ಜಮಖಂಡಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾದ 10 ಅಂಶಗಳು..!

By Web Desk  |  First Published Nov 6, 2018, 12:28 PM IST

ಜಮಖಂಡಿ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಕಾಂಗ್ರೆಸ್ ನ ಆನಂದ್ ನ್ಯಾಮೆಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆದ್ರೆ ಗೆಲುವಿನ ಕಾರಣವಾದ ಅಂಶಗಳೇನು? ಇಲ್ಲಿವೆ ನೋಡಿ.


ಜಮಖಂಡಿ, [ನ.06]: ತೀವ್ರ ಜಿದ್ದಾ-ಜಿದ್ದಿಗೆ ಕಾರಣವಾಗಿದ್ದ ಜಮಖಂಡಿ ವಿಧಾನಸಭಾ ಕ್ಷೇತ್ರವನ್ನ ಉಪಚುನಾವಣೆಯಲ್ಲಿ ಮರಳಿ ತೆಕ್ಕೆಗೆ ಪಡೆದುಕೊಳ್ಳವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ನ್ಯಾಮೆಗೌಡ ಗೆಲುವು ಸಾಧಿಸಿದ್ದರು. ಆದ್ರೆ ಅವರ ಅಕಾಲಿಕ ಮರಣದಿಂದ  ಜಮಖಂಡಿ ಉಪಚುನಾವಣೆಗೆ ನವೆಂಬರ್ 3ರಂದು ಮತದಾನ ನಡೆದಿತ್ತು.

Tap to resize

Latest Videos

ಕರ್ನಾಟಕ ಉಪಚುನಾವಣೆ ಫಲಿತಾಂಶ Live Updates

ಇಂದು ಮತದಾನ ಎಣಿಕೆ ಕಾರ್ಯ ಮುಗಿದಿದ್ದು,  ತಂದೆ ಸಾವಿನ ಅನುಕಂಪ ಮಗ ಆನಂದ ನ್ಯಾಮಗೌಡಗೆ ವರದಾನವಾಗಿದೆ. ಬಿಜೆಪಿ ಶ್ರೀಕಾಂತ್ ಕುಲ್ಕರ್ಣಿ ವಿರುದ್ಧ ಆನಂದ್ ನ್ಯಾಮೆಗೌಡ ಭರ್ಜರಿ ಜಯಗಳಿಸಿದ್ದಾರೆ.

ಇನ್ನು ಆನಂದ್ ನ್ಯಾಮೆಗೌಡ ಗೆಲುವಿಗೆ ಕಾರಣವಾದ ಅಂಶಗಳನ್ನ ನೋಡುವುದಾರೆ ಈ ಕೆಳಗಿನಂತಿವೆ.

1) ತಂದೆ ಸಾವಿನಿಂದ ಮಗ ಆನಂದ ನ್ಯಾಮಗೌಡಗೆ ಅನುಕಂಪದ ಅಲೆ ವರದಾನ.

2) ಸಿದ್ದರಾಮಯ್ಯನವರ ವರ್ಚಸ್ಸು, ಸ್ವಕ್ಷೇತ್ರದ ಜಿಲ್ಲೆಯಾಗಿರೋದ್ರಿಂದ ಸಿದ್ದರಾಮಯ್ಯ ಪ್ರಭಾವ.

3) ತಂದೆ  ಶಾಸಕ ಸಿದ್ದು ನ್ಯಾಮಗೌಡರ ಅಭಿವೃದ್ಧಿ ಕಾರ್ಯಗಳ ಶ್ರೀರಕ್ಷೆ..

4) ಬಂಡಾಯ ಶಮನದ ಮಧ್ಯೆಯೂ ಬಿಜೆಪಿ ಒಳಬೇಗುದಿ ಕಾಂಗ್ರೆಸ್‌ಗೆ ಲಾಭ.

5) ಜಿ.ಪರಮೇಶ್ವರಗೆ ಕ್ಷೇತ್ರದ ಉಸ್ತುವಾರಿ ನೀಡಿದ್ದು.

6) ರೈತರಿಗಾಗಿ ಬ್ಯಾರೇಜ್ ಕಟ್ಟಿದ ಸಿದ್ದು ನ್ಯಾಮಗೌಡರ ಕಾರ್ಯ ಗ್ರಾಮೀಣ ಭಾಗದಲ್ಲಿ ಫೇಮಸ್ ಆಗಿದ್ದು.

8) ಸಿದ್ದರಾಮಯ್ಯ ಕಾಂಗ್ರೆಸ್ ಬಂಡಾಯಗಾರ ಸಮಾಧಾನ ಪಡಿಸಿ, ಒಗ್ಗಟ್ಟಿನ ಮಂತ್ರ ಭೋದಿಸಿದ್ದು.

8)  ಹಿಂದಿನ ಸಿದ್ದು ನ್ಯಾಮಗೌಡರ ಅಭಿವೃದ್ಧಿ ಕಾರ್ಯದ ಮುಂದೆ ಬಿಜೆಪಿ ಮಂಕಾಗಿದ್ದು.

9) ಜಿಲ್ಲೆಯಲ್ಲಿ ಹೆಚ್ಚಿದ್ದ  ಸಿದ್ದರಾಮಯ್ಯನವರ ಪ್ರಭಾವ. 

10) ಯಡಿಯೂರಪ್ಪನ ಹಿಂದುತ್ವದ ಮುಂದೆ ಸಿದ್ದರಾಮಯ್ಯ ಜಾತಿ ಅಸ್ತ್ರದ ಮಾಸ್ಟರ್ ಪ್ಲ್ಯಾನ್ ಸಕ್ಸಸ್ ಆಗಿದ್ದು, ಪ್ರತಿಯೊಂದು ಜಾತಿಯ ಕಾಂಗ್ರೆಸ್ ಮುಖಂಡರನ್ನು ಕ್ಷೇತ್ರಕ್ಕೆ ಕರೆತಂದು ಓಟ್ ಗಿಟ್ಟಿಸಿಕೊಂಡದ್ದು.

click me!