ಬೆಳಗಾವಿ: ಅರ್ಹ ಅಭ್ಯರ್ಥಿಗಳಿಲ್ಲವೆಂದು ದೂರ ಉಳಿದ ಮತದಾರ

By Kannadaprabha News  |  First Published May 11, 2023, 4:47 AM IST

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಯಾರೂ ಅರ್ಹ ವ್ಯಕ್ತಿಗಳಿಲ್ಲ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆಕ್ರೋಶಗೊಂಡ ಹಿರಿಯ ಮತದಾರನೋರ್ವ ಮತದಾನದಿಂದ ದೂರ ಉಳಿಯುವ ಮೂಲಕ ಮತದಾನವನ್ನು ಪರೋಕ್ಷವಾಗಿ ಬಹಿಷ್ಕರಿಸಿದ್ದಾರೆ.


ಬೆಳಗಾವಿ (ಮೇ.11) : ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಯಾರೂ ಅರ್ಹ ವ್ಯಕ್ತಿಗಳಿಲ್ಲ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆಕ್ರೋಶಗೊಂಡ ಹಿರಿಯ ಮತದಾರನೋರ್ವ ಮತದಾನದಿಂದ ದೂರ ಉಳಿಯುವ ಮೂಲಕ ಮತದಾನವನ್ನು ಪರೋಕ್ಷವಾಗಿ ಬಹಿಷ್ಕರಿಸಿದ್ದಾರೆ.

ಇಲ್ಲಿನ ಭಾಗ್ಯನಗರದ ನಿವಾಸಿ ಕೆ.ವಿದ್ಯಾಸಾಗರ ಎಂಬುವವರೇ ಮತದಾನದಿಂದ ದೂರ ಉಳಿದವರು. ಯಾರೂ ಅರ್ಹ ಅಭ್ಯರ್ಥಿಗಳಿಲ್ಲ. ಇಲ್ಲಿನ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರವಿದೆ. ಹೀಗಾಗಿ ನಾನು ಮತ ಚಲಾಯಿಸುತ್ತಿಲ್ಲ. ಅಲ್ಲದೇ ಕಳೆದ ಹಲವು ಚುನಾವಣೆಗಳಲ್ಲೂ ನಾನು ಮತ ಹಾಕಿಲ್ಲ ಎಂದು ಹೇಳಿದ್ದಾನೆ. ಅಲ್ಲದೇ, ಈ ಹಿಂದೆ 1985ರಲ್ಲಿ ನಾನು ಕೂಡ ಉಚಗಾಂವ ಕ್ಷೇತ್ರವಿದ್ದಾಗ ಸಂಚೆ ವಿಚಾರ್‌ ಮಂಚ್‌ ಪಕ್ಷದಿಂದ ಸ್ಪರ್ಧಿಸಿ ಐದು ಸಾವಿರ ಮತ ಪಡೆದಿದ್ದೆ ಎಂದರು.

Latest Videos

undefined

ಬೆಂಗಳೂರು ನಗರ: ಮತ ಹಾಕಿದವರಿಗೆ ಸ್ಥಳೀಯರಿಂದ ಬಿರಿಯಾನಿ...

ಉತ್ಸಾಹ ತೋರಿದ ವೃದ್ಧರು:

ಬೆಳಗಾವಿ ನಗರ ಸೇರಿ ಜಿಲ್ಲೆಯ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ಹಿರಿಯ ನಾಗರಿಕರು ತಮ್ಮ ಮತಗಟ್ಟೆಗಳತ್ತ ಆಗಮಿಸಿ ಅತ್ಯಂತ ಉತ್ಸಾಹದಿಂದ ಮತದಾನ ಮಾಡಿದರು. ವಡಗಾವಿ ಕರ್ನಾಟಕ ಪಬ್ಲಿಕ್‌ ಶಾಲೆ ಮತಗಟ್ಟೆಗೆ 88 ವರ್ಷದ ಜಾನಕಿಬಾಯಿ ಕುಲಕರ್ಣಿ ಪುತ್ರ, ಸೊಸೆ, ಮೊಮ್ಮಗನ ಜತೆ ವ್ಹೀಲ… ಚೇರ್‌ ಮೇಲೆ ಆಗಮಿಸಿದ್ದರು. ಇದೇ ವೇಳೆ ಮಾತನಾಡಿದ ಅವರು, ನನಗೀಗ 88 ವರ್ಷ ವಯಸ್ಸು. ಹಿಂದಿನ ಎಲ್ಲ ಚುನಾವಣೆಗಳಲ್ಲೂ ಮತ ಹಾಕಿದ್ದೇನೆ. ಈ ಬಾರಿಯೂ ಮತ ಹಾಕಲು ಬಂದಿದ್ದೇನೆ ಎಂದರು.

