Published : May 10, 2023, 06:55 AM ISTUpdated : May 10, 2023, 06:52 PM IST

Karnataka Elections 2023 LIVE: ಎಕ್ಸಿಟ್ ಪೋಲ್‌ನಲ್ಲಿ ಸಿಕ್ತು ಅತಂತ್ರ ಸರ್ಕಾರದ ಸೂಚನೆ

ಸಾರಾಂಶ

Karnataka Elections 2023ರ ಮತದಾನ ಪ್ರಕ್ರಿಯೆ ಮುಗಿದಿದ್ದು, 224 ಕ್ಷೇತ್ರಗಳಲ್ಲಿ 2615 ಅಭ್ಯರ್ಥಿಗಳ ಅದೃಷ್ಟ ಮತಪೆಟ್ಟಿಗೆಯಲ್ಲಿ ಭದ್ರವಾಗಿ ಲಾಕ್ ಆಗಲಿದೆ. ಮತಗಟ್ಟೆಗಳಿಂದ ಜಿಲ್ಲಾ ಕೇಂದ್ರಗಳಲ್ಲಿ ನಿರ್ಧರಿತ ಸ್ಟ್ರಾಂಗ್ ರೂಮ್‌ಗಳಲ್ಲಿ ಭದ್ರವಾಗಿ ಲಾಕ್ ಆಗಲಿದೆ. ಸುಮಾರು 5.3 ಕೋಟಿ ಮತದಾರರು ಮತದಾನದ ಹಕ್ಕು ಹೊಂದಿದ್ದು, ಶೇ.72 ರಿಂದ ಶೇ.75ರಷ್ಟು ಮತ ಚಲಾಯಿಸಿರುವ ಸಾಧ್ಯತೆ ಇದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳಲ್ಲದೇ ಕೆಲವೆಡೆ ಸ್ವತಂತ್ರ ಅಭ್ಯರ್ಥಿಗಳು, ಸ್ಯಾಂಡಲ್‌ವುಡ್ ನಟ ಉಪೇಂದ್ರ ಸ್ಥಾಪಿಸಿದ ಪ್ರಜಾಕಿಯ ಹಾಗೂ ಜನಾರ್ದನ ರೆಡ್ಡಿ ಅವರ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಅಭ್ಯರ್ಥಿಗಳೂ ಸ್ಪರ್ಧಿಸಿದ್ದರು. ಯಾರು ಬಹುಮತ ಪಡೆಯಬಹುದೆಂಬ ಕುತೂಹಲ ಎಲ್ಲರಿಗೂ ಇದೆ. ಸಿಲಿಕಾನ್ ವ್ಯಾಲಿ ಎಂದು ಹೆಸರು ಪಡೆದಿರುವ ಬೆಂಗಳೂರಿನಲ್ಲಿ ದೇಶ, ವಿದೇಶಗಳ ಕಂಪನಿಗಳು ಹಾಗೂ ಉದ್ಯೋಗಿಗಳು ನೆಲೆ ಕಂಡು ಕೊಂಡಿದ್ದು, ಇದು ಕೇವಲ ಕರ್ನಾಟಕದ ಚುನಾವಣೆಯಾದರೂ, ಇಲ್ಲಿ ಹೂಡಿಕೆ ಮಾಡಿರುವ ಪ್ರತಿಯೊಬ್ಬರಿಗೂ ಯಾವ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಬಹುದೆಂಬ ಕುತೂಹಲ ಸಹಜವಾಗಿದಯೇ ಹೆಚ್ಚಾಗಿದೆ.ಮೇ 13ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಲ್ಲೀವರೆಗೂ ಯಾವ ಪಕ್ಷದ ಸರಕಾರ ರಚನೆಯಾಗುತ್ತದೆ ಎಂಬುದನ್ನು ಕಾಯಲೇ ಬೇಕು. 

Karnataka Elections 2023 LIVE:  ಎಕ್ಸಿಟ್ ಪೋಲ್‌ನಲ್ಲಿ ಸಿಕ್ತು ಅತಂತ್ರ ಸರ್ಕಾರದ ಸೂಚನೆ

06:52 PM (IST) May 10

Karnataka Election Exit Poll ಏಷ್ಯಾನೆಟ್ ಚುನಾವಣೋತ್ತರ ಸಮೀಕ್ಷೆ ಪ್ರಕಟ, ಬಿಜೆಪಿ ಅತೀದೊಡ್ಡ ಪಕ್ಷ!

ಕರ್ನಾಟಕ ವಿಧಾನಸಭಾ ಚುನಾವಣಾ ಮತದಾನ ಅಂತ್ಯಗೊಂಡಿದೆ.  ಈ ಬಾರಿ ಶೇಕಡಾ ರಷ್ಟು ಮತದಾನವಾಗಿದೆ. ಇದೀಗ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಳ್ಳುತ್ತಿದೆ. ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್ ಕಿ ಬಾತ್ ಪ್ರಕಟಿಸಿದ ಸಮೀಕ್ಷೆಯಲ್ಲಿ ಈ ಬಾರಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿದೆ. ಆದರೆ ಕಾಂಗ್ರೆಸ್ ಠಕ್ಕರ್ ನೀಡುವ ಸಾಧ್ಯತೆಯನ್ನೂ ಹೇಳಿದೆ. 

ಎಕ್ಸಿಚ್ ಪೋಲ್ ನಂಬರ್ಸ್ ಹೇಗಿದೆ?

06:49 PM (IST) May 10

ಬಳ್ಳಾರಿಯಲ್ಲಿ ಶೇ.70ರಷ್ಟು ಮತದಾನ

ಬಳ್ಳಾರಿ ಜಿಲ್ಲೆ ವಿಧಾನಸಭಾ ಚುನಾವಣೆ ಮತದಾನ ವಿವರ

ಸಂಜೆ. 05 ಗಂಟೆಯವರೆಗೆ ಶೇಕಡಾವಾರು ಮತದಾನ

91-ಕಂಪ್ಲಿ - ಶೇ.78.39

92-ಸಿರಗುಪ್ಪ-ಶೇ.71.15

93-ಬಳ್ಳಾರಿ ಗ್ರಾಮೀಣ- ಶೇ. 67.51

94-ಬಳ್ಳಾರಿ ನಗರ-ಶೇ. 54.84

95-ಸಂಡೂರು-ಶೇ.69.09

ಜಿಲ್ಲಾ ಸರಾಸರಿ ಶೇ.- 67.68

06:18 PM (IST) May 10

ಗುಪ್ತ ಮತದಾನ ನಿಯಮ ಉಲ್ಲಂಘಿಸಿದ ಮತದಾರರು, ವೋಟ್ ಹಾಕಿದ್ದು ಮೊಬೈಲ್‌ನಲ್ಲಿ ಸೆರೆ

ರಾಜ್ಯಾದ್ಯಂತ ಇಂದು ಬಿರುಸಿನ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಗುಪ್ತವಾಗಿ ಮತದಾನ ಮಾಡಬೇಕು ಎಂಬ ನಿಯಮವಿದ್ದರೂ ಹಲವು ಯುವಕರು ತಾವು ಮತದಾನ ಮಾಡಿದ ವೀಡಿಯೋ, ಪೊಟೋ ತೆಗದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಮತದಾನ ಮಾಡಿದ ಬಳಿಕ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಫೋಟೋ ಅಪಲೋಡ್ ಮಾಡಿಕೊಂಡಿದ್ದಾನೆ. ಹಾವೇರಿಯ ಪುರದ ಓಣಿ ಯುವಕ ಹರೀಶ್ ಮಾಳಗಿ ಹುಕ್ಕೇರಿ ಮಠದ ಮಹಿಳಾ ಕಾಲೇಜು ಮತಗಟ್ಟೆಯಲ್ಲಿ ಮತದಾನ ಮಾಡಿದ್ದನು. ಈ ವೇಳೆ ಮತದಾನ ಮಾಡುವ ವೇಳೆ ಪೋಟೋ ಕ್ಲಿಕ್ಕಿಸಿಕೊಂಡಿದ್ದನು. ನಂತರ, ಪೋಟೋವನ್ನು ತನ್ನ ಫೇಸ್‌ಬುಕ್‌ನಲ್ಲಿ ಅಪ್ ಲೋಡ್ ಮಾಡಿ ಹಂಚಿಕೊಂಡಿದ್ದಾನೆ. ಇನ್ನು ಈ ಘಟನೆ ತಿಳಿದ ಕೂಡಲೇ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

06:18 PM (IST) May 10

ಗುಪ್ತ ಮತದಾನ ನಿಯಮ ಉಲ್ಲಂಘಿಸಿದ ಮತದಾರರು, ವೋಟ್ ಹಾಕಿದ್ದು ಮೊಬೈಲ್‌ನಲ್ಲಿ ಸೆರೆ

ರಾಜ್ಯಾದ್ಯಂತ ಇಂದು ಬಿರುಸಿನ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಗುಪ್ತವಾಗಿ ಮತದಾನ ಮಾಡಬೇಕು ಎಂಬ ನಿಯಮವಿದ್ದರೂ ಹಲವು ಯುವಕರು ತಾವು ಮತದಾನ ಮಾಡಿದ ವೀಡಿಯೋ, ಪೊಟೋ ತೆಗದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಮತದಾನ ಮಾಡಿದ ಬಳಿಕ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಫೋಟೋ ಅಪಲೋಡ್ ಮಾಡಿಕೊಂಡಿದ್ದಾನೆ. ಹಾವೇರಿಯ ಪುರದ ಓಣಿ ಯುವಕ ಹರೀಶ್ ಮಾಳಗಿ ಹುಕ್ಕೇರಿ ಮಠದ ಮಹಿಳಾ ಕಾಲೇಜು ಮತಗಟ್ಟೆಯಲ್ಲಿ ಮತದಾನ ಮಾಡಿದ್ದನು. ಈ ವೇಳೆ ಮತದಾನ ಮಾಡುವ ವೇಳೆ ಪೋಟೋ ಕ್ಲಿಕ್ಕಿಸಿಕೊಂಡಿದ್ದನು. ನಂತರ, ಪೋಟೋವನ್ನು ತನ್ನ ಫೇಸ್‌ಬುಕ್‌ನಲ್ಲಿ ಅಪ್ ಲೋಡ್ ಮಾಡಿ ಹಂಚಿಕೊಂಡಿದ್ದಾನೆ. ಇನ್ನು ಈ ಘಟನೆ ತಿಳಿದ ಕೂಡಲೇ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

05:58 PM (IST) May 10

ರಾಜ್ಯದಲ್ಲಿ ಒಟ್ಟಾರೆ ಶೇ.65.69 ಮತದಾನ, ಇನ್ನೇನು ಕೆಲವೇ ಕ್ಷಣಗಳಲ್ಲಿ ಮುಕ್ತಾಯ

ಕರ್ನಾಟಕ ವಿಧಾನಸಭಾ ಚುವಾವಣೆಯ ಮತದಾನದ ಪ್ರಕ್ರಿಯೆ ಬೆಳಗ್ಗೆ 7ರಿಂದ ಆರಂಭಗೊಂಡಿದ್ದು, ಸಂಜೆ 7ರವರೆಗೂ ನಡೆದಿದೆ. ಇದುವರೆಗೆ ಒಟ್ಟಾರೆ ಶೇ.65.69ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಕೆಲವೆಡೆ ಜನರಿನ್ನೂ ಮತ ಚಲಾಯಿಸಲು ಕ್ಯೂ ನಿಂತಿದ್ದಾರೆ. ಮತ್ತೆ ಕೆಲವೆಡೆ ಜನರು ನೀರಸ ಪ್ರತಿಕ್ರಿಯೆ ತೋರಿದ್ದು, ಒಟ್ಟಾರೆ ಚಿತ್ರಣ ಇನ್ನು ಕೆಲವೇ ಗಂಟೆಗಳಲ್ಲಿ ಸಿಗಲಿದೆ. 

