ಸಂಸದ ಪ್ರತಾಪ ಸಿಂಹಗೆ ಟಿಕೆಟ್ ಕೈತಪ್ಪಲು ಕಾರಣ ಯಾರು? ಕೊನೆಗೂ ಸತ್ಯ ಬಿಚ್ಚಿಟ್ಟ ವಿಜಯೇಂದ್ರ!

By Ravi Janekal  |  First Published May 26, 2024, 3:44 PM IST

ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಜೆಡಿಎಸ್ ಪರಸ್ಪರ ಸಹಕಾರದಿಂದ ಯಶಸ್ವಿಯಾಗಿ ಚುನಾವಣೆ ಎದುರಿಸಿದ್ದೀರಿ. ಮುಂದೆಯೂ ಒಟ್ಟಾಗಿ ಹೋಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನುಡಿದರು.


ಮೈಸೂರು (ಮೇ.26): ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಜೆಡಿಎಸ್ ಪರಸ್ಪರ ಸಹಕಾರದಿಂದ ಯಶಸ್ವಿಯಾಗಿ ಚುನಾವಣೆ ಎದುರಿಸಿದ್ದೀರಿ. ಮುಂದೆಯೂ ಒಟ್ಟಾಗಿ ಹೋಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನುಡಿದರು.

ದೇಶದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗಬೇಕು ಎಂಬುದನ್ನ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದ್ರು. ಲೋಕಸಭೆಯಲ್ಲಿ ಯದುವೀರ್ ಪರವಾಗಿ ಬಿಜೆಪಿ ನಾಯಕರ ಜೊತೆಗೆ ಜೆಡಿಎಸ್ ನಾಯಕರು ಸಹ ಶ್ರಮಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಉತ್ಸಾಹದಿಂದ ಭಾಗಿಯಾಗಿದ್ದರು. ಈಗ ನಾವು ಫಲಿತಾಂಶ  ಎದುರು ನೋಡುತ್ತಿದ್ದೇವೆ ಎಂದರು.

Tap to resize

Latest Videos

ಶಿಕ್ಷಣ ಸಚಿವರಾದವರಿಗೆ ಡಬಲ್ ಬ್ರೈನ್ ಇರಬೇಕು, ಇವರಿಗೆ ಕನ್ನಡವೇ ಬರೊಲ್ಲ: ಎನ್‌ ಮಹೇಶ್

ಕಾಂಗ್ರೆಸ್ ಸರ್ಕಾರದ ದುರಾಡಳಿತ, ಹಣದ ಮೂಲಕ ಚುನಾವಣೆ ಗೆಲ್ತೇವೆ ಎಂಬ ಭ್ರಮೆಯಲ್ಲಿದ್ದಾರೆ ಅದನ್ನ ಸುಳ್ಳು ಮಾಡುವ ಕೆಲಸವನ್ನ ರಾಜ್ಯದ ಜನರು ಮಾಡಿದ್ದಾರೆ. ವಿಧಾನಪರಿಷತ್ ನ 6 ಕ್ಷೇತ್ರಗಳ ಪೈಕಿ ಬಿಜೆಪಿ ನಾಲ್ಕು, ಜೆಡಿಎಸ್ 2 ರಲ್ಲಿ ಸ್ಪರ್ಧೆ ಮಾಡಿದೆ. ನಮ್ಮ ಪಕ್ಷದಲ್ಲೂ ಸಾಕಷ್ಟು ಜನ ಆಕಾಂಕ್ಷಿಗಳಿದ್ದರು. ಅವರು ಕೂಡ ಇಂದು ವಿವೇಕಾನಂದ ಪರವಾಗಿ ನಿಂತಿದ್ದಾರೆ. ಪಕ್ಷ ನಿರ್ಧಾರ ಮಾಡಿದ ಮೇಲೆ ಅವರಿಗಾಗಿ ನಾವು ದುಡಿಯಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕಂಟಕ ತಂದಿಟ್ಟಿದ್ದಾರೆ. ಒಳ್ಳೆಯ ಕೆಲಸಗಳನ್ನ ಮಾತ್ರ ಮಾಡಲಿಕ್ಕೆ ಆಗಿಲ್ಲ. ಯುವಕರ ಭವಿಷ್ಯಕ್ಕೆ ಮೋದಿಯವರು ರಾಷ್ಟೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ರು. ಕಾಂಗ್ರೆಸ್ ಸರ್ಕಾರ ಬಂದ ಒಂದೇ ತಿಂಗಳಿಗೆ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ತೆಗೆದು ಅದಕ್ಕೂ ಕಲ್ಲು ಹಾಕಿದರು. ಇನ್ನು ಶಿಕ್ಷಣ ಸಚಿವರ ಕನ್ನಡದ ಬಗ್ಗೆ ಹಲವರು ಮಾತನಾಡಿದ್ದಾರೆ. ಶಿಕ್ಷಣ ಸಚಿವರಿಗೆ ಕನ್ನಡ ಬರಲೇಬೇಕಾ ಎಂದು ಬೇಕಿದ್ರೆ ಸಿಎಂ ಸಮರ್ಥನೆ ಮಾಡಿಕೊಳ್ಳಬಹುದು ಎಂದು ಕಿಡಿಕಾರಿದರು.

ಮೇಲ್ಮನೆಗೆ 3 ಬಿಜೆಪಿ ಅಭ್ಯರ್ಥಿಗಳ ಅಖೈರು ಹೊಣೆ ವಿಜಯೇಂದ್ರ, ರಾಜೇಶ್‌ ಹೆಗಲಿಗೆ

ಇನ್ನು ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪಲು ವಿಜಯೇಂದ್ರ ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಯಾರಿಗೆ ಯಾವಾಗ ಉತ್ತರ ಕೊಡಬೇಕು, ಎಲ್ಲಿ ಕೊಡಬೇಕು ಅಲ್ಲಿ ಕೊಡ್ತೇನೆ. ನಾನು ರಾಜ್ಯಾಧ್ಯಕ್ಷನಾದರೂ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ರಾಷ್ಟ್ರೀಯ ಅಧ್ಯಕ್ಷರದೇ ಅಂತಿಮ. ಅವರೇ ಆಯ್ಕೆ ಮಾಡೋದು.ಟಿಕೆಟ್ ಆಯ್ಕೆ ವಿಚಾರದಲ್ಲಿ ನಾನಿಲ್ಲ. ಈ ವಿಚಾರದಲ್ಲಿ ಹಲವರು ಏನೇನೋ ಮಾತನಾಡಿದ್ರು. ಪ್ರತಾಪ್ ಸಿಂಹಗೆ ವಿಜಯೇಂದ್ರ ಟಿಕೆಟ್ ಕೈ ತಪ್ಪಿಸಿದ್ರೂ ಆಗೇ ಹೀಗೆ ಎಂದು ಮಾತನಾಡಿದ್ರು ಅಂತವರಿಗೆ ಸೂಕ್ತ ಸಮಯದಲ್ಲಿ ಉತ್ತರಿಸುತ್ತೇನೆ ಎಂದರು.

click me!