು. ಆದಾದ ಮೂರೇ ದಿನಕ್ಕೆ ಕೋರ್ಟ್ ನಲ್ಲಿ 80 ಕೋಟಿ ಲಾಸ್ ಅಂತ ದೂರು ಸಲ್ಲಿಸಿದ್ದಾರೆ. ಇದರ ಬಗ್ಗೆ ನಾನು ಹೋರಾಟ ಮಾಡ್ತೇನೆ. ನನ್ನ. ಬಗ್ಗೆ ನಮ್ಮ ಅಶೋಕಣ್ಣ, ಸಿಟಿ ರವಿ ಅಣ್ಣ ಮಾತನಾಡ್ತಿದ್ದಾರೆ. ನನ್ನ‌ಬಗ್ಗೆ ಮಾತನಾಡಿದ್ರೆ ಅವರಿಗೆ ಪ್ರಮೋಷನ್ ಸಿಗ್ತಿದೆ. ಅಶ್ವಥ್ ನಾರಾಯಣ್ ಗೆ ಪ್ರಮೋಷನ್ ಸಿಗಲಿ. ಅಶೋಕಣ್ಣನಿಗೆ ಡಿ ಪ್ರಮೋಷನ್ ಆಯ್ತು. ಅದಕ್ಕೆ ನನ್ನನ್ನ ಬಂಡೆ ಗಿಂಡೆ ಅಂತ ಮಾತನಾಡ್ತಿದ್ದಾರೆ. ಮತ್ತೊಬ್ಬರು ಬಂಡೆ ಪುಡಿಪುಡಿ ಆಗ್ತಿದೆ ಅಂತಿದ್ದಾರೆ. ಡೈನಾಮೇಟ್ ಇಟ್ಟಿದ್ದೇವೆ ಅಂತ ಹೇಳ್ತಾರೆ. ನಾನೇನು ಬಂಡೆ ಅಂತ ಹೆಸರಿಟ್ಟುಕೊಂಡವನಲ್ಲ. ನನ್ನ ಮನೆಯಲ್ಲಿ ಯಾರು ಹುಟ್ಟಿದ್ರೂ ಕೆಂಪೇಗೌಡ ಅಂತ ಹೆಸರಿಡ್ತೇವೆ ಎಂದು ಬಿಜೆಪಿ ನಾಯಕರ ವ್ಯಂಗ್ಯವಾಡಿದರು.

ಡೈನಾಮೇಟ್ ಇಟ್ಟು ಪುಡಿಪುಡಿ ಮಾಡ್ತೇವೆ ಅಂತಾರೆ. ಪುಡಿಪುಡಿ ಮಾಡಿದ್ರೂ ಜಲ್ಲಿ ರಸ್ತೆಗೆ ಬಳಕೆಗೆ ಆಗುತ್ತೆ. ಮನೆಯ ಪಾಯಕ್ಕೂ ಬೇಕಾಗುತ್ತೆ. ಸೈಜ್ ಕಲ್ಲು ಅವರಿಗೆ ಬೀಸೋಕೂ ಬರುತ್ತೆ. ಬಂಡೆ ಎಲ್ಲದಕ್ಕೂ ಉಪಯೋಗಕ್ಕೆ‌ಬರುತ್ತದೆ. ಇದನ್ನ ಅವರು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತ ಬಿಜೆಪಿ ನಾಯಕರ ಮೇಲೆ ವಾಗ್ದಾಳಿ ಮಾಡಿದರು.

click me!