 

05:53 PM (IST) May 10

ಬಳ್ಳಾರಿ: ಮದದಾನಕ್ಕಾಗಿ ಕಾದ ಜನರು ಹೈರಾಣು

ಬಳ್ಳಾರಿ: ಮತದಾನಕ್ಕೆ ಅರ್ಧ ಗಂಟೆ ಮಾತ್ರ ಬಾಕಿ ಹಿನ್ನಲೆಯಲ್ಲಿ ಬಳ್ಳಾರಿ ಎಪಿಎಂಸಿ ಮತಗಟ್ಟೆಯಲ್ಲಿ ನಿಧಾನಗತಿ ಮತದಾನ. ಮತದಾನ ಪ್ರಕ್ರಿಯೆ ವಿಳಂಬ ಮತಗಟ್ಟೆ ಮುಂದೆ ಹೈರಾಣಾ ಜನ.. ನಾವಣಾಧಿಕಾರಿ ಹಾಗೂ ಪೊಲೀಸರ ಮಧ್ಯೆ ವಾಗ್ವಾದ. ಚುನಾವಣಾ ನಿರಂತ ಸಿಬ್ಬಂದಿ ಜೊತೆಗೆ ವಾಗ್ವಾದಗಿಳಿದ ಮತದಾರರು. ಎಪಿಎಂಸಿಯ‌ ಮತಗಟ್ಟೆ ಸಂಖ್ಯೆ 222 ರಲ್ಲಿ ಘಟನೆ. ಮತದಾನಕ್ಕಾಗಿ ಕಾದು ಕಾದು ಸುಸ್ತಾದ ಜನರು‌. 

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತದಾನಕ್ಕೆ‌ ನೂಕು ನುಗ್ಗಲು. ಮತಗಟ್ಟೆ ಮುಂದೆ ನೂರಾರು ಜನರು ಕ್ಯೂ. ನಾಗಶೆಟ್ಟಿಕೊಪ್ಪದ ಸರ್ಕಾರಿ‌ ಶಾಲೆ‌ ಮತಗಟ್ಟೆಯಲ್ಲಿ ಜನವೋ ಜನ.ಮೂರು ಮತಗಟ್ಟೆಗಳ ಮುಂದೆ ನೂರಾರು ಜನರ ಸರದಿ ಸಾಲು.

ಬೆಳಗಾವಿ: ನಿಧಾನವಾಗಿ ವರ್ಕ್ ಆಗ್ತಿರೋ ಇವಿಎಂ ಮಶಿನ್. ಸರತಿ ಸಾಲಿನಲ್ಲಿ ನಿಂತು‌ ಪರದಾಡ್ತಿರೋ ಮತದಾರರು. ಗೋಕಾಕನ ಕೆಎಲ್ಇ ಸ್ಕೂಲ್ ನಲ್ಲಿ ಮತಗಟ್ಟೆಯ ಮುಂದೆ ಸರತಿ ಸಾಲು. ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳಲಿರುವ ಮತದಾನ‌ ಪ್ರಕ್ರಿಯೆ. ಕಳೆದ 1 ಗಂಟೆಯಿಂದ ನಿಧಾನವಾಗಿ ವರ್ಕ್ ಆಗ್ತಿರೋ ಇವಿಎಂ. ಇವಿಎಂ ಸ್ಲೋ ಆಗಿರೋದ್ರಿಂದ ಪರದಾಡುತ್ತಿರುವ ಮತದಾರರು

05:50 PM (IST) May 10

ಸಂಜೆ 5 ಗಂಟೆ ಹೊತ್ತಿಗೆ ಎಲ್ಲೆಡೆ ಇಷ್ಟಾಗಿತ್ತು ಮತದಾನ

ಬೀದರ್ ಜಿಲ್ಲೆಯಲ್ಲಿ ಮಧ್ಯಾಹ್ನ 5ರ ವರೆಗೆ ಶೇ. 60.49ರಷ್ಟು ಮತದಾನ

ಬಸವಕಲ್ಯಾಣ ಶೇ. 59.82
ಹುಮನಾಬಾದ್ ಶೇ. 58.32
ಬೀದರ್ ದಕ್ಷಿಣ ಶೇ. 56.8
ಬೀದರ್ ಶೇ. 54.3
ಭಾಲ್ಕಿ ಶೇ. 70.25
ಔರಾದ್ ಶೇ. 63.27

 

ಚಿತ್ರದುರ್ಗ ಜಿಲ್ಲೆ ವಿಧಾನಸಭಾ ಚುನಾವಣೆ ಮತದಾನ ವಿವರ


ಸಂಜೆ 5 ಗಂಟೆಯವರೆಗೆ ಶೇಕಡಾವಾರು ಮತದಾನ

97 -ಮೊಳಕಾಲ್ಮೂರು - ಶೇ.76

98-ಚಳ್ಳಕೆರೆ -ಶೇ.69.32

99-ಚಿತ್ರದುರ್ಗ- ಶೇ.70.47

100-ಹಿರಿಯೂರು-ಶೇ.62.05

101-ಹೊಸದುರ್ಗ-ಶೇ.71.87

102-ಹೊಳಲ್ಕೆರೆ -ಶೇ.74.97

 

ಮಂಡ್ಯ ಜಿಲ್ಲಾ ವಿಧಾನಸಭಾ ಕ್ಷೇತ್ರ ಸಂಜೆ 5  ಗಂಟೆಯ ವಿವರ

186 ಮಳವಳ್ಳಿ-  70.08 %
187 ಮದ್ದೂರು- 77.66%
188 ಮೇಲುಕೋಟೆ- 84.53% 
189 ಮಂಡ್ಯ- 69.13%
190 ಶ್ರೀರಂಗಪಟ್ಟಣ- 78.12%
191 ನಾಗಮಂಗಲ- 79.32%
192 ಕೆ.ಆರ್ ಪೇಟೆ- 74.30 %

ಒಟ್ಟಾರೆ ಸರಾಸರಿ   75.90%

 

ಹಾವೇರಿ ಜಿಲ್ಲೆಯಲ್ಲಿ  ಸಂಜೆ 5 ಗಂಟೆ ವೇಳೆಗೆ ಶೇ 73.25 ರಷ್ಟು ಮತದಾನವಾಗಿದೆ.

ಹಾನಗಲ್ಲ- ಶೇ 74.41
ಶಿಗ್ಗಾವಿ- ಶೇ 69.81
ಹಾವೇರಿ- ಶೇ 69.98
ಬ್ಯಾಡಗಿ- ಶೇ 76.65
ಹಿರೇಕೆರೂರು- ಶೇ  78.07
ರಾಣೆಬೆನ್ನೂರು- ಶೇ 71.93

ವಿಜಯಪುರ ಜಿಲ್ಲೆಯಲ್ಲಿ ಸಂಜೆ 5 ಗಂಟೆವರೆಗೆ ಸರಾಸರಿ ಶೇ.62.54 ರಷ್ಟು ಮತದಾನವಾಗಿದೆ.
ಬಬಲೇಶ್ವರ-ಶೇ. 72.90
ಬಸವನ ಬಾಗೇವಾಡಿ-61,40
ವಿಜಯಪುರ-61.90
ದೇವರ ಹಿಪ್ಪರಗಿ-57
ಇಂಡಿ-62.23
ಮುದ್ದೇಬಿಹಾಳ- 63.85
ನಾಗಠಾಣ-57.62
ಸಿಂದಗಿ-64.43

ಉತ್ತರಕನ್ನಡ ಜಿಲ್ಲೆಯಲ್ಲಿ ಸಂಜೆ 5 ಗಂಟೆಯವರೆಗೆ ಒಟ್ಟು 68.06% ಮತದಾನ

ಹಳಿಯಾಳ-67.27%,
ಕಾರವಾರ- 66.29%,
ಕುಮಟಾ- 60.35%,
ಭಟ್ಕಳ-71.59%, ಶಿರಸಿ- 73.62%,
ಯಲ್ಲಾಪುರ-  68.52% ಮತದಾನ

05:31 PM (IST) May 10

ಕಡೇ ಕ್ಷಣದ ಮತದಾನಕ್ಕೆ ಅಡ್ಡಿಯಾದ ವರುಣ

ಹಳಿಯಾಳದಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ ಅಡ್ಡಿಯಾದ ವರುಣ. ಏಕಾಏಕಿ ಸುರಿದ ಭಾರೀ ಮಳೆಯಿಂದಾಗಿ ಜನರು ಚೆಲ್ಲಾಪಿಲ್ಲಿ. ಮತದಾನ ಮಾಡಲಾಗದೇ ಅಂಗಡಿಗಳು, ಬಸ್ ಸ್ಟ್ಯಾಂಡ್‌ಗಳಲ್ಲಿ ಆಸರೆ ಪಡೆದ ಜನರು. ಮತದಾನ ಕೇಂದ್ರಗಳಲ್ಲಿ ಇರುವ ಜನರು ಹೊರತು ಪಡಿಸಿ ಉಳಿದವರಿಗೆ ಮನೆಯಿಂದ ಹೊರಗೆ ಹೋಗಲು ಮಳೆ ಅಡ್ಡಿ. ಮತದಾನ ಮಾಡಲು ತೆರಳಲಾಗದೇ ಮನೆಗಳು ಹಾಗೂ ಕೆಲಸದ ಸ್ಥಳಗಳಲ್ಲೇ ಬಾಕಿಯಾದ ಮತದಾರರು. 

