ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಗುರಿಯನ್ನು ಬಿಜೆಪಿ ಇರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾ. 18ರಿಂದ ಮೂರು ದಿನ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಹೇಳಿದರು.
ಕಾರವಾರ (ಮಾ.9) : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಗುರಿಯನ್ನು ಬಿಜೆಪಿ ಇರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾ. 18ರಿಂದ ಮೂರು ದಿನ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಹೇಳಿದರು.
ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ. 18ರಂದು ಸಂಜೆ 6 ಗಂಟೆಗೆ ಹಳಿಯಾಳದಲ್ಲಿ, 19ರಂದು ಬೆಳಗ್ಗೆ 11 ಗಂಟೆಗೆ ಯಲ್ಲಾಪುರ, ಮಧ್ಯಾಹ್ನ 3 ಗಂಟೆಗೆ ಅಂಕೋಲಾ, ಬಳಿಕ ಕುಮಟಾದಲ್ಲಿ ಸಾರ್ವಜನಿಕ ಸಭೆ, 20ರಂದು ಬೆಳಗ್ಗೆ ಭಟ್ಕಳದ ಮುರುಡೇಶ್ವರ, ಸಂಜೆ 3 ಗಂಟೆಗೆ ಶಿರಸಿಯಲ್ಲಿ ರೋಡ್‌ಶೋ(Road show) ನಡೆಯಲಿದೆ. ರಾಜ್ಯದ ಪ್ರಮುಖರು, ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಉತ್ತರ ಕನ್ನಡ(Uttara Kannada) ಜಿಲ್ಲೆಯ 6 ವಿಧಾನಸಭಾ ಕ್ಷೇತ್ರ(Assembly constituency)ದಲ್ಲಿ ಗೆಲುವು ಸಾಧಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
undefined
ಕಮಿಷನ್ ಆರೋಪ; ಮಾಧವ್ ನಾಯ್ಕ್ ವಿರುದ್ಧ ₹5 ಕೋಟಿ ಮಾನನಷ್ಟ ಕೇಸ್ ದಾಖಲಿಸಿದ ಶಾಸಕಿ ರೂಪಾಲಿ ನಾಯ್ಕ್
ವಿಜಯ ಸಂಕಲ್ಪ ಯಾತ್ರೆ(BJP Vijayasankalpa yatre)ಯ ಭಾಗವಾಗಿ ಆರು ಕ್ಷೇತ್ರದಲ್ಲೂ ಸಮಾವೇಶ ಕೂಡಾ ಹಮ್ಮಿಕೊಳ್ಳಲಾಗಿದೆ. ಮಾ. 10ರಂದು ಕಾರವಾರಲ್ಲಿ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶವಿದ್ದು, 14 ಸಂಘಟನಾತ್ಮಕ ಮಂಡಲ ಮಹಿಳಾ ಮೋರ್ಚಾದ ಪ್ರತಿನಿಧಿಗಳು ಭಾಗವಹಿಸುವರು. 14ರಂದು ಯಲ್ಲಾಪುರದಲ್ಲಿ ಎಸ್‌ಟಿ ಸಮಾವೇಶ ನಿಗದಿಯಾಗಿದೆ. ಹಿಂದುಳಿದ ವರ್ಗ, ಯುವಮೋರ್ಚಾ, ರೈತ ಸಮಾವೇಶ, ಎಸ್ಸಿ ಮೋರ್ಚಾ ಸಮಾವೇಶ ಕೂಡಾ ಮುಂದಿನ ದಿನದಲ್ಲಿ ಬೇರೆ ಬೇರೆ ಭಾಗದಲ್ಲಿ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ಸಂಸದ ಅನಂತಕುಮಾರ ಹೆಗಡೆ(MP Anantakumar hegde) ಬಗ್ಗೆ ಪ್ರಶ್ನಿಸಿದಾಗ, ಬಿಜೆಪಿಯೊಂದಿಗೆ ವೈಮನಸ್ಸು ಆಗಿಲ್ಲ. ಪಕ್ಷದ ಕಾರ್ಯಕ್ರಮದಲ್ಲಿ ಇರಬೇಕು ಎನ್ನುವ ಸೂಚನೆಯಿದೆ. ಅವರು ಆಗಮಿಸುವ ನಿರೀಕ್ಷೆಯಲ್ಲಿದ್ದೇವೆ. ಚುನಾವಣೆಯಲ್ಲಿ ಕೂಡಾ ಸಕ್ರೀಯರಾಗಿ ಕೆಲಸ ಮಾಡುತ್ತಾರೆ ಎನ್ನುವ ಭರವಸೆಯಿದೆ. ಕಾರ್ಯಕರ್ತರಿಗೆ ಸೂಚನೆ ನೀಡುವಂತೆ, ಜನಪ್ರತಿನಿಧಿಗಳಿಗೂ ನೀಡುತ್ತದೆ ಎಂದರು.
ಪಕ್ಷದಲ್ಲಿ ಯಾವುದೇ ಗೊಂದಲ, ಅಸಮಾಧಾನ ಇಲ್ಲ. ಕಾರವಾರದ ಶಾಸಕರ ಬಗ್ಗೆ ಜಿಪಂನಲ್ಲಿ ಮಾಜಿ ಶಾಸಕರು ಅವಹೇಳನ ಮಾಡಿದ ಘಟನೆಯನ್ನು ಮಹಿಳಾ ಮೋರ್ಚಾ ಖಂಡಿಸಿದೆ. ಪ್ರತಿಭಟನೆ ಮಾಡಿದೆ. ಜಿಲ್ಲೆಯ ಮುಖಂಡರು ನೈತಿಕವಾಗಿ ಬೆಂಬಲ ನೀಡಿದ್ದಾರೆ. ಘಟನೆ ನಡೆದ ಮರುದಿನವೇ ವಸ್ತುಸ್ಥಿತಿಯ ಬಗ್ಗೆ ರಾಜ್ಯ ಸಮಿತಿಗೆ ಮಾಹಿತಿ ನೀಡಲಾಗಿದೆ. ಪಕ್ಷ ಸದಾ ಪಕ್ಷದ ಜನಪ್ರತಿನಿಧಿಗಳ, ಕಾರ್ಯಕರ್ತರ ಜತೆಗೆ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ಹಳಿಯಾಳದಲ್ಲಿ ಬಿಜೆಪಿ ಕಾರ್ಯಾಲಯ ಪ್ರಾರಂಭಿಸಿದ ಬಗ್ಗೆ ಕೇಳಿದಾಗ, ಕಚೇರಿ ಮಾಡಿರುವುದು ಗಮನಕ್ಕೆ ಬಂದಿದೆ. ಪಕ್ಷದ ಜಿಲ್ಲಾ ಘಟಕ ಕೂಡಾ ನೋಟಿಸ್ ನೀಡುತ್ತಿದೆ. ಎಸ್.ಆರ್ ಪಾಟೀಲರು ಪಕ್ಷದಲ್ಲಿ ಇದ್ದರೂ ಸಕ್ರೀಯರಾಗಿ ಇರಲಿಲ್ಲ. ಟಿಕೆಟ್ ನೀಡುವುದು ವರಿಷ್ಠರ ಅಂತಿಮ ನಿರ್ಧಾರವಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್‌ನಿಂದ ಸುಳ್ಳು ಆಶ್ವಾಸನೆ; ಶಿರಸಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ
ಶಾಸಕಿ ರೂಪಾಲಿ ನಾಯ್ಕ, ಎಂಎಲ್‌ಸಿ ಗಣಪತಿ ಉಳ್ವೇಕರ, ನಗರಸಭೆ ಅಧ್ಯಕ್ಷ ಡಾ. ನಿತಿನ ಪಿಕಳೆ, ಜಿಲ್ಲಾ ವಕ್ತಾರ ನಾಗರಾಜ ನಾಯಕ, ಪ್ರಮುಖರಾದ ಆರ್.ಡಿ. ಹೆಗಡೆ, ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಸ್ ಗುನಗಿ, ನಗರ ಘಟಕದ ಅಧ್ಯಕ್ಷ ನಾಗೇಶ ಕುರ್ಡೇಕರ ಇದ್ದರು.