ಶಾಸಕರ ವೇತನ, ಭತ್ಯೆ ಹೆಚ್ಚಿಸುವ ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ-2025ಕ್ಕೆ ಅನುಮೋದನೆ ನೀಡಲು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ.
ಬೆಂಗಳೂರು (ಮಾ.20): ಸಿಎಂ ಸೇರಿದಂತೆ ರಾಜ್ಯದ ಎಲ್ಲಾ ಶಾಸಕರಿಗೆ ವೇತನ ಮತ್ತು ದಿನ ಭತ್ಯೆ ಹೆಚ್ಚಳವಾಗಿದೆ. ಶಾಸಕರ ವೇತನ, ಭತ್ಯೆ ಹೆಚ್ಚಿಸುವ ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ-2025ಕ್ಕೆ ಅನುಮೋದನೆ ನೀಡಲು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ. ರಾಜ್ಯಪಾಲರು ಗ್ರೀನ್ ಸಿಗ್ನಲ್ ಕೊಟ್ಟ ಕೂಡಲೇ ಸದನದಲ್ಲಿ ವಿಧೇಯಕ ಮಂಡನೆಯಾಗಲಿದೆ. ವಿಧಾನಸಭೆಯಲ್ಲಿ ವಿಧೇಯಕ ಮಂಡನೆಗೂ ಮುನ್ನ ರಾಜ್ಯಪಾಲರ ಅನುಮತಿ ಅಗತ್ಯ ಇತ್ತು.
ಹೀಗಾಗಿ ವಿಧೇಯಕದ ಬಗ್ಗೆ ಪ್ರಸ್ತಾವನೆಯನ್ನು ಸರ್ಕಾರ ಕಳುಹಿಸಿದೆ. ಇದೀಗ ರಾಜ್ಯಪಾಲರಿಂದ ಅನುಮೋದನೆ ಪಡೆದ ಎರಡೂ ವಿಧೇಯಕ ವಿಧಾನಸಭೆಯಲ್ಲಿ ಮಸೂದೆ ಮಂಡನೆ ಸಾಧ್ಯತೆಯಿದೆ. ಶೇ.100 ರಷ್ಟು ಸಂಬಳ ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಮೂಲಕ ಸಿಎಂ, ಸಚಿವರು, ಶಾಸಕರ ಸಂಬಳ ಶೇ. 100 ರಷ್ಟು ಹೆಚ್ಚಳವಾಗಲಿದೆ. ಸದ್ಯ ಭಾರೀ ಪ್ರಮಾಣದಲ್ಲಿ ಜನಪ್ರತಿನಿಧಿಗಳ ಸಂಬಳ ಏರಿಕೆಯಾಗಲಿದೆ.
ಭೂಮಿ ಒತ್ತುವರಿ ಮಾಡಿಲ್ಲದಿದ್ದರೆ ಎಚ್‌ಡಿಕೆಗೆ ಗಾಬರಿ ಏಕೆ?: ಡಿ.ಕೆ.ಶಿವಕುಮಾರ್
ಯಾರ್‍ಯಾರ ಸಂಬಳ ಎಷ್ಟು ಹೆಚ್ಚಳ..?
ಹುದ್ದೆ - ಸದ್ಯದ ವೇತನ - ಪರಿಷ್ಕೃತ ವೇತನ
ಮುಖ್ಯಮಂತ್ರಿ ಸಂಬಳ - 75,000 - 1.50,000
ಸಚಿವರ ಸಂಬಳ - 60,000 - 1.25,000
ಮುಖ್ಯಮಂತ್ರಿ, ಸಚಿವರಿಗೆ ಆತಿಥ್ಯ ಭತ್ಯೆ - 4,50,000 - 5,00,000
ಸಚಿವರಿಗೆ ಮನೆ ಬಾಡಿಗೆ ಭತ್ಯೆ - 1,20,000 - 2,50,000
ರಾಜ್ಯ ಸಚಿವರ ವೇತನ - 50,000 - 75,000
ರಾಜ್ಯ ಸಚಿವರಿಗೆ ಮನೆ ಬಾಡಿಗೆ ಭತ್ಯೆ - 1,20,000 - 2,00,000
ಶಾಸಕರ ವೇತನ - 40,000 - 80,000