ಬಳಿ‌ಕ ಭಟ್ಕಳ, ಶಿರಸಿಯಲ್ಲೂ ಕಾಣಿಸಿಕೊಂಡ‌ ಮಳೆ. ಭಟ್ಕಳ ಹಾಗೂ ಶಿರಸಿಯಲ್ಲಿ ಏಕಾಏಕಿ ಕಾಣಿಸಿಕೊಂಡ ಮಳೆಯಿಂದ ಅಂಗಡಿ, ಬಸ್‌ಸ್ಟ್ಯಾಂಡ್‌ಗಳಲ್ಲಿ ಆಸರೆ ಪಡೆದ ಜನರು. ಮಳೆಯಾದರೂ ಭಟ್ಕಳ ಹಾಗೂ ಶಿರಸಿಯಲ್ಲಿ ಮುಂದುವರಿದಿದೆ ಬಿರುಸಿದ ಮತದಾನ.

05:29 PM (IST) May 10

ಸಂಜೆ 5 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ: 75.92% ಮತದಾನ

5.00 ಗಂಟೆಯವರೆಗೆ ದಾಖಲಾದ ಮತದಾನದ ಶೇಕಡಾವಾರು ಬೆಂಗಳೂರು ಗ್ರಾಮಾಂತರ ಜಿಲ್ಲೆ: 75.92%

ಹೊಸಕೋಟೆ ವಿಧಾನಸಭಾ ಕ್ಷೇತ್ರ: 83.21%

ದೇವನಹಳ್ಳಿ ವಿಧಾನಸಭಾ ಕ್ಷೇತ್ರ: 76.08%

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ: 75.23%

ನೆಲಮಂಗಲ ವಿಧಾನಸಭಾ ಕ್ಷೇತ್ರ: 68.08%

04:15 PM (IST) May 10

ಮತದಾನದ ಬಳಿಕೆ ಆಟೋ ಓಡಿಸಿದ ಡಿಕೆಶಿ

ಬೆಂಗಳೂರು (ಮೇ.10): ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ.  ಮತದಾನ ಪ್ರಭುಗಳು ಬೆಳಗ್ಗಿನಿಂದಲೇ ಉತ್ಸಾಹದಿಂದ ಬಂದು ಮತದಾನ ಮಾಡಿದ್ದಾರೆ.  ಕನಕಪುರದಲ್ಲಿ ಡಿಕೆ ಶಿವಕುಮಾರ್ ಮತದಾನ ಮಾಡಿವುದರ ಜೊತೆಗೆ  ಆಟೋ ರಿಕ್ಷಾ ಓಡಿಸಿ ಸಂಭ್ರಮ ಪಟ್ಟಿದ್ದಾರೆ.

ಫೋಟೋಸ್‌ಗೆ ಇಲ್ಲಿ ಕ್ಲಿಕ್ಕಿಸಿ

 

 

03:53 PM (IST) May 10

ಮಂತ ಯಂತ್ರದಲ್ಲಿ ದೋಷ, ಜನರಿಂದ ಆಕ್ರೋಶ

ಮತಯಂತ್ರದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ- ಜನರಿಂದ ಆಕ್ರೋಶ. ಸುಮಾರು 1 ಗಂಟೆಗಳ ಕಾಲ ಸ್ಥಗಿತಗೊಂಡ ಮತದಾನ. ಹಳಿಯಾಳ ವಿಧಾನಸಭಾ ಕ್ಷೇತ್ರದ ಯಲ್ಲಾಪುರ ನಾಕಾ ಬಳಿಯ ಮತಗಟ್ಟೆ ಸಂಖ್ಯೆ 101ರಲ್ಲಿ ಘಟನೆ. ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ನಿರ್ಮಿಸಲಾಗಿದ್ದ ಮತಗಟ್ಟೆ. ಒಂದು ಗಂಟೆಯ ಕಾಲ ಮತಯಂತ್ರ ರಿಪೇರಿಗೆ ಯತ್ನಿಸಿ ಕೊನೆಗೆ ಬೇರೆ ಮತಯಂತ್ರದ ಮೂಲಕ ಮತದಾನ ಪ್ರಕ್ರಿಯೆ. ಮತದಾನ ಪ್ರಕ್ರಿಯೆ ತಡವಾಗಿ ನಡೆಯುತ್ತಿರುವುದರಿಂದ ಮತ್ತೆ 1 ಗಂಟೆಗಳ ಕಾಲ ಅವಕಾಶ ಕೊಡಬೇಕೆಂದು ಜನರ‌ ಒತ್ತಾಯ. ಅಧಿಕಾರಿಗಳ ಎಡವಟ್ಟಿನಿಂದ ಮತಯಂತ್ರ ಹಾಳಾಗಿದ್ದು, ಜನರಿಗೆ ಮತ ಹಾಕಲು ಅವಕಾಶ ಸಿಗಲ್ಲ.20 ಸೆಕೆಂಡ್‌ಗೆ ಒಂದು ಓಟು ಬೀಳುತ್ತಿದ್ದು, ಮಳೆಯಾದಲ್ಲಿ ಜನರು ಓಟು ಹಾಕಲು ಹಿಂಜರಿಯುತ್ತಾರೆ. ನಿಗದಿತ ಸಮಯಕ್ಕಿಂತ ಒಂದು ಗಂಟೆ ಹೆಚ್ಚು ಸಮಯಾವಕಾಶ ನೀಡಿ ಮತದಾನ ಮಾಡಿಸಬೇಕೆಂದು ಜನರಿಂದ‌‌ ಒತ್ತಾಯ.

03:38 PM (IST) May 10

ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿನ್ನೂ ಶೇ.41ರಷ್ಟು ಮತದಾನ

ಮಧ್ಯಾಹ್ನ 3 ಗಂಟೆ ವೇಳೆಗೆ ಬೆಂಗಳೂರಿನಲ್ಲಿ ಶೇಕಾಡ 41.43 ಮತದಾನ

ಬೆಂಗಳೂರು ಉತ್ತರ ಶೇಕಾಡ 40.21% ಮತದಾನ

ಬೆಂಗಳೂರು ದಕ್ಷಿಣ 40.21% ಮತದಾನವಾಗಿದೆ

ಬೆಂಗಳೂರು ಸೆಂಟ್ರಲ್ 40.75% ಮತದಾನವಾಗಿದೆ

ಬೆಂಗಳೂರು ಅರ್ಬನ್ 41.43% ಮತದಾನವಾಗಿದೆ


ಬೆಂಗಳೂರು ಕೇಂದ್ರ ದಕ್ಷಿಣ-41.79%

ಬಿಟಿಎಮ್ ಲೇಔಟ್ -39.67%
ಬಸವನಗುಡಿ-43.88%
ಬೊಮ್ಮನಹಳ್ಳಿ - 37.69%
ಗೋವಿಂದ ರಾಜ್ ನಗರ-40.47%
ಜಯನಗರ - 45.42%
ಪದ್ಮನಾಭ ನಗರ- 47.57%
ವಿಜಯನಗರ - 37.84%

 

ಬೆಂಗಳೂರು ಕೇಂದ್ರ ಉತ್ತರ-40.21%

ಸಿವಿ ರಾಮನ್‌ನಗರ - 34.87%
ಹೆಬ್ಬಾಳ - 42.07%
ಕೆಆರ್ ಪುರಂ - 38.51%
ಮಹಾಲಕ್ಷ್ಮಿ ಲೇಔಟ್ - 45.71%
ಮಲ್ಲೇಶ್ವರಂ - 42.35%
ಪುಲಕೇಶಿ ನಗರ್ - 39.72%
ಸರ್ವಜ್ಞ ನಗರ್ - 38.21%

 

ಬೆಂಗಳೂರು ಅರ್ಬನ್ ವಿಧಾನ ಸಭಾ ಕ್ಷೇತ್ರ - 42.96%

ಆನೇಕಲ್ - 45.36%
ಬೆಂಗಳೂರು ಸೌಥ್ - 40.31%
ಬ್ಯಾಟರಾಯನ ಪುರ - 42.12%
ದಾಸರಹಳ್ಳಿ - 40.08%
ಮಹಾದೇವ ಪುರ - 40.02%
ಯಲಹಂಕ - 45.08%
ಯಶವಂತ ಪುರ - 47.75%

 

ಬೆಂಗಳೂರು ಅರ್ಬನ್ ವಿಧಾನ ಸಭಾ ಕ್ಷೇತ್ರ - 42.96%

ಆನೇಕಲ್ - 45.36%
ಬೆಂಗಳೂರು ಸೌಥ್ - 40.31%
ಬ್ಯಾಟರಾಯನ ಪುರ - 42.12%
ದಾಸರಹಳ್ಳಿ - 40.08%
ಮಹಾದೇವ ಪುರ - 40.02%
ಯಲಹಂಕ - 45.08%
ಯಶವಂತ ಪುರ - 47.75%

 

ಬೆಂಗಳೂರು ಕೇಂದ್ರ - 40.75%

ಚಾಮರಾಜಪೇಟೆ - 38.9%
ಚಿಕ್ಕಪೇಟೆ - 42.4%
ಗಾಂಧಿನಗರ - 40.76%
ರಾಜಾಜೀನಗರ - 43.06%
ರಾಜರಾಜೇಶ್ವರಿ ನಗರ - 41.01%
ಶಾಂತಿ ನಗರ - 37.35%
ಶಿವಾಜಿನಗರ - 41.78%

 

03:26 PM (IST) May 10

ನಾರಾಯಣ ಗೌಡರ ವಿರುದ್ಧ ಹರಿಹಾಯ್ದ ಜೆಡಿಎಸ್ ಕಾರ್ಯಕರ್ತರು

ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಬಣ್ಣೇನಹಳ್ಳಿ ಗ್ರಾಮದಲ್ಲಿ ಘಟನೆ. ಕ್ಷೇತ್ರದಲ್ಲಿ ಮತದಾನ ಹೇಗೆ ನಡೆಯುತ್ತಿದೆ ಎಂದು ವೀಕ್ಷಣೆ ಮಾಡುತ್ತಿದ್ದ ನಾರಾಯಣಗೌಡ. ಹಾಗೆಯೇ ಬಣ್ಣೇನಹಳ್ಳಿ ಗ್ರಾಮಕ್ಕೆ ತೆರಳಿದ್ದ ನಾರಾಯಣಗೌಡ. ನಾರಾಯಣಗೌಡಗೆ ಜೆಡಿಎಸ್‌ ಕಾರ್ಯಕರ್ತರಿಂದ ಅವಾಚ್ಯಶಬ್ಧಗಳಿಂದ ನಿಂದನೆ. ಇಲ್ಲಿಗೆ ಯಾಕೆ ಬಂದಿದ್ದೀಯಾ ಎಂದು ನಾರಾಯಣಗೌಡಗೆ ಪ್ರಶ್ನೆ ಮಾಡಿದ ಜೆಡಿಎಸ್ ಕಾರ್ಯಕರ್ತರು.ನಾನ್ ಯಾಕೆ ಬರಬಾರದು ಹೇಳಿ ಎಂದ‌ ನಾರಾಯಣಗೌಡ. ಈ‌ ವೇಳೆ ನಾರಾಯಣಗೌಡಗೆ ಏಕವಚನದಿಂದ ಮಾತನಾಡಿದ ಜೆಡಿಎಸ್‌ ಕಾರ್ಯಕರ್ತರು.
ಮರ್ಯಾದೆ ಕೊಟ್ಟು ಮತಾಡಿ ಎಂದ ನಾರಾಯಣಗೌಡಗೆ ಅವಾಚ್ಯ ಶಬ್ಧಗಳಿಂದ ನಿಂದನೆ. ಬಳಿಕ ಸ್ಥಳದಲ್ಲಿ ಇಬ್ಬರ ನಡುವೆ ನಡೆದ ನೂಕಾಟ ತಳ್ಳಾಟ. ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು, ಸಚಿವರ ಅಂಗರಕ್ಷಕರು.

