ಲಿಂಗಾಯತರ ಗೆಲುವಿನಲ್ಲೂ ಕೈದೇ ಸಿಂಹಪಾಲು: ಕಾಂಗ್ರೆಸ್‌ನಿಂದ ಕಣಕ್ಕಿಳಿದ 39 ಜನರ ಗೆಲುವು

Published : May 14, 2023, 12:46 PM ISTUpdated : May 14, 2023, 12:48 PM IST
ಲಿಂಗಾಯತರ ಗೆಲುವಿನಲ್ಲೂ ಕೈದೇ ಸಿಂಹಪಾಲು: ಕಾಂಗ್ರೆಸ್‌ನಿಂದ ಕಣಕ್ಕಿಳಿದ 39 ಜನರ ಗೆಲುವು

ಸಾರಾಂಶ

ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ ಪಕ್ಷವು ರೆಡ್ಡಿ ಲಿಂಗಾಯತ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯಕ್ಕೆ 51 ಕ್ಷೇತ್ರದಲ್ಲಿ ಟಿಕೆಟ್‌ ನೀಡಿದ್ದು ಇದರಲ್ಲಿ 39 ಕ್ಷೇತ್ರದಲ್ಲಿ ಜಯಭೇರಿ ಭಾರಿಸಿದ್ದಾರೆ.

ಬೆಂಗಳೂರು:  ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ ಪಕ್ಷವು ರೆಡ್ಡಿ ಲಿಂಗಾಯತ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯಕ್ಕೆ 51 ಕ್ಷೇತ್ರದಲ್ಲಿ ಟಿಕೆಟ್‌ ನೀಡಿದ್ದು ಇದರಲ್ಲಿ 39 ಕ್ಷೇತ್ರದಲ್ಲಿ ಜಯಭೇರಿ ಭಾರಿಸಿದ್ದಾರೆ. ಬಿಜೆಪಿಯು ಒಟ್ಟು 68 ಕ್ಷೇತ್ರದಲ್ಲಿ ಟಿಕೆಟ್‌ ನೀಡಿದ್ದು 17 ಮಂದಿ ಮಾತ್ರ ಜಯಗಳಿಸಿದ್ದಾರೆ. ರೆಡ್ಡಿ ಲಿಂಗಾಯತ ಸಲುದಾಯದ ಐವರು ಸೇರಿದಂತೆ ಕಾಂಗ್ರೆಸ್‌ ಪಕ್ಷ ವೀರಶೈವ ಲಿಂಗಾಯತ ಸಮುದಾಯಕ್ಕೆ 51 ಕ್ಷೇತ್ರದಲ್ಲಿ ಟಿಕೆಟ್‌ ನೀಡಿದ್ದು ಇದರಲ್ಲಿ ರೆಡ್ಡಿ ಲಿಂಗಾಯತ ಸಮುದಾಯದ ಐವರೂ ಜಯಗಳಿಸಿದ್ದಾರೆ. ಇನ್ನುಳಿದಂತೆ ವೀರಶೈವ ಲಿಂಗಾಯತ ಸಮುದಾಯದ 46 ಅಭ್ಯರ್ಥಿಗಳಲ್ಲಿ 34 ಉಮೇದುವಾರರು ವಿಜೇತರಾಗಿದ್ದು ವಿಧಾನ ಸಭೆ ಪ್ರವೇಶಿಸಲಿದ್ದಾರೆ.

