ಬೈ ಎಲೆಕ್ಷನ್ ಫಸ್ಟ್ ರಿಸಲ್ಟ್ ಔಟ್: ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಅರಳಿದ ಕಮಲ

By Suvarna NewsFirst Published Dec 9, 2019, 10:19 AM IST
Highlights

15 ಕ್ಷೇತ್ರಗಳ ಉಪಚುನಾವಣೆಯ ಒಂದು ಕ್ಷೇತ್ರದ ರಿಸಲ್ಟ್ ಹೊರಬಿದ್ದಿದೆ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿದ್ದು, ಬಿಜೆಪಿಗೆ ಮೊದಲು ಜಯ ಸಿಕ್ಕಿದೆ.

ಕಾರವಾರ, (ಡಿ.09): ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಭರ್ಜರಿ ಜಯಗಳಿಸಿದ್ದಾರೆ.

ಆರಂಭದಿಂದಲು ಮುನ್ನಡೆ ಕಾಯ್ದುಕೊಂಡಿರುವ ಹೆಬ್ಬಾರ್, ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಅವರನ್ನು 31606 ಮತಗಳ ಅಂತರದಿಂದ ಮಣಿಸಿ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದರು. ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

LIVE: ಮತ ಎಣಿಕೆ ಆರಂಭ, ಬಿಜೆಪಿಯದ್ದೇ ಪಾರಮ್ಯ

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಶಿವರಾಮ್ ಹೆಬ್ಬಾರ್ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದರೆ,  ಕಾಂಗ್ರೆಸ್‌ನಿಂದ ಭೀಮಣ್ಣ ನಾಯ್ಕ್ ಕಣದಲ್ಲಿದ್ದರು. ಜೆಡಿಎಸ್‌ ಚೈತ್ರಾ ಗೌಡರನ್ನು ಕಣಕ್ಕಿಳಿಸಿತ್ತು.

ಡಿ.05ರಂದು ನಡೆದ ಉಪಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಲ್ಲಿ 77.53% ಮತದಾನವಾಗಿತ್ತು.

ಪಂಪನ ನಾಡಿನ ಮರಿದುಂಬಿ ಯಾರು? ಬಿಜೆಪಿ, ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಿವರಾಮ್ ಹೆಬ್ಬಾರ್ 66290 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರೆ,  ಬಿಜೆಪಿಯ ವೀರಭದ್ರ ಪಾಟೀಲ್ 64807 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ರವೀಂದ್ರ ನಾಯ್ಕ್ 6224 ಮತಗಳನ್ನು ಪಡೆದಿದ್ದರು.

click me!