02:58 PM (IST) May 10

ಉತ್ತರ ಕನ್ನಡ ಎಂಪಿ ಅನಂತ್ ಕುಮಾರ್‌ ಮತದಾನ

ಚುನಾವಣೆ ವೇಳೆ ಎಲ್ಲಿಯೂ ಸದ್ದು ಮಾಡದ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ತಮ್ಮ ಪತ್ನಿಯೊಂದಿಗೆ ಬಂದು ಮತ ಚಲಾಯಿಸಿದ್ದಾರೆ. 

 

 

02:35 PM (IST) May 10

ಬಿಬಿಎಂಪಿ ವೋಟರ್ ಲಿಸ್ಟ್ ನಲ್ಲಿ ಕೆಲವರ ಹೆಸರಿನ ಮೇಲೆ ಡಿಲೀಟ್!

ಬಿಬಿಎಂಪಿ ವೋಟರ್ ಲಿಸ್ಟ್ ನಲ್ಲಿ ಕೆಲವರ ಹೆಸರಿನ ಮೇಲೆ ಡಿಲೀಟ್ ಆಗಿದ್ದು, ವೋಟರ್ ಲಿಸ್ಟ್‌ನಲ್ಲಿ ಹೆಸರಿನ ಮೇಲೆ ಡಿಲೀಟ್ ಸೀಲ್ ಒತ್ತಲಾಗಿದೆ. ವೋಟರ್ ಕಾರ್ಡ್ ಇದ್ರೂ ಮತ ಚಲಾವಣೆ ಮಾಡಕ್ಕಾಗ್ತಿಲ್ಲ. ಒಂದೇ ಕುಟುಂಬದ ಸದಸ್ಯರು, ಸಂಬಂಧಿಕರ ಅಳಲು. ಚಿಕ್ಕಪೇಟೆ ಕ್ಷೇತ್ರದಲ್ಲಿ ಬೂತ್ ನಂ 88, 87 ರಲ್ಲಿ ಮತದಾರರ ಅಳಲು. 30 ವರ್ಷಗಳಿಂದ ಬೆಂಗಳೂರು ನಿವಾಸಿ ಆಗಿರುವ ಮತದಾರರು. ಕಳೆದ ಸಲ ಮತ ಚಲಾಯಿಸಿದ್ದು, 50ಕ್ಕೂ ಹೆಚ್ಚು ಮತದಾರರ ಹೆಸರುಡಿಲೀಟ್ ಆವೆ. ನಾವು ಇಲ್ಲಿಂದ ಎಲ್ಲಿಗೂ ಶಿಫ್ಟ್ ಆಗಿಲ್ಲ. ನಮ್ಮ ಮನೆಯವರಯ ಮನೆ ಬಿಟ್ಟು ಎಲ್ಲಿಗೂ ಹೋಗಿಲ್ಲ. ಇಲ್ಲಿ ಯಾರು ಸತ್ತು ಹೋಗಿಲ್ಲ. ಹಾಗಿದ್ರೆ ಯಾಕೆ ಟಿಲಿಟ್ ಮಾಡಿದ್ದಾರೆ ಎಂದು ಪ್ರಶ್ನೆ ಮಾಡುತ್ತಿರುವ ಶಂಕರಪುರಂ ನಿವಾಸಿಗಳು. ಬೆಳಗ್ಗೆಯಿಂದ ಮತದಾನ ಮಾಡಲು ಪರದಾಟುತ್ತಿರುವ ಶಂಕರಪುರನ ಕೆಲ ನಿವಾಸಿಗಳು.

02:31 PM (IST) May 10

ಹರದನಹಳ್ಳಿಯಲ್ಲಿ ಮತ ಚಲಾಯಿಸಿದ ಮಾಜಿ ಪ್ರಧಾನಿ ಎಚ್ಡಿ. ದೇವೇಗೌಡ

ಹಾಸನದ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಪತ್ನಿ ಚನ್ನಮ್ಮ ಅವರೊಟ್ಟಿಗೆ ತಮ್ಮ ಅಮೂಲ್ಯವಾದ ಮತ ಚಲಾಯಿಸಿದ್ದು, ಇಷ್ಟು ಸಣ್ಣ ಹಳ್ಳಿ ಈ ಮಟ್ಟಿಗೆ ಅಭಿವೃದ್ಧಿ ಹೊಂದಿದೆ ಅಂದ್ರೆ ಶಾಸಕ ಎಚ್.ಡಿ.ರೇವಣ್ಣ ಅವರ ಪರಿಶ್ರಮವೇ ಕಾರಣವೆಂದು ಹೇಳಿದ್ದಾರೆ. 

 

01:40 PM (IST) May 10

ಇವಿಎಂ ತಾಂತ್ರಿಕ ದೋಷ, ಕೆಲವೆಡೆ ಮತದಾನ ಸ್ಥಗಿತ

ಸುಮಾರು ಶೇ.40ರಷ್ಟು ಮತದಾನವಾಗಿದ್ದು, ಎಲ್ಲೆಲ್ಲಿ ಎಷ್ಟು ಮತದಾನವಾಗಿದೆ? 

9 ಗಂಟೆಯ   9:00 AM    11.AM    1PM
ಕರ್ನಾಟಕ     8.11    20.94          37.25
ಬಾಗಲಕೋಟೆ  ಶೇ.    8.5    23.44    40.87
ಬೆಳಗಾವಿ ಶೇ.     7.52    20.76    37.48
ಬಳ್ಳಾರಿ     8.84    2356    39.74
ಬೀದರ್​     7.64    20.54    37.11
ವಿಜಯಪುರ     8.36    20.66    36.55
ಚಾಮರಾಜನಗರ     2.51    16.77    30.63
ಚಿಕ್ಕಬಳ್ಳಾಪುರ     9.18    21.46    40.15
ಚಿಕ್ಕಮಗಳೂರು     8.68    22.29    41
ಚಿತ್ರದುರ್ಗ     6.08    18.56    36.41
ದ.ಕನ್ನಡ     12.47    28.46    38.64
ದಾವಣಗೆರೆ    7.04    21.32    36.14
ಧಾರವಾಡ     8.48    20.82    38.98
ಗದಗ     7.25    21.14    32.69
ಗುಲ್ಬರ್ಗ     7.3    17.69    40.84
ಹಾಸನ     9.03    22.18    36.74
ಹಾವೇರಿ     6.49    19.44    36.74
ಕೊಡಗು     11.94    26.49    45.64
ಕೋಲಾರ    7.4    19.87    36.87
ಕೊಪ್ಪಳ     7.64    21.46    39.94
ಮಂಡ್ಯ     7.49    19.52    39.38
ಮೈಸೂರು     5.83    19.34    36.73
ರಾಯಚೂರು     6.97    22.48    38.2
ರಾಮನಗರ     8.57    25.21    42.52
ಶಿವಮೊಗ್ಗ     8.61    22.75    41.02
ತುಮಕೂರು     7.82    22.06    40.6
ಉಡುಪಿ     13.28    30.26    47.09
ಉತ್ತರ ಕನ್ನಡ     9.87    25.46    42.43
ವಿಜಯನಗರ     6.82    21.07    39.56
ಯಾದಗಿರಿ     5.33    18.84    35.68
            
ಚಾಮರಾಜಪೇಟೆ    6.88    15.86    28.33
ಚಿಕ್ಕಪೇಟೆ    7.35    17.95    30.84
ಗಾಂಧಿನಗರ    7.71    17.44    28.65
ರಾಜಾಜಿನಗರ    8.59    19.82    32.41
ರಾಜರಾಜೇಶ್ವರಿ ನಗರ     7.95    17.41    31.72
ಶಾಂತಿ ನಗರ     9    15.47    25.86
ಶಿವಾಜಿನಗರ     7.8    17.04    29.75
ಸಿ.ವಿ ರಾಮನ್​ ನಗರ     4.83    15.05    26.85
ಹೆಬ್ಬಾಳ     5.4    19.93    32.96
ಕೆ.ಆರ್​ ಪುರ    9.48    18.73    29.43
ಮಹಾಲಕ್ಷ್ಮೀ ಲೇಔಟ್​​    9.46    20.01    34.26
ಮಲ್ಲೇಶ್ವರಂ     9.9    20.75    32.08
ಪುಲಿಕೇಶಿ ನಗರ     6.8    17.92    28.65
ಸರ್ವಜ್ಞ ನಗರ     6    14.94    25.08
ಬಿಟಿಎಂ ಲೇಔಟ್​     8.6    17.06    29.79
ಬಸವನಗುಡಿ    8.79    18.51    33.34
ಬೊಮ್ಮನಹಳ್ಳಿ     8    17.64    30.72
ಗೋವಿಂದ ರಾಜನಗರ     8.08    18.61    30.72
ಜಯನಗರ     9.92    20.11    34.82
ಪದ್ಮನಾಭ ನಗರ      8.73    22.73    33.57
ವಿಜಯನಗರ     14    15.92    27.3
ದೇವನಹಳ್ಳಿ     6.36    18.24    36.83
ದೊಡ್ಡ ಬಳ್ಳಾಪುರ     6.22    18.37    36.52
ಹೊಸಕೋಟೆ     10.16    24.95    43.46
ನೆಲಮಂಗಲ     7.9    18.94    38.53
ಆನೇಕಲ್​​    6.8    13.4    29.98
ಬೆಂಗಳೂರು ದಕ್ಷಿಣ     7.9    16.49    28.81
ಬ್ಯಾಟರಾಯನಪುರ     10.45    17.42    29.57
ದಾಸರಹಳ್ಳಿ     7.38    15.24    29.05
ಮಹಾದೇವಪುರ     13    16.54    29.23
ಯಲಹಂಕ     8.37    18.66    33.12
ಯಶವಂತಪುರ     8.83    19.84    35.33

