ಕರ್ನಾಟಕ ವಿಧಾನಸಭಾ ಚುನಾವಣೆ: ಬೆಂಗಳೂರು ಮತ ಎಣಿಕೆ ಕೇಂದ್ರ ಸುತ್ತ ಸಂಚಾರ ಬದಲು

Published : May 13, 2023, 06:23 AM IST
ಕರ್ನಾಟಕ ವಿಧಾನಸಭಾ ಚುನಾವಣೆ: ಬೆಂಗಳೂರು ಮತ ಎಣಿಕೆ ಕೇಂದ್ರ ಸುತ್ತ ಸಂಚಾರ ಬದಲು

ಸಾರಾಂಶ

ಬೆಂಗಳೂರು: ನಗರದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕೇಂದ್ರಗಳ ವ್ಯಾಪ್ತಿಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಇದಕ್ಕೆ ಸಾರ್ವಜನಿಕರು ಸಹಕರಿಸುವಂತೆ ಸಂಚಾರ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ.

ಬೆಂಗಳೂರು: ನಗರದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕೇಂದ್ರಗಳ ವ್ಯಾಪ್ತಿಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಇದಕ್ಕೆ ಸಾರ್ವಜನಿಕರು ಸಹಕರಿಸುವಂತೆ ಸಂಚಾರ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ.

ಸಂಚಾರ ಬದಲಾವಣೆ ಹೀಗಿದೆ:

ಸೇಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲ್‌

ಸಿದ್ದಲಿಂಗಯ್ಯ ವೃತ್ತದಿಂದ ಆರ್‌ಆರ್‌ಎಂಆರ್‌ ಕಡೆಗೆ ಹಾಗೂ ಕಸ್ತೂರ ಬಾ ರಸ್ತೆಯ ಕ್ವೀನ್ಸ್‌ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತದ ವರೆಗೆ ಎಲ್ಲ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಮಣಿ ಎಣಿಕೆÜ ಕೇಂದ್ರಕ್ಕೆ ಆಗಮಿಸುವವರಿಗೆ ಕಂಠೀರವ ಕ್ರೀಡಾಂಗಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಕಸ್ತೂರ ಬಾ ಹಾಗೂ ಆರ್‌ಆರ್‌ಎಂಆರ್‌ ರಸ್ತೆಯಲ್ಲ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಲಾವೆಲ್ಲಿ ರಸ್ತೆ, ಎಂ.ಜಿ.ರಸ್ತೆ ಮುಖಾಂತರ ವಾಹನಗಳು ಸಂಚರಿಸಬಹುದು.

ಮೌಂಟ್‌ ಕಾರ್ಮಲ್‌ ಕಾಲೇಜು

ಅರಮನೆ ರಸ್ತೆಯ ಕಲ್ಪನಾ ಜಂಕ್ಷನ್‌ನಿಂದ ವಸಂತನಗರ ಅಂಡರ್‌ಪಾಸ್‌ವರೆಗೆ ಮತ್ತು ವಸಂತನಗರ ರೈಲು ಕೆಳಸೇತುವೆ ಕಡೆಯಿಂದ ಮೌಂಟ್‌ ಕಾರ್ಮೆಲ್‌ ಕಾಲೇಜು ಮಾರ್ಗದಲ್ಲಿ ಎಲ್ಲ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಬರುವರಿಗೆ ಅರಮನೆ ಮೈದಾನದಲ್ಲಿ ನಿಲುಗಡೆ. ಚಕ್ರವರ್ತಿ ಲೇಔಟ್‌ ಹಾಗೂ ಉದಯಟಿವಿ ಜಂಕ್ಷನ್‌ ಕಡೆಯಿಂದ ವಾಹನಗಳು ಸಂಚರಿಸಬಹುದು. ಕಲ್ಪನಾ ಜಂಕ್ಷನ್‌, ಹಳೇ ಹೈಗ್ರೌಂಡ್‌್ಸ ಠಾಣೆ ಹಾಗೂ ಚಂದ್ರಿಕಾ ಹೋಟೆಲ್‌ ಮಾರ್ಗದಲ್ಲಿ ಪಾರ್ಕಿಂಗ್‌ ನಿಷೇಧಿಸಲಾಗಿದೆ.