ಗೆದ್ದ ಕಾಂಗ್ರೆಸ್ಸಿನ ಲಿಂಗಾಯತರು:

ಕಾಂಗ್ರೆಸ್‌ನ ಗಣೇಶ್‌ ಹುಕ್ಕೇರಿ (ಚಿಕ್ಕೋಡಿ-ಸದಲಾಗಾ), ಲಕ್ಷ್ಮಣ ಸವದಿ (ಅಥಣಿ), ಭರಮಗೌಡ ಅಲಗೌಡ ಕಾಗೆ (ಕಾಗವಾಡ), ಲಕ್ಷ್ಮೇ ಹೆಬ್ಬಾಳ್ಕರ್‌ (ಬೆಳಗಾವಿ ಗ್ರಾಮಾಂತರ), ಬಾಬಾಸಾಹೇಬ್‌ ಡಿ.ಪಾಟೀಲ್‌ (ಕಿತ್ತೂರ್‌), ಮಹಂತೇಶ್‌ ಎಸ್‌.ಕೌಜಲಗಿ (ಬೈಲಹೊಂಗಲ), ಅಶೋಕ್‌ ಪಟ್ಟಣ್‌ (ರಾಮದುರ್ಗ), ವಿಜಯಾನಂದ ಕಾಶಪ್ಪನವರ್‌ (ಹುನಗುಂದ), ಸಿ.ಎಸ್‌.ನಾಡಗೌಡ (ಮುದ್ದೇಬಿಹಾಳ), ಶಿವಾನಂದ ಪಾಟೀಲ್‌(ಬಸವನ ಬಾಗೇವಾಡಿ), ಎಂ.ಬಿ.ಪಾಟೀಲ್‌ (ಬಬಲೇಶ್ವರ), ಯಶವಂತರಾಯಗೌಡ ಪಾಟೀಲ್‌ (ಇಂಡಿ) ಜಯಗಳಿಸಿದ್ದಾರೆ.

Babalehwara Election Result 2023: ಎಂಬಿ ಪಾಟೀಲ್‌ಗೆ ಗೆಲುವಿನ ಸಂಭ್ರಮ, ಸಿಎಂ ರೇಸಲ್ಲಿ ಲಿಂಗಾಯಿತ ನಾಯಕ!

ಅಶೋಕ್‌ ಎಂ.ಮನಗೂಳಿ (ಸಿಂದಗಿ), ಎಂ.ವೈ.ಪಾಟೀಲ್‌(ಅಫ್ಜಲಪುರ), ಶರಣಬಸಪ್ಪಗೌಡ(ಶಹಪುರ್‌), ಚನ್ನರೆಡ್ಡಿ ಪಾಟೀಲ್‌ ಟಿ.(ಯಾದಗಿರಿ), ಡಾ.ಶರಣಪ್ರಕಾಶ್‌ ಪಾಟೀಲ್‌(ಸೇಡಂ), ಅಲ್ಲಮಪ್ರಭು ಪಾಟೀಲ್‌(ಕಲಬುರಗಿ ದಕ್ಷಿಣ), ಬಿ.ಆರ್‌.ಪಾಟೀಲ್‌ (ಆಳಂದ), ಈಶ್ವರ್‌ ಖಂಡ್ರೆ (ಭಾಲ್ಕಿ), ಹಂಪನಗೌಡ ಬಾದರ್ಲಿ (ಸಿಂಧನೂರು), ಬಸವರಾಜ ರಾಯರೆಡ್ಡಿ (ಯಲಬುರ್ಗ), ಜಿ.ಎಸ್‌.ಪಾಟೀಲ್‌ (ರೋಣ), ವಿನಯ ಕುಲಕರ್ಣಿ (ಧಾರವಾಡ), ಯು.ಬಿ.ಬಣಕಾರ್‌(ಹಿರೇಕೆರೂರು), ಕೆ.ಸಿ.ವೀರೇಂದ್ರ(ಚಿತ್ರದುರ್ಗ), ಶಾಮನೂರು ಶಿವಶಂಕರಪ್ಪ (ದಾವಣಗೆರೆ ದಕ್ಷಿಣ), ಬಸವರಾಜು ವಿ.ಶಿವಗಂಗ(ಚನ್ನಗಿರಿ), ಡಿ.ಜಿ.ಶಾಂತನಗೌಡ(ಹೊನ್ನಾಳಿ), ಬಿ.ಕೆ.ಸಂಗಮೇಶ್ವರ(ಭದ್ರಾವತಿ), ಎಚ್‌.ಡಿ.ತಮ್ಮಯ್ಯ(ಚಿಕ್ಕಮಗಳೂರು), ಕೆ.ಷಡಕ್ಷರಿ (ತಿಪಟೂರು), ಎಚ್‌.ಎಂ.ಗಣೇಶ್‌ ಪ್ರಸಾದ್‌ (ಗುಂಡ್ಲುಪೇಟೆ) ಸೇರಿದಂತೆ ರೆಡ್ಡಿ ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಸಮುದಾಯದ ಒಟ್ಟಾರೆ 39 ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.