01:38 PM (IST) May 10

ಮತಯಂತ್ರ ಒಡೆದು ಪುಡಿಗಟ್ಟಿದ ಗ್ರಾಮಸ್ಥರು: ಚುನಾವಣಾಧಿಕಾರಿ ಕಾರು ಉರುಳಿಸಿ ಆಕ್ರೋಶ

ಮತದಾನ ಮಾಡುವುಕ್ಕಾಗಿ ತರಲಾಗಿದ್ದ  ಮತಯಂತ್ರಗಳನ್ನ ಒಡೆದು ಪುಡಿಪುಡಿ ಮಾಡಿದ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದಿದೆ. ಇವಿಎಂ ಮಶೀನ್ ಹಾಗೂ ವಿವಿಪ್ಯಾಟ್ ಮಶೀನ್‌ಗಳನ್ನ ಒಡೆದು ಹಾಕಿದ ಗ್ರಾಮಸ್ಥರು. ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರ್ತಿದ್ದಾಗ ಘಟನೆ ನಡೆದಿದೆ. ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿದ ಗ್ರಾಮಸ್ಥರು. ಅಧಿಕಾರಿಗಳ ಕಾರನ್ನು ಜಖಂಗೊಳಿಸಿದ ಗ್ರಾಮಸ್ಥರು. ಸಿಬ್ಬಂದಿಗಳಿಗು ಥಳಿತ, ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.

01:35 PM (IST) May 10

ಎಲ್ಲೆಲ್ಲಿ, ಎಷ್ಟಾಯಿತು ಮತದಾನ?

ರಾಮನಗರ:  ಜಿಲ್ಲೆಯಲ್ಲಿ ಬೆಳಗ್ಗೆ 01  ಗಂಟೆ ವರೆಗೆ ಶೇ.41.89 ರಷ್ಟು ಮತದಾನ ಆಗಿದೆ. ಮಾಗಡಿ ಕ್ಷೇತ್ರದಲ್ಲಿ 44.21, ರಾಮನಗರ ಕ್ಷೇತ್ರದಲ್ಲಿ 45, ಕನಕಪುರ ಕ್ಷೇತ್ರದಲ್ಲಿ 37.15, ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ 41.21 ರಷ್ಟು ಮತದಾನ ನಡೆದಿದೆ

ವಿಧಾನಸಭಾ ಸಾರ್ವತ್ರಿಕ ಚುನಾವಣೆ-ವಿಜಯನಗರ ಜಿಲ್ಲೆ 
ಜಿಲ್ಲೆಯಲ್ಲಿ ಒಟ್ಟು ಶೇ.21.21ರಷ್ಟು ಮತದಾನ. ಬೆಳಿಗ್ಗೆ 11 ಗಂಟೆಯವರೆಗೂ ನಡೆದ ಶೇಕಡಾವಾರು ಮತದಾನ ಪ್ರಮಾಣ. 88-ಹೂವಿನಹಡಗಲಿ  ಶೇ.19.64. 89-ಹಗರಿಬೊಮ್ಮನಹಳ್ಳಿ ಶೇ.19.14
90-ವಿಜಯನಗರ ಶೇ.23.95. 96-ಕೂಡ್ಲಿಗಿ ಶೇ.20.75. 104-ಹರಪನಹಳ್ಳಿ ಶೇ.22.15. ಒಟ್ಟು ಜಿಲ್ಲೆಯಾದ್ಯಂತ ಇದುವರೆಗೂ 2,31,629 ಜನ ಮತಚಲಾಯಿಸಿದ್ದಾರೆ
ಬೆಳಗಾವಿಯಲ್ಲಿ ಶೇ.37ರಷ್ಟು ಮತದಾನವಾಗಿದೆ. ಮಧ್ಯಾಹ್ನ 1:00 ಗಂಟೆವರೆಗೆ ಶೇಕಡ 40.35% ರಷ್ಟು ಮತದಾನ

ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯ ವಿಧಾನಸಭೆಗೆ ಜಿಲ್ಲೆಯಾದ್ಯಂತ ಇಂದು ಬಿರುಸಿನ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1:00 ಗಂಟೆಯವರೆಗೆ  40.35% ರಷ್ಟು ಮತ ಚಲಾವಣೆಯಾಗಿದೆ. ವಿಧಾನಸಭಾ ಕ್ಷೇತ್ರವಾರು, ಗೌರಿಬಿದನೂರು-38.87%, ಬಾಗೇಪಲ್ಲಿ-43.37%, ಚಿಕ್ಕಬಳ್ಳಾಪುರ-42.77%, ಶಿಡ್ಲಘಟ್ಟ-37.97%, ಚಿಂತಾಮಣಿ-42.00%

ಧಾರವಾಡ ಜಿಲ್ಲೆ ವಿಧಾನಸಭಾ ಚುನಾವಣೆ  ಮತದಾನ ವಿವರ. ಮಧ್ಯಾಹ್ನ 1 ಗಂಟೆಯವರೆಗೆ ಆಗಿರುವ ಶೇಕಡಾವಾರು ಮತದಾನ ವಿವರ:

69 ನವಲಗುಂದ ವಿಧಾನಸಭಾ ಮತಕ್ಷೇತ್ರ ಶೇ. 35.08
70 ಕುಂದಗೋಳ ವಿಧಾನಸಭಾ ಮತಕ್ಷೇತ್ರ ಶೇ. 35.28
71 ಧಾರವಾಡ ವಿಧಾನಸಭಾ ಮತಕ್ಷೇತ್ರ ಶೇ.38.61
72 ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇಯ ಶೇ.32
73 ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರ ಶೇ. 34.68
74 ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ಶೇ. 35.74
75 ಕಲಘಟಗಿ ವಿಧಾನಸಭಾ ಮತಕ್ಷೇತ್ರ ಶೇ.33
ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ  ನಡೆದಿರುವ ಸರಾಸರಿ ಮತದಾನ ಶೇ. 35.06

01:14 PM (IST) May 10

ಮೋದಿ ಅಭಿವೃದ್ಧಿ, ದೇಶದ ಭದ್ರತೆಗೆ ಜನರ ವೋಟು: ಕುಮಾರ್ ಬಂಗಾರಪ್ಪ

ಸೊರಬ ತಾಲೂಕಿನ ಕುಮಟೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಕುಮಾರ ಬಂಗಾರಪ್ಪ ಹೇಳಿಕೆ. ಸೊರಬ ಕ್ಷೇತ್ರದಲ್ಲಿ ತಾವು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಕುಮಾರ ಬಂಗಾರಪ್ಪ . ಸೊರಬ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನನ್ನ ಕೈ ಹಿಡಿಯಲಿದೆ ಎಂಬ ವಿಶ್ವಾಸವಿದೆ. ಕಾಂಗ್ರೆಸ್ ಅಭ್ಯರ್ಥಿ ಕೇವಲ ನೈಟ್ ಶೋ ನಡೆಸುತ್ತಾರೆ. ನಮ್ಮದು ಡೇ ಶೋ. ತೋಳ್ಬಲದಿಂದ ಹಣ ಹಂಚಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಬರೆದಿರುವ ಪತ್ರವೇ ಸಾಕ್ಷಿ. ಮೋದಿಯವರ ಅಭಿವೃದ್ಧಿ ಕಾರ್ಯಗಳು ಹಾಗೂ ದೇಶದ ಭದ್ರತೆ ಜನ ಮತದಾನ ಮಾಡುತ್ತಾರೆ

12:56 PM (IST) May 10

ರಾಜ್ಯದಲ್ಲಿ ಬಹುಮತದ ಸರ್ಕಾರ: ಸಿಎಂ ಬೊಮ್ಮಾಯಿ

ಸ್ಥಿರ ಮತ್ತು ಬಹುಮತದ ಬಿಜೆಪಿ ಸರ್ಕಾರ ಮತ್ತೆ ರಾಜ್ಯದಲ್ಲಿ ಆಡಳಿತಕ್ಕೆ ಬರುತ್ತದೆ. ಕಲ್ಯಾಣ ಕರ್ನಾಟಕದಲ್ಲಿ ಸ್ಥಾನ ಹೆಚ್ಚಳವಾಗುವ ಸಾಧ್ಯತೆ ಇದೆ. ಕಿತ್ತೂರು ಕರ್ನಾಟಕದಲ್ಲಿ ಪಕ್ಷಕ್ಕೆ ಒಳ್ಳೆಯ ಫಲಿತಾಂಶ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಜ್ಯದ ಜನರು ಶಾಂತಪ್ರಿಯರು. ಕಳೆದ ಬಾರಿ 2018ರ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದಲ್ಲಿ ಹದಗೆಟ್ಟಿತ್ತು. ಎಸ್ ಡಿಪಿಐ ಮತ್ತು ಪಿಎಫ್ ಐ ಗಲಾಟೆ, ಹಾವಳಿ ಹೆಚ್ಚಾಗಿತ್ತು ಎಂದರು.

ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

12:22 PM (IST) May 10

ಸಣ್ಣಪುಟ್ಟ ಗಲಾಟೆ ಹೊರತುಪಡಿಸಿ, ಚುನಾವಣೆ ಬಹುತೇಕ ಶಾಂತಿಯುತ

ಹಾವೇರಿ ಜಿಲ್ಲೆಯಲ್ಲಿ ಬೆಳಿಗ್ಗೆ 11ರ ವೇಳೆಗೆ ಶೇ 19.44ರಷ್ಟು ಮತದಾನವಾಗಿದೆ.

