Karnataka cabinet: ಕಲಘಟಗಿ ಕ್ಷೇತ್ರಕ್ಕೆ ಸಂತೋಷ್ ತಂದ ಲಾಡ್ ಸಚಿವ ಸ್ಥಾನ!

By Kannadaprabha NewsFirst Published May 28, 2023, 11:55 AM IST
Highlights

ಸಂತೋಷ ಲಾಡ್‌ ಅವರಿಗೆ ಪ್ರಸ್ತುತ ಕಾಂಗ್ರೆಸ್‌ ಸರ್ಕಾರದಲ್ಲಿ ಮತ್ತೊಮ್ಮೆ ಸಚಿವರಾಗುವ ಭಾಗ್ಯ ದೊರೆತಿದೆ. ಇದು ಕಲಘಟಗಿ ವಿಧಾನಸಭಾ ಕ್ಷೇತ್ರ ಮಾತ್ರವಲ್ಲದೇ ಇಡೀ ಧಾರವಾಡ ಜಿಲ್ಲೆಗೆ ಶುಭ ಸುದ್ದಿಯು ಹೌದು.

ಬಸವರಾಜ ಹಿರೇಮಠ

ಧಾರವಾಡ (ಮೇ.28) : ಸಂತೋಷ ಲಾಡ್‌ ಅವರಿಗೆ ಪ್ರಸ್ತುತ ಕಾಂಗ್ರೆಸ್‌ ಸರ್ಕಾರದಲ್ಲಿ ಮತ್ತೊಮ್ಮೆ ಸಚಿವರಾಗುವ ಭಾಗ್ಯ ದೊರೆತಿದೆ. ಇದು ಕಲಘಟಗಿ ವಿಧಾನಸಭಾ ಕ್ಷೇತ್ರ ಮಾತ್ರವಲ್ಲದೇ ಇಡೀ ಧಾರವಾಡ ಜಿಲ್ಲೆಗೆ ಶುಭ ಸುದ್ದಿಯು ಹೌದು.

2002ರಲ್ಲಿ ಸಂಡೂರಿನ ಪಟ್ಟಣ ಪಂಚಾಯ್ತಿ ಸದಸ್ಯ ಸ್ಥಾನದಿಂದ ತಮ್ಮ ರಾಜಕೀಯ ಶುರು ಮಾಡಿದ ಸಂತೋಷ ಲಾಡ್‌ಗೆ ಇದೀಗ ಸಿದ್ದರಾಮಯ್ಯನವರ ಸರ್ಕಾರದಲ್ಲಿ 2ನೇ ಬಾರಿಗೆ ಮಂತ್ರಿಭಾಗ್ಯ. ಕೈ ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ಸಂತೋಷ ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರಿನವರು. ಸಂಡೂರಿನ ಪಟ್ಟಣ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಿ 2004ರಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾದವರು.

 

ಕಲಘಟಗಿಗೆ ಸಕ್ಕರೆ ಕಾರ್ಖಾನೆ ತರುವರೇ ಸಂತೋಷ ಲಾಡ್‌!

ಉಚಿತ ಬೋರವೆಲ್‌:

2008ರಲ್ಲಿ ಏಕಾಏಕಿ ಅಲ್ಲಿಂದ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರಕ್ಕೆ ತಮ್ಮ ರಾಜಕೀಯವನ್ನು ವರ್ಗಾಯಿಸಿದ ಲಾಡ್‌ ಕಡಿಮೆ ದಿನಗಳಲ್ಲಿ ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾದವರು. ಜನರ ಸಮಸ್ಯೆಗಳಿಗೆ ಸರ್ಕಾರದಿಂದ ಸೌಲಭ್ಯಗಳ ಜೊತೆಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯ, ದಾನ ಮಾಡಿದ್ದೇ ಜಾಸ್ತಿ. ಸ್ವಂತ ಬೋರವೆಲ್‌ ವಾಹನ ಇಟ್ಟು ಕ್ಷೇತ್ರದ ರೈತರಿಗೆ ಉಚಿತ ಬೋರ್‌ವೆಲ್‌ ಕೊರೆಸಿದ ಹಿರಿಮೆ ಇವರದು. ಹೀಗಾಗಿ ಒಂದಿಷ್ಟುವರ್ಷಗಳ ಕಾಲ ಕ್ಷೇತ್ರದಲ್ಲಿ ಲಾಡ್‌ ತುಂಬ ಪ್ರಸಿದ್ಧಿ ಪಡೆದಿದ್ದರು.

