
ಬೆಳಗಾವಿ (ಏ.11): ಏಪ್ರಿಲ್ 17 ರಂದು ಬೆಳಗಾವಿ ಲೋಕಸಭಾ ಚುನಾವಣೆ ನಡೆಯಲಿದ್ದು, ಉಪಚುನಾವಣೆ ಫಲಿತಾಂಶ ಕರ್ನಾಟಕದ ಬಿಜೆಪಿ ಸರ್ಕಾರ ಪತನಕ್ಕೆ ಮುನ್ನುಡಿ ಆಗಲಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಹೇಳಿದರು.
ಬೆಳಗಾವಿಯಲ್ಲಿಂದು ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ದೇಶ, ಕರ್ನಾಟಕದಲ್ಲಿ ಬದಲಾವಣೆ ಆಗುವುದು ಗೋಡೆ ಮೇಲೆ ಬರೆದಾಗಿದೆ. ಭ್ರಷ್ಟಾಚಾರ, ನಾಲಾಯಕ್ ಸರ್ಕಾರ ಬದಲಾಯಿಸಲು ಜನ ಕಾತುರರಾಗಿದ್ದಾರೆ. ಈ ಸರ್ಕಾರ ಬದಲಾಯಿಸಲು ಜನ ತಯಾರಾಗಿದ್ದಾರೆ ಎಂದರು.
ಸಚಿವರು ಸಿಎಂ ಮೇಲೆ ಆರೋಪಿಸುತ್ತಾರೆ, ಸಿಎಂ ಸಚಿವರ ಮೇಲೆ ಆರೋಪ ಮಾಡ್ತಾರೆ. ರಾಜ್ಯದ ಮಂತ್ರಿಗಳು ಕೇಂದ್ರ ಸಚಿವರ ಮೇಲೆ ಆರೋಪ ಮಾಡ್ತಾರೆ. ಕೇಂದ್ರ ಸರ್ಕಾರದವರು ಇಲ್ಲಿಯ ಮಂತ್ರಿಗಳು ನಾಲಾಯಕ್ ಅಂತಾರೆ. ಇದೆಲ್ಲವೂ ಸರ್ಕಾರ ಪತನದ ಮುನ್ಸೂಚನೆ ಎಂದರು.
'ಬೈ ಎಲೆಕ್ಷನ್ ಬಳಿಕ ಅಡ್ರಸ್ ಕಳೆದುಕೊಳ್ಳುವ ಕಾಂಗ್ರೆಸ್ : 3 ಕ್ಷೇತ್ರಗಳಲ್ಲಿ ಜಯ ಖಚಿತ' .
ಪ್ರತಿಯೊಂದು ಸಮಾಜ ವಿಭಜನೆ ಮಾಡಿ ದ್ರೋಹ ಮಾಡಿ ಅನೈತಿಕ ಸರ್ಕಾರ ರಚನೆ ಆಗಿದೆ. ಸತೀಶ್ ಜಾರಕಿಹೊಳಿ ಗೆಲುವಿನ ಬಳಿಕ ಈ ಸರ್ಕಾರ ಪತನವಾಗುತ್ತೆ. ತಮ್ಮಷ್ಟಕ್ಕೆ ತಾನೇ ಕರ್ನಾಟಕ ಸರ್ಕಾರ ಬಿದ್ದು ಹೋಗುತ್ತದೆ. ಇದಾದ ಬಳಿಕ ಜನರ ಮತಗಳಿಂದ ಕಾಂಗ್ರೆಸ್ ಸರ್ಕಾರ ರಚನೆ ಆಗಲಿದೆ ಎಂದು ಸುರ್ಜೆವಾಲಾ ಹೇಳಿದರು.
ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ. ಜನರ ಮತಗಳಿಂದ, ಪ್ರಜಾಪ್ರಭುತ್ವದಿಂದ ಈ ಸರ್ಕಾರ ಬಂದಿಲ್ಲ. ಆಪರೇಷನ್ ಕಮಲ, ಹಣ ಮತ್ತು ಭ್ರಷ್ಟಾಚಾರದಿಂದ ಹುಟ್ಟಿದ ಸರ್ಕಾರ ಇದು. ತನ್ನ ತಪ್ಪಿನಿಂದಲೇ ಈ ಸರ್ಕಾರ ಪತನವಾಗುತ್ತದೆ. ಉಪಚುನಾವಣೆ ಫಲಿತಾಂಶ ಕರ್ನಾಟಕದ ಬಿಜೆಪಿ ಸರ್ಕಾರ ಪತನಕ್ಕೆ ಮುನ್ನುಡಿಯಾಗುತ್ತದೆ ಎಂದರು.
ಅವರ ಪಕ್ಷದವರೇ ಸಿಎಂ ಕುಟುಂಬ ಮೇಲೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರಿಂದಲೇ ನಾಯಕತ್ವ ಬದಲಾವಣೆ ಆಗುತ್ತದೆ. ಬಿಜೆಪಿಯ ನಾಯಕರೇ ಸಿಎಂ ಬದಲಾವಣೆಗೆ ಕಾದು ಕುಳಿತಿದ್ದಾರೆ, ನಾವಲ್ಲ. ಹೈಕೋರ್ಟ್ ನಲ್ಲಿ ಸಿಎಂ ಬಿಎಸ್‌ವೈ ವಿರುದ್ಧ ಮೂರು ಭ್ರಷ್ಟಾಚಾರ ಪ್ರಕರಣ ವಿಚಾರಣೆ ನಡೆಯುತ್ತಿದೆ. ಸಿಎಂ ಹಾಗೂ ಸಿಎಂ ಕುಟುಂಬ ಮೇಲೆ ಸಚಿವರು, ಶಾಸಕರು ಆರೋಪ ದಿನದಿನವೂ ಹೆಚ್ಚಾಗಿದೆ. ರಾಜ್ಯದ ಆಡಳಿತ ಯಂತ್ರ ಸರಿಯಿಲ್ಲ, ಹೀಗಾಗಿ ಈ ಸರ್ಕಾರ ಅಧಿಕಾರದಲ್ಲಿ ಇರಬಾರದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.