ಹಾನಗಲ್- ಶೇ 22.99
ಶಿಗ್ಗಾವಿ- ಶೇ 20.09
ಹಾವೇರಿ- ಶೇ 19.63
ಬ್ಯಾಡಗಿ- ಶೇ 13.82
ಹಿರೇಕೆರೂರು- ಶೇ 20.11
ರಾಣೆಬೆನ್ನೂರು- ಶೇ 19.88

 

ಗದಗ 

ಬೆಳಗ್ಗೆ 11 ಗಂಟೆಯವರೆಗೆ ಶೇಕಡಾವಾರು ಮತದಾನ

65- ಶಿರಹಟ್ಟಿ- ಶೇ. 16.2

66-ಗದಗ- ಶೇ. 15.64

67-ರೋಣ- ಶೇ 22.04

68-ನರಗುಂದ ಶೇ 23.72

ಜಿಲ್ಲೆಯ ಒಟ್ಟು ಶೇ. 19.4

ವಿಜಯಪುರ ಜಿಲ್ಲೆಯಲ್ಲಿ 11 ಗಂಟೆವರೆಗೆ ಶೇ. 20.68  ಮತದಾನವಾಗಿದೆ

12:12 PM (IST) May 10

​​​​​​​Mandya:ರೈತ ಸಂಘ, ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ

ರೈತ ಸಂಘ, ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ. ಮೇಲುಕೋಟೆ ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ಸಮ್ಮುಖದಲ್ಲಿ ಜಟಾಪಟಿ. ನಾರಾಯಣಪುರ ಗ್ರಾಮದಲ್ಲಿ ಘಟನೆ. ಮಂಡ್ಯ ಜಿಲ್ಲೆ ಪಾಂಡವಪುರ  ತಾಲೂಕಿನ ನಾರಾಯಣಪುರ. ವೃದ್ದರ ವೋಟ್ ಹಾಕಿಸುವ ವಿಚಾರದಲ್ಲಿ ಜಟಾಪಟಿ. ಜಗಳ ವೇಳೆ ಸ್ಥಳಕ್ಕಾಗಮಿಸಿದ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು. ಈ ವೇಳೆ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡ್ತಿದ್ದ ರೈತ ಸಂಘದ ಯುವಕ. ಮೊಬೈಲ್ ಕಸಿದು ಕೊಳ್ಳಲು ಮುಂದಾದಾಗ ನೂಕಾಟ ತಳ್ಳಾಟ. ಪರಸ್ಪರ ವಾಕ್ಸಮರಕ್ಕಿಳಿದ ಜೆಡಿಎಸ್ ಹಾಗೂ ರೈತ ಸಂಘದ ಕಾರ್ಯಕರ್ತರು. ಪೊಲೀಸರು, ಭದ್ರತಾ ಪಡೆ ಎಂಟ್ರಿಯಿಂದ ತಿಳಿಯಾದ ಗಲಾಟೆ.

 

12:07 PM (IST) May 10

ಗ್ರಾಮಕ್ಕೆ ಮೂಲ ಸೌಲಭ್ಯವಿಲ್ಲವೆಂದು ಮತದಾನ ಬಹಿಷ್ಕಾರ

ಗ್ರಾಮಕ್ಕೆ ಮೂಲ ಸೌಲಭ್ಯ ಇಲ್ಲಾ ಎಂದು ಮತದಾನ ಬಹಿಷ್ಕಾರ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ದೋನಹಳ್ಳಿ ಗ್ರಾಮದ ಜನರಿಂದ ಬಹಿಷ್ಕಾರ. ಗ್ರಾಮದಲ್ಲಿರೋ 120 ಮತದಾರರಿಂದ ಮತದಾನ ಬಹಿಷ್ಕಾರ. ಬೆಳಗ್ಗೆಯಿಂದ ಹಕ್ಕು ಚಲಾವಣೆ ಮಾಡಲು ಮುಂದಾಗದ ಜನರು. ಮಾಹಿತಿ ತಿಳಿಯುತ್ತಲೆ ಗ್ರಾಮಕ್ಕೆ ಬಂದ ಅಧಿಕಾರಿಗಳು.. ಅದಿಕಾರಿಗಳನ್ಬೇ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು. ತಮ್ಮ ಸಮಸ್ಯೆ ಬಗ್ಗೆ ಈಗಾಗಲೇ ಗಮನಕ್ಕೆ ತಂದರೂ ಏನೂ ಕ್ರಮ ತೆಗೆದುಕೊಂಡಿಲ್ಲ. ಈಗ ಯಾಕೆ ಮತ ಹಾಕಿ ಎಂದು ಹೇಳಲು ಬಂದಿದ್ದೀರಾ ಎಂದು ಅಸಮದಾನ ಹೊರ ಹಾಕಿದ ಮತದಾರರು.

12:06 PM (IST) May 10

ವರುಣ ವಿಧಾನಸಭಾ ಚುನಾವಣೆ.: ಸೂತ್ತೂರು ಶ್ರೀ, ಮಹಾದೇವಪ್ಪ ಮತದಾನ

ವರುಣ ವಿಧಾನಸಭಾ ಚುನಾವಣೆಯಲ್ಲಿ ಸುತ್ತೂರು ದೇಶೀಕೇಂದ್ರ ಸ್ವಾಮಿಗಳಿಂದ ಮತ ಚಲಾವಣೆ. ನಂಜನಗೂಡು ತಾಲ್ಲೂಕಿನ ಸತ್ತೂರು ಗ್ರಾಮದಲ್ಲಿ ಮತ ಚಲಾಯಿಸಿದ ಶ್ರೀಗಳು. ನಾನು ವರುಣ ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಗೆದ್ದೆ ಗೆಲ್ಲುತ್ತೇನೆ.ಸಿದ್ದರಾಮನಹುಂಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ. ಮೈಸೂರು ಜನತೆಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ. ಸಿಎಂ ಮಾಡುವುದು ಬಿಡುವುದು ಹೈಕಮಾಂಡ್ ಹಾಗೂ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಬಿಟ್ಟದ್ದು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ. ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಬಹುಮತ ಬರಲಿದೆ. ಸಿಎಂ ಆಗುವ ಬಹುದೊಡ್ಡ ಅವಕಾಶ ಇದೆ ಎಂಬ ಪ್ರಶ್ನೆ ಹೌದು ಎಂದ ಸಿದ್ದರಾಮಯ್ಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲೇ ನಾವು ಕೊಟ್ಟ ಗ್ಯಾರೆಂಟಿಗಳನ್ನ ಘೋಷಣೆ ಮಾಡುತ್ತೇವೆ.

11:57 AM (IST) May 10

Bellary: ಕೈ-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ. ಸಂಜೀವರಾಯನಕೋಟೆ ಗ್ರಾಮದಲ್ಲಿ ಬಿಜೆಪಿ - ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ. ಕಾಂಗ್ರೆಸ್  ಸ್ಥಳೀಯ ಮುಖಂಡ  ಉಮೇಶ್ ಗೌಡ ತಲೆಗೆ ಗಾಯವಾಗಿದ್ದು, ಇತ್ತಿಚೆಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಉಮೇಶ್ ಗೌಡ. ಮತದಾನಕ್ಕೆ ತೆರಳುವೆ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಈ ವೇಳೆ ಉಮೇಶ್ ಗೌಡ ಅವರಿಗೆ ತಲೆಗೆ ಕಲ್ಲೇಟು ಬಿದ್ದಿದ್ದು, ತಲೆಯಲ್ಲಿ ರಕ್ತ ಸುರಿದು, ಗಾಯವಾಗಿದೆ. ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಪೋಲಿಸರ ದೌಡು

11:57 AM (IST) May 10

Bellary: ಕೈ-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

ಬಳ್ಳಾರಿ: ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ. ಸಂಜೀವರಾಯನಕೋಟೆ ಗ್ರಾಮದಲ್ಲಿ ಬಿಜೆಪಿ - ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ. ಕಾಂಗ್ರೆಸ್  ಸ್ಥಳೀಯ ಮುಖಂಡ  ಉಮೇಶ್ ಗೌಡ ತಲೆಗೆ ಗಾಯವಾಗಿದ್ದು, ಇತ್ತಿಚೆಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಉಮೇಶ್ ಗೌಡ. ಮತದಾನಕ್ಕೆ ತೆರಳುವೆ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಈ ವೇಳೆ ಉಮೇಶ್ ಗೌಡ ಅವರಿಗೆ ತಲೆಗೆ ಕಲ್ಲೇಟು ಬಿದ್ದಿದ್ದು, ತಲೆಯಲ್ಲಿ ರಕ್ತ ಸುರಿದು, ಗಾಯವಾಗಿದೆ. ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಪೋಲಿಸರ ದೌಡು

11:34 AM (IST) May 10

Soraba: ಜೆಡಿಎಸ್ ಬಗ್ಗೆ ಮತಾನಾಡಿದ ಮಧು ಬಂಗಾರಪ್ಪ

ಸೊರಬದ ಕುಬಟೂರಿನಲ್ಲಿ ಮಧು ಬಂಗಾರಪ್ಪ ಮತ ಚಲಾವಣೆ.ಮತ ಚಲಾವಣೆ ಬಳಿಕ ಕುಬಟೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿಕೆ‌.ಇವತ್ತು ಚುನಾವಣಾ ನಡೆಯುತ್ತಿದೆ. ಸಾಕಷ್ಟು ಪ್ರಚಾರ ಮಾಡಿದ್ದೇವೆ. ಈ ಬಾರಿ ತುಂಬಾ ಖುಷಿಯಾಗಿದೆ. ಜನರ ಭಾವನೆ ಕಾಂಗ್ರೆಸ್ ಪಕ್ಷದ ಪರವಾಗಿ ಇರುವುದು ಗೊತ್ತಾಗಿದೆ‌. ಪ್ರತಿಯೊಬ್ಬರು ಬಂದು ಮತ ಚಲಾಯಿಸಿ, ಯಾವುದೇ ಕಾರಣಕ್ಕೂ ಹಕ್ಕು ಕಳೆದುಕೊಳ್ಳಬೇಡಿ. ರಾಜ್ಯಾದ್ಯಂತ ನಾನು ಕೂಡ ಪ್ರವಾಸ ಮಾಡಿದ್ದೇನೆ. ಎಲ್ಲಾ ಕಡೆ ಕಾಂಗ್ರೆಸ್ ಪರ ವಾತವರಣ ಇದ್ದು, ಬದಲಾವಣೆ ಬಯಸುತ್ತಿದ್ದಾರೆ ಜನ.ನಮ್ಮ ಕ್ಷೇತ್ರದಲ್ಲಿ ಕೂಡ ಅದೇ ರೀತಿ ಇದ್ದು, ಹಬ್ಬದ ರೀತಿ ಮಾಡ್ತಾ ಇದ್ದೇವೆ. ಮತದಾರರ ಬದಲಾವಣೆ ನಿರೀಕ್ಷೆ ನೋಡಿದಾಗ ಕಾಂಗ್ರೆಸ್ 150 ಕ್ಕೂ ಅಧಿಕ ಸ್ಥಾನ ಪಡೆಯುತ್ತೆ‌‌‌. ಜೆಡಿಎಸ್ ಪಕ್ಷ ಯಾರೇ ಅಧಿಕಾರಕ್ಕೆ ಬರಬೇಕಾದರೂ ತಮ್ಮ ಸಹಕಾರ ಅಗತ್ಯ ಎಂದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಧು, ಜೆಡಿಎಸ್ ಪಕ್ಷ ಮೊದಲು 130 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದಿದ್ದರು. ಇದೀಗ ತಮ್ಮ ಸಹಕಾರದಿಂದಲೇ ಸರ್ಕಾರ ಎನ್ನುತ್ತಿದ್ದಾರೆ. ಕಾಂಗ್ರೆಸ್ ಪಕ್ಷ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ. 13 ತಾರೀಖು ಎಲ್ಲದಕ್ಕೂ ಜನ ಉತ್ತರ ನೀಡ್ತಾರೆ ಎಂದ ಮಧು ಬಂಗಾರಪ್ಪ.

