ಮಹಿಳೆಯರ ಮತದ ಬುಟ್ಟಿಯೊಳಗೆ ಕೈ ಹಾಕಿದ ಕಾಂಗ್ರೆಸ್
SC/ST ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭವಾಗಿದೆ.
ಮಲ್ಲಿಕಾರ್ಜುನ ಖರ್ಗೆ ನಾಯಕತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಪ್ರತಿಜ್ಞೆ
ಕಾಂಗ್ರೆಸ್‌ನಿಂದ ಚಿತ್ರದುರ್ಗದಲ್ಲಿ ಎಸ್‌ಸಿ, ಎಸ್‌ಟಿ ಐಕ್ಯತಾ ಸಮಾವೇಶ
ಚಿತ್ರದುರ್ಗ (ಜ.08): ರಾಜ್ಯದಲ್ಲಿ ಜ.16ನೇ ತಾರೀಖು ಹೆಣ್ಣು ಮಕ್ಕಳಿಗಾಗಿ ಮಹಾ ನಾಯಕಿಯರ ಸಭೆ ಹಮ್ಮಿಕೊಳ್ಳಲಾಗಿದೆ. ಮಹಿಳಾ ಪ್ರತ್ಯೇಕ ಪ್ರಣಾಳಿಕೆ ಮಾಡುವುದಕ್ಕೂ ಕಾಂಗ್ರೆಸ್ ಪ್ಲಾನ್ ಮಾಡಿದೆ. ಹಾಗಾಗಿ ರಾಜ್ಯದಿಂದ ಎಲ್ಲರೂ ಸಭೆಗೆ ಬರಬೇಕಿದೆ ಎಂದು ಕಾಂಗ್ರೆಸ್ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಚಿತ್ರದುರ್ಗದ ಮುರುಘರಾಜೇಂದ್ರ ಕ್ರಿಡಾಂಗಣದಲ್ಲಿ ಕೆಪಿಸಿಸಿಯಿಂದ ಇಂದು ಆಯೋಜಿಸಲಾಗಿರುವ ಎಸ್‌ಸಿ, ಎಸ್‌ಟಿ ಐಕ್ಯತಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಇಡೀ ಭಾರತದ ಆಸ್ತಿ ನಮ್ಮ ಸಂವಿಧಾನ, ತ್ರಿವರ್ಣ ಧ್ವಜ, ರಾಷ್ಟ್ರ ಧ್ವಜ ಆಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಅಲಂಕರಿಸಿರುವ ಸ್ಥಾನ ಸಾಮಾನ್ಯ ಸ್ಥಾನವಲ್ಲ. ಈ ದೇಶದ ಇತಿಹಾಸ ಸೃಷ್ಟಿಸಿದ ಪಕ್ಷ ನಮ್ಮ ಕಾಂಗ್ರೆಸ್. ಈ ಸ್ಥಾನವನ್ನು ಗಾಂಧೀಜಿ ಸೇರಿ ಗಾಂಧಿ ಕುಟುಂಬದವರು ಅಲಂಕರಿಸಿದ್ದರು. ಈ ಸ್ಥಾನ ಯಾರೋ ಕೊಟ್ಟ ಸ್ಥಾನ ಅಲ್ಲ. ಇದು 50 ವರ್ಷಗಳ ಕಾಲ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಿದ ನಾಯಕನಿಗೆ ಸಿಕ್ಕ ಸ್ಥಾನವಾಗಿದೆ ಎಂದು ಹೇಳಿದರು.
ನಾಳೆ ಸಿದ್ದರಾಮಯ್ಯ ಮತ್ತೆ ಕೋಲಾರಕ್ಕೆ: ಸ್ಪರ್ಧೆ ಬಗ್ಗೆ ಘೋಷಣೆ?
136 ಸೀಟು ಗಳಿಸಿ ಕಾಂಗ್ರೆಸ್ ಸರ್ಕಾರ ಅಧಿಕಾರ: ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ನಮ್ಮ ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡ್ತೀವಿ ಎಂದು ನಾವು ಪ್ರತಿಜ್ಞೆ ಮಾಡಬೇಕಿದೆ. ಕಾಂಗ್ರೆಸ್ ಪಕ್ಷ ರಾಷ್ಟ್ರದಲ್ಲಿ ಸದ್ಯ ಸಂಕಟದಲ್ಲಿದೆ. ಚಿಂತೆ ಮಾಡಬೇಕಿಲ್ಲ, ಈ ರಾಜ್ಯದಲ್ಲಿ 136 ಸೀಟು ಗಳಿಸಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಮುಖಂಡರು ಭಾವನೆ ಮೇಲೆ ದೇಶ ಕಟ್ಟಲು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷ ಬದುಕಿನ ಮೇಲೆ ದೇಶ ಕಟ್ಟಲು ಯಾವಾಗಲೂ ನಿಂತಿದೆ. ನಮ್ಮ ದಶ ಘೋಷಣೆಗಳು ಕಾಂಗ್ರೆಸ್ ನಿಲುವಿಗೆ ಆಧಾರ ಸ್ತಂಭವಾಗಿ ನಿಲ್ಲಲಿವೆ. ಖರ್ಗೆ ಅವರ ನಾಯಕತ್ವದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ನೀವು ಆಶೀರ್ವಾದ ಮಾಡಬೇಕಿದೆ ಎಂದರು.
SC/ST ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭ: ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಈ ಐತಿಹಾಸಿಕ ಸಮಾವೇಶ ಇಡೀ ರಾಷ್ಟ್ರಕ್ಕೆ ಎಲ್ಲಾ ಪಕ್ಷಗಳಿಗೂ ಸಂದೇಶ ಕೊಡ್ತಿದೆ. ರಾಹುಲ್ ಗಾಂಧಿ ಈ ನೆಲದಲ್ಲಿ ಭಾರತ್ ಜೋಡೋ ಯಾತ್ರೆ ಮಾಡಿದ್ದರು. ಅಂದು ತಾವು ತೋರಿಸಿದ ವಿಶ್ವಾಸ ಇಡೀ ರಾಷ್ಟ್ರಕ್ಕೆ ಬಲ ತಂದಿದೆ. ಸ್ವತಂತ್ರ ಬಂದಾಗಿನಿಂದ ದಲಿತ ಶಕ್ತಿ ಕಾಂಗ್ರೆಸ್ ಶಕ್ತಿಯಾಗಿ ಉಳಿದುಕೊಂಡು ಬಂದಿದೆ. SC/ST ಅಂದ್ರೆ ಕಾಂಗ್ರೆಸ್ ಪಕ್ಷ, ನಮ್ಮ ಪಕ್ಷದ ಆಧಾರ ಸ್ತಂಭ ತಾವು ಎಂಬುದು ಯಾರೂ ಮರೆಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
Assembly eleciton: ಬಿಜೆಪಿ ಭ್ರಷ್ಟ ಸರ್ಕಾರ: ರಾಜ್ಯವನ್ನುಳಿಸಲು ಕಾಂಗ್ರೆಸ್ ಗೆಲ್ಲಿಸಿ; ಸಿದ್ದರಾಮಯ್ಯ ಕರೆ
ಬಿಜೆಪಿ ಸುಳ್ಳಿನ ಕಂತೆಗೆ ಸಿಲುಕಿಸುತ್ತಿದೆ: ರಾಜ್ಯದಲ್ಲಿ ಬಿಜೆಪಿಯವರು ಸುಳ್ಳೇ ಮನೆದೇವರು ಎಂದು ಬಂಡವಾಳ ಮಾಡಿಕೊಂಡಿದ್ದಾರೆ. ತಾವು ಯಾರೂ ಬಿಜೆಪಿಯ ಸುಳ್ಳಿನ ಕಂತೆಗೆ ಸಿಲುಕಬೇಡಿ. ಸುಳ್ಳಿ ಹೇಳದೇ ಅವರು ಅಧಿಕಾರ ನಡೆಸಲು ಸಾಧ್ಯವಾಗ್ತಿಲ್ಲ. ಮೀಸಲಾತಿಯಲ್ಲಿ ನ್ಯಾಯ ಒದಗಿಸಿ ಕೊಡ್ತೀವಿ ಎಂದು ಹೇಳಿದ್ದರು. ಆದರೆ, ಎಲ್ಲಾ ಜಾತಿಯರಿಗೂ ಕೂಡ ಸುಳ್ಳಿನ ಭರವಸೆ ಕೊಟ್ಟಿದ್ದಾರೆ. ಇದು ಜನಾದೇಶದ ಸರ್ಕಾರ ಅಲ್ಲ, ಆಪರೇಷನ್ ಲೋಟಸ್ ಮೇಲೆ ನಿಂತಿರೋ ಸರ್ಕಾರ. ನಾವು ಮುಂದೆ ಕೊಡುವ ವಚನಗಳಿಗೆ ನಾವು ಬದ್ದರಾಗಿರ್ತೇವೆ. ಈ ಬಾರಿ ನಮಗೆ ಆಶೀರ್ವಾದ ಮಾಡಿ. ದಲಿತರಿಗೆ ಶಕ್ತಿ ಕೊಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಮುಖಂಡತ್ವದಲ್ಲಿ ಈ ರೀತಿಯ ಸಮಾವೇಶ ಮಾಡಲಾಗುತ್ತಿದೆ. ಇದನ್ನೆಲ್ಲಾ ನೋಡಿದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರೋದ್ರಲ್ಲಿ ಯಾವುದೇ ಅನುಮಾನ ಬೇಡ ಎಂದು ಡಿಕೆಶಿ ಭರವಸೆ ನೀಡಿದರು.