ಅನಗೋಳ ಚಿದಂಬರ ನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಸಂಖ್ಯೆ 24ಕ್ಕೆ 75 ವರ್ಷದ ಮನೋಹರ ಲಕ್ಷ್ಮಣ ಪವಾರ ಎಂಬುವರು ಪುತ್ರನ ಜತೆಗೆ ಆಗಮಿಸಿ ಹಕ್ಕು ಚಲಾಯಿಸಿದರು. ಆಝಾದ್‌ ನಗರ ನಿವಾಸಿ 76 ವರ್ಷದ ಮೈನೂದ್ದೀನ್‌ ಮಕಾನದಾರ ಸಹ ಮತದಾನ ಮಾಡಿದರು.

ಮತದಾರರ ಅಲೆದಾಟ:

ಉತ್ತರ ಮತಕ್ಷೇತ್ರದಲ್ಲಿ ಮತದಾನಕ್ಕೆ ಆಗಮಿಸಿದ್ದ ಹಲವು ಮತದಾರರುವ ಮತಪಟ್ಟಿಯಲ್ಲಿ ಹೆಸರು ಇಲ್ಲದ್ದರಿಂದ ಅಲೆದಾಟ ನಡೆಸಿದರು. ಕಣಬರ್ಗಿ, ಅಜಮ್‌ನಗರ ಹಾಗೂ ಶಾಹೂ ನಗರ ಸೇರಿದಂತೆ ಜಿಲ್ಲೆಯ ಇತರ ಕಡೆಗಳಲ್ಲಿ ಮತದಾರರು ಮತದಾನದಿಂದ ವಂಚಿತರಾದರು. ಈ ವೇಳೆ ಮತಗಟ್ಟೆಅಧಿಕಾರಿಗಳನ್ನು ವಿಚಾರಿಸಿದರೆ, ಮತಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವ ಕಾರಣ ಮತದಾನಕ್ಕೆ ಅವಕಾಶ ಇಲ್ಲವೆಂದು ತಿಳಿಸಿದ್ದರಿಂದ ಮತದಾರರು ಅಸಮಾಧನಗೊಂಡರು. ಅಲ್ಲದೇ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಮನೆಯತ್ತ ಹೆಜ್ಜೆ ಹಾಕಿದರು.

ಬೆಳಗಾವಿ ಉತ್ತರ, ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ. ಕೆಲವು ಪ್ರದೇಶಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮತದಾನ ಆಗಿದೆ. ಉತ್ತರ ಕ್ಷೇತ್ರದಲ್ಲಿ ಮರಾಠಾ ಹಾಗೂ ಲಿಂಗಾಯತ ಮತದಾರರು ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ಮಾಡದಿರುವುದು ಬಿಜೆಪಿಗರಲ್ಲಿ ಸ್ವಲ್ಪ ತಳಮಳ ಮೂಡಿಸಿದೆ. ಅಲ್ಪಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದರಿಂದ ಕಾಂಗ್ರೆಸ್‌ ಅಭ್ಯರ್ಥಿಯಲ್ಲಿ ವಿಶ್ವಾಸ ಮೂಡಿದೆ ಎನ್ನಲಾಗುತ್ತಿದೆ.

ಮತದಾನದ ದಿನ ರಾಜ್ಯದಲ್ಲಿ ಐವರು ಸಾವು!

ಇದಕ್ಕೆ ದಕ್ಷಿಣ ಕ್ಷೇತ್ರವೂ ಹೊರತಾಗಿಲ್ಲ, ಅಲ್ಪಸಂಖ್ಯಾತರು, ಉದ್ಯಮಿಗಳು, ಮರಾಠಾ ಸಮುದಾಯ ಸೇರಿದಂತೆ ಇನ್ನಿತರರು ಎಂಇಎಸ್‌ ಬೆಂಬಲಿತ ಪಕ್ಷೇತರ ವ್ಯಕ್ತಿ ಕಡೆಗೆ ಸ್ವಲ್ಪ ವಾಲಿದ್ದರಿಂದ ಕಾಂಗ್ರೆಸ್‌ ಹಾಗೂ ಬಿಜೆಪಿಯವರಲ್ಲಿ ಕಳವಳ ಮನೆ ಮಾಡಿದೆ. ಅದರಲ್ಲೂ ಮತದಾನ ಒಂದು ದಿನ ಬಾಕಿ ಇರುವಾಗಲೇ ಮಂಗಳವಾರ ತಡರಾತ್ರಿ ದಕ್ಷಿಣ ಕ್ಷೇತ್ರದಲ್ಲಿ ಬಹಿರಂಗವಾಗಿ ಎಂಇಎಸ್‌ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಪರಸ್ಪರ ವಾಗ್ವಾದವೂ ನಡೆದಿದೆ.

click me!