ಇದೇ ಪ್ರಸಿದ್ಧಿಯಲ್ಲಿ ಲಾಡ್‌ ಸರಳವಾಗಿ 2013ರಲ್ಲಿ ಆಯ್ಕೆಯಾದರು. ಜೊತೆಗೆ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಖಾತೆ ಹಾಗೂ ತದನಂತರ ಕಾರ್ಮಿಕ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದರು. ಶಾಸಕರಾಗಿ, ಸಚಿವರಾದರೂ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿದ್ದರಿಂದ 2018ರಲ್ಲಿ ಲಾಡ್‌ ಅವರನ್ನು ಮತದಾರರು ಕೈ ಬಿಟ್ಟರು.

Karnataka Election Results: 11 ಸಾವಿರ ಮತಗಳಿಂದ ಸಂತೋಷ್‌ ಲಾಡ್‌ ಜಯಭೇರಿ

 

ವಿದ್ಯಾರ್ಥಿಗಳಿಗೆ ನೆರವು:

ಸಂತೋಷ ಲಾಡ್‌ ನೂರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ಸಹಕಾರ ನೀಡಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಾವಿರಾರು ವಿದ್ಯಾರ್ಥಿಗಳಿಗೆ ಆನಲೈನ್‌ ಮೂಲಕ ಉಚಿತ ತರಬೇತಿ ಸಹ ತಮ್ಮ ¶ೌಂಡೇಶನ್‌ ವತಿಯಿಂದ ನಡೆಸುತ್ತಿದ್ದಾರೆ. 2018ರ ಅಧಿಕಾರಾವಧಿಯಲ್ಲಿ ಕ್ಷೇತ್ರ ನಿರ್ಲಕ್ಷ್ಯ ಮಾಡಿದ ತಪ್ಪು ತಿದ್ದಿಕೊಂಡ ಲಾಡ್‌ ಕೋವಿಡ್‌ ಹಾಗೂ ಅತಿವೃಷ್ಟಿಕಾಲದಲ್ಲಿ ಮತ್ತೇ ಕ್ಷೇತ್ರದತ್ತ ಗಮನ ಹರಿಸಿದರು. ಕೋವಿಡ್‌ನಲ್ಲಿ ತೊಂದರೆಗೆ ಒಳಗಾದ ನರ್ಸ್‌ಗಳು, ವೈದ್ಯರು, ಅಂಗನವಾಡಿ ಕಾರ್ಯಕರ್ತರು ಹಾಗೂ ಕೋವಿಡ್‌ ವಾರಿಯರ್ಸ್‌ಗಳಿಗೆ ಗೌರವ ಸಲ್ಲಿಸಿದರು. ಸ್ವಾತಂತ್ರೋತ್ಸವದ 75ನೇ ವರ್ಷಾಚರಣೆ ನಿಮಿತ್ತ ಕಲಘಟಗಿ ಕ್ಷೇತ್ರದಲ್ಲಿ ಸುಮಾರು 9 ಕಿ.ಮೀ. ಅಂತರದ ರಾಷ್ಟ್ರಧ್ವಜ ಮೆರವಣಿಗೆ ಮಾಡಿದರು. ಇದರೊಂದಿಗೆ ಮತ್ತೇ ಕ್ಷೇತ್ರದಲ್ಲಿ ಸಂಚರಿಸಿ ಮೊದಲಿನ ಪ್ರಸಿದ್ಧಿಯನ್ನು ಪಡೆದುಕೊಳ್ಳುವ ಮೂಲಕ 2023ರಲ್ಲಿ ಮತ್ತೇ ಶಾಸಕರಾಗಿ ಆಯ್ಕೆಯಾಗಿದ್ದು ಇದೀಗ ಸಚಿವ ಸ್ಥಾನ ಸಹ ಪಡೆದಿದ್ದಾರೆ.

click me!