11:31 AM (IST) May 10

11 ಗಂಟೆಗೆ ದಕ್ಷಿಣ ಕನ್ನಡದಲ್ಲಿ ಶೇ.28 ಮತದಾನ

ರಾಜ್ಯದೆಲ್ಲೆಡೆ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ದಕ್ಷಿಣ ಕನ್ನಡದಲ್ಲಿ ಮತದಾನ ಇದುವರೆಗೆ ಶೇ.28ರಷ್ಟು ನಡೆದಿದೆ. 
 

11:26 AM (IST) May 10

ಅಣ್ಣಾಮಲೈ ಮನವಿ ಮೇರೆಗೆ ಬರಿಗಾಲಲ್ಲಿ ಬಂದು ಮತ ಹಾಕುತ್ತಿರುವ ಫ್ಯಾನ್ಸ್

ಉಡುಪಿ: ಬರಿಗಾಲಿನಲ್ಲಿ ಬಂದು ಮತದಾನ ಮಾಡಿದ ಅಭಿಮಾನಿಗಳು. ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿ ಹೊಳೆ ಅಭಿಮಾನಿಗಳು. ಬರಿಗಾಲಿನಲ್ಲಿ ಚುನಾವಣಾ ಪ್ರಚಾರ ಮಾಡಿದ್ದ ಗುರುರಾಜ ಗಂಟಿಹೊಳೆ. ಕಾಲೇಜು ಶಿಕ್ಷಣದ ಬಳಿಕ ಬರಿಗಾಲಿನಲ್ಲಿಯೇ ನಡೆಯುತ್ತಿರುವ ಗಂಟಿಹೊಳೆ. ಬರಿಗಾಲಿನ ಸಂತ ಎಂದು ಹೆಸರು ಪಡೆದಿರುವ ಗಂಟೆ ಹೊಳೆ. ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಅಣ್ಣಾಮಲೈ ಬರಿಗಾಲಿನಲ್ಲಿ ಬಂದು ಮತ ಹಾಕುವಂತೆ ಮನವಿ ಮಾಡಿದ್ದರು. ಅಣ್ಣಾಮಲೈ ಮನವಿಯ ಮೇರೆಗೆ ಬರಿಗಾಲಿನಲ್ಲಿ ಬಂದು ಮತ ಹಾಕುತ್ತಿರುವ ಅಭಿಮಾನಿಗಳು

11:17 AM (IST) May 10

ಪಾರದರ್ಶಕ ಮತದಾನಕ್ಕೆ 4,500 ಮತಗಟ್ಟೆಯಲ್ಲಿ ಚಿತ್ರೀಕರಣ

 ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 8,802 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಈ ಹಿಂದಿನ ಚುನಾವಣೆಗಳಲ್ಲಿ ಒಬ್ಬರೇ ಅಭ್ಯರ್ಥಿಗೆ ಶೇ.75 ಮತ ಚಲಾವಣೆಗೊಂಡಿರುವುದು, ಮತಗಟ್ಟೆಳ ಬಳಿ ಗಲಾಟೆ ನಡೆದಿರುವುದು ಸೇರಿದಂತೆ ಇನ್ನಿತರ ವಿಚಾರ ಗಮನಿಸಿ 2,200 ಕ್ಕೂ ಹೆಚ್ಚಿನ ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ಯಾವುದೇ ಗೊಂದಲವುಂಟಾಗದಂತೆ ನಡೆಸಲು ಕ್ರಮ ಕೈಗೊಂಡಿದೆ. ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳು ಸೇರಿ ನಗರ ಜಿಲ್ಲೆ ವ್ಯಾಪ್ತಿಯ 4,500 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಆ ದೃಶ್ಯಾವಳಿಯಲ್ಲಿ ವೆಬ್‌ಸೈಟ್‌ ಅಥವಾ ಮತಗಟ್ಟೆಗಳ ಬಳಿಯಲ್ಲಿ ನೇರ ಪ್ರಸಾರವಾಗುವಂತೆ ಮಾಡಲು ಚುನಾವಣಾ ವಿಭಾಗ ನಿರ್ಧರಿಸಿದೆ ಎಂದು ಬಿಬಿಎಂಪಿ ಚುನಾವಣಾ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೇಗಾಗುತ್ತೆ ಮತದಾನ?

11:15 AM (IST) May 10

ಮನೆಯಲ್ಲಿ ಉಳಿಯದೇ, ಪ್ರಜಾಪ್ರಭುತ್ವದ ಯಶಸ್ವಿಗೆ ಮತ ಹಾಕಿ: ಸಿದ್ದಗಂಗಾ ಶ್ರೀ ಕರೆ

ಇಂದು ರಾಜ್ಯಾದ್ಯಂತ ಮತದಾನ ನಡೆಯುತ್ತಿದ್ದು, ಸಿದ್ದಗಂಗಾ ಶ್ರೀಗಳು ತುಮಕೂರಿನಲ್ಲಿ ಮತದಾನ ಮಾಡಿದ್ದಾರೆ. ಮತದಾನದ ಬಳಿಕ ಮಾತನಾಡಿದ ಶ್ರೀಗಳು, ಸಂವಿಧಾನ ನಮಗೆ ನೀಡಿರುವ ಹಕ್ಕನ್ನು ಎಲ್ಲಾರು ಚಲಾಯಿಸಬೇಕು. 18 ವರ್ಷ ತುಂಬಿದ ಎಲ್ಲಾರು ತಮ್ಮ ತಮ್ಮ ಮತಗಟ್ಟೆಗಳಿಗೆ ಹೋಗಿ ಮತಹಾಕಿ. ಯಾರೂ ಕೂಡ ಮನೆಯಲ್ಲೇ ಉಳಿಯದೇ, ಪ್ರಜಾಪ್ರಭುತ್ವದ ಯಶಸ್ವಿಗೆ ಕಾರಣವಾಗಬೇಕು. ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಬಹಳಷ್ಟು ಮಹತ್ವ ಇದೆ. ಆಮಿಷಗಳಿಗೆ ಒಳಗಾಗದೇ ನಮ್ಮ ಅಮೂಲ್ಯವಾದ ಮತ ನೀಡಿ ಎಂದು ಕರೆ ನೀಡಿದ್ದಾರೆ. 

11:11 AM (IST) May 10

ಖಾದಿ ಮಾತ್ರವಲ್ಲ, ಮತ ಜವಾಬ್ದಾರಿ ಮರೆಯದ ಖಾವಿಧಾರಿಗಳು!

ರಾಜ್ಯದ ನಿರ್ಣಾಯಕ ಮತಸಮರದಲ್ಲಿ ಬುಧವಾರ ಪ್ರಮುಖ ದಿನ. ಇಡೀ ರಾಜ್ಯಾದ್ಯಂತ ಮತದಾರರು ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ. ಖಾದಿ ತೊಟ್ಟ ರಾಜಕಾರಣಿಗಳು ಮಾತ್ರವಲ್ಲ, ಖಾವಿ ತೊಟ್ಟ ಸ್ವಾಮೀಜಿಗಳು, ಮಠಾಧೀಶರು ಕೂಡ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಚಿತ್ರದುರ್ಗ, ಬೆಂಗಳೂರು, ಚಿಕ್ಕೋಡಿ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸ್ವಾಮೀಜಿಗಳು ಮತ ಚಲಾವಣೆ ಮಾಡಿದ್ದಾರೆ. ಚಿಕ್ಕೋಡಿಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಮತದಾನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಸರಕಾರಿ ಶಾಲೆಗೆ ತೆರಳಿ ತಮ್ಮ ಮತಹಕ್ಕು ಚಲಾಯಿಸಿದ್ದಾರೆ. ಮತದಾನ‌ ಪವಿತ್ರವಾಗಿದೆ ಎಲ್ಲರೂ ಮತದಾನ ಮಾಡುವಂತೆ ಶ್ರೀಗಳು ಈ ವೇಳೆ ಮನವಿ ಮಾಡಿದ್ದಾರೆ. ಇನ್ನೂ ಚಿತ್ರದುರ್ಗದಲ್ಲಿ ಮತದಾನಕ್ಕೆ ವಿವಿಧ ಮಠಗಳ ಶ್ರೀಗಳು ಒಟ್ಟಾಗಿ ಆಗಮಿಸಿದ್ದರು. ಮಠದ ಕುರುಬರಹಟ್ಟಿ ಮತಗಟ್ಟೆ ಸಂಖ್ಯೆ 53ಕ್ಕೆ ಆಗಮಿಸಿ ಮತದಾನ ಮಾಡಿದ್ದಾರೆ.

ಯಾವ ಸ್ವಾಮಿಗಳು ಎಲ್ಲೆಲ್ಲಿ ಮತ ಹಕ್ಕು ಚಲಾಯಿಸಿದರು?

11:04 AM (IST) May 10

ಕುಟುಂಬ ಸಮೇತ ಮತದಾನ ಮಾಡಿದ ಸಚಿವ ಶಂಕರಪಾಟೀಲ್ ಮುನೇನಕೊಪ್ಪ

ನವಲಗುಂದ: ಕುಟುಂಬ ಸಮೇತ ಮತದಾನ ಮಾಡಿದ ಸಚಿವ ಶಂಕರಪಾಟೀಲ್ ಮುನೇನಕೊಪ್ಪ. ನವಲಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಂಕರಪಾಟೀಲ್ ಮುನೇನಕೊಪ್ಪ ಅವರು ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು. ಸರದಿ ಸಾಲಿನಲ್ಲಿ ನಿಂತು ಗ್ರಾಮಸ್ಥರ ಜೊತೆಗೆ ಮತ ಚಲಾಯಿಸಿದ ಸಚಿವ ಶಂಕರಪಾಟೀಲ್ ಮುನೇನಕೊಪ್ಪ. ನವಲಗುಂದ ತಾಲೂಕಿನ ಸ್ವಗ್ರಾಮ ಅಮರಗೋಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಪತ್ನಿ ಪ್ರಭಾವತಿ ಅವರೊಂದಿಗೆ ಬಂದು ಶಂಕರಪಾಟೀಲ್ ಮುನೇನಕೊಪ್ಪ ಅವರು ಮತದಾನ ಮಾಡಿದರು.

