ಉಗ್ರವಾದ ಪರ ನಿಂತಿದೆ ಕಾಂಗ್ರೆಸ್, ಕೇರಳ ಸ್ಟೋರಿ ಉಲ್ಲೇಖಿಸಿ ಮೋದಿ ವಾಗ್ದಾಳಿ!

By Suvarna News  |  First Published May 5, 2023, 2:52 PM IST

ಕೇರಳ ಸ್ಟೋರಿ ಚಿತ್ರದ ವಿರುದ್ದ ನಿಂತಿರುವ ಕಾಂಗ್ರೆಸ್ ಭಯೋತ್ಪಾದಕತೆ ಜೊತೆ ನಿಂತಿದೆ. ಉಗ್ರವಾದ ವಿರುದ್ದ ಕಾಂಗ್ರೆಸ್ ಒಂದು ಮಾತೂ ಆಡುವುದಿಲ್ಲ. ಆದರೆ ಉಗ್ರರ ವಿರುದ್ಧ ಬಿಜೆಪಿ ಕಠಿಣ ಕ್ರಮ ಕೈಗೊಂಡರೆ ಕಾಂಗ್ರೆಸ್ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಎಂದು ಮೋದಿ ಹೇಳಿದ್ದಾರೆ. ಮೋದಿ ಭಾಷಣದ ವಿವರ ಇಲ್ಲಿದೆ.


ಬಳ್ಳಾರಿ(ಮೇ.05): ಭಯೋತ್ಪಾದಕತೆ ಹೊಸ ಸ್ವರೂಪ ಪಡೆದುಕೊಂಡಿದೆ. ಭಯೋತ್ಪಾದಕರ ಗುಂಡು, ಪಿಸ್ತೂಲುಗಳು ಸದ್ದು ಮಾಡುತ್ತದೆ. ಆದರೆ ಹೊಸ ರೂಪದಲ್ಲಿರುವ ಆತಂಕವಾದ ಸದ್ದು ಮಾಡದೇ ಕೆಲಸ ಮುಗಿಸುತ್ತದೆ. ಇತಂದ್ದೆ ಆತಂಕದ ಷಡ್ಯಂತ್ರದ ಸಿನಿಮಾ ಕೇರಳ ಸ್ಟೋರಿ ಚರ್ಚೆಯಲ್ಲಿದೆ. ಕೇರಳ ಸ್ಟೋರಿ ಒಂದು ರಾಜ್ಯದ ಆತಂಕದ, ಷಡ್ಯಂತ್ರದ ಮೇಲೆ ಆಧಾರಿತವಾಗಿದೆ. ಆತಂಕದ,ಷಡ್ಯಂತ್ರದ ಬೆಳಕು ಚೆಲ್ಲುವ ಕೇರಳ ಸ್ಟೋರಿ ಚಿತ್ರದ ವಿರುದ್ಧ ಕಾಂಗ್ರೆಸ್ ನಿಂತಿದೆ. ಈ ಮೂಲಕ ಕಾಂಗ್ರೆಸ್ ಆತಂಕವಾದಿ ಜೊತೆ ನಿಂತಿದೆ ಎಂದು ಮೋದಿ ಹೇಳಿದ್ದಾರೆ.

ಚುನಾವಣೆ ಗೆಲ್ಲಲು ಕಾಂಗ್ರೆಸ್ ಹಣದ ಬಲದ ಮೂಲಕ ಸುಳ್ಳನ್ನು ಹರಡುತ್ತಿದೆ. ಈ ಮೂಲಕ ಜನರನ್ನು ಮೋಸಗೊಳಿಸುವ ಪ್ರಯತ್ನದಲ್ಲಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಇದೇ ತಂತ್ರ ಮೋಡಿದೆ. ಆದರೆ ಕರ್ನಾಟಕದ ಜನರು ಬಿಜೆಪಿಯನ್ನು ಗೆಲ್ಲಿಸಲು ಸಂಕಲ್ಪ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಇನ್ನು ಯಾವ ಸುಳ್ಳು ಹರಡಿಸಿ ಮತ ಪಡೆಯಲು ಕಾಂಗ್ರೆಸ್ ಚಿಂತಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ. 

