ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಶಾಸಕರಾದರೆ ಯುವಕರಿಗೆ ಉದ್ಯೋಗ, ಸಂಸದ ತೇಜಸ್ವಿ ಸೂರ್ಯ

By Kannadaprabha News  |  First Published Nov 12, 2024, 4:23 AM IST

ಮುಂದಿನ ದಿನಗಳಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಯುವಕರು ಧ್ವನಿಯಾಗಿ ಕೆಲಸ ಮಾಡುತ್ತಾರೆ. ಕುಮಾರಣ್ಣ ಕೇಂದ್ರ ಮಂತ್ರಿ ನಿಖಿಲ್ ಶಾಸಕರಾದರೆ ಇಲ್ಲಿನ ಯುವಕ, ಯುವತಿಯರಿಗೆ ಉದ್ಯೋಗ ಸೃಷ್ಟಿಮಾಡುತ್ತಾರೆ. ನಿಖಿಲ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದ ತೇಜಸ್ವಿ ಸೂರ್ಯ 


ಚನ್ನಪಟ್ಟಣದಲ್ಲಿ(ನ.12):  ಸಂಸದ ತೇಜಸ್ವಿ ಸೂರ್ಯ ಹಾಗೂ ನಿಖಿಲ್ ಮತಯಾಚಿಸಿದರು. ಚನ್ನಪಟ್ಟಣ: ಕೇಂದ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಸಚಿವರಾಗಿದ್ದಾರೆ. ಇಲ್ಲಿ ನಿಖಿಲ್ ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾದರೆ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಡುತ್ತಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. 

ಪಟ್ಟಣದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಪರ ಚುನವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವ ಕನಸು ಇಟ್ಟುಕೊಂಡಿರುವ ನಿಖಿಲ್ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ ಎಂದರು. 

Latest Videos

ಹೌದ್ರೀ, ನಮ್ಮಣ್ಣ ಅಪೂರ್ವ ಸಹೋದರ, ನಿಮ್ಮಂತೆ ನೀಚ ಬುದ್ಧಿ ಇಲ್ಲ: ಹೆಚ್‌ಡಿಕೆ ವಿರುದ್ಧ ಡಿಕೆ ಸುರೇಶ್ ವಾಗ್ದಾಳಿ

ದೇವೇಗೌಡರ ಆಶೀರ್ವಾದದಿಂದ ನಾನು ಸಂಸದನಾಗಿದ್ದೇನೆ. ಅವರ ಇಡೀ ಕುಟುಂಬ ನನ್ನ ಕ್ಷೇತ್ರದ ಮತದಾರರು. ನನ್ನ ನಾಮಪತ್ರ ಸಲ್ಲಿಕೆಯ ರ್ಯಾಲಿಯಲ್ಲಿ ಬಂದು ಉದ್ಘಾಟನೆ ಮಾಡಬೇಕೆಂದು ನಿಖಿಲ್ ಅವರಲ್ಲಿ ಮನವಿ ಮಾಡಿದ್ದೆ. ಆವತ್ತು ಕುಮಾರಸ್ವಾಮಿ ಅವರ ನಾಮಪತ್ರ ಸಲ್ಲಿಕೆ ಇದ್ದರೂ ಬಂದು ಉದ್ಘಾಟನೆ ಮಾಡಿದರು. ಇವತ್ತು ಅವರ ಕೈ ಗುಣದಿಂದಾಗಿ 2.90 ಲಕ್ಷ ಮತಗಳಿಂದ ಗೆದ್ದು ನಾನು ಲೋಕಸಭೆ ಪ್ರವೇಶಿಸಿದೆ ಎಂದರು. 

ಮುಂದಿನ ದಿನಗಳಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಯುವಕರು ಧ್ವನಿಯಾಗಿ ಕೆಲಸ ಮಾಡುತ್ತಾರೆ. ಕುಮಾರಣ್ಣ ಕೇಂದ್ರ ಮಂತ್ರಿ ನಿಖಿಲ್ ಶಾಸಕರಾದರೆ ಇಲ್ಲಿನ ಯುವಕ, ಯುವತಿಯರಿಗೆ ಉದ್ಯೋಗ ಸೃಷ್ಟಿಮಾಡುತ್ತಾರೆ. ನಿಖಿಲ್ ಅವರನ್ನು ಗೆಲ್ಲಿಸುವಂತೆ ತೇಜಸ್ವಿ ಸೂರ್ಯ ಮನವಿ ಮಾಡಿದರು. 

ಎನ್ ಡಿಎ ಅಭ್ಯರ್ಥಿ ನಿಖಿಲ್ ಮಾತನಾಡಿ, ಚನ್ನಪಟ್ಟಣ ತಾಲೂಕಿನಲ್ಲಿ ಕುಮಾರಸ್ವಾಮಿ ಆರೂವರೆ ವರ್ಷದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ ಅವರನ್ನು ಎರಡನೇ ಸಲ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಿದ ಕೀರ್ತಿ ನಿಮಗೆ ಸಲ್ಲುತ್ತದೆ. ಜನ ಹಿಂದೆ ಕೂಡಾ ನನ್ನ ಮೇಲೆ ಪ್ರೀತಿ ಇಟ್ಟಿದ್ದರು. ಎರಡು ಬಾರಿ ಕುತಂತ್ರದಿಂದ ನನಗೆ ಸೋಲಾಗಿದೆ. ಕೊನೆ ಹಂತದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ತಲೆ ಬಾಗಿ ನಾನು ಅಭ್ಯರ್ಥಿ ಆಗಿದ್ದೇನೆ ಎಂದು ನಿಖಿಲ್ ಹೇಳಿದರು.

click me!