ಇಂದು ಡಿಕೆಶಿ ನಾಮಪತ್ರ ಸಲ್ಲಿಕೆ: ಕನಕಪುರಕ್ಕೆ ಬಂದು ನೋಡಿ ಎಂದ ಬಂಡೆ

Published : Apr 17, 2023, 09:07 AM ISTUpdated : Apr 17, 2023, 09:11 AM IST
ಇಂದು ಡಿಕೆಶಿ ನಾಮಪತ್ರ ಸಲ್ಲಿಕೆ: ಕನಕಪುರಕ್ಕೆ ಬಂದು ನೋಡಿ ಎಂದ ಬಂಡೆ

ಸಾರಾಂಶ

ರಾಜ್ಯದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣಾ ಅಖಾಡ ಗರಿಗೆದರಿದ್ದು, ಇಂದು ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ,  ಕನಕಪುರಕ್ಕೆ ಬನ್ನಿ ನೋಡಿ ಆನಂತರ ಮಾತನಾಡೋಣ ಎಂದರು

ಬೆಂಗಳೂರು: ರಾಜ್ಯದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣಾ ಅಖಾಡ ಗರಿಗೆದರಿದ್ದು, ಇಂದು ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ,  ಕನಕಪುರಕ್ಕೆ ಬಂದು ನೋಡಿ ಆನಂತರ ಮಾತನಾಡೋಣ,  ಕನಕಪುರದ ಜನ ನನ್ನನ್ನು ಸಾಕಿ ಬೆಳಸಿ ಇಲ್ಲಿವರೆಗೂ ತಂದಿದ್ದಾರೆ. ಆ ಎಲ್ಲಾ ಜನತೆಯ ಆಶೀರ್ವಾದ ಪಡೆಯೋದಕ್ಕೆ ಹೋಗುತ್ತಿದ್ದೇನೆ.  ಅವರ ಆಶೀರ್ವಾದದಿಂದ ಇಲ್ಲಿಯವರೆಗೂ ಬೆಳೆದಿದ್ದೇನೆ.  ಅವರು ಮಕ್ಕಳು ಸಾಕಿದ ಹಾಗೆ ನನ್ನನ್ನು ಸಾಕಿದ್ದಾರೆ  ಎಂದು ಹೇಳಿದರು. 

ಇದೇ ವೇಳೆ  ಜಗದೀಶ್ ಶೆಟ್ಟರ್ ಕಾಂಗ್ರೆಸ್ (COngress)ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಎಐಸಿಸಿ ಅಧ್ಯಕ್ಷರು ಬಂದು ಮಾಧ್ಯಮಗೋಷ್ಠಿ ನಡೆಸಲಿದ್ದಾರೆ. 
ಎಐಸಿಸಿ ಅಧ್ಯಕ್ಷರು ಕಾಂಗ್ರೆಸ್ ಆಫೀಸಿಗೆ ಬಂದು ಪ್ರೆಸ್ ಮೀಟ್ ಮಾಡ್ತಾರೆ ಅಂದ್ರೆ ನೀವೇ ಅದನ್ನ ಅರ್ಥ ಮಾಡಿಕೊಳ್ಳಿ ನಾನೇನು ಅದನ್ನ ಹೇಳಬೇಕಾಗಿಲ್ಲ.  ಕರ್ನಾಟಕ ರಾಜ್ಯದ ರಾಜಕಾರಣಕ್ಕೆ ಇವತ್ತು ಹೊಸ ಚಿತ್ರಣ ಸಿಕ್ತಿದೆ. ಬಿಜೆಪಿಯವರು ಪಕ್ಷ ಬೆಳೆಸಿ ಕಟ್ಟಿ ಬೆಳೆಸಿದ ನಾಯಕರನ್ನ ಇವತ್ತು ಅವಮಾನದಿಂದ ನೋಡ್ತಿದ್ದಾರೆ. ಅವರೇ ಬಿಜೆಪಿ ಸರಿ ಇಲ್ಲ ಎಂದು ತೀರ್ಮಾನ ಮಾಡುತ್ತಿದ್ದಾರೆ ಎಂದರೆ ಅರ್ಥಮಾಡಿಕೊಳ್ಳಿ ಎಂದು ಡಿಕೆಶಿ ಹೇಳಿದ್ದಾರೆ. 

ನಿವೃತ್ತಿಯಾದರೂ ಗೌರವಯುತವಾಗಿ ಆಗಬೇಕು: ಜಗದೀಶ ಶೆಟ್ಟರ್‌

ಶೆಟ್ಟರ್ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ(DK Shivakumar), ನಾನು ಟಿವಿಯಲ್ಲಿ ನೋಡಿದೆ ಜಗದೀಶ್ ಶೆಟ್ಟರ್ (Jagadish Shettar) ಪಕ್ಷ ಬಿಟ್ಟು ಹೋಗಬಾರದು ಅಂತ ಯಡಿಯೂರಪ್ಪ (BSY) ಹೇಳುತ್ತಿದ್ದರು. ಈ ಹಿಂದೆ ಯಡಿಯೂರಪ್ಪನವರು ಸಿಎಂ ಆದ  ಬಿಜೆಪಿ ಬಿಟ್ಟು ಕೆಜೆಪಿ (KJP) ಕಟ್ಟಿದ್ರು ಆಗ ಏನೇನ್ ಮಾತನಾಡಿದರು ಎಂಬುದನ್ನು ನೋಡಿದ್ದೇವೆ  ಎಂದರು. 

ಕಾಂಗ್ರೆಸ್ ವಿಮಾನದಲ್ಲಿ ಶೆಟ್ಟರ್: ಇಂದು 'ಕೈ' ಹಿಡಿಯಲಿರುವ ಕಮಲ ನಾಯಕ

ಎಸ್ಎಂ ಕೃಷ್ಣ ಅಧ್ಯಕ್ಷರಾಗಿದ್ದಾಗ ವೀರಶೈವ ಲಿಂಗಾಯಿತರು (Lingayta) ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಕೊಟ್ಟರು. ಈಗ ನಾನು ಅಧಯಕ್ಷನಾಗಿದ್ದೇನೆ.  ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವಂತ ಕೆಲಸ ನಾನು ಮಾಡುತ್ತೇನೆ. ನನಗೆ ವಿಶ್ವಾಸ ಇದೆ ನಮ್ಮ ಅಜ್ಜನ ಆಶೀರ್ವಾದದಿಂದ  ಎಲ್ಲಾ ಧರ್ಮದವರಿಗೆ, ವೀರಶೈವರು ಲಿಂಗಾಯಿತರು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ  ಕರ್ನಾಟಕ ರಾಜ್ಯದಲ್ಲಿ ಶಾಂತಿಯ ತೋಟ ನಿರ್ಮಾಣ ಮಾಡುತ್ತೇವೆ  ಅಭಿವೃದ್ಧಿಶೀಲ ಕರ್ನಾಟಕ ರಾಜ್ಯವನ್ನು ಮಾಡುವುದೇ ನಮ್ಮ ಸಂಕಲ್ಪ ಎಂದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೇರಳ ನಿಯೋಗ ಕೋಗಿಲು ಬಡಾವಣೆಗೆ ಬಂದಿದ್ದು ರಾಜಕಾರಣ ಮಾಡಲು, ಹಣವನ್ನೇನು ಕೊಟ್ಟಿಲ್ಲ; ಸಚಿವ ಜಮೀರ್ ಕಿಡಿ!
ರಾಜ್ಯದಲ್ಲಿ ಡ್ರಗ್ ಫ್ಯಾಕ್ಟರಿಗಳ ಅಟ್ಟಹಾಸ: ಗುಪ್ತಚರ ಇಲಾಖೆ ನಿದ್ದೆ ಮಾಡ್ತಿದೆಯೇ?- ಆರ್. ಅಶೋಕ್