ವಿಧಾನಸಭೆ ಅಧಿವೇಶನದಲ್ಲಿ ಬಜೆಟ್ ಮಂಡನೆ ವೇಳೆ ಮುಸ್ಲಿಂ ಮೀಸಲಾತಿ ವಿಚಾರಕ್ಕೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಸ್ಪೀಕರ್ ಪೀಠಕ್ಕೆ ಮುತ್ತಿಗೆ ಹಾಕಿ ಪ್ರತಿ ಹರಿದು ಹಾಕಿದ್ದಾರೆ. ಗದ್ದಲದ ನಡುವೆಯೂ ಬಜೆಟ್ ಅಂಗೀಕಾರ ಮಾಡಲಾಗಿದೆ.
ಬೆಂಗಳೂರು (ಮಾ.21): ವಿಧಾನಸಭೆ ಅಧಿವೇಶನದ ಅಂತಿಮ ದಿನ ಬಿಜೆಪಿ ಸದಸ್ಯರು ಭಾರೀ ಹೈಡ್ರಾಮಾ ನಡೆಸಿದ್ದಾರೆ. ರಾಜ್ಯ ಸರ್ಕಾರ ಮಂಡನೆ ಮಾಡಿರುವ ಬಜೆಟ್‌ಲ್ಲಿ ಮುಸ್ಲಿಂ ಮೀಸಲಾತಿ ನೀಡಿರುವ ವಿಚಾರಕ್ಕೆ ಭಾರೀ ಅಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ಸ್ಪೀಕರ್ ಯುಟಿ ಖಾದರ್ ಅವರಿದ್ದ ಪೀಠವನ್ನೇರಿ ಅವರ ಮೇಲೆ ಬಜೆಟ್ ಪ್ರತಿ ಹರಿದು ಕಾಗದವನ್ನು ತೂರಿ ಪ್ರತಿಭಟನೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ಭಾರೀ ಗದ್ದಲ, ಕೋಲಾಹಲದ ನಡುವೆ ಬಜೆಟ್‌ಅನ್ನು ಅಂಗೀಕಾರ ಮಾಡಲಾಗಿದೆ. ಕೊನೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರು ಪರಸ್ಪರ ಪೇಪರ್ ತೂರಿ ಇಡೀ ಸದನದಲ್ಲಿ ಹೈಡ್ರಾಮಾ ನಡೆಸಿದ್ದಾರೆ. ಕೊನೆಗೆ ಸ್ಪೀಕರ್‌ಯುಟಿ ಖಾದರ್ 10 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿಕೆ ಮಾಡಿದೆ.
ಬಜೆಟ್ ಮೇಲಿನ ಚರ್ಚೆಗೆ ಸಿಎಂ ಉತ್ತರ ನೀಡುವ ವೇಳೆ ಮುಸ್ಲಿಂ ಮೀಸಲಾತಿ ಬಗ್ಗೆ ಪ್ರಸ್ತಾಪ ಮಾಡಿದ್ದಾರ. ಗುತ್ತಿಗೆಯಲ್ಲಿ 4% ಮೀಸಲಾತಿ ನೀಡಿದ್ದೇವೆ ಎಂದು ಸಿಎಂ ಹೇಳಿದರು ಈ ವೇಳೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಮುಸ್ಲಿಂರಿಗೆ 4% ಮೀಸಲಾತಿ ನೀಡಿದ್ದು ಸರಿಯಲ್ಲ. ಇದು ಕರ್ನಾಟಕ ಜನತೆಗೆ ಮಾಡಿದ ಮೋಸ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ಸ್ಪೀಕರ್ ಕುರ್ಚಿಯ ಮೇಲೆ ವಿಪಕ್ಷ ನಾಯಕರು ಪೇಪರ್ ತೂರಿದ್ದಾರೆ. ಸ್ಪೀಕರ್ ಪೀಠದ ಮೇಲೆ ಬಿಜೆಪಿ ಸದಸ್ಯರು ಪೀಠದ ಮೇಲೆ ಎಸೆದರು.
ಜಯನಗರ ಶಾಸಕ ರಾಮಮೂರ್ತಿ ಸ್ಪೀಕರ್ ಪೀಠದ ಮೇಲೆ ಮೊದಲಿಗೆ ಪೇಪರ್ ಎಸೆದರು. ಬಳಿಕ ರಾಮಮೂರ್ತಿ ಸ್ಪೀಕರ್ ಪೀಠದ ಮೇಲೇರಿದ್ದಾರೆ ವೇಳೆ ಎಡಭಾಗದಲ್ಲಿ ದೊಡ್ಡನಗೌಡ ಪಾಟೀಲ್ ಕುಡ ಇದ್ದರು.
ಈ ಹಂತದಲ್ಲಿ ಸಿಟ್ಟಾದ ಸಿಎಂ ಸಿದ್ದರಾಮಯ್ಯ, ಯಾರ್ರೀ ಅವರು ಪೀಠದಿಂದ ಕೆಳಿಗಿಳಿಯಿರಿ. ಏ ಮಾರ್ಷಲ್ಸ್ ಎಳೆದು ಹಾಕ್ರೀ ಇವರನ್ನ ಎಂದು ಹೇಳಿದ್ದಾರೆ. ಪೀಠದ ಮೇಲೆ ಹತ್ತಿದವರನ್ನ ಎಳೆದು ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಬೈರತಿ ಸುರೇಶ್ ಸಿಎಂ ಬಳಿ ಬಿದ್ದ ಪೇಪರ್ ಗಳನ್ನು ಸಿಟ್ಟಿನಲ್ಲಿ ಎಸೆದಿರುವುದು ಕಂಡಿದೆ.
ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಹನಿ ಬಾಂಬ್ , 48 ನಾಯಕರಿಗೆ ಹನಿಟ್ರ್ಯಾಪ್ ಭೀತಿ!
ಈ ಘೋಷಣೆ ನಡುವೆಯೂ ಬಜೆಟ್ ಅಂಗೀಕಾರ ಮಾಡಲಾಗಿದ್ದು.ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಘೋಷಣೆ ಕೂಗುವ ಮೂಲಕ ಆಕ್ರೋಶ ಪೀಠದ ಮೇಲೇರಿದವರನ್ನ ಮಾರ್ಷಲ್ಸ್‌ಗಳು ಎಳೆದು ಹಾಕಿದ್ದಾರೆ. ವಿಧಾನಸಭೆಯಲ್ಲಿ ಗದ್ದಲದ ನಡುವೆ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025 ವಿಧೇಯಕ ಅಂಗೀಕಾರ ಮಾಡಲಾಗಿದೆ. ಅದರೊಂದಿಗೆ ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ಪಿಂಚಣಿಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025ಯನ್ನೂ ಅಂಗೀಕರಿಸಲಾಗಿದೆ.
ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರ ಕೊಡಲಾಗದೆ ಸದನಕ್ಕೆ ಗೈರು