BJP Candidates List: ಸೋಮಣ್ಣ ಇಲ್ದಿದ್ರೆ ವಿಷ ಕುಡಿತೇವೆ, ಗೋವಿಂದರಾಜನಗರ ಕಾರ್ಯಕರ್ತರ ಹೈಡ್ರಾಮಾ!

Published : Apr 12, 2023, 12:27 AM ISTUpdated : Apr 12, 2023, 12:32 AM IST
BJP Candidates List: ಸೋಮಣ್ಣ ಇಲ್ದಿದ್ರೆ ವಿಷ ಕುಡಿತೇವೆ, ಗೋವಿಂದರಾಜನಗರ ಕಾರ್ಯಕರ್ತರ ಹೈಡ್ರಾಮಾ!

ಸಾರಾಂಶ

ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾಗಿದ್ದು ಸಚಿವ ವಿ ಸೋಮಣ್ಣಗೆ ವರುಣಾದಲ್ಲಿ ಟಿಕೆಟ್ ನೀಡಿರುವ ಹಿನ್ನೆಲೆ ಸಚಿವರ ಮನೆಗೆ ಬಂದ ನೂರಾರು ಕಾರ್ಯಕರ್ತರು.

ಬೆಂಗಳೂರು (ಏ.12) : ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾಗಿದ್ದು ಸಚಿವ ವಿ ಸೋಮಣ್ಣಗೆ ವರುಣಾದಲ್ಲಿ ಟಿಕೆಟ್ ನೀಡಿರುವ ಹಿನ್ನೆಲೆ ಸಚಿವರ ಮನೆಗೆ ಬಂದ ನೂರಾರು ಕಾರ್ಯಕರ್ತರು.

ಸೋಮಣ್ಣ(V Somanna) ಗೆ ಗೋವಿಂದರಾಜನಗರದಲ್ಲೇ ಟಿಕೆಟ್ ಸಿಗುತ್ತೆಂಬ ಲೆಕ್ಕಾಚಾರ ಹಾಕಲಾಗಿತ್ತು ಆದರೆ ಹೈಕಮಾಂಡ್ ವರುಣಾದಲ್ಲಿ ಟಿಕೆಟ್ ಕೊಟ್ಟಿದಕ್ಕೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.. ಸೋಮಣ್ಣ ‌ಇಲ್ಲದೆ ಇದ್ರೆ‌ ನಾವು ಇರಲ್ಲಾ‌ ಎಂದು ಕಣ್ಣೀರು ಹಾಕುತ್ತಿರುವ ನೂರಾರು ಬೆಂಬಲಿಗರು. ಕಾರ್ಯಕರ್ತರ ಪ್ರೀತಿ, ಬೆಂಬಲಕ್ಕೆ ಸಚಿವರು ಸಹ ತೀವ್ರ ಭಾವುಕರಾದ ಘಟನೆ ನಡೆಯಿತು.

BJP Candidates List: ಮಲ್ಲಿಕಾರ್ಜುನ್‌ ಖರ್ಗೆ ತವರಲ್ಲಿ ಮೋದಿ ರಣತಂತ್ರ, ಪ್ರಿಯಾಂಕ್‌ ವಿರುದ್ಧ ಮಣಿಕಂಠಾಸ್ತ್ರ!

ಸೋಮಣ್ಣ ಇಲ್ಲದಿದ್ರೆ ವಿಷ ಕುಡಿಯುತ್ತೇವೆ:

