ವಿಜಯಪುರದಲ್ಲಿ ಜೆ.ಪಿ ನಡ್ಡಾ ಹವಾ, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು!

By Suvarna NewsFirst Published Jan 21, 2023, 5:11 PM IST
Highlights

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿಜಯಪುರ ಜಿಲ್ಲೆಯ ಪ್ರವಾಸ ಕೈಗೊಂಡಿದ್ದು ಗುಲಬುರ್ಗಾ ಮೂಲಕ ವಿಶೇಷ ವಿಮಾನದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಅಶ್ವಥನಾರಾಯಣ ಜತೆ ಸೇರಿ ವಿಜಯಪುರ ಸೈನಿಕ ಶಾಲೆಗೆ ಬೆಳಗ್ಗೆ 11:45 ಕ್ಕೆ ಆಗಮಿಸಿದರು.

ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಜ.21): ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ‌ ಹೆಚ್ಚು ಸ್ಥಾನ ಪಡೆಯುವ ಸಂಕಲ್ಪ ಹೊಂದಿರುವ ಭಾರತೀಯ ಜನತಾ ಪಾರ್ಟಿ ಸ್ವವೋಚ್ಚ ನಾಯಕ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಹಿಂದೆಯೇ ಗುಲಬುರ್ಗಾ, ಯಾದಗಿರಿ ಜಿಲ್ಲೆಯ ಪ್ರವಾಸ ಕೈಗೊಂಡ ಬೆನ್ನಲ್ಲಿಯೇ, ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿಜಯಪುರ ಜಿಲ್ಲೆಯ ಪ್ರವಾಸ ಕೈಗೊಂಡಿದ್ದು ಗುಲಬುರ್ಗಾ ಮೂಲಕ ವಿಶೇಷ ವಿಮಾನದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಅಶ್ವಥನಾರಾಯಣ ಜತೆ ಸೇರಿ ವಿಜಯಪುರ ಸೈನಿಕ ಶಾಲೆಗೆ ಬೆಳಗ್ಗೆ 11:45 ಕ್ಕೆ ಆಗಮಿಸಿದರು.

ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ನಡ್ಡಾ ಪುಷ್ಪನಮನ!
ಅಲ್ಲಿಂದ ನೇರವಾಗಿ ಇತ್ತೀಚಿಗೆ ಲಿಂಗೈಕ್ಯರಾದ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ವಾಸವಿದ್ದ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿದರು. ಮೊದಲು ಸಿದ್ದೇಶ್ವರ ಶ್ರೀಗಳ ಗುರುಗಳಾದ ಮಲ್ಲಿಕಾರ್ಜುನ ಶಿವಯೋಗಿ ಮಹಾಸ್ವಾಮಿಗಳ ಕರ್ತ್ಯ ಗದ್ದಿಗೆ ಇರುವ ಪ್ರಣವ ಮಂಟಪಕ್ಕೆ ಭೇಟಿ ನೀಡಿದರು. ಪ್ರಣವ ಮಂಟಪದಲ್ಲಿ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು. ನಂತರ ಶ್ರೀ ಸಿದ್ದೇಶ್ವರ ಶ್ರೀಗಳ ಪಾರ್ಥಿವ ಶರೀರ ಇಟ್ಟು ಮೆರವಣಿಗೆ ನಡೆಸಿದ ಮಂಟಪ ವೀಕ್ಷಣೆ ಮಾಡಿದರು. ಶ್ರೀಗಳ ಅಂತ್ಯಕ್ರಿಯೆ ನಡೆದ ಸ್ಥಳ ವೀಕ್ಷಿಸಿದರು. 

ಸಿದ್ದೇಶ್ವರ ಶ್ರೀಗಳು ಕೊನೆಯ ದಿನಗಳನ್ನ ಕಳೆದ ಕೋಣೆಗೆ ಭೇಟಿ!
ಸಿದ್ದೇಶ್ವರ ಶ್ರೀಗಳು ವಾಸವಿದ್ದ ಕೋಣೆಗೆ ಭೇಟಿ ನೀಡಿ ಕೆಲ ಹೊತ್ತು ಸಮಯ ಕಳೆದರು. ಆ ಮೇಲೆ ಆಶ್ರಮ ಆವರಣದಲ್ಲಿ ಇರಿಸಿದ್ದ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿದ ನಡ್ಡಾ, ಇಲ್ಲಿ ಆಧ್ಯಾತ್ಮೀಕತೆಯನ್ನ ಮಾನವೀತೆಯ ಕೆಲಸ ಮಾಡುವೆ ಜಾಗೃತ ಸಮಾಜ ನಿರ್ಮಾಣ ‌ಮಾಡಲು‌ ಸಬ್ ಕಾ ಸಾಥ್ ಸಬ್ ಕಾ ವಿಕಾಸ ಎಂಬಂತೆ ‌ನಡೆಯೋದಾಗಿ‌ ಹೇಳಿದರು.