ಬಿಜೆಪಿಯ 17 ಲಿಂಗಾಯತ ಅಭ್ಯರ್ಥಿಗಳ ಗೆಲುವು

ಬಿಜೆಪಿಯು ಲಿಂಗಾಯತ ಸಮುದಾಯಕ್ಕೆ ಒಟ್ಟು 68 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಿದ್ದು ಈ ಪೈಕಿ ಜಯಗಳಿಸಿದವರು 17 ಮಂದಿ ಮಾತ್ರ. ಶಿಕಾರಿಪುರದಿಂದ ಬಿ.ವೈ.ವಿಜಯೇಂದ್ರ, ಶಿವಮೊಗ್ಗದಿಂದ ಚನ್ನಬಸಪ್ಪ, ತುಮಕೂರಿನಿಂದ ಜ್ಯೋತಿ ಗಣೇಶ್‌, ಹರಿಹರದಿಂದ ಬಿ.ಪಿ.ಹರೀಶ್‌, ಕುಂದಗೋಳದಿಂದ ಎಂ.ಆರ್‌.ಪಾಟೀಲ್‌, ಹುಬ್ಬಳ್ಳಿ-ಧಾರವಾಡ ಪಶ್ಚಿಮದಿಂದ ಅರವಿಂದ್‌ ಬೆಲ್ಲದ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಿಂದ ಮಹೇಶ್‌ ಟೆಂಗಿನಕಾಯಿ, ನರಗುಂದದಿಂದ ಸಿ.ಸಿ.ಪಾಟೀಲ್‌, ತೇರದಾಳದಿಂದ ಸಿದ್ದು ಸವದಿ, ಜಮಖಂಡಿಯಿಂದ ಜಗದೀಶ್‌ ಗುಡಗುಂಟಿ, ಹುಕ್ಕೇರಿಯಿಂದ ನಿಖಿಲ್‌ ಕತ್ತಿ, ನಿಪ್ಪಾಣಿಯಿಂದ ಶಶಿಕಲಾ ಜೊಲ್ಲೆ, ವಿಜಯಪುರದಿಂದ ಬಸನಗೌಡ ಪಾಟೀಲ ಯತ್ನಾಳ, ರಾಯಚೂರಿನಿಂದ ಡಾ.ಶಿವರಾಜ್‌ ಪಾಟೀಲ್‌, ಬೀದರ್‌ ದಕ್ಷಿಣದಿಂದ ಶೈಲೇಂದ್ರ ಬೆಲ್ದಾಳೆ, ಹುಮ್ನಾಬಾದ್‌ನಿಂದ ಸಿದ್ದು ಪಾಟೀಲ್‌ ಹಾಗೂ ಬಸವಕಲ್ಯಾಣದಿಂದ ಶರಣು ಸಲಗರ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿತ್ರರಂಗಕ್ಕೇ ಗುಡ್​ಬೈ ಹೇಳಿ, ದಾಖಲೆಯನ್ನೂ ಸೃಷ್ಟಿಸಿದ ಬೆನ್ನಲ್ಲೇ ಕುಸಿದು ಬಿದ್ದ Thalapathy Vijay!​ ಏನಿದು ಘಟನೆ
ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹ 50 ಸಾವಿರ!