ಮಂಡ್ಯ ಲೋಕಸಭೆ: ಗೆಲುವು ಒಂದು, ದಾಖಲೆ ಎರಡು..!

By Web DeskFirst Published Nov 6, 2018, 12:00 PM IST
Highlights

ಮೈತ್ರಿ ಸರ್ಕಾರ ಅಭ್ಯರ್ಥಿಯಾಗಿರುವ ಶಿವರಾಮೇಗೌಡ ಅವರು ಮಂಡ್ಯ ಲೋಕಸಭೆ ಚುನಾವಣೆಯಲ್ಲಿ  ಭಾರೀ ಮತಗಳ ಅಂತರದಿಂದ  ಜಯಗಳಿಸಿದ್ದಾರೆ. ಈ ಒಂದು ಗೆಲುವು ಎರಡು ದಾಖಲೆ ನಿಮಾರ್ಣವಾಗಿವೆ. 

ಮಂಡ್ಯ, (ನ.06): ಜೆಡಿಎಸ್ ಭದ್ರಕೋಟೆಯಾಗಿರುವ ಸಕ್ಕರೆನಾಡು ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಅಭ್ಯರ್ಥಿ ದಾಖಲೆ ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ.

ನಿರೀಕ್ಷೆಯಂತೆ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಎಲ್.ಆರ್.​ಶಿವರಾಮೇಗೌಡ ಅವರು ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮೇಗೌಡರ ವಿರುದ್ಧ ಭಾರೀ ಮತಗಳ ಅಂತರದಿಂದ  ಜಯಗಳಿಸಿದ್ದಾರೆ.  

ಮಂಡ್ಯ ಉಪಚುನಾವಣೆ: ಅಂಬರೀಶ್ ದಾಖಲೆ ಮುರಿದ ಶಿವರಾಮೇಗೌಡ

ಮೈತ್ರಿ ಸರ್ಕಾರ ಅಭ್ಯರ್ಥಿಯಾಗಿರುವ ಶಿವರಾಮೇಗೌಡರನ್ನ ಕಣಕ್ಕೆ ಇಳಿಸಲು ಕಾಂಗ್ರೆಸ್​ನ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿತ್ತು. ಆದ್ರೆ, ಅದು ಮತದಾನದ ಮೇಲೆ ಅಷ್ಟು ಪರಿಣಾಮ ಬೀರಿಲ್ಲ ಅನ್ನೋದನ್ನು ಫಲಿತಾಂಶ ತೋರಿಸಿದೆ.

ಗೆಲುವು ಒಂದು, ದಾಖಲೆ ಎರಡು..!

ಮಂಡ್ಯ ಜೆಡಿಎಸ್‌ ಅಭ್ಯರ್ಥಿ ಶಿವರಾಮೇಗೌಡ ಅವರು ಉಪಚುನಾವಣೆಯ ಗೆಲುವಿನಲ್ಲಿ ಎರಡೆರಡು ದಾಖಲೆ ಬರೆದಿದ್ದು,  ಮಂಡ್ಯ ಇತಿಹಾಸದಲ್ಲಿ ಅತಿ ಹೆಚ್ಚು ಮತ ಹಾಗೂ ಅತಿ ಹೆಚ್ಚು ಅಂತರದ ಗೆಲುವು ಪಡೆದ ಮೊದಲ ಅಭ್ಯರ್ಥಿ ಎಂದು ಶಿವರಾಮೇಗೌಡ ಎನಿಸಿಕೊಂಡರು.

 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ವಿರುದ್ಧ ಸಿ.ಎಸ್.ಪುಟ್ಟರಾಜು 5,24,370 ಮತಗಳೊಂದಿಗೆ ದಾಖಲೆಯ ಜಯ ಸಾಧಿಸಿದ್ದರು. ಇದೀಗ ಮೈತ್ರಿ ಅಭ್ಯರ್ಥಿಯಾಗಿ ಶಿರಾಮೇಗೌಡ 5,25,600 ಮತ ಪಡೆದು ದಾಖಲೆ ನಿರ್ಮಿಸಿದರು. [ಇನ್ನು ಮತ ಎಣಿಕೆ ಚಾಲ್ತಿಯಲ್ಲಿದೆ]

click me!