'ಬೆಳಗಾವಿ ರಾಜಕಾರಣಿಗಳು ಗಂಡಸರು ಅಲ್ಲ, ಹೆಂಗಸರು ಅಲ್ಲ'

By Suvarna NewsFirst Published Aug 29, 2020, 5:45 PM IST
Highlights

ಬೆಳಗಾವಿ ಜಿಲ್ಲೆಯಲ್ಲಿ ಶುರುವಾಗಿದ್ದ ಸಂಗೊಳ್ಳಿ ರಾಯಣ್ಣ ಮತ್ತು  ಶಿವಾಜಿ ಪ್ರತಿಮೆ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಹೋರಾಟಗಾರ ವಾಟಳ್ ನಾಗರಾಜ್ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
 

ಬೆಳಗಾವಿ, (ಆ.29): ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಗಂಡಸರು ಅಲ್ಲ, ಹೆಂಗಸರು ಅಲ್ಲ ವಿಚಿತ್ರ ರಾಜಕಾರಣಿಗಳು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಲೇವಡಿ ಮಾಡಿದ್ದಾರೆ.

ಇಂದು (ಶನಿವಾರ) ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ಮಾತನಾಡಿದ ವಾಟಾಳ್ ನಾಗರಾಜ್ , ಅಂಗಡಿಯಿಂದ ಹಿಡಿದು ಮುಂಗಟ್ಟುವರೆಗೂ ಎಲ್ಲರದ್ದು ಇದೇ ಪರಿಸ್ಥಿತಿ. ಎಲ್ಲರೂ ಮರಾಠಾ ಏಜೆಂಟರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿವಾದದ ಶಾಂತಿ ಸಭೆ ನಿರ್ಣಯಕ್ಕೆ ವಾಟಾಳ್ ವಿರೋಧ ವ್ಯಕ್ತಪಡಿಸಿದ್ದು, ರಾಯಣ್ಣ ಪ್ರತಿಮೆ ಜಾಗದಲ್ಲಿ ಶಿವಾಜಿ ಸರ್ಕಲ್ ಅಂತಾ ಯಾವನೂ ಪೊಲೀಸ್ ಆಫೀಸರ್ ರಾಜಿ ಮಾಡಿದ್ದು, ಮರಾಠಿಯವರಿಗೆ ಕರ್ನಾಟಕ ಅರ್ಧ ಬರೆದುಕೊಟ್ಟೀರಿ ಏನ್ರಿ?, ಎಂಇಎಸ್ ನವರನ್ನು ಒದ್ದು ಹೊರಗೆ ಹಾಕಿ, ರಾಯಣ್ಣ ಪ್ರತಿಮೆ ಇರೋ ಜಾಗದಲ್ಲಿ ಶಿವಾಜಿ ಸರ್ಕಲ್ ನಾವು ಒಪ್ಪಲ್ಲ ಎಂದರು.

ರಾಯಣ್ಣ V/S ಶಿವಾಜಿ: ಇಂಥಾ ರಾಜಕಾರಣ ಬೇಕಾ?

ಆಗಸ್ಟ್ 31ರಂದು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕ್ತೀವಿ. ಇದಕ್ಕೂ ಬಗ್ಗದಿದ್ದರೇ ಕರ್ನಾಟಕ ಬಂದ್‌ಗೆ ಕರೆ ನೀಡ್ತೀವಿ, ಬೆಳಗಾವಿ ನಮ್ಮದು, ಮರಾಠಿಗರದ್ದು ಶಿವಸೇನೆಯರದ್ದಲ್ಲ. ಬಿ.ಎಸ್.ಯಡಿಯೂರಪ್ಪ ಎಚ್ಚರ ಎಚ್ಚರ ಎಂದ ವಾಟಾಳ್ ನಾಗರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಎಂಇಎಸ್ ನವರನ್ನು ಇರಿಸಲು ಬೆಳಗಾವಿ ಜೈಲಿನಲ್ಲಿ ಜಾಗ ಇಲ್ಲ ಅಂದ್ರೆ ಬೆಂಗಳೂರು ಜೈಲಿಗೆ ಕಳಿಸಿ. ಬಾಳಾ ಠಾಕ್ರೆಗೆ ಕೂಗಿ ಕೂಗಿ ಸಾಕಾಯ್ತು ಈಗ ಉದ್ಧವ್ ಠಾಕ್ರೆ ಕೂಗುತ್ತಿದ್ದಾನೆ. ಯಡಿಯೂರಪ್ಪನವರೇ ನಿಮಗೆ ನಾಲಿಗೆ ಇಲ್ವಾ. ಮರಾಠಿಗರ ವೋಟ್‌ಗಾಗಿ ಕನ್ನಡಿಗರನ್ನು ತುಳಿಯುತ್ತಿದ್ದಾರೆ. ಪ್ರಾಣ ಹೋದರೂ ಶಿವಾಜಿ ಸರ್ಕಲ್ ಮಾಡೋದಕ್ಕೆ ಬಿಡೋದಿಲ್ಲ. ಇನ್ನೂ ಹದಿನೈದು ದಿವಸದಲ್ಲಿ ನಾನು ಬೆಳಗಾವಿ ನಗರಕ್ಕೆ ಎಂಟ್ರಿ ಕೊಡ್ತೀನಿ ಎಂದರು.

