ವಿಧಾನಸಭೆ: ಸ್ಪೀಕರ್ ಪೀಠಕ್ಕೆ ಅಗೌರವ, 18 ಬಿಜೆಪಿ ಶಾಸಕರು ಅಮಾನತು! ಇಲ್ಲಿದೆ ಪಟ್ಟಿ..

ಕರ್ನಾಟಕ ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಕಾರಣಕ್ಕೆ 18 ಬಿಜೆಪಿ ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಲಾಗಿದೆ. ನೀಲಿ ಶಾಲು ಧರಿಸಿ ಪ್ರತಿಭಟನೆ ನಡೆಸಿದ ಶಾಸಕರು, ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿದರು.

Karnataka Assembly Session 18 BJP MLAs Suspended by Speaker UT Khader sat

ಬೆಂಗಳೂರು (ಮಾ.21): ಕರ್ನಾಟಕದ ವೀಧಾನಸಭಾ ಅಧಿವೇಶನದ ವೇಳೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ್ದಾರೆ ಎಂದು ಬಿಜೆಪಿಯ 18 ಶಾಸಕರನ್ನು 6 ತಿಂಗಳುಗಳ ಕಾಲ ಅಮಾನತು ಮಾಡಿ ಸ್ಪೀಕರ್ ಯು.ಟಿ. ಖಾದರ್ ಆದೇಶ ಹೊರಡಿಸಿದ್ದಾರೆ.

ಬಿಜೆಪಿ ಶಾಸಕರು, ನೀಲಿ ಬಣ್ಣದ ಶಾಲು ಹಾಕಿ ಬಂದು ವಿಧಾನಸಭಾ ಅಧಿವೇಶನದಲ್ಲಿ ಪ್ರತಿಭಟನೆ ಮಾಡಿದ್ದಾರೆ. ರಾಜಣ್ಣಗೆ ಅನ್ಯಾಯ ಆಗಿದೆ ಎಂದು ಪ್ರತಿಪಕ್ಷ ನಾಯಕರಿಂದ ಬ್ಲೂ ಶಾಲು ಹಾಕಿ ಬಂದಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಇದರಲ್ಲಿ ಮುಖ್ಯಮಂತ್ರಿ ಜವಬ್ದಾರಿ ಇದೆ‌ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದರು. 

Latest Videos

ಮಾ.21ರಂದು ವಿಧಾನಸಭೆ ಅಧಿವೇಶನದ ಸದನದಲ್ಲಿ ಪೀಠದ ಆದೇಶವನ್ನು ಲೆಕ್ಕಿಸದೇ ಸದನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡುತ್ತಾ, ಅಶಿಸ್ತಿನಿಂದ ಅದೇಶ ಅಗೌರವದಿಂದ ನಡೆದುಕೊಂಡ 18 ಶಾಸಕರನ್ನು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಾವಳಿಗಳ ನಿಯಮ 348ರ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳುಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತ್ತುಗೊಳಿಸಲಾಗಿರುತ್ತದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹನಿಟ್ರ್ಯಾಪ್ ಪ್ರಕರಣದಿಂದ ರಾಜ್ಯದ ಮರ್ಯಾದೆ ಹಾಳು; ಸಿಎಂ ರಾಜೀನಾಮೆ ಕೊಡಲಿ: ಬೊಮ್ಮಾಯಿ

ಆರು ತಿಂಗಳು ಅಮಾನತುಗೊಂಡ ಬಿಜೆಪಿಯ 18 ಶಾಸಕರು:
1- ದೊಡ್ಡಣ್ಣ ಗೌಡ ಪಾಟೀಲ್
2- ಸಿ ಕೆ ರಾಮಮೂರ್ತಿ
3- ಅಶ್ವತ್ಥ ನಾರಾಯಣ
4- ಎಸ್ ಆರ್ ವಿಶ್ವನಾಥ್
5 - ಬೈರತಿ ಬಸವರಾಜ
6- ಎಂ ಆರ್ ಪಾಟೀಲ್
7- ಚನ್ನಬಸಪ್ಪ
8- ಬಿ ಸುರೇಶ್ ಗೌಡ
9- ಉಮನಾಥ್ ಕೋಟ್ಯಾನ್
10- ಶರಣು ಸಲಗಾರ್ 
11- ಶೈಲೇಂದ್ರ ಬೆಲ್ದಾಳೆ
12- ಯಶಪಾಲ್ ಸುವರ್ಣ
13- ಹರೀಶ್ ಬಿಪಿ
14- ಡಾ. ಭರತ್ ಶೆಟ್ಟಿ
15- ಮುನಿರತ್ನ
16- ಬಸವರಾಜ ಮತ್ತಿಮೋಡ್
17 -ಧೀರಜ್ ಮುನಿರಾಜು
18- ಡಾ ಚಂದ್ರು ಲಮಾಣಿ

ಸದರಿಯವರುಗಳ ಅಮಾನತ್ತು ಅವಧಿಯಲ್ಲಿ ಈ ಪರಿಣಾಮಗಳು ಜಾರಿಯಲ್ಲಿರುತ್ತವೆ. 
1. ಅವರುಗಳು ವಿಧಾನಸಭೆಯ ಸಭಾಂಗಣ, ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವಂತಿಲ್ಲ.
2. ಅವರು ಸದಸ್ಯರಾಗಿರುವ ವಿಧಾನಮಂಡಲದ/ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಸಭೆಗಳಲ್ಲಿಯೂ ಭಾಗವಹಿಸುವಂತಿಲ್ಲ.
3. ವಿಧಾನ ಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರುಗಳ ಹೆಸರಿನಲ್ಲಿ ಯಾವುದೇ ವಿಷಯವನ್ನು ನಮೂದು ಮಾಡತಕ್ಕದಲ್ಲ.
4. ಅಮಾನತ್ತಿನ ಅವಧಿಯಲ್ಲಿ ಅವರುಗಳು ನೀಡುವ ಯಾವುದೇ ಸೂಚನೆಗಳನ್ನು ಸ್ವೀಕರಿಸಲಾಗುವುದಿಲ್ಲ.
5. ಅಮಾನತ್ತಿನ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವಣೆಯಲ್ಲಿ ಅವರುಗಳು ಮತದಾನ ಮಾಡುವಂತಿಲ್ಲ.
6. ಅಮಾನತ್ತಿನ ಅವಧಿಯಲ್ಲಿ ಅವರುಗಳು ಯಾವುದೇ ದಿನಭತ್ಯೆಯನ್ನು ಪಡೆಯಲು ಅರ್ಹರಿರುವುದಿಲ್ಲ.

vuukle one pixel image
click me!