ಶ್ರೀಗಳು ಬರೆದ ಪುಸ್ತಕ ನೀಡಿದ ಬಸವಲಿಂಗ ಸ್ವಾಮೀಜಿ!
ಶ್ರೀ ಸಿದ್ದೇಶ್ವರ ಸ್ವಾಮೀಜಿ ವಿರಚಿತ ಇಂಗ್ಲೀಷ್ ಭಾಷೆಯಲ್ಲಿ ಸಿದ್ದೇಶ್ವರ ಶ್ರೀಗಳು ಬರೆದಿರುವ ಮೂರು ಪುಸ್ತಕಗಳಾದ  Patanjali's Yoga Sutras , Narada Sutras ಹಾಗೂ Shiva Sutra ಕೃತಿಗಳನ್ನು ನಡ್ಡಾ ಅವರಿಗೆ ಆಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಹಾಗೂ ಇತರೆ ಮುಖಂಡರು ನೀಡಿದರು.‌

ಜೆ.ಪಿ.ನಡ್ಡಾ ವಿಜಯಪುರ ಜಿಲ್ಲಾ ಪ್ರವಾಸ, ರಾಜ್ಯವ್ಯಾಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ನಡ್ಡಾ!
ಜ್ಞಾನ ಯೋಗಾ ಶ್ರಮದಿಂದ ತೆರಳಿದ ಜೆ.ಪಿ.‌ನಡ್ಡಾ, ಬಿಎಲ್ ಡಿಇ ಇಂಜನಿಯರಿಂಗ್ ಕಾಲೇಜ್ ಎದುರಿನ ಮೈದಾನದಲ್ಲಿ ಹಮ್ಮಿಕೊಂಡಿದ್ದ, ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ವಿಜಯಪುರ ಜಿಲ್ಲಾ ಬಿಜೆಪಿ ವತಿಯಿಂದ ಸನ್ಮಾನ ಸ್ವೀಕರಿಸಿದರು.

ಇಂದಿನಿಂದ ‘ಬಿಜೆಪಿ ವಿಜಯ ಸಂಕಲ್ಪ’ ಅಭಿಯಾನ: ವಿಜಯಪುರದ ಸಿಂದಗಿಯಲ್ಲಿ ಜೆ.ಪಿ.ನಡ್ಡಾ ಚಾಲನೆ

ನಾಗಠಾಣ ಕ್ಷೇತ್ರದ ವಾರ್ಡ್‌ಗಳಲ್ಲಿ ಕರಪತ್ರ ವಿತರಣೆ!
ಅಲ್ಲಿಯೇ ಸಮೀಪದಲ್ಲಿದ್ದ ವಾರ್ಡ್  ನಂ 12 ಹಾಗೂ 10ರಲ್ಲಿ ಇರುವ ಐದು ಮನೆಗಳಿಗೆ ಭೇಟಿ ನೀಡಿ ಬಿಜೆಪಿ ಸದಸ್ಯತ್ಬ ಅಭಿಯಾನಕ್ಕೆ ಚಾಲನೆ ಹಾಗೂ ಗೋಡೆ ಮೇಲೆ ಕಮಲ ಅರಳಿಸಿ ಚುನಾವಣೆಗೆ ರಣಕಹಳೆ ಓದಿದರು. ಈ ವೇಳೆ ಸದಸ್ಯತ್ವ ಪಡೆದುಕೊಂಡ ಮಹಿಳೆ ಪೂಜಾ ಶೀಲವಂತೆ ಅವರಿಗೆ ತಮ್ಮ ಪಕ್ಷದ ಕಾರ್ಯಚಟುವಟಿಕೆ ಸದಸ್ಯತ್ವ ನೊಂದಣಿ ಕುರಿತು‌ ನಡ್ಡಾ ಮಾಹಿತಿ ನೀಡಿದರು. ಬಡ್ಡಾ ಜತೆ ಮಾತ ನಾಡಿದ್ದ ಪೂಜಾ ಶೀಲವಂತ ಸಂತಸ ಹಂಚಿಕೊಂಡರು.

click me!