
ಮಂಡ್ಯ (ಫೆ.22): ಮಂಡ್ಯ ತಾಲೂಕಿನ ಮಾಚಹಳ್ಳಿಗೆ ಮೊದಲ ಬಾರಿಗೆ ಭೇಟಿ ನೀಡಿದ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದರು. ವಿಜಯೇಂದ್ರ ಆಗಮಿಸುತ್ತಿದ್ದಂತೆ ಕ್ರೇನ್ ಮೂಲಕ ಬೃಹತ್ ಕಬ್ಬಿನ ಹಾರ ಹಾಕಿ, ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತ ನೀಡಲಾಯಿತು. ವಿಜಯೇಂದ್ರ ಆಗಮನದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಅಭಿಮಾನಿಗಳು ಸೇರಿದ್ದು, ಹೂಹಾರ ಹಾಕಿ ಸಂಭ್ರಮಿಸಿದರು. ಇದೇ ವೇಳೆ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂಬ ಘೋಷಣೆಗಳೂ ಮೊಳಗಿದವು.
ಇದೇ ವೇಳೆ ವಿಜಯೇಂದ್ರ ಅವರಿಗೆ ಅಭಿಮಾನಿಯೊಬ್ಬ ಹಳ್ಳಿಕಾರ್ ತಳಿಯ ಹೋರಿಯೊಂದನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷವಾಗಿತ್ತು. ಮಾಚಹಳ್ಳಿಯ ಸ್ವಾಮಿ ಎಂಬವರು ಈ ಉಡುಗೊರೆ ನೀಡಿದ್ದು, ಅದನ್ನು ವಿಜಯೇಂದ್ರ ಖುಷಿಯಿಂದಲೇ ಸ್ವೀಕರಿಸಿದರು. ಬಳಿಕ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ಉದ್ಘಾಟಿಸಿ ಮಾತನಾಡಿ, ಈ ಊರಿಗೆ ಮೊದಲ ಬಾರಿಗೆ ಬಂದಿದ್ದೇನೆ. ಮೊದಲ ಆಗಮನದಲ್ಲೇ ಅದ್ಧೂರಿ ಸ್ವಾಗತ ನೀಡಿದ್ದೀರಿ. ರಾಜ್ಯದಲ್ಲಿ ಎಲ್ಲೇ ಹೋದರೂ ನನ್ನನ್ನು ನಮ್ಮ ಯಡಿಯೂರಪ್ಪನವರ ಮಗ ಎಂದು ಪ್ರೀತಿಸುತ್ತಾರೆ.
ಗೆಲ್ಸಿದ ಆನೆ ಕಾಡಿಗಟ್ಟಿ ಸ್ವಾರ್ಥಕ್ಕೆ ಕಮಲ ಹಿಡಿದ ಮಹೇಶ್: ಡಿ.ಕೆ.ಶಿವಕುಮಾರ್
ಹೃದಯದಿಂದ ಗೌರವಿಸುತ್ತಾರೆ. ನಾಡಿನ ತಾಯಂದಿರ ಆಶೀರ್ವಾದದ ಮುದೆ ಬೇರಾವ ಸ್ಥಾನಮಾನವೂ ನನಗೆ ಬೇಕಿಲ್ಲ. ನನಗೆ ಯಾವುದೇ ಸ್ಥಾನಮಾನ ಕೊಟ್ಟಿಲ್ಲವೆಂದು ಮಾಧ್ಯಮದವರು ಸದಾ ಕೇಳುತ್ತಿರುತ್ತಾರೆ. ಆದರೆ ನಮ್ಮ ತಂದೆಯವರ ರಾಜಕೀಯ ಜೀವನ ಹತ್ತಿರದಿಂದ ಕಂಡಿದ್ದೇನೆ. ನಾಡಿನ ತಾಯಂದಿರ ಆಶೀರ್ವಾದ ನನಗೆ ಮುಖ್ಯ. ಅದರ ಮುಂದೆ ಬೇರಾವ ಸ್ಥಾನ-ಮಾನವೂ ನನಗೆ ಬೇಕಿಲ್ಲ ಎಂದರು.
ಕನ್ನಡ ನಾಡು ಅತೀ ಹೆಚ್ಚು ದಾರ್ಶನಿಕರನ್ನು ಕೊಟ್ಟಿದೆ. ಶಿವಕುಮಾರ ಶ್ರೀಗಳು ಈ ಗ್ರಾಮಕ್ಕೆ ಮೂರು ಸಲ ಬಂದಿದ್ದಾರೆ. ಈ ಭೂಮಿಗೆ ವಿಶೇಷ ಶಕ್ತಿ ಇದೆ. ನಮ್ಮ ತಂದೆ 4 ಬಾರಿ ಮುಖ್ಯಮಂತ್ರಿ ಆಗಿದ್ದರು. ಯೋಧನಂತೆ ರೈತ ದೇಶದ ಮತ್ತೊಬ್ಬ ಕಣ್ಣು ಎಂದು ಅನ್ನದಾತನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಪ್ರತ್ಯೇಕ ಬಜೆಟ್ ಮಂಡಿಸಿದ್ದರು. ಅಂಥ ಪುಣ್ಯಾತ್ಮನಿಗೆ ಜನ್ಮಕೊಟ್ಟಜಿಲ್ಲೆ ಮಂಡ್ಯ ಎಂದು ಬಣ್ಣಿಸಿದರು.
ನನ್ನ ಗೆಲುವಲ್ಲಿ ಬಿಎಸ್‌ವೈ, ವಿಜಯೇಂದ್ರ ಶ್ರಮ ಅಪಾರ: ಸಚಿವ ಕೆ.ಸಿ.ನಾರಾಯಣಗೌಡ
ಇಂದಿನ ದಿನಗಳಲ್ಲಿ ಗ್ರಾಪಂ ಸದಸ್ಯ ಕೂಡ ಇವತ್ತು ರಾಜೀನಾಮೆ ಕೊಡಲು ನೂರು ಸಲ ಯೋಚನೆ ಮಾಡುತ್ತಾನೆ. ನಾರಾಯಣಗೌಡರು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲೆಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಬೇರೆ ಪಕ್ಷದ ನಾಯಕನ ಬಗ್ಗೆ ವಿಶ್ವಾಸ ಇಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ನಮ್ಮ ರಾಜ್ಯದಲ್ಲೇ ನಾರಾಯಣಗೌಡರೇ ಮೊದಲು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.