10:50 AM (IST) May 10

ಮತ ಚಲಾಯಿಸಿದ್ರು ಸಿನಿ ಗಣ್ಯರು

ಸ್ಯಾಂಡಲ್‌ವುಡ್ ನಟರಾದ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪತ್ನಿ ಶಿಲ್ಪಾ, ಜಗ್ಗೇಶ್, ಸುಧಾರಾಣಿ, ರಮೇಶ್ ಅರವಿಂದ ಸೇರಿ ಹಲವರು ತಮ್ಮ ಅಮೂಲ್ಯ ಮತ ಚಲಾಯಿಸಿದ್ದು, ಮತ್ತೊಬ್ಬರಿಗೂ ಮತ ಹಾಕುವಂತೆ ಆಗ್ರಹಿಸಿದ್ದಾರೆ. ಎಲ್ಲೆಲ್ಲಿ, ಯಾರು ವೋಟು ಹಾಕಿದರು? ಇಲ್ಲಿವೆ ಫೋಟೋಸ್. 

ಸಿನಿ ತಾರೆಯರು ಮತ ಚಲಾಯಿಸಿದ್ದು ಹೀಗೆ

 

10:41 AM (IST) May 10

ಮದುವೆ ಬಗ್ಗೆ ಮತ್ತೆ ಯೋಚಿಸುತ್ತೇನೆ: ಉಡುಪಿಯಲ್ಲಿ ನಟ ರಕ್ಷಿತ್ ಮತದಾನ

ಉಡುಪಿ: ಉಡುಪಿಯಲ್ಲಿ ನಟ ರಕ್ಷಿತ್ ಮತದಾನ. ಮತದಾನ ಮಾಡಲು ಬೆಂಗಳೂರಿನಿಂದ ಬಂದಿದ್ದೇನೆ. ಮತದಾನ ಮಾಡುವುದು ಬಹಳ ಮುಖ್ಯ. ಅದು ನಮ್ಮ ಜವಾಬ್ದಾರಿ. ನನಗೆ ಪಕ್ಷದ ಮೇಲೆ ಒಲವಿದೆ, ಪ್ರಚಾರಕ್ಕೆ ಹೋಗಲ್ಲ. ಜನರಿಗಾಗಿ ಕೆಲಸ ಮಾಡುವ ನಾಯಕರನ್ನು ಆಯ್ಕೆ ಮಾಡಬೇಕು. ನಾನು ಚಿಕ್ಕವನಾಗಿದ್ದಾಗ ಉಡುಪಿ ನಗರ ಬೆಳೆಯಬೇಕು ಎಂದು ಆಸೆ ಇತ್ತು. ಈಗ ಬಂದು ನೋಡಿದರೆ ಮೊದಲೇ ಚೆನ್ನಾಗಿತ್ತು ಎಂದು ಅನಿಸುತ್ತಿದೆ. ನಾಯಕನಾದವ ಊರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು . ಕ್ಷೇತ್ರದ ಜನರ  ಬೇಡಿಕೆಗಳನ್ನು ಈಡೇರಿಸಬೇಕು. ಹಳ್ಳಿ ಭಾಗದಲ್ಲಿ ಮತದಾನ ಬಗ್ಗೆ ಜನಕ್ಕೆ ಕಾಳಜಿ ಜಾಸ್ತಿ. ನಮ್ಮ ನಾಯಕ ಯಾರಾಗಬೇಕು ಎಂದು ಜನ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡುತ್ತಾರೆ. ಸಿಟಿ ಲೈಫ್ ಬೇರೆ ಆಗಿರುತ್ತದೆ. 

ಯಾವ ನಾಯಕರು ಅಧಿಕಾರಕ್ಕೆ ಬರುತ್ತಾರೆ ಅಂತ ನಾವು ನಿರೀಕ್ಷೆ ಮಾಡುತ್ತಿದ್ದೇವೆ. ಯುವಜನರು ಯಾರನ್ನು ಆಯ್ಕೆ ಮಾಡುತ್ತಾರೆ ಅವರು ನಮ್ಮ ದೇಶದ ಭವಿಷ್ಯ ಆಗಿರುತ್ತಾರೆ.ಚುನಾವಣಾ ಪ್ರಕ್ರಿಯೆಗೆ ಹೊಸ ಹೊಸ ಮುಖಗಳು ಬರಲೇಬೇಕು. ಹೊಸ ನಾಯಕರು ಬಂದಾಗ ಹೊಸ ಹೊಸ ನಿರೀಕ್ಷೆಗಳು ಇರುತ್ತದೆ.ಉಡುಪಿ ರಿಚರ್ಡ್ ಆಂಟನಿ ಫ್ರೀ ಪ್ರೋಡಕ್ಷನ್ ನಡೆಯುತ್ರಿದೆ. ಸಪ್ತ ಸಾಗರದಚೆ ಎಲ್ಲೋ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ರಿಚರ್ಡ್ ಆಂಟನಿ  ಫೈನಲ್ ಡ್ರಾಫ್ಟ್ ಬರೆಯುವ ಉದ್ದೇಶದಿಂದ ಯುಎಸ್ ಹೋಗುತ್ತಿದ್ದೇನೆ. ಇಲ್ಲಿ ರಾತ್ರಿ ಇದ್ದಾಗ ಅಲ್ಲಿ ಬೆಳಗ್ಗೆ ಇರೋದ್ರಿಂದ ಕೆಲಸ ಮಾಡಲು ಸುಲಭ ಆಗುತ್ತದೆ. ಫೋನ್ ಕಾಲ್ ಡಿಸ್ಟರ್ಬೆನ್ಸ್ ಬೇಡ ಎಂದು ಅಮೆರಿಕಕ್ಕೆ ಹೋಗುತ್ತಿದ್ದೇನೆ. ತುಂಬಾ ಜನ ಕೇಳಿದ್ದರು, ನಾನು ರಾಜಕೀಯ ಪ್ರಚಾರಕ್ಕೆ ಹೋಗೋದಿಲ್ಲ. ನಾನು ಹೆಚ್ಚು ಮಾತನಾಡಿದರೆ ರಾಜಕಾರಣಿಗಳ ಹೆಸರುಗಳು ಬಾಯಿಗೆ ಬರುತ್ತದೆ. ಮದುವೆ ಬಗ್ಗೆ ಮುಂದೆ ನೋಡೋಣ, ಉಡುಪಿಯಲ್ಲಿ ನಟ ರಕ್ಷಿತ್ ಶೆಟ್ಟಿ ಹೇಳಿಕೆ

10:35 AM (IST) May 10

ಮತದಾನಕ್ಕೂ ಮೊದಲು ಆಂಜನೇಯನಿಗೆ ವಂದಿಸಿದ ನಿಖಿಲ್ ಕುಮಾರಸ್ವಾಮಿ

ಮತದಾನಕ್ಕೆ ಮೊದಲು ರಾಮನಗರದ ಶ್ರೀ ಚಾಮುಂಡೇಶ್ವರಿ ಅಮ್ಮನವರು ಹಾಗೂ ಬಿಡದಿಯ ಶ್ರೀ ಕೋತಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿ ನಿಖಿಲ್ ಕುಮಾರಸ್ವಾಮಿ ಪೂಜೆ ಸಲ್ಲಿಸಿದರು

 

10:34 AM (IST) May 10

ಕುಟುಂಬದೊಂದಿಗೆ ಮತ ಚಲಾಯಿಸಿದ ಭಾಸ್ಕರ್ ರಾವ್

ಮಾಜಿ ಐಪಿಎಸ್ ಅಧಿಕಾರಿ. ಚಾಮರಾಜಪೇಟೆಯ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ಕುಟುಂಬದೊಂದಿಗೆ ಆಗಮಿಸಿ, ಮತ ಚಲಾಯಿಸಿದರು. 

 

10:26 AM (IST) May 10

ತುಮಕೂರು ಜಿಲ್ಲೆಯಲ್ಲಿ ಸರಾಸರಿ ಶೇ.-07.14 ಮತದಾನ

ತುಮಕೂರು ಜಿಲ್ಲೆ ವಿಧಾನಸಭಾ ಚುನಾವಣೆ ಮತದಾನ ವಿವರ

ಮೊದಲನೇ ಸುತ್ತು ಬೆಳಿಗ್ಗೆ 9 ಗಂಟೆಯವರೆಗೆ ಶೇಕಡಾವಾರು ಮತದಾನ

128- ಚಿಕ್ಕನಾಯಕನಹಳ್ಳಿ ಶೇ. 08.79

129 ತಿಪಟೂರು - ಶೇ. 7.91

130 ತುರುವೇಕೆರೆ -  ಶೇ. 7.79

131-ಕುಣಿಗಲ್ -ಶೇ. 8.36

132-ತುಮಕೂರು ನಗರ-ಶೇ.9.13

133-ತುಮಕೂರು ಗ್ರಾಮಾಂತರ -ಶೇ. 7.69

134-ಕೊರಟಗೆರೆ ಶೇ 03.48

135-ಗುಬ್ಬಿ  ಶೇ 08.16

136- ಶಿರಾ ಶೇ 06.03

137-ಪಾವಗಡ. ಶೇ 7.12

138 - ಮಧುಗಿರಿ ಶೇ 03.07


ಜಿಲ್ಲಾ ಸರಾಸರಿ ಶೇ.-07.14

10:15 AM (IST) May 10

ವೃದ್ಧರಿಂದ ಮತ ಚಲಾವಣೆ, ಮುಂದುವರಿದೆ ರಾಜಕಾರಣಿಗಳ ಬೇಜವಾಬ್ದಾರಿ ವರ್ತನೆ

ಒಂದೆಡೆ ರಾಜ್ಯದಲ್ಲಿ ಮತದಾನದ ಬಿರುಸು ಜೋರಾಗಿದ್ದರೆ, ಇನ್ನೊಂದೆಡೆ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿರುವ ಘಟನೆಗಳೂ ವರದಿಯಾಗಿದೆ. ಬ್ಯಾಟರಾಯನಪುರದಲ್ಲಿ ಮಾತ್ರವಲ್ಲದೆ ಬಳ್ಳಾರಿ ಗ್ರಾಮಾಂತರದಲ್ಲ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಘರ್ಷಣೆ ಮಾಡಿಕೊಂಡಿದ್ದಾರೆ.

ಎಲ್ಲಿ ಹೇಗೆ ಮತದಾನ ಮಾಡಿದ್ದಾರೆ?