ಡಬಲ್‌ ಎಂಜಿನ್‌ ಸರ್ಕಾರದಿಂದ ಮತ್ತಷ್ಟಟು ಅಭಿವೃದ್ಧಿ: ಶಿವರಾಜಸಿಂಗ್‌ ಚೌವಾಣ್‌

By Kannadaprabha News  |  First Published Apr 28, 2023, 8:49 AM IST

ನರೇಂದ್ರ ಮೋದಿ ದೇಶದ ಪ್ರಧಾನಿಯಾದ ನಂತರ ಭಯೋತ್ಪದಕ ಕೃತ್ಯಗಳು ಹತೋಟಿಗೆ ಬಂದಿದೆ. ದೇಶದ ರಕ್ಷಣೆ ಪ್ರಧಾನಿ ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ. ಡಬಲ್‌ ಎಂಜಿನ್‌ ಸರ್ಕಾರದಿಂದ ಮತ್ತಷ್ಟಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ್‌ ಚೌವಾಣ್‌ ಹೇಳಿದರು.


ರಾಮದುರ್ಗ (ಏ.28) : ನರೇಂದ್ರ ಮೋದಿ ದೇಶದ ಪ್ರಧಾನಿಯಾದ ನಂತರ ಭಯೋತ್ಪದಕ ಕೃತ್ಯಗಳು ಹತೋಟಿಗೆ ಬಂದಿದೆ. ದೇಶದ ರಕ್ಷಣೆ ಪ್ರಧಾನಿ ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ. ಡಬಲ್‌ ಎಂಜಿನ್‌ ಸರ್ಕಾರದಿಂದ ಮತ್ತಷ್ಟಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಗ್‌ ಚೌವಾಣ್‌ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಪರ ಬುಧವಾರ ಮತಯಾಚನೆ ಮಾಡಿ ಮಾತನಾಡಿದ ಅವರು, ಗಡಿ ಭಾಗ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡಿ, ಎಲ್ಲರೂ ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ತಿಳಿಸಿದರು.

Tap to resize

Latest Videos

ಕಾಂಗ್ರೆಸಿನವರು ಭ್ರಷ್ಟಾಚಾರದ ಸಾಕ್ಷಿ ತೋರಿಸಲಿ: ಜಾರಕಿಹೊಳಿ ಸವಾಲು

ಪ್ರಧಾನಿ ಹುದ್ದೆ ಅಲಂಕರಿಸಿದ ನರೇಂದ್ರ ಮೋದಿ(Narendra Modi) ಅವರು ಎಲ್ಲ ವರ್ಗಗಳ ಜನರಿಗೆ ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದು ಸರ್ವರಿಗೂ ಸಮಬಾಳು ಸಮಪಾಲು ಎನ್ನುವಂತಾಗಿದೆ. ವಿಶೇಷವಾಗಿ ರೈತರಿಗೆ ಅನುಕೂಲವಾಗುವ ಕಿಸಾನ್‌ ಸಮ್ಮಾನ ಮತ್ತು ಫಸಲ್‌ ಬೀಮಾ ಯೋಜನೆಯು ರೈತರ ಬಾಳಲ್ಲಿ ಬೆಳಕು ಚೆಲ್ಲಿದೆ ಎಂದರು.

ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನ ಸಭೆಯ ಚುನಾವಣೆಯಲ್ಲಿ(Karnataka assembly election 2023) ಬಿಜೆಪಿ ಅಭ್ಯರ್ಥಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಾರೆ. ಬಿಜೆಪಿ ಎಂದಿಗೂ ಆಮಿಷವೊಡ್ಡಿ ಮತ ಕೇಳುವುದಿಲ್ಲ. ಭ್ರಷ್ಟಾಚಾರಕ್ಕೆ ಎಂದು ಬೆಂಬಲಿಸುವುದಿಲ್ಲ ಎಂದರು.

ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಮಾತನಾಡಿ, ಹಿಂದಿನ ಶಾಸಕರ ಅವಧಿಯಲ್ಲಿ ಕೈಗೊಂಡಿರುವ ನೀರಾವರಿ ಯೋಜನೆಗಳು ತಾಂತ್ರಿಕ ತೊಂದರೆಯಿಂದ ಅರ್ಧಕ್ಕೆ ನಿಂತಿವೆ. ಶಾಸಕರಾದ ತಕ್ಷಣ ಪ್ರಥಮ ಆದ್ಯತೆ ಮೇರೆಗೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿದರು. ಚುನಾವಣಾ ಪ್ರಭಾರಿ ಸಂಗೀತಾ ಯಾದವ, ಚುನಾವಣಾ ಉಸ್ತುವಾರಿ ಲಕ್ಷ್ಮಣ ತಪಸಿ, ಮಂಡಲ ಅಧ್ಯಕ್ಷ ರಾಜೇಶ ಬೀಳಗಿ, ರಘುನಾಥ ರೇಣಕೆ, ಮುಕ್ತಾರ ಪಠಾಣ, ಡಾ.ಕೆ.ವಿ.ಪಾಟೀಲ, ರೇಣಪ್ಪ ಸೋಮಗೊಂಡ, ರೇಖಾ ಚಿನ್ನಾಕಟ್ಟಿಇತರರು ಇದ್ದರು.

ಕಾಂಗ್ರೆಸ್‌ನ ಸುಳ್ಳು ಭರವಸೆಗಳಿಗೆ ಕಿವಿಗೊಡಬೇಡಿ: ರಮೇಶ ಜಾರಕಿಹೊಳಿ

ರಾಮದುರ್ಗ ತಾಲೂಕಿನಲ್ಲಿ ಯುವಕರಿಗೆ ಉದ್ಯೋಗ ಇಲ್ಲದೇ ಪರದಾಡುತ್ತಿದ್ದಾರೆ. ಯುವಕರಿಗೆ ಉದ್ಯೋಗವಕಾಶ ಕಲ್ಪಿಸಲು ಸರ್ಕಾರದಿಂದ ಮತ್ತು ವೈಯಕ್ತಿಕವಾಗಿ ಕಾರ್ಖಾನೆಗಳನ್ನು ನಿರ್ಮಿಸಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲಾಗುವುದು.

ಚಿಕ್ಕರೇವಣ್ಣ, ಬಿಜೆಪಿ ಅಭ್ಯರ್ಥಿ.

click me!