ಎಸ್‌ಎಸ್‌ಎಂಆರ್‌ವಿ ಪಿಯು ಕಾಲೇಜು

ಎಸ್‌ಎಸ್‌ಎಂಆರ್‌ವಿ ಕಾಲೇಜು ಬಳಿಯ ರಸ್ತೆಗಳಾದ 36ನೇ ಕ್ರಾಸ್‌ ರಸ್ತೆ, 22ನೇ ಮುಖ್ಯ ರಸ್ತೆ, 26ನೇ ರಸ್ತೆ ಮತ್ತು 28ನೇ ಮುಖ್ಯ ರಸ್ತೆಯಲ್ಲಿ ಎಲ್ಲ ಸಂಚಾರ ನಿರ್ಬಂಧಿಸಲಾಗಿದೆ. ಜಯನಗರ 11ನೇ ಮುಖ್ಯರಸ್ತೆಯ ಶಾಲಿನಿ ಮೈದಾನದಲ್ಲಿ ಮತ್ತು ಆರ್‌ವಿ ಕಾಲೇಜು ಮೈದಾನದಲ್ಲಿ ವಾಹನ ನಿಲ್ಲಿಸಬೇಕು. ಜಯನಗರ 4ನೇ ಹಾಗೂ ಸಾರ್ವಜನಿಕ ಆಸ್ಪತ್ರೆ ಮಾರ್ಗದಲ್ಲಿ ವಾಹನಗಳು ಸಂಚರಿಸಬಹುದು. ಮತ ಎಣಿಕೆ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಬಿಎಂಎಸ್‌ ಮಹಿಳಾ ಕಾಲೇಜು

ಹಯವದನ ಕ್ರಾಸ್‌ನಿಂದ ಕಾಮೆತ್‌ ಹೋಟೆಲ್‌ ಜಂಕ್ಷನ್‌ ವರೆಗೆ, ಬುಲ್‌ ಟೆಂಪಲ್‌ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬಸವನಗುಡಿ ನ್ಯಾಷನಲ್‌ ಕಾಲೇಜು ಆವರಣ, ಉದಯಭಾನು ಆಟದ ಮೈದಾನ, ಕೊಹಿನೂರು ಆಟದ ಮೈದಾನದಲ್ಲಿ ಹಯವದನ ರಸ್ತೆಗಳಲ್ಲಿ ಮತ ಎಣಿಕೆಗೆ ಆಗಮಿಸುವವರು ವಾಹನ ನಿಲ್ಲಿಸಬೇಕು. ಮತ ಎಣಿಕೆ ಕೇಂದ್ರ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ. ಎನ್‌.ಆರ್‌.ಕಾಲೋನಿ, ರಾಮಕೃಷ್ಣ ಆಶ್ರಮ ಹಾಗೂ ಹೋ ಸ್ಕೂಲ್‌ ಕಡೆ ಪರ್ಯಾಯ ಮಾರ್ಗವಿದೆ.

ಆಕಾಶ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌

ದೇವನಹಳ್ಳಿ ಬೈಪಾಸ್‌ನಿಂದ ದೇವನಹಳ್ಳಿ ಹೊಸ ಬಸ್‌ ನಿಲ್ದಾಣದ ನಡುವೆ, ಹೊಸ ಬಸ್‌ ನಿಲ್ದಾಣದ ಬೈಪಾಸ್‌ ವರೆಗೆ ಮತ್ತು ದೇವನಹಳ್ಳಿ ಗಿರಿಯಮ್ಮ ಸರ್ಕಲ್‌ನಿಂದ ಬೈಚಾಪುರ ಗ್ರಾಮದಲ್ಲಿ ವಾಹನ ಓಡಾಟಕ್ಕೆ ಬ್ರೇಕ್‌ ಬಿದ್ದಿದೆ. ಇನ್ನೂ ಮತ ಎಣಿಕೆ ಕೇಂದ್ರಕ್ಕೆ ಬರುವವರಿಗೆ ಟಿಪು$್ಪ ಸರ್ಕಲ್‌ನಿಂದ ಆಸ್ಪತ್ರೆಯ ವರೆಗೆ ರಸ್ತೆಯ ಎಡಭಾಗ ಲೇಔಟ್‌,ಬೈಚಾಪುರ ರಸ್ತೆ ಎಡಭಾಗದ ಲೇಔಟ್‌, ಬೈಪಾಸ್‌ ಜಂಕ್ಷನ್‌, ದೇವನಹಳ್ಳಿ ಕೋಟೆ ಕ್ರಾಸ್‌ ಜಂಕ್ಷನ್‌ನಲ್ಲಿ ವಾಹನ ನಿಲ್ಲಿಸಬಹುದು.

ಪಕ್ಷೇತರ ಸ್ಪರ್ಧಿಗಳಿಗೆ ಬಿಜೆಪಿಯಿಂದ ಗಾಳ: ಕಾಂಗ್ರೆಸ್ ಹೊಸ ಶಾಸಕರು ಇಂದೇ ರೆಸಾರ್ಟಿಗೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!