ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಬಳ್ಳಾರಿಯಲ್ಲಿ ಶುರುವಾಗಿದೆ ದ್ವೇಷದ ರಾಜಕಾರಣ. ಕಾಂಗ್ರೆಸ್ ಶಾಸಕನಿಗೆ ಬಿಜೆಪಿ ಬೆಂಬಲಿಗರು ಜೀವ ಬೆದರಿಕೆ ಹಾಕಿರುವ ಘಟನೆ ಬಳ್ಳಾರಿಯ ರಿಮ್ಯಾಂಡ್ ಹೋಂ ಬಳಿ ನಡೆದ ಘಟನೆ
ಬಳ್ಳಾರಿ (ಮೇ.14) : ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಬಳ್ಳಾರಿಯಲ್ಲಿ ಶುರುವಾಗಿದೆ ದ್ವೇಷದ ರಾಜಕಾರಣ. ಕಾಂಗ್ರೆಸ್ ಶಾಸಕನಿಗೆ ಬಿಜೆಪಿ ಬೆಂಬಲಿಗರು ಜೀವ ಬೆದರಿಕೆ ಹಾಕಿರುವ ಘಟನೆ ಬಳ್ಳಾರಿಯ ರಿಮ್ಯಾಂಡ್ ಹೋಂ ಬಳಿ ನಡೆದ ಘಟನೆ
ಮತ ಎಣಿಕೆ ಕೇಂದ್ರದಿಂದ Rallyಯಲ್ಲಿ ಬರುತ್ತಿದ್ದ ಶಾಸಕ ನಾಗೇಂದ್ರ.ಈ ವೇಳೆ ವಿಧಾನಸಭಾ ಚುನಾವಣೆ ಗೆಲುವಿನ ನೆಪದಲ್ಲಿ ಶುಭಾಶಯ ಕೋರಲು ಬೈಕ್‌ನಲ್ಲಿ ಶಾಸಕರಿಗೆ ಎದುರು ಬಂದಿದ್ದ ನಾಲ್ವರು. ಶುಭಾಶಯ ಹೇಳುವ ನೆಪದಲ್ಲಿ ಜೀವಬೆದರಿಕೆ ಹಾಕಲಾಗಿದೆ.
ಅಭೂತಪೂರ್ವ ಗೆಲುವು: ನಂದಿನಿ ಪೇಡಾ ಹಂಚಿ ಕೈ ನಾಯಕರ ಸಂಭ್ರಮ
ಬೈಕ್‌ನಲ್ಲಿ ಬಂದ ನಾಲ್ವರು ಬಳಿ ಮಾರಾಕಾಸ್ತ್ರ ನೋಡಿ ಅಲರ್ಟ್ ಆದ ಭದ್ರತಾ ಸಿಬ್ಬಂದಿ ಮುನ್ಸೂಚನೆ ಅರಿತು ನಾಲ್ವರ ಮೇಲೆ ಭದ್ರತಾ ಸಿಬ್ಬಂದಿಯಿಂದ ಹಲ್ಲೆ. ರಮೇಶ್ ಮತ್ತು ವೆಂಕಟೇಶ್ ರನ್ನ ಹಿಗ್ಗಾಮುಗ್ಗ ಥಳಿಸಿದ ಶಾಸಕರ ಭದ್ರತಾ ಸಿಬ್ಬಂದಿ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬಳ್ಳಾರಿಯ ಕೌಲಬಜಾರ್ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಘಟನೆಯಲ್ಲಿ ಇನ್ನಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ.
ಕರ್ನಾಟಕದಲ್ಲಿ ಪ್ರೀತಿ ಅಂಗಡಿ ಮಾತ್ರ ತೆಗೆಯುತ್ತೇವೆ; ದ್ವೇಷದ ಅಂಗಡಿಗೆ ಬೀಗ ಜಡಿಯುತ್ತೇವೆ: ಸುರ್ಜೇವಾಲ
ಶಾಸಕರಿಗೆ ಜೀವ ಬೆದರಿಕೆಯೊಡ್ಡಿದ ಬೆನ್ನಲ್ಲೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ . ಶಾಸಕರಿಗೆ ಎಸ್ಕಾರ್ಟ್ ವ್ಯವಸ್ಥೆ ನೀಡಲಾಗಿದೆ.