ಕನ್ನಡಿಗರ ಮೇಲೆ ಮರಾಠಿಗರು ಚಪ್ಪಲಿ ಎಸೆದಿದ್ದು ಸುಳ್ಳು; ಮರಾಠಿಗರ ಪರ ಜಾರಕಿಹೊಳಿ ಬ್ಯಾಟಿಂಗ್!

ಸುವರ್ಣಸೌಧದಲ್ಲಿ ಅಧೀವೇಶನ ನಡೆಯಲಿ
ಯಾವ ಉದ್ದೇಶಕ್ಕಾಗಿ ಸುವರ್ಣಸೌಧ ನಿರ್ಮಾಣ ಆಯ್ತು ಆ ಉದ್ದೇಶ ಈಡೇರಲಿಲ್ಲ, ಎರಡು ವರ್ಷಗಳಿಂದ ಸುವರ್ಣಸೌಧದಲ್ಲಿ ಅಧಿವೇಶನ ನಡೆದಿಲ್ಲ,ಉತ್ತರ ಕರ್ನಾಟಕ ಬಗ್ಗೆ ಪ್ರಾಮಾಣಿಕ ಚಿಂತನೆ ಇದ್ರೆ ಬೆಂಗಳೂರಲ್ಲಿ ಅಧಿವೇಶನ ನಡೆಸಬೇಡಿ, ಬೆಂಗಳೂರು ಬಿಟ್ಟು ಸುವರ್ಣಸೌಧದಲ್ಲಿ ಅಧಿವೇಶನ ನಡೆಸಿ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಬಗ್ಗೆ ಚರ್ಚೆ ಮಾಡಬಹುದು. ಔರಾದ್ಕರ್ ವರದಿ ಜಾರಿಗೆ ಸಮಗ್ರವಾಗಿ ಚರ್ಚಿಸುವಂತೆ ವಾಟಾಳ್ ಒತ್ತಾಯಿಸಿದರು.

ಈಗಾಗಲೇ ಬಿಡಿಎ ಮಾರಿದ್ದೀರಿ.. ಇನ್ನೊಂದು ವರ್ಷ ಕಳೆದ್ರೆ ಸುವರ್ಣಸೌಧ ಮಾರಿ ಬಿಡ್ತೀರಿ. ಒಳ್ಳೆಯ ದುಡ್ಡು ಬರುತ್ತೆ ಹಂಚುಕೊಳ್ಳಬಹುದು ಅಲ್ವೇ? ಎಂದು ಪ್ರಶ್ನೆ ಮಾಡಿದ ಅವರು ಈ ಸುವರ್ಣಸೌಧ ಮಾರಿದ ಮೇಲೆ ಬೆಂಗಳೂರಿನ ವಿಧಾನಸೌಧ ಮಾರಿ. ಅಲ್ಲೇ ಕಬ್ಬನ್ ಪಾರ್ಕ್ ಇದೆ ಅಲ್ಲಿ ಕುಳಿತುಕೊಳ್ಳಿ ಎಂದು ವಾಟಾಳ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು.

click me!