ಜಗಳ ಸುಖಾಂತ್ಯವಾಗುತ್ತಿದ್ದಂತೆಯೇ ಜಗ್ಗೇಶ್‌ಗೆ ಮಹತ್ವದ ಹುದ್ದೆ ನೀಡಿದ ಬಿಜೆಪಿ

Published : Feb 24, 2021, 10:03 PM ISTUpdated : Feb 24, 2021, 10:09 PM IST
ಜಗಳ ಸುಖಾಂತ್ಯವಾಗುತ್ತಿದ್ದಂತೆಯೇ ಜಗ್ಗೇಶ್‌ಗೆ ಮಹತ್ವದ ಹುದ್ದೆ ನೀಡಿದ ಬಿಜೆಪಿ

ಸಾರಾಂಶ

ದರ್ಶನ್ ಫ್ಯಾನ್ಸ್ ಜತೆಗಿನ ಜಗಳ ಸುಖಾಂತ್ಯವಾಗುತ್ತಿದ್ದಂತೆಯೇ ನಟ ಜಗ್ಗೇಶ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮಹತ್ವ ಜವಾಬ್ದಾರಿಯೊಂದನ್ನು ವಹಿಸಿದ್ದಾರೆ. 

ಬೆಂಗಳೂರು, (ಫೆ.24):  ಆಡಿಯೋ ಕ್ಲಿಪ್​ ವಿಚಾರವೊಂದಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್​ ಮತ್ತು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿಮಾನಿಗಳ ನಡುವಿನ ಗಲಾಟೆ ಸುಖ್ಯಾಂತ ಕಂಡಿದೆ. ಇದರ ಬೆನ್ನಲ್ಲೇ ಮಾಜಿ ಶಾಸಕ, ನಟ ಜಗ್ಗೇಶ್ ಅವರಿಗೆ ರಾಜ್ಯ ಬಿಜೆಪಿ ಸಿಹಿ ಮಹತ್ವದ ಹುದ್ದೆಯೊಂದನ್ನು ನೀಡಿದೆ.

ಜಗಳಕ್ಕೆ ಶುಭಮಂಗಳ; ಜಗ್ಗೇಶ್ ಮತ್ತು ದರ್ಶನ್ ಅಣ್ತಮ್ಮ

ಹೌದು... ಪಕ್ಷ ಸಂಘಟನೆಗೆ ರಾಜ್ಯ ಬಿಜೆಪಿ ಮುಂದಾಗಿದ್ದು, ಇದಕ್ಕಾಗಿ  ನೂತನ 10 ವಕ್ತಾರರನ್ನು ನೇಮಕಗೊಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಇಂದು (ಬುಧವಾರ) ಆದೇಶ ಹೊರಡಿಸಿದ್ದಾರೆ. ಈ 10ರಲ್ಲಿ ನಟ ಜಗ್ಗೇಶ್ ಅವರನ್ನು  ಬೆಂಗಳೂರು ಬಿಜೆಪಿ ವಕ್ತಾರರನ್ನಾಗಿ ನೇಮಿಸಲಾಗಿದೆ.

ನೂತನ ವಕ್ತಾರರ ಪಟ್ಟಿ ಹೀಗಿದೆ..

1. ಗಣೇಶ್ ಕಾರ್ಣಿಕ್ - ಮುಖ್ಯ ವಕ್ತಾರರು, ಮಂಗಳೂರು.

2. ಜಗ್ಗೇಶ್- ವಕ್ತಾರರು, ಬೆಂಗಳೂರು.

3. ರಾಜೂಗೌಡ (ನರಸಿಂಹ ನಾಯಕ್)- ವಕ್ತಾರರು, ಯಾದಗಿರಿ.

4. ರಾಜ್‌ಕುಮಾರ್ ಪಾಟೀಲ್ ತೇಲ್ಕೂರು- ವಕ್ತಾರರು, ಕಲಬುರಗಿ.

5. ಛಲವಾದಿ ನಾರಾಯಣಸ್ವಾಮಿ- ವಕ್ತಾರರು. ಬೆಂಗಳೂರು.

6. ತೇಜಸ್ವಿನಿ ಗೌಡ- ವಕ್ತಾರರು, ಬೆಂಗಳೂರು.

7. ಗಿರಿಧರ ಉಪಾಧ್ಯಾಯ- ವಕ್ತಾರರು, ಬೆಂಗಳೂರು.

8. ಪಿ.ರಾಜೀವ್- ವಕ್ತಾರರು, ಬೆಳಗಾವಿ.

9. ಎಂ.ಬಿ.ಜಿರಲಿ- ವಕ್ತಾರರು, ಬೆಳಗಾವಿ.

10. ಮಹೇಶ್- ವಕ್ತಾರರು, ಮೈಸೂರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