‘ಜನಾರ್ಧನ ರೆಡ್ಡಿ ಅಮಾನವೀಯ ನುಡಿಗೆ, ಜನರೇ ಶಾಪ ನೀಡಿದ್ದಾರೆ’

Published : Nov 06, 2018, 01:10 PM ISTUpdated : Nov 06, 2018, 01:11 PM IST
‘ಜನಾರ್ಧನ ರೆಡ್ಡಿ ಅಮಾನವೀಯ ನುಡಿಗೆ, ಜನರೇ ಶಾಪ ನೀಡಿದ್ದಾರೆ’

ಸಾರಾಂಶ

 ಉಪಚುನಾವಣೆ ಪ್ರಚಾರದ ವೇಳೆ ಶಾಪ ಅಂತ ಸಿದ್ದರಾಮಯ್ಯ ಅವರನ್ನ ವೈಯಕ್ತಿವಾಗಿ ನಿಂದಿಸಿದ್ದ ಜನಾರ್ಧನ ರೆಡ್ಡಿಗೆ ರಿಸಲ್ಟ್ ಬಳಿಕ ರೇಷ್ಮೆ ಶಾಲಿನಲ್ಲಿ ಕಲ್ಲು ಕಟ್ಟಿ ಹೊಡೆದಂತೆ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು, [ನ.06]:  3 ಲೋಕಸಭಾ ಹಾಗೂ 2 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. 

5 ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್​- ಜೆಡಿಎಸ್​ ಮೈತ್ರಿ ಸರ್ಕಾರಕ್ಕೆ ವಿಜಯಲಕ್ಷ್ಮೀ ಒಳಿದಿದ್ದಾಳೆ. ಅದರಲ್ಲೂ ಮುಖ್ಯವಾಗಿ ರೆಡ್ಡಿ ಪಾರುಪತ್ಯ ಇರೋ ಬಳ್ಳಾರಿಯಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಾಲು ಕುಡಿದಷ್ಟು ಸಂತೋಷವಾಗಿದೆ.

ಇದಕ್ಕೆ ಪೂರಕವೆಂಬಂತೆ ಬಳ್ಳಾರಿ ಫಲಿತಾಂಶ ಹೊರಬಿದ್ದ ಬಳಿಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡುವ ಮೂಲಕ ಶ್ರೀರಾಮು ಹಾಗೂ ರೆಡ್ಡಿ ಬ್ರದರ್ಸ್ ಗೆ ಟಾಂಗ್ ನೀಡಿದ್ದಾರೆ.

ನಿಮ್ಮ ಪಾಪಕ್ಕೆ ನಿಮ್ಮ ಮಕ್ಕಳು ಬಲಿಯಾಗದಿರಲಿ: ರೆಡ್ಡಿಗೆ ಸಿದ್ದು ಗುದ್ದು!

ಅದರಲ್ಲೂ ಉಪಚುನಾವಣೆ ಪ್ರಚಾರದ ವೇಳೆ ಶಾಪ ಅಂತ ಸಿದ್ದರಾಮಯ್ಯ ಅವರನ್ನ ವೈಯಕ್ತಿವಾಗಿ ನಿಂದಿಸಿದ್ದ ಜನಾರ್ಧನ ರೆಡ್ಡಿಗೆ ರಿಸಲ್ಟ್ ಬಳಿಕ ರೇಷ್ಮೆ ಶಾಲಿನಲ್ಲಿ ಕಲ್ಲು ಕಟ್ಟಿ ಹೊಡೆದಂತೆ ಟ್ವೀಟ್ ಮಾಡಿದ್ದಾರೆ.

ಬಳ್ಳಾರಿಯಲ್ಲಿ ನರಕಚತುರ್ದಶಿಯ ಅರ್ಥಪೂರ್ಣ ಆಚರಣೆ; ರೆಡ್ಡಿಗೆ ಸಿದ್ದು ಗುದ್ದು..!

ಜೊತೆಗೆ ಜನಾರ್ಧನ ರೆಡ್ಡಿಯವರ ಅಮಾನವೀಯ ನಡೆ-ನುಡಿಗೆ ಬಳ್ಳಾರಿ ಜನರೇ ಶಾಪ ನೀಡಿದ್ದಾರೆ ಎಂದು ಟ್ವೀಟ್ ಮೂಲಕ ಜನಾರ್ಧನ ರೆಡ್ಡಿಗೆ ಸಿದ್ದು ಗುದ್ದು ನೀಡಿದ್ದಾರೆ.

 ಈ ಮೊದಲು ಮಾತನಾಡಿದ್ದ ಜನಾರ್ದನ ರೆಡ್ಡಿ, ನನ್ನನ್ನು 4 ವರ್ಷ ಜೈಲಿನಲ್ಲಿ ಕೊಳೆಯುವಂತೆ ಮಾಡಿ, ನನ್ನ ಪುಟ್ಟ ಮಕ್ಕಳಿಂದ ದೂರ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯರಿಗೆ, ಅವರ ಹಿರಿಯ ಪುತ್ರ ಮಗ ರಾಕೇಶ್​ ಸಾವಿನ ಮೂಲಕ ದೇವರು ಶಿಕ್ಷೆ ನೀಡಿದ್ದಾನೆ ಎಂದು ಹೇಳಿಕೆ ಕೊಟ್ಟಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಜೆಪಿ ನಾಯಕರು ದ್ವೇಷ ಬಿತ್ತುವ, ವೈಯಕ್ತಿಕ ನಿಂದನೆ ಮಾಡುವ ಪಿತಾಮಹರು: ಡಿ.ಕೆ.ಶಿವಕುಮಾರ್‌
ಸಿಎಂ ಸಿದ್ದರಾಮಯ್ಯರಿಂದ ರಾಜ್ಯದ ದಲಿತರ ಸರ್ವನಾಶ: ಮಾಜಿ ಸಂಸದ ಪ್ರತಾಪ್ ಸಿಂಹ