ಠೇವಣಿ ಹಣ ಸಂಗ್ರಹಿಸಲು ಜೋಳಿಗೆ ಹಿಡಿದು. ಮಟೆ ಬಾರಿಸುತ್ತ ಮತದಾರರ ಮುಂದೆ ಹೋಗಲು ವಿನೂತನ ಪ್ರಯತ್ನ ನಡೆಸಲು ಸಿದ್ಧತೆ ನಡೆಸಿರುವ ಮಾಜಿ ಸಚಿವ ಸೊಗಡು ಶಿವಣ್ಣ(Sogadu shivanna) ಸದ್ಯ ಕ್ಷೇತ್ರದಲ್ಲಿ ಇವರದ್ದೇ ಸುದ್ದಿಯಾಗಿದೆ.
ತುಮಕೂರು (ಮಾ.10) : ಠೇವಣಿ ಹಣ ಸಂಗ್ರಹಿಸಲು ಜೋಳಿಗೆ ಹಿಡಿದು. ಮಟೆ ಬಾರಿಸುತ್ತ ಮತದಾರರ ಮುಂದೆ ಹೋಗಲು ವಿನೂತನ ಪ್ರಯತ್ನ ನಡೆಸಲು ಸಿದ್ಧತೆ ನಡೆಸಿರುವ ಮಾಜಿ ಸಚಿವ ಸೊಗಡು ಶಿವಣ್ಣ(Sogadu shivanna) ಸದ್ಯ ಕ್ಷೇತ್ರದಲ್ಲಿ ಇವರದ್ದೇ ಸುದ್ದಿಯಾಗಿದೆ.
ವಿನೂತನ ಪ್ರಚಾರದ ಮೂಲಕ ತುಮಕೂರು ನಗರದ ಬಿಜೆಪಿ ಟಿಕೆಟ್ ಫೈಟ್(Ticket fight) ಜೋರಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಜೋಳಿಗೆ ಹಿಡಿದು ಮತದಾರನ ಮುಂದೆ ಹೋಗುತ್ತಿದ್ದು ಒಂದು ಜೋಳಿಗೆಗೆ ನೋಟು, ಇನ್ನೊಂದು ಜೋಳಿಗೆಗೆ ವೋಟು ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಬಿಎಸ್‌ವೈ ಮದುವೆ ಸಿಡಿ,ಡೈರಿ ಡಿಕೆಶಿಗೆ ಕೊಟ್ಟಿದ್ದೆ : ಪದ್ಮನಾಭ ಪ್ರಸನ್ನ
1977 ರಲ್ಲಿ ವಾಕ್ ಸ್ವಾತಂತ್ರ ಕಿತ್ತುಕೊಂಡಿದ್ದಾರೆಂದು ಜೋಳಿಗೆ ಹಿಡಿದು ಜೈಲಿಗೆ ಹೋಗಿದ್ದೆ. ಮತದಾರರು ನೀಡಿರುವ ಜೋಳಿಗೆಗಳು ಇವಾಗಿವೆ. ಭಾನುವಾರ ಕಾಳಮ್ಮ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜೋಳಿಗೆ ಹಿಡಿದು ಪ್ರಚಾರ ಆರಂಭಿಸಲಾಗುವುದು. ಠೇವಣಿಗಾಗಿ ಜನರಿಂದಲ್ಲೇ ಹಣ ಸಂಗ್ರಹಿಸಲು ಜೋಳಿಗೆ ಹಿಡಿದಿದ್ದು, ಪ್ರತಿ ದಿನ ತುಮಕೂರು ನಗರದ ಒಂದೊಂದು ವಾರ್ಡ್ ನಲ್ಲಿ ಓಡಾಟ ಮಾಡುತ್ತಾ ಪ್ರಚಾರ ನಡೆಸುತ್ತೇನೆ ಎಂದರು.
ಹಿಂದು, ಮುಸ್ಲಿಂ, ಕ್ರೈಸ್ತರನ್ನು ಸಮಾನವಾಗಿ ನೋಡಿದ ಕಾಂಗ್ರೆಸ್: ಮಲ್ಲಿಕಾರ್ಜುನ ಖರ್ಗೆ
ನಾನು ಮಾಡಿರುವ ಕಾಯಕವನ್ನು ಹೇಳಿಕೊಂಡು ಪ್ರಚಾರ ನಡೆಸುತ್ತೇನೆ. ಹಿರಿಯರ ಮಾತಿಗೆ ಬೆಲೆ ಕೊಟ್ಟು 2018 ರಲ್ಲಿ ಟಿಕೆಟ್ ಬಿಟ್ಟು ಕೊಟ್ಟಿದ್ದೆ. ಆದರೆ ಈ ಬಾರಿ ಬಿಜೆಪಿ(Karnataka BJP)ಯಿಂದ ತುಮಕೂರು ನಗರ ಅಭ್ಯರ್ಥಿ ನಾನೇ ಎಂದು ಹೇಳಿದರು.
ಇದೇ ವೇಳೆ ಸೊಗಡು ಶಿವಣ್ಣ ಅವರ ಜೋಳಿಗೆಗೆ ಬೆಂಬಲಿಗರು ಹಣ ಹಾಕಿ ಬೆಂಬಲ ಸೂಚಿಸಿದರು.