ಭಗವದ್ಗೀತೆ ಮೇಲೆ ನಂಬಿಕೆ ಇಟ್ಟಷ್ಟೇ, ನಮ್ಮ ಪ್ರಣಾಳಿಕೆ ಮೇಲೆ ನಂಬಿಕೆಯಿಡಿ: ಸಚಿವ ಸುಧಾಕರ್‌

By Govindaraj S  |  First Published Feb 22, 2023, 11:13 AM IST

ಭಗವದ್ಗೀತೆ ಮೇಲೆ ನಂಬಿಕೆ ಇಟ್ಟಷ್ಟೇ, ನಮ್ಮ ಪ್ರಣಾಳಿಕೆ ಮೇಲೆ ನಂಬಿಕೆ ಇಡಬೇಕಾಗುತ್ತೆ. ನಾವು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದನ್ನು ಈಡೇರಿಸುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. 


ಬೆಂಗಳೂರು (ಫೆ.22): ಭಗವದ್ಗೀತೆ ಮೇಲೆ ನಂಬಿಕೆ ಇಟ್ಟಷ್ಟೇ, ನಮ್ಮ ಪ್ರಣಾಳಿಕೆ ಮೇಲೆ ನಂಬಿಕೆ ಇಡಬೇಕಾಗುತ್ತೆ. ನಾವು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದನ್ನು ಈಡೇರಿಸುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. ಕೇಂದ್ರದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ‌ ಡಬಲ್ ಇಂಜಿನ್ ಸರ್ಕಾರ ಹೇಗೆ ಕೆಲಸ ಮಾಡಿದೆ ಅದನ್ನು ಗಮನಿಸಬೇಕು. ಆರ್ಥಿಕವಾಗಿ ಜಗತ್ತಿನ ಅನೇಕ ರಾಷ್ಟ್ರಗಳು ತತ್ತರಿಸ್ತಾ ಇದ್ರೂ, ಉಕ್ರೇನ್ ರಷ್ಯಾದ ಯುದ್ಧ ನಡೆಯುತ್ತಿದ್ದರೂ ನಮ್ಮ ದೇಶದ ಆರ್ಥಿಕ ಪ್ರಗತಿ ಶೇ. 7ರಷ್ಟು ಇದೆ. ಕರ್ನಾಟಕದ ಆರ್ಥಿಕ ಪ್ರಗತಿ ದೇಶದ ಪ್ರಗತಿಗಿಂತ ಉತ್ತಮವಾಗಿದ್ದು, ರಾಜ್ಯದ ಆರ್ಥಿಕ ಪ್ರಗತಿ 7.9% ಇದೆ ಎಂದು ಹೇಳಿದರು.

ನಮ್ಮ ಸರ್ಕಾರವು ಮೂರು ವರ್ಷಗಳಲ್ಲಿ ಅನೇಕ ಸಾಧನೆ ಮಾಡಿದ್ದು, ಮೋದಿ 5 ಟ್ರಿಲಿಯನ್ ಆರ್ಥಿಕ ಗುರಿ ಹೊಂದಿದ್ದಾರೆ. ಯುಪಿ ಸರ್ಕಾರಕ್ಕೆ ಹೋಲಿಕೆ ಮಾಡಿದ್ರೆ ಕರ್ನಾಟಕದಲ್ಲಿ 9 ಪಟ್ಟು ಹೆಚ್ಚು ಹೂಡಿಕೆ ಆಗಿದೆ. ರೈಲ್ವೆಗೆ ಒತ್ತು ನೀಡಲಾಗಿದೆ. ಏರ್ಪೋಟ್‌ಗೆ ಒತ್ತು ನೀಡಲಾಗಿದೆ. ಕೇಂದ್ರ ರಾಜ್ಯ ಸಹಕಾರದಿಂದ ಅನೇಕ ಯೋಜನೆ ತಂದಿದ್ದೇವೆ. ಇದೇ ತಿಂಗಳ 27ಕ್ಕೆ ಶಿವಮೊಗ್ಗದಲ್ಲಿ ಏರ್ಪೋಟ್ ಉದ್ಘಾಟನೆ ಮಾಡಲಾಗುತ್ತಿದ್ದು, ಜೊತೆಗೆ ಬೆಂಗಳೂರು ಮೈಸೂರು ಹೈವೆ ಉದ್ಘಾಟನೆ ಆಗಲಿದೆ ಎಂದು ಸುಧಾಕರ್‌ ತಿಳಿಸಿದರು

Tap to resize

Latest Videos

ಮಂಡ್ಯದಲ್ಲಿ ವಿಜಯೇಂದ್ರಗೆ ಅದ್ಧೂರಿ ಸ್ವಾಗತ: ಹಳ್ಳಿಕಾರ್‌ ತಳಿ ಹೋರಿ ಗಿಫ್ಟ್‌ ಕೊಟ್ಟ ಅಭಿಮಾನಿ

ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಂದಿದ್ರು. ಹತ್ತು ಸಾವಿರ ಕೋಟಿ ಕೊಡ್ತೇವೆ ಅಂದಿದ್ರು.ಆದರೆ ಎರಡು ಸಾವಿರ ಕೋಟಿ ಕೂಡ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಹಣ ನೀಡಿದೆ. ಇದು ಮಧ್ಯ ಕರ್ನಾಟಕದ ಜನತೆಗೆ ಅನುಕೂಲ. ಮಹದಾಯಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ನೀಡುವ ಪ್ರಸ್ತಾಪ ಇಲ್ಲ ಎಂದು ಗೋವಾದಲ್ಲಿ ಸೋನಿಯಾ ಗಾಂಧಿ ಹೇಳಿದ್ರು. 2080 ಕೋಟಿ ಮಾತ್ರ ಐದು ವರ್ಷದಲ್ಲಿ ಕಾಂಗ್ರೆಸ್ ನೀಡಿದ್ದು, ಬಿಜೆಪಿ ನೀಡಿದ್ದು ವರ್ಷಕ್ಕೆ ಐದು ಸಾವಿರ ಕೋಟಿ. 371j ನಾವು ತಂದಿದ್ದು ಅಂತಾರೆ ಕಾಂಗ್ರೆಸ್, ಆದರೆ ಕಲ್ಯಾಣ ಕರ್ನಾಟಕಕ್ಕೆ ಹಣವನ್ನೇ ನೀಡಿರಲಿಲ್ಲ ಎಂದು ಸುಧಾಕರ್‌ ಹೇಳಿದ್ದಾರೆ.

click me!