Latest Videos

undefined

 

ಎರಡನೇ ಹಂತದ ಚುನಾವಣಾ ಪ್ರಚಾರ, ಇಂದಿನಿಂದ ಎರಡು ದಿನ ರಾಜ್ಯದಲ್ಲಿ 7 ಕಡೆ ಮೋದಿ ಅಬ್ಬರ

ಬಿಜೆಪಿಯ ಪ್ರಣಾಳಿಕೆ ವಚನ ಪತ್ರವಾಗಿದೆ. ಇದು ಕರ್ನಾಟಕವನ್ನು ನಂಬರ್ 1 ರಾಜ್ಯಮಾಡಲು ಸಿದ್ಧಪಡಿಸಿರುವ ರೋಡ್ ಮ್ಯಾಪ್ ಆಗಿದೆ. ಕಾಂಗ್ರೆಸ್ ಘೋಷಣಾ ಪತ್ರದಲ್ಲಿ ಸಾವಿರ ಸುಳ್ಳಿನ ಭರವಸೆ, ತುಷ್ಠೀಕರಣ ಸೇರಿದಂತೆ ಹಲವು ರಾಜಕಾರಣವನ್ನೇ ಮಾಡುತ್ತಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಈ ಕಾಯ್ದೆ ವಾಪಸ್ ಪಡೆಯುತ್ತೇವೆ, ಇದನ್ನು ನಿಷೇಧಿಸುತ್ತೇವೆ, ಇದನ್ನು ನಿಲ್ಲಿಸುತ್ತೇವೆ ಎಂದಿದೆ. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದ ಜನತೆ ಉತ್ತಮ ಯೋಜನೆ ನೀಡುವ ಯಾವುದೇ ಚಿಂತನೆ ಇಲ್ಲ. ಎಲ್ಲಾ ವಾಪಸ್ ಪಡೆಯುವುದು ಮಾತ್ರವೇ ಅವರ ಉದ್ದೇಶ. ಕಾಂಗ್ರೆಸ್ ಬುಡವೇ ಅಲ್ಲಾಡುತ್ತಿದೆ. ಕಾಂಗ್ರೆಸ್‌ಗೆ ನಾನು  ಜೈಬಜರಂಗಬಲಿ ಎಂದು ಹೇಳುವುದು ಆಪತ್ತು ಕಾಡುತ್ತಿದೆ. ಕಾಂಗ್ರೆಸ್ ತುಷ್ಠೀಕರಣಕ್ಕಾಗಿ ಯಾವ ಹಂತಕ್ಕಾಗಿ ಇಳಿಯಲಿದೆ ಅನ್ನೋದು ಇದರಿಂದ ತಿಳಿಯಲಿದೆ ಎಂದು ಮೋದಿ ಹೇಳಿದ್ದಾರೆ. 

ಕಾನೂನು ಸುವ್ಯವಸ್ಥೆ ಅತ್ಯಂತ ಪ್ರಮುಖ ವಿಷಯ. ಉಗ್ರವಾದ ವಿಚಾರದಲ್ಲಿ ಬಿಜೆಪಿ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಆದರೆ ಇದೇ ಭಯೋತ್ಪಾದಕತೆ ವಿರುದ್ಧ ಬಿಜೆಪಿ ಕ್ರಮ ಕೈಗೊಂಡರೆ, ಕಾಂಗ್ರೆಸ್ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ ಎಂದು ಮೋದಿ ಹೇಳಿದ್ದಾರೆ. 

ವಿಶ್ವ ಆತಂಕ ಭಯದಿಂದ ಚಿಂತಿತವಾಗಿದೆ.  ಭಾರತ ಹಲವು ಆಕ್ರಮಣ ಎದುರಿಸಿದೆ.ಹಲವು ಭಾರತೀಯರು ಪ್ರಾಣ ಕಳದುಕೊಂಡಿದೆ. ಆತಂಕವಾದ ವಿಕಾಸದ ವಿರೋಧಿ, ಆತಂಕವಾದ ಮಾನವತಾವಾದಗಳ ವಿರೋಧಿ. ತಮ್ಮ ವೋಟ್ ಬ್ಯಾಂಕ್ ರಾಜಾಕರಣಕ್ಕಾಗಿ ಮಂಡಿಯೂರಿ ಕುಳಿತಿದೆ. ಆತಂಕದ ವಾತಾವರಣದಲ್ಲಿ ಉದ್ಯೋಗ ಐಟಿಬಿಟಿ, ಕೃಷಿ, ನಮ್ಮ ಸಂಸ್ಕೃತಿ ನಷ್ಟವಾಗುತ್ತದೆ. ವೋಟ್ ಬ್ಯಾಂಕ್ ದೃಷ್ಟಿಯಿಂದ ಕಾಂಗ್ರೆಸ್ ಆತಂಕವಾದ ವಿರುದ್ಧ ಒಂದು ಶಬ್ದ ಮಾತನಾಡುತ್ತಿಲ್ಲ. ಬದಲಾಗುತ್ತಿರುವ ಈ ಸಮಯದಲ್ಲಿ ಆತಂಕವಾದದ ಸ್ವರೂಪ ಬದಲಾಗುತ್ತಿದೆ. ಸ್ಮಗ್ಲಿಂಗ್, ಡ್ರಗ್ಸ್ ಸೇರಿದಂತೆ ಆತಂಕವಾದ ಹಲವು ಸ್ವರೂಪ ಪಡೆದುಕೊಂಡಿದೆ. ಕೆಲ ವರ್ಷಗಳಿಂದ ಆತಂಕದ ಹೊಸ ಸ್ವರೂಪ ಜನ್ಮತಾಳಿದೆ. ಬಂದೂಕು,ಪಿಸ್ತೂಲ್ ಸದ್ದು ಮಾಡುತ್ತದೆ.ಆದರೆ ಹೊಸ ರೂಪದ ಆತಂಕವಾದ ಸಮಾಜದ ನಡುವೆ ಇದ್ದು ಸೈಲೆಂಟ್ ಆಗಿ ಕೆಲಸ ಮಾಡುತ್ತಾರೆ. ಇತಂದ್ದೆ ಆತಂಕದ ಷಡ್ಯಂತ್ರದ ಸಿನಿಮಾ ಕೇರಳ ಸ್ಟೋರಿ ಚರ್ಚೆಯಲ್ಲಿದೆ. ಕೇರಳ ಸ್ಟೋರಿ ಒಂದು ರಾಜ್ಯದ ಆತಂಕದ, ಷಡ್ಯಂತ್ರದ ಮೇಲೆ ಆಧಾರಿತವಾಗಿದೆ. ಆತಂಕದ,ಷಡ್ಯಂತ್ರದ ಬೆಳಕು ಚೆಲ್ಲುವ ಕೇರಳ ಸ್ಟೋರಿ ಚಿತ್ರದ ವಿರುದ್ಧ ಕಾಂಗ್ರೆಸ್ ನಿಂತಿದೆ. ಕಾಂಗ್ರೆಸ್ ಆತಂಕವಾದಿ ಜೊತೆ ನಿಂತಿದೆ ಎಂದು ಮೋದಿ ಹೇಳಿದ್ದಾರೆ.

 

ಬಿಜೆಪಿಗೆ ಸಹಕರಿಸಿದರೆ ಮುಂದಿನ ಪ್ರಧಾನಿಯೂ ಮೋದಿ: ಅಮಿತ್‌ ಶಾ

ಬಿಎಸ್ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಮುಖ್ಯಮಂತ್ರಿ ನೇತೃತ್ವದಲ್ಲಿ ಬಿಜೆಪಿ ಮೂರೂವರೆ ವರ್ಷದಲ್ಲಿ ಅಭಿವೃದ್ಧಿ ಮಾಡಿ ತೋರಿಸಿದೆ. ಆದರೆ ಇದಕ್ಕೂ ಮುನ್ನ ಮೈತ್ರಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು.ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿ ಈ ಹಿಂದೆ ಹೇಳಿದ ಮಾತನ್ನು ನೆಪಿಸುತ್ತೇನೆ. ದೆಹಲಿಯಿಂದ 100 ಪೈಸೆ ಫಲಾನುಭವಿಗಳಿಗೆ ಕಳುಹಿಸಿದರೆ, 15 ಪೈಸೆ ಮಾತ್ರ ಬಡವರಿಗೆ ಸಿಗುತ್ತಿತ್ತು. ಕಾಂಗ್ರೆಸ್ ಶೇಕಡಾ 85 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ರಾಜೀವ್ ಗಾಂಧಿ ಒಪ್ಪಿಕೊಂಡಿದ್ದರು. ಇಂದೂ ಕೂಡ ಕಾಂಗ್ರೆಸ್ 85 ಪರ್ಸೆಂಟ್ ಕಮಿಷನ್ ತಿನ್ನುವ ಪಾರ್ಟಿ ಎಂದು ಮೋದಿ ಹೇಳಿದ್ದಾರೆ. 

ಶ್ರೀರಾಮುಲು ಹೇಳಿದರು ಹಿಂದಿಯಲ್ಲಿ ಭಾಷಣ ಮಾಡಿ, ಭಾಷಾಂತರ ಅಗತ್ಯವಿಲ್ಲ ಎಂದು ಸೂಚಿಸಿದ್ದಾರೆ. ಇದಕ್ಕೆ ನಿಮ್ಮ ಸಹಮತವಿದೆಯಾ ಎಂದು ಮೋದಿ ಭಾಷಣದ ನಡುವೆ ಜನರನ್ನು ಪ್ರಶ್ನಿಸಿದರು. ಈ ವೇಳೆ ಮೋದಿ ಮೋದಿ ಘೋಷಣೆ ಮೋದಿ ಉತ್ಸಾಹ ಹೆಚ್ಚಿಸಿತು. ಬಿಜೆಪಿ ಆದಿವಾಸಿಯನ್ನ ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಘೋಷಿಸಿತು. ಇದನ್ನು ಕಾಂಗ್ರೆಸ್ ವಿರೋಧಿಸಿತು. ಇದು ಕಾಂಗ್ರೆಸ್ ಆದಿವಾಸಿ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಮೋದಿ ಹೇಳಿದ್ದಾರೆ.

click me!