ನಮಗೆ ಸೋಮಣ್ಣ ಬೇಕು. ಇಲ್ಲಾ ಅರುಣ್ ಸೋಮಣ್ಣ ಬೇಕು. ಗೋವಿಂದರಾಜನಗರದಲ್ಲೇ ಚುನಾವಣೆಗೆ ನಿಲ್ಲಬೇಕು. ಬೇರೆ ಯಾರೇ ಚುನಾವಣೆಗೆ ನಿಂತ್ರೂ ನಾವು ಬೆಂಬಲ ಕೊಡಲ್ಲಾ ಎನ್ನುತ್ತಿರುವ ಕಾರ್ಯಕರ್ತರು. ಅಲ್ಲದೇ ಸೋಮಣ್ಣ ಇಲ್ಲದೆ ಇದ್ರೆ ನಾವು ಸಾಮೂಹಿಕವಾಗಿ ರಾಜೀನಾಮೆ ನೀಡಿ ವಿಷ ಕುಡಿಯುತ್ತೇವೆ ಎನ್ನುತ್ತಿರುವ ಕಾರ್ಯಕರ್ತರು. ಒಟ್ಟಾರೆಯಾಗಿ ನಮಗೆ ಸೋಮಣ್ಣ ಬೇಕು ಎಂದು ಕಣ್ಣೀರಿಡುತ್ತಿರುವ ಕಾರ್ಯಕರ್ತರು ಈ ಬೆಳವಣಿಗೆಯಿಂದ ಸೋಮಣ್ಣ ಕೂಡ ತೀವ್ರ ಭಾವುಕರಾದರು.

ಸೋಮಣ್ಣರಿಂದ ಭಾವುಕ ಮಾತು: 

ಗೋವಿಂದರಾಜನಗರ ಕ್ಷೇತ್ರದಿಂದ ಟಿಕೆಟ್ ಸಿಗದಕ್ಕೆ ಬೇಸರ ಇಲ್ಲ. ಹೈಕಮಾಂಡ್ ಆದೇಶವನ್ನ ಪಾಲಿಸ್ತೀನಿ. ಎರಡು ಕ್ಷೇತ್ರ ಕೊಟ್ಟಿರೋದು ತುಂಬಾ ಖುಶಿಯಾಗಿದೆ. ಎಲ್ಲಾ ಚಾಮುಂಡೇಶ್ವರಿಯ ಆಶೀರ್ವಾದ ಎಂದು ಭಾವುಕರಾದರು.

ವರುಣದಿಂದ ಸೋಮಣ್ಣ ಕಣಕ್ಕಿಳಿಸಲು ಯತ್ನ: ಸಿದ್ದು ವಿರುದ್ಧ ಸ್ಪರ್ಧಿಸುತ್ತೀರಾ ಎಂದು ಕೇಳಿದ ಬಿಜೆಪಿ

ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ದೇವರ ಆಶೀರ್ವಾದ ಇದೆ. ಜನ, ಕಾರ್ಯಕರ್ತರ ಆಶೀರ್ವಾದ ನನ್ನ ಮೇಲಿದೆ. 50 ವರ್ಷಕ್ಕೆ ಬೇಕಾಗುವಷ್ಟು ಕೆಲಸ ಮಾಡ್ತೀನಿ. ಬಿಜೆಪಿಯ ನಾಯಕರು ನನ್ನ ಕೈಬಿಟ್ಟಿಲ್ಲ. ಎಲ್ಲರೂ ನನ್ನ ಸಿಂಪ್ಲಿ ಸಿಟಿ ಇಷ್ಟ ಪಡ್ತಿದ್ದಾರೆ. ಜನರಿಗೋಸ್ಕರ ತುಂಬಾ ಕೆಲಸ ಮಾಡಿದ್ದೇನೆ. ಮುಂದೇನೂ ಮಾಡ್ತೇನೆ ಎಂದು ಮಾತು ಕೊಟ್ಟ ಸೋಮಣ್ಣ. ಇದೇ ಕಾರ್ಯಕರ್ತರು ಗೋವಿಂದರಾಜನಗರ ಬಿಟ್ಟು ಹೋಗಬೇಡಿ. ನೀವು ಇಲ್ಲದೇ ನಾವೂ ಇರೋದಿಲ್ಲ ಎಂದು ಕಣ್ಣೀರು ಹಾಕಿದ ಕಾರ್ಯಕರ್ತರು. ಈ ವೇಳೆ ಸೋಮಣ್ಣನವರು ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