ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಸೂಚನೆ ನೀಡಿದ ಈಶ್ವರಪ್ಪ; ಹೇಳಿದ್ದೇನು?

By Ravi Janekal  |  First Published May 26, 2024, 12:08 PM IST

ಅನೇಕರು ರಾಯಣ್ಣ ಬ್ರಿಗೇಡ್ ಮಾಡಬೇಕು ಅಂತಿದ್ದಾರೆ. ಹಿಂದೂಳಿದವರು, ದಲಿತರು ಎಲ್ಲ ಸಮಾಜ ಸೇರಿಸಿ ರಾಯಣ್ಣ ಬ್ರಿಗೇಡ್ ಮಾಡಬೇಕು ಅಂತಾ ಹೇಳ್ತಿದ್ದಾರೆ. ಚುನಾವಣೆ ಮುಗಿದ ನಂತರ ನೋಡೋಣ ಎನ್ನುವ ಮೂಲಕ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ  ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಸುಳಿವು ನೀಡಿದರು.


ಬಾಗಲಕೋಟೆ (ಮೇ.26): ಅನೇಕರು ರಾಯಣ್ಣ ಬ್ರಿಗೇಡ್ ಮಾಡಬೇಕು ಅಂತಿದ್ದಾರೆ. ಹಿಂದೂಳಿದವರು, ದಲಿತರು ಎಲ್ಲ ಸಮಾಜ ಸೇರಿಸಿ ರಾಯಣ್ಣ ಬ್ರಿಗೇಡ್ ಮಾಡಬೇಕು ಅಂತಾ ಹೇಳ್ತಿದ್ದಾರೆ. ಚುನಾವಣೆ ಮುಗಿದ ನಂತರ ನೋಡೋಣ ಎನ್ನುವ ಮೂಲಕ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ  ಮತ್ತೆ ರಾಯಣ್ಣ ಬ್ರಿಗೇಡ್ ಆರಂಭಿಸುವ ಸುಳಿವು ನೀಡಿದರು.

ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಏನು ಮಾಡಬೇಕು ಅಂತಾ ನಾನೊಬ್ಬನೇ ತೀರ್ಮಾನ ತಗೊಳ್ಳಲ್ಲ. ಚುನಾವಣೆಗೆ ನಿಲ್ಲಬೇಕಾದರೂ ನನ್ನದೊಬ್ಬನದೇ ನಿರ್ಧಾರ ಆಗಿರಲಿಲ್ಲ. ಯಾರು ಈ ಪಕ್ಷ, ಹಿಂದೂತ್ವ ಉಳಿಯಬೇಕು ಅಂತಿದ್ದಾರೋ, ಅಪ್ಪ ಮಕ್ಕಳಿಂದ ಪಕ್ಷ ಮುಕ್ತವಾಗಬೇಕು ಅಂತಿದ್ದಾರೋ ಅವರೆಲ್ಲರ ಅವರ ಅಭಿಪ್ರಾಯ ತಗೊಂಡು ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಚುನಾವಣೆ ಮುಗಿದ ನಂತರ ಯಾರಾರು ಈ ಭಾವನೆಯಲ್ಲಿದ್ದಾರೋ ರಾಜ್ಯದಲ್ಲಿರೋ ಎಲ್ಲ ಹಿತೈಷಿಗಳನ್ನ ಒಂದು ಕಡೆ ಸೇರಿಸುತ್ತೇನೆ. ಇದು ಚುನಾವಣೆ ಮುಗಿದು ಮಾರನೇ ದಿನವೇ ಆಗೊಲ್ಲ. ನಾನು ದಡ್ಡ ಅಂತಾ ಯಾವುದೇ ತೀರ್ಮಾನ ತಗೊಳ್ಳಲ್ಲ ಎಲ್ಲರ ಅಭಿಪ್ರಾಯದ ಮೇಲೆ ಮುಂದಿನ ನಿರ್ಧಾರ ತಗೊಳ್ಳುತ್ತೇನೆ ಎಂದರು.

Latest Videos

undefined

 

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾದರಿಯ ‘ಹಿಂದ’ ಸಂಘಟನೆ ಸ್ಥಾಪಿಸುವ ಸುಳಿವು ನೀಡಿದ ಈಶ್ವರಪ್ಪ..!

ರಾಜ್ಯದಲ್ಲಿ ಹಿಂದೂಳಿದವರು, ಕುರುಬರಿಗೆ ಅನ್ಯಾಯ ಆಗಿದೆ ಎಂದು ಸಾಕಷ್ಟು ಜನ ಹೇಳ್ತಿದ್ದಾರೆ. ಏನೇನು ಪರಿವರ್ತನೆ ಆಗುತ್ತೆ ನೋಡಿ. ಈ ಬದಲಾವಣೆ ಕೇವಲ ರಾಜಕೀಯಕ್ಕೆ ಮಾತ್ರವಲ್ಲ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನ್ಯಾಯ ಸಿಗಬೇಕು. ಆ ನಿಟ್ಟಿನಲ್ಲಿ ಏನು ಮಾಡಬೇಕು ಅಂತಾ ಪ್ರಮುಖರ ಜೊತೆ ಮಾತಾಡಿ ತೀರ್ಮಾನ ಮಾಡುತ್ತೇನೆ ಎಂದರು.
 

click me!