ಎಲೆಕ್ಷನ್‌ಗಾಗಿ ಮಾರ್ಗಸೂಚಿಗಳನ್ನ ಪ್ರಕಟಿಸಿದ ಚುನಾವಣೆ ಆಯೋಗ

By Suvarna News  |  First Published Sep 26, 2020, 2:33 PM IST

ಕೋವಿಡ್19 ಸಾಂಕ್ರಾಮಿಕ ರೋಗದ ನಡುವೆ ಮುಕ್ತ, ನ್ಯಾಯಸಮ್ಮತ ಮತ್ತು ಸುರಕ್ಷಿತ ಚುನಾವಣೆನಡೆಸಲು ಭಾರತ ಚುನಾವಣಾ ಆಯೋಗ (ಇಸಿ) ಮಾರ್ಗಸೂಚಿಗಳನ್ನು ಹೊರಡಿಸಿದೆ.


ನವದೆಹಲಿ, (ಸೆ.26): ಬಿಹಾರ ವಿಧಾನಸಭೆ ಎಲೆಕ್ಷನ್‌ಗೆ ಈಗಾಗಲೇ ಚುನಾವಣೆ ಆಯೋಗ ದಿನಾಂಕ ಪ್ರಕಟಿಸಿದ್ದು,  ಮೂರು ಹಂತಗಳಲ್ಲಿ ನಡೆಯಲಿದೆ. 

ಅಕ್ಟೋಬರ್ 28 ಮತ್ತು ನವೆಂಬರ್ 3 ಮತ್ತು 7 ರಂದು ಮತದಾನ ನಡೆಯಲಿದ್ದು, ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ ಎಂದು ಭಾರತ ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ.

Latest Videos

undefined

ಇದೀಗ  ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ COVID-19 ಸಾಂಕ್ರಾಮಿಕ ರೋಗದ ನಡುವೆ ಮುಕ್ತ, ನ್ಯಾಯಸಮ್ಮತ ಮತ್ತು ಸುರಕ್ಷಿತ ಚುನಾವಣೆನಡೆಸಲು ಭಾರತ ಚುನಾವಣಾ ಆಯೋಗ (ಇಸಿ) ಮಾರ್ಗಸೂಚಿಗಳನ್ನು ಹೊರಡಿಸಿದೆ.

3 ಹಂತದಲ್ಲಿ ಬಿಹಾರ ಚುನಾವಣೆ: ನ.10ಕ್ಕೆ ಮತ ಎಣಿಕೆ

ಮತದಾರರ ಪಟ್ಟಿಯಲ್ಲಿನ ಗಂಭೀರ ಲೋಪಗಳನ್ನು ಗುರುತಿಸಲು ವಿಶೇಷ ಪ್ರಯತ್ನಗಳನ್ನು ಮಾಡಲಾಗಿದ್ದು ಮತ್ತು ಅವುಗಳನ್ನು ಪರಿಹರಿಸಲು ಉದ್ದೇಶಿತ SVEEP ಚಟುವಟಿಕೆಗಳನ್ನು ನಡೆಸಲಾಗಿದೆ ಎಂದು ಹೇಳಿದೆ. 

ಮಾರ್ಗಸೂಚಿಗಳು ಇಂತಿವೆ
*  ಚುನಾವಣಾ ಉದ್ದೇಶಕ್ಕಾಗಿ ಬಳಸಲಾಗುವ ಹಾಲ್ /ಕೊಠಡಿಯ ಪ್ರವೇಶ ದ್ವಾರದಲ್ಲಿ ಎಲ್ಲ ವ್ಯಕ್ತಿಗಳ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು, 

* ಎಲ್ಲ ಸ್ಥಳಗಳಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಗಳನ್ನು ಲಭ್ಯಗೊಳಿಸಬೇಕು

*  ಸಾಮಾಜಿಕ ವಿಚಲನ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು, ದೊಡ್ಡ ಸಭಾಂಗಣಗಳನ್ನು ಗುರುತಿಸಿ, ಬಳಸಬೇಕು 

* ನಾಮಪತ್ರ ಸಲ್ಲಿಕೆಗೆ ಬರುವ ವರ ಸಂಖ್ಯೆ ಗೆ ಈಗ ಐವರ ಬದಲಾಗಿ ಇಬ್ಬರಿಗೆ , ಮೂರು ಕಾರುಗಳ ಬದಲಿಗೆ ಎರಡು ಕಾರುಗಳಿಗೆ ಮಾತ್ರ ಅವಕಾಶ.

* ನಾಮಪತ್ರ ಸಲ್ಲಿಕೆಗಾಗಿ ಆನ್ ಲೈನ್ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಮೊದಲ ಬಾರಿಗೆ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಭದ್ರತಾ ಮೊತ್ತವನ್ನು ಠೇವಣಿ ಮಾಡಲು ಸಾಧ್ಯವಾಗಲಿದೆ. 

* ಆಯೋಗವು ಮನೆ ಮನೆಗೆ ಪ್ರಚಾರಕ್ಕೆ ಅಭ್ಯರ್ಥಿ ಸೇರಿದಂತೆ ಅಭ್ಯರ್ಥಿಗಳ ಸಂಖ್ಯೆಯನ್ನು ಐದಕ್ಕೆ ಸೀಮಿತಗೊಳಿಸಿದೆ. 
* ರೋಡ್ ಶೋಗಳಲ್ಲಿ ಬರುವ ವಾಹನಗಳ ಸಂಖ್ಯೆಯನ್ನು 10ರ ಬದಲು 5 ವಾಹನಗಳಿಗೆ ಸೀಮಿತಗೊಳಿಸಬೇಕು. 

* ಸಾರ್ವಜನಿಕ ಸಭೆಗಳು ಮತ್ತು ರೋಡ್ ಶೋಗಳಿಗೆ ಅನುಮತಿ ನೀಡಲಾಗಿದೆ ಎಂದು ಅದು ಹೇಳಿದೆ. ಆದರೆ ಗೃಹ ಸಚಿವಾಲಯ ನೀಡುವ ಸೂಚನೆಗಳಿಗೆ ಒಳಪಟ್ಟಿರುತ್ತದೆ. 

* ಚುನಾವಣಾ ಪ್ರಕ್ರಿಯೆಯಲ್ಲಿ ಫೇಸ್ ಮಾಸ್ಕ್, ಹ್ಯಾಂಡ್ ಸಾನಿಟೈಸರ್, ಥರ್ಮಲ್ ಸ್ಕ್ಯಾನರ್, ಗ್ಲೌಸ್, ಫೇಸ್ ಶೀಲ್ಡ್, ಮತ್ತು ಪಿಪಿಇ ಕಿಟ್ ಗಳನ್ನು ಕಡ್ಡಾಯಗೊಳಿಸಲಾಗಿದೆ. 

click me!