
ಬೆಂಗಳೂರು(ಜೂ.26) ಕಾಂಗ್ರೆಸ್ ನೂತನ ಸರ್ಕಾರ ಐದು ಗ್ಯಾರೆಂಟಿ ಯೋಜನೆ ಅನುಷ್ಠಾನಕ್ಕೆ ಕಸರತ್ತು ನಡೆಸುತ್ತಿದೆ. ಇದರಲ್ಲಿ ಅನ್ನ ಭಾಗ್ಯ ಯೋಜನೆ ಕಗ್ಗಂಟಾಗಿದೆ. ಕೇಂದ್ರದಿಂದ ಅಕ್ಕಿ ಪಡೆಯುವ ಪ್ರಯತ್ನಕ್ಕೆ ಹಿನ್ನಡೆಯಾಗಿರುವ ಕಾರಣ ಯೋಜನೆ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ. ಇದೀಗ ಸಿಎಂ ಸಿದ್ದರಾಮ್ಯ ಸರ್ಕಾರ ಬಜೆಟ್ ಮಂಡನೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಈ ಕುರಿತು ಕೆಲ ಸುಳಿವುಗಳನ್ನು ಖುದ್ದು ಸಿದ್ದರಾಮಯ್ಯ ಬಿಟ್ಟುಕೊಟ್ಟಿದ್ದಾರೆ. ಈ ಬಾರಿ ಬಜೆಟ್ ಗಾತ್ರ 335 ಲಕ್ಷ ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೆಂಗಲ್ ಹನುಮಂತಯ್ಯ ಬಜೆಟ್ ಮಂಡಿಸುವಾಗ ಕರ್ನಾಟಕದ ಬಜೆಟ್ ಗಾತ್ರ 21 ಕೋಟಿ ರೂಪಾಯಿ ಇತ್ತು. ಇತ್ತೀಚೆಗೆ ಮಂಡಿಸಲಾಗ ಬಜೆಟ್ ಗಾತ್ರ 3.9 ಲಕ್ಷ ಕೋಟಿ ರೂಪಾಯಿ. ಆದರೆ ಈ ಬಾರಿ ಮಂಡಿಸಲಿರುವ ಬಜೆಟ್ ಗಾತ್ರ 30 ರಿಂದ 35 ಸಾವಿರ ಕೋಟಿ ರೂಪಾಯಿ ಹೆಚ್ಚಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೊಸ ಶಾಸಕರಿಗೆ ನಡೆಯುತ್ತಿರುವ ಒರಿಯಂಟೇಷನ್ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಬಜೆಟ್ ಕುರಿತು ಮಾತನಾಡಿದ್ದಾರೆ. ನಾವು 5 ಗ್ಯಾರೆಂಟಿ ಘೋಷಣೆ ಮಾಡಿದ್ದೇವೆ. ಇದಕ್ಕಾಗಿ ಹಣ ಹೊಂದಿಸಬೇಕಿದೆ.ಹೀಗಾಗಿ ಬಜೆಟ್ ಗಾತ್ರ ವಿಸ್ತರಣೆಯಾಗಲಿದೆ. 5 ಗ್ಯಾರಂಟಿ ಜಾರಿಗೆ ಸುಮಾರು 59-60 ಸಾವಿರ ಕೋಟಿ ರೂಪಾಯಿ ಹಣ ಬೇಕಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇಂದಿನಿಂದ ಶಾಸಕರಿಗೆ ತರಬೇತಿ ಶಿಬಿರ: ಗುರೂಜಿ, ಕರ್ಜಗಿ ಉಪನ್ಯಾಸಕ್ಕೆ ಕೊಕ್
ಜುಲೈ ತಿಂಗಳಲ್ಲಿ ಸಿದ್ದರಾಮಯ್ಯ ನೂತನ ಬಜೆಟ್ ಮಂಡಿಸಲಿದ್ದಾರೆ. ಆಗಸ್ಟ್ 1 ರಿಂದ ನೂತನ ಬಜೆಟ್ ಜಾರಿಯಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಸದನದಲ್ಲಿನ ಹಾಜರಾತಿ, ನೂತನ ಶಾಸಕರ ಕಾರ್ಯಗಳು, ಜನಸ್ಪಂದನೆ, ಕೆಲಸಗಳ ಅಚ್ಚಕಟ್ಟಾಗಿ ಮಾಡುವ ರೀತಿ ಕುರಿತು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಇದೇ ವೇಳೆ ಹಳೆ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಗೋಪಾಲಗೌಡ್ರು ಒಳ್ಳೆಯ ಪಾರ್ಲಿಮೆಂಟರಿಯನ್ ಆಗಿದ್ದರು. ಅವರನ್ನು ಯಾವಾಗಲು ನೆನಪಿಸಿಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಾನು ಸಿಎಂ ಆಗಿ ಕಾರ್ಯನಿರ್ವಹಿಸಿದ್ದೇನೆ,ವಿರೋಧ ಪಕ್ಷದ ನಾಯಕನಾಗಿಯೂ ಸೇವೆ ಸಲ್ಲಿಸಿದ್ದೇನೆ. ಈ ಅನುಭವದ ಮೂಲಕ ಹೇಳುತ್ತೇನೆ. ನನ್ನ ಮಾತು ಯಾವಾಗಲು ಒರಟು, ಆದರೆ ಸತ್ಯವಾಗಿರುತ್ತದೆ ಎಂದು ಸಿದ್ದು ಹೇಳಿದ್ದಾರೆ. ನೂತನ ಶಾಸಕರಿಗೆ ವಾಟಾಳ್ ನಾಗರಾಜ್ ಶಾಸಕರಾಗಿ ಸದನದಲ್ಲಿ ನಡೆದುಕೊಂಡ ರೀತಿಯನ್ನು ಹೇಳಿದ್ದಾರೆ. ವಾಟಾಳ್ ನಾಗರಾಜ್ ಯಾವಾಗಲೂ ಸದನ ಬಿಟ್ಟು ಹೋಗುತ್ತಿರಲ್ಲಿಲ್ಲ. ನಾನು ಇಷ್ಟು ದಿನ ಶಾಸಕನಾಗಿದ್ದೇನೆ ಅಲ್ವಾ ಕೇವಲ 4-5 ದಿನ ಮಾತ್ರ ಬಂದಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಖಾತೆಗೆ 15 ಲಕ್ಷ ಬಂತೇ, ಅಚ್ಛೇದಿನ್ ಬಂತೇ: ಪ್ರಧಾನಿ ಮೋದಿ ವಿರುದ್ಧ ಸಿದ್ದು ವಾಗ್ದಾಳಿ
ನಾನು 1994ರಲ್ಲಿ ಹಣಕಾಸು ಸಚಿವರಾಗಿದ್ದಾಗ ವಾಟಾಳ್, ಜಯಪ್ರಕಾಶ್ ರೆಡ್ಡಿ, ಮಾಧುಸ್ವಾಮಿ ಕೂಡ ಇದ್ದರು. ಎಲ್ಲರೂ ಸದನಕ್ಕೆ ತಪ್ಪದೆ ಬರಬೇಕು. ಸರ್ಕಾರದ ಕೆಲಸದಲ್ಲಿ ನಿರಂತರವಾಗಿ ಸ್ಪಂದಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.