ಯೋಗೇಶ್ವರ್ ನಾನು ಮೂವತ್ತು ವರ್ಷಗಳ ಹಳೆಯ ಸ್ನೇಹಿತರು. ಯೋಗೇಶ್ವರ್ ಹಾಗೂ ನನ್ನದು ವೈಯಕ್ತಿಕವಾದ ಆದರೆ ನೀವು ಬೈದಿರೋದು ಚನ್ನಪಟ್ಟಣದ ಜನರಿಗೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಡಿಕೆ ಸುರೇಶ್ ಕಿಡಿಕಾರಿದರು.
ಚನ್ನಪಟ್ಟಣ (ನ.11): ಯೋಗೇಶ್ವರ್ ನಾನು ಮೂವತ್ತು ವರ್ಷಗಳ ಹಳೆಯ ಸ್ನೇಹಿತರು. ಯೋಗೇಶ್ವರ್ ಹಾಗೂ ನನ್ನದು ವೈಯಕ್ತಿಕವಾದ ಆದರೆ ನೀವು ಬೈದಿರೋದು ಚನ್ನಪಟ್ಟಣದ ಜನರಿಗೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಡಿಕೆ ಸುರೇಶ್ ಕಿಡಿಕಾರಿದರು.
'ದುಡ್ಡು ಕೊಟ್ಟರೆ ಸಾಕು, ಜಾತಿ ಹೆಸರಲ್ಲಿ ಕಣ್ಣೀರು ಹಾಕಿದ್ರೆ ಸಾಕು ಓಟು ಹಾಕ್ತಾರೆ' ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ಚನ್ನಪಟ್ಟಣ ಜನರಿಗೆ ಅವಮಾನ ಮಾಡಿದ್ದಾರೆ. ಅವರ ಕನಸ್ಸಲ್ಲಿ ನಾನು ಯೋಗೇಶ್ವರ್, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಇರ್ತಾರೆ. ಅವರ ಎಲ್ಲ ಕನಸುಗಳಲ್ಲಿ ಇವರೇ ಇರ್ತಾರೆ. ಕುಮಾರಸ್ವಾಮಿ ಎಲ್ಲಿಯಾದ್ರೂ ಅಭಿವೃದ್ಧಿ ಬಗ್ಗೆ ಮಾತನಾಡಿದ್ದೀರಾ? ಮಾತನಾಡಿದ್ದು ಕೇಳಿದ್ದೀರಾ? ಡಿಕೆ ಬ್ರದರ್ಸ್ ರನ್ನು ಅಪೂರ್ವ ಸಹೋದರರು ಅಂತೆ, ಹೌದುರೀ ನಮ್ಮ ಅಣ್ಣ ಅಪೂರ್ವ ಸಹೋದರರೇ. ನಮ್ಮಣ್ಣ ದೇವೇಗೌಡ್ರು ವಂಶಸ್ಥರು, ದೇವೇಗೌಡರು ಮಕ್ಕಳ ತರ ಅಲ್ಲ. ಕಷ್ಟ ಸುಖದಲ್ಲಿ ನಾನು ಜೊತೆ ಇರುತ್ತೇನೆ, ಸಾಯುವ ಸಂದರ್ಭದಲ್ಲಿ ನಾನು ಜೊತೆಗೆ ಇರುತ್ತೇನೆ, ನಮ್ಮ ಅಣ್ಣನಲ್ಲಾಗಲಿ, ನನ್ನಲ್ಲಾಗಲಿ ನಿಮ್ಮಂತಹ ನೀಚ ಬುದ್ಧಿ ಇಲ್ಲ ಎಂದು ಭಾವುಕರಾದರು.
undefined
ಕಣ್ಣೀರು ಹೇಳಿ ಕೇಳಿ ಬರುವುದಿಲ್ಲ, ಚನ್ನಪಟ್ಟಣವನ್ನು ಮಾದರಿ ಕ್ಷೇತ್ರ ಮಾಡುತ್ತೇನೆ: ನಿಖಿಲ್ ಕುಮಾರಸ್ವಾಮಿ
ಹೆಚ್ಡಿ ದೇವೇಗೌಡರ ವಿರುದ್ಧ ಕಿಡಿ:
ನಿಮ್ಮ ಮನೆಯ ಕೆಲಸಗಾರರ ಮೇಲೆ ಅತ್ಯಾಚಾರ ಆಯ್ತಲ್ಲ, ನನ್ನ ಮಕ್ಕಳು ತಪ್ಪು ಮಾಡಿದ್ದಾರೆ ಎಂದು ಕ್ಷಮಾಪಣೆ ