
ಬೆಂಗಳೂರು (ಮೇ.9): ಸಿದ್ದರಾಮಯ್ಯ, ಪ್ರತಾಪ್‌ಗೌಡ ಪಾಟೀಲ್, ಸುಭಾಷ್ ಗುತ್ತೇದಾರ್.. ರಿಂದ ಡಿಎಸ್ ಹೊಳಗೇರಿವರೆಗೆ 2018ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದೇ ಹೆಚ್ಚು ಅನ್ನೋದಾಗಿತ್ತು. ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ ಗೆಲುವಿನ ಅಂತರ ಕೇವಲ 213 ಮತಗಳಾಗಿದ್ದರೆ, ಲಿಂಗಸಗೂರಿನ ಶಾಸಕ ಡಿಎಸ್ ಹೊಳಗೇರಿ ಅವರ ಗೆಲುವಿನ ಅಂತರ 4946 ಮತಗಳಿಂದ ಬಂದಿತ್ತು. ಅಂದು ಈ ಕ್ಷೇತ್ರದ ಮತದಾರರು ಇನ್ನಷ್ಟು ಪ್ರಜ್ಞಾವಂತರಾಗಿ ಮತ ಚಲಾಯಿಸಿದ್ದರೆ, ಫಲಿತಾಂಶ ಏನು ಬೇಕಾದರೂ ಆಗಬಹುದಿತ್ತು. ಹಾಗಾಗಿ ಚುನಾವಣೆ ಎಂದರೆ, ಒಂದೊಂದು ವೋಟ್ ಕೂಡ ಇಂಪಾರ್ಟೆಂಟ್. ನಿಮ್ಮ ಮತಹಕ್ಕನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ ಅನ್ನೋದಕ್ಕೆ ಮುಖ್ಯ ಕಾರಣ, 2018ರಲ್ಲಿ ಕನಿಷ್ಠ 25 ಕ್ಷೇತ್ರಗಳಲ್ಲಿ ವಿಜೇತ ಅಭ್ಯರ್ಥಿಗಳ ಗೆಲುವಿನ ಅಂತರ ಶೇ. 3..! ಅದರಲ್ಲಿ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ ಅಂತರ ಶೇ. 0.2 ಆಗಿತ್ತು. ನಿಮಗೆ ಅರ್ಹ ಎನಿಸುವ ಮತದಾರರನ್ನು ಆಯ್ಕೆ ಮಾಡುವ ಅವಕಾಶ ನಿಮಗೆ ಸಿಗೋದು ಇದೊಂದೇ ಸಮಯದಲ್ಲಿ ಮಾತ್ರ. ಹಾಗಾಗಿ ನಿಮ್ಮ ಮತ ಬಹಳ ಅಮೂಲ್ಯ.
ಸೋಲಿನಿಂದ ಬಚಾವ್ ಆದವರು ಯಾರೆಲ್ಲ?
ಮಸ್ಕಿ: ಎಸ್‌ಟಿ ಕ್ಷೇತ್ರವಾಗಿದ್ದ ಮಸ್ಕಿಯಲ್ಲಿ ಕಾಂಗ್ರೆಸ್‌ನ ಪ್ರತಾಪ್ ಗೌಡ ಪಾಟೀಲ್ ಕೇವಲ 213 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಕ್ಷೇತ್ರದಲ್ಲಿ 1.95 ಲಕ್ಷ ಮತದಾರರ ಪೈಕಿ ಕೇವಲ 1.34 ಲಕ್ಷ ಜನ ಮಾತ್ರವೇ ಮತದಾನ ಮಾಡಿದ್ದರು. ಇವರ ಗೆಲುವಿನ ಮಾರ್ಜಿನ್ ಕೇವಲ 0.2!
ಪಾವಗಡ: ಎಸ್‌ಸಿ ಕ್ಷೇತ್ರವಾಗಿದ್ದ ಪಾವಗಡದಲ್ಲಿ ಕಾಂಗ್ರೆಸ್‌ನ ವೆಂಕಟರಮಣಪ್ಪ ಕೇವಲ 409 ಮತಗಳ ಅಂತರದಿಂದ ಗೆದ್ದಿದ್ದರು. ಇಡೀ ಕ್ಷೇತ್ರದ 1.94 ಲಕ್ಷ ಮತದಾರರ ಪೈಕಿ 1.62 ಲಕ್ಷ ಮಂದಿ ಮಾತ್ರವೇ ಮತ ಚಲಾಯಿಸಿದ್ದರು. ಇವರ ಗೆಲುವಿನ ಮಾರ್ಜಿನ್ ಕೇವಲ ಶೇ. 0.3!
ಹಿರೇಕೆರೂರ್: ಕಾಂಗ್ರೆಸ್‌ನ ಬಸವನಗೌಡ ಪಾಟೀಲ್ 555 ಮತಗಳ ಅಂತರದಿಂದ ಗೆದ್ದಿದ್ದರು. ಇಡೀ ಕ್ಷೇತ್ರದ 1.75 ಲಕ್ಷ ಮತದಾರರ ಪೈಕಿ 1.49 ಲಕ್ಷ ಮಂದಿ ಮಾತ್ರವೇ ಮತ ಚಲಾವಣೆ ಮಾಡಿದ್ದರು. ಬಹುಶಃ ಪೂರ್ಣ ಮತದಾನವಾಗಿದ್ದರೆ, ಫಲಿತಾಂಶ ಏನು ಬೇಕಾದರೂ ಅಗುವ ಸಾಧ್ಯತೆ ಇದ್ದವು.
ಕುಂದಗೋಳ: ಸಿಎಸ್ ಶಿವಳ್ಳಿ ಈ ಕ್ಷೇತ್ರದಲ್ಲಿ ಕೇವಲ 634 ಮತಗಳಿಂದ ಗೆದ್ದಿದ್ದರು. 1.84 ಲಕ್ಷ ಮತದಾರರ ಪೈಕಿ 1.46 ಲಕ್ಷ ಮಂದಿ ಮಾತ್ರವೇ ಮತಹಕ್ಕು ಚಲಾವಣೆ ಮಾಡಿದ್ದರು. ಇವರ ಗೆಲುವಿನ ಮಾರ್ಜಿನ್ ಶೇ. 0.4!
ಅಳಂದ: ಬಿಜೆಪಿಯ ಸುಭಾಷ್ ಆರ್ ಗುತ್ತೇದಾರ್ ಈ ಕ್ಷೇತ್ರದಲ್ಲಿ 697 ಮತಗಳ ಗೆಲುವು ಕಂಡಿದ್ದರು. ಇಡೀ ಕ್ಷೇತ್ರದಲ್ಲಿ ಶೇ. 69.3 ರಷ್ಟು ಮತದಾನ ಮಾತ್ರವೇ ನಡೆದಿತ್ತು. ಇವರ ಗೆಲುವಿನ ಮಾರ್ಜಿನ್ ಕೂಡ ಶೇ. 0.4!
ಯಲ್ಲಾಪುರ: ಕಾಂಗ್ರೆಸ್‌ನ ಶಿವರಾಮ್ ಹೆಬ್ಬಾರ್ ಈ ಕ್ಷೇತ್ರದಲ್ಲಿ 1483 ಮತಗಳಿಂದ ಜಯ ಸಾಧಿಸಿದ್ದರು. 1.68 ಲಕ್ಷ ಮತದಾರರ ಪೈಕಿ, 1.38 ಲಕ್ಷ ಮತದಾರರು ಮಾತ್ರವೇ ಮತ ಚಲಾವಣೆ ಮಾಡಿದ್ದರು.
ಸಿಂಧನೂರು: ಜೆಡಿಎಸ್ ವೆಂಕಟರಾವ್ ನಾಡಗೌಡ 71514 ಮತಗಳನ್ನು ಪಡೆದುಕೊಂಡಿದ್ದರೆ, ಇವರ ಗೆಲುವಿನ ಅಂತರ ಕೇವಲ 1597 ಮತಗಳು. ಇಡೀ ಕ್ಷೇತ್ರದಲ್ಲಿ ಶೇ. 70.9ರಷ್ಟು ಮತ ಮಾತ್ರವೇ ಚಲಾವಣೆ ಅಗಿದ್ದವು.
ಬಾದಾಮಿ: ಕಾಂಗ್ರೆಸ್‌ನ ಸಿದ್ಧರಾಮಯ್ಯ ಸ್ಪರ್ಧಿಸಿದ್ದ ಕಾರಣಕ್ಕೆ ಗಮನಸೆಳೆದಿದ್ದ ಈ ಕ್ಷೇತ್ರದಲ್ಲಿ, ಮಾಜಿ ಮುಖ್ಯಮಂತ್ರಿ ಕೇವಲ 1696 ಮತಗಳ ಅಂತರದಲ್ಲಿ ಗೆದ್ದಿದ್ದರು. 2.14 ಲಕ್ಷ ಮತದಾರರ ಪೈಕಿ ಕೇವಲ 1.61 ಲಕ್ಷ ಮತದಾರರು ತಮ್ಮ ಹಕ್ಕು ದಾಖಲಿಸಿದ್ದರು
ಕೃಷ್ಣರಾಜನಗರ: ಜೆಡಿಎಸ್‌ನ ಸಾರಾ ಮಹೇಶ್ ಈ ಕ್ಷೇತ್ರದಲ್ಲಿ ಕೇವಲ 1779 ಮತಗಳ ಅಂತರದಲ್ಲಿ ಗೆಲುವು ಕಂಡಿದ್ದರು. ಇವರ ಗೆಲುವಿನ ಮಾರ್ಜಿನ್ ಕೇವಲ ಶೇ. 1ರಷ್ಟು ಮಾತ್ರವೇ ಆಗಿತ್ತು.
ಶೃಂಗೇರಿ: ಕಾಂಗ್ರೆಸ್‌ನ ಟಿಡಿ ರಾಜೇಗೌಡರ ಗೆಲುವಿನ ಅಂತರ 1989 ಮತಗಳು. ಇಡೀ ಕ್ಷೇತ್ರದಲ್ಲಿ 1.62 ಲಕ್ಷ ಮತದಾರರ ಪೈಕಿ 1.36 ಲಕ್ಷ ಮತಗಳಷ್ಟೇ ದಾಖಲಾಗಿದ್ದವು.
ಮೋದಿ ಸೇರಿ ಬಿಜೆಪಿ ನಾಯಕರಿಂದ 437 ರ‍್ಯಾಲಿ, 138 ರೋಡ್ ಶೋ..!
ಅದರೊಂದಿಗೆ ತುರುವೇಕೆರೆಯ ಎಎಸ್ ಜಯರಾಮ್ (2049), ಅಥಣಿಯ ಮಹೇಶ್ ಕುಮಟಳ್ಳಿ (2331), ಬಳ್ಳಾರಿಯ ಬಿ. ನಾಗೇಂದ್ರ (2679), ವಿಜಯನಗರದ ಎಂ.ಕೃಷ್ಣಪ್ಪ (2775), ಜಮಖಂಡಿಯ ಸಿದ್ದು ನ್ಯಾಮಗೌಡ (2795), ರಾಮದುರ್ಗದ ಮಹಾದೇವಪ್ಪ ಯಾದವಾಡ (2875), ಬಸವನಬಾಗೇವಾಡಿಯಲ್ಲಿ ಶಿವಾನಂದ ಪಾಟೀಲ್ (3186), ದೇವರ ಹಿಪ್ಪರಗಿಯಲ್ಲಿ ಸೋಮನಗೌಡ ಬಿ ಪಾಟೀಲ್ (3353), ಹನೂರಿನಲ್ಲಿ ಆರ್.ನರೇಂದ್ರ (3513), ಶಿವಮೊಗ್ಗ ಗ್ರಾಮೀಣದಲ್ಲಿ ಕೆಬಿ ಅಶೋಕ್ ನಾಯ್ಕ್ (3777), ದಾವಣಗೆರೆ ಉತ್ತರದಲ್ಲಿ ಎಸ್‌ಎ ರವೀಂದ್ರನಾಥ್ (4071), ರಾಣಿಬೆನ್ನೂರಿನಲ್ಲಿ ಆರ್.ಶಂಕರ್ (4338), ಚಾಮರಾಜನಗರದಲ್ಲಿ ಸಿ ಪುಟ್ಟರಂಗಶೆಟ್ಟಿ (4913), ಸಕಲೇಶಪುರದಲ್ಲಿ ಎಚ್‌ಕೆ ಕುಮಾರಸ್ವಾಮಿ (4942) ಹಾಗೂ ಲಿಂಗಸುಗೂರಿನಲ್ಲಿ ಡಿಎಸ್ ಹೂಲಗೇರಿ (4946) ಅಲ್ಪ ಮತದಲ್ಲಿ ಗೆದ್ದಿದ್ದರು. ಇದರಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಮತಪ್ರಮಾಣ ಶೇ.85ಕ್ಕಿಂತ ಕಡಿಮೆ ಇದ್ದವು.
Karnataka Election: ಪುಟ್ಟ ಮಗುವಿನೊಂದಿಗೆ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಮಹಿಳೆ !
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.