
ವಿಜಯಪುರ (ಜ.08): ಸಿ.ಡಿ. ವಿಷಯವಾಗಿ ಬಿಜೆಪಿ, ಕಾಂಗ್ರೆಸ್‌ನಲ್ಲಿ ಫ್ಯಾಕ್ಟರಿಗಳಿವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಾಕತ್ತಿದ್ದರೆ ಸಿ.ಡಿ. ಹೊರ ತೆಗೆಯಲಿ ನೋಡೋಣ. ಸಿ.ಡಿ. ಇಟ್ಟುಕೊಂಡೇ ಒಬ್ಬರು ಮಂತ್ರಿ ಆಗಿದ್ದಾರೆ. ಯಾರದ್ದೇ ಸಿ.ಡಿ. ಇಟ್ಟುಕೊಂಡು ರಾಜಕಾರಣ ಮಾಡುವ ವ್ಯಕ್ತಿ ನಾನಲ್ಲ ಎಂದು ಕಿಡಿಕಾರಿದರು.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನನ್ನ ವಿರುದ್ಧ ಸಚಿವ ನಿರಾಣಿ, ವಿಜಯೇಂದ್ರ ಹಣ ಹೂಡಿಕೆ ಮಾಡಿದ್ದಾರೆ. ಈ ಇಬ್ಬರೂ ಹಣ ಕಳುಹಿಸಿಲ್ಲ ಎಂದು ಧರ್ಮಸ್ಥಳದ ಮಂಜುನಾಥನ ಮೇಲೆ ಆಣೆ ಮಾಡಲಿ ನೋಡೋಣ ಎಂದು ಸವಾಲ್ ಹಾಕಿದರು. ಈ ಗ್ಯಾಂಗ್ ಪಕ್ಷೇತರ ಅಭ್ಯರ್ಥಿಗಳಿಗೆ ಹಣ ನೀಡಿದ್ದಾರೆ. ಆದರೆ, ವಿಜಯಪುರ ಜನತೆ ಹಣ ತೆಗೆದುಕೊಳ್ಳದೆ ಮತ ಹಾಕಿದ್ದಾರೆ. ನಿರಾಣಿ ಬೆಂಬಲಿಗರು ಹಣ ಹೊಡೆದುಕೊಂಡಿದ್ದಾರೆ. ಇದೆಲ್ಲ ಹೈಕಮಾಂಡ್‌ಗೆ ಮಾಹಿತಿ ಹೋಗಿದೆ ಎಂದು ತಿಳಿಸಿದರು. ಇದೇ ವೇಳೆ ನನಗೆ ಟಿಕೆಟ್ ನೀಡಲು ನಿರಾಣಿ ಯಾರು? ಎಂದು ವಾಗ್ದಾಳಿ ನಡೆಸಿದರು.
ಅಂಬೇಡ್ಕರ್ ಹೆಸರು ಭಾರತರತ್ನಕ್ಕೆ ಶಿಫಾರಸು ಮಾಡಿದ್ದು ಅಟಲ್: ಸಿ.ಟಿ.ರವಿ
ನಾನು ಸೀಡಿ ರಾಜಕಾರಣಿ ಅಲ್ಲ: ‘ಪಂಚಮಸಾಲಿ ಸಮಾಜಕ್ಕೆ 2ಡಿ ಬೇಡ, 2ಎ ಬೇಕು ಅಂತಾರೆ. ಮೊದಲು ಯಾವುದರಲ್ಲಿ ಯಾವ ಸೌಲಭ್ಯವಿದೆ ಎಂಬುದನ್ನು ತಿಳಿದುಕೊಳ್ಳಲಿ. ನನಗೆ ಬಚ್ಚಾ ಅನ್ನೋ ನೀವು ಅತೀ ಬುದ್ಧಿವಂತರಿದ್ದೀರಿ. ನನಗೆ, ಪಂಚಮಸಾಲಿ ಶ್ರೀಗಳು, ಸರ್ಕಾರದ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ಮುಂದೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು. ಈ ಮೂಲಕ ಶಾಸಕ ಯತ್ನಾಳ ಹೆಸರೆತ್ತದೆ ಕಿಡಿಕಾರಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಯಾವ ಸಮಾಜಕ್ಕೂ ಅನ್ಯಾಯವಾಗದಂತೆ ಅಗತ್ಯ ಕ್ರಮಕೈಗೊಳ್ಳುತ್ತದೆ. ಯಾವುದೇ ಸಮಾಜದ ಈಗಿರುವ ಮೀಸಲಾತಿ ಕಿತ್ತು, ಬೇರೊಂದು ಸಮಾಜಕ್ಕೆ ನೀಡುವುದಿಲ್ಲ. ಪಂಚಮಸಾಲಿ ಸಮಾಜಕ್ಕೆ 2ಎ ಬದಲು 2ಡಿ ಮಾಡಿರುವುದರಿಂದ ಯಾವುದೇ ತೊಂದರೆ ಇಲ್ಲ. ಮೀಸಲಾತಿ ಹೆಚ್ಚಳವಾಗಲಿದೆ. ಆದರೆ, ಎಷ್ಟುಹೆಚ್ಚಳವಾಗುತ್ತದೆ ಎಂಬುವುದು ಮಾರ್ಚ್ ಒಳಗಾಗಿ ಸ್ಪಷ್ಟವಾಗಲಿದೆ ಎಂದರು.
ನಾಟಕ ಮಾಡುವ ವೇಳೆಯೆ ಹೃದಯಘಾತದಿಂದ ಕುಸಿದು ಬಿದ್ದು ಪ್ರಾಣಬಿಟ್ಟ ಕಲಾವಿದ!
ಸೀಡಿ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿಕೊಂಡು ನಿರಾಣಿ ಸಚಿವರಾಗಿದ್ದಾರೆ ಎಂಬ ಯತ್ನಾಳರ ಆರೋಪಕ್ಕೆ ಸಂಬಂಧಿಸಿದ ಪ್ರಶ್ನೆಗೆ, ನಾನು ಸೀಡಿ ರಾಜಕಾರಣಿಯಲ್ಲ. ಸೀಡಿ ವಿಷಯವಾಗಿ ಯಾರು ತಡೆಯಾಜ್ಞೆ ತಂದಿದ್ದಾರೋ, ಅವರಿಗೆ ಈ ಸೀಡಿ ರಾಜಕಾರಣ ಗೊತ್ತಿದೆಯೇ ಹೊರತು ನನಗಲ್ಲ ಎಂದು ಲೇವಡಿ ಮಾಡಿದರು. ನಿಮಗೆ ತಾಕತ್ತಿದ್ದರೆ ಗೆದ್ದು ಬನ್ನಿ, ನಾನು ಹೇಗೆ ಗೆದ್ದು ಬರಬೇಕು ಎಂಬುದು ನನಗೆ ಗೊತ್ತಿದೆ. ಬೇರೆ ಪಕ್ಷದಲ್ಲಿ ಇದ್ದಾಗ ಯಾವ ರೀತಿ ಟೋಪಿ ಹಾಕಿಕೊಂಡು ಹಿಂದುಗಳ ವಿರುದ್ಧ ವಾಗ್ದಾಳಿ ನಡೆಸಿದ್ದೀರಿ. ಈಗ ಟೋಪಿ ತೆಗೆದು ಉಳಿದವರನ್ನು ಬೈಯುತ್ತಿದ್ದೀರಿ. ನಿಮಗೆ ಎರಡು ನಾಲಿಗೆಯಲ್ಲವೇ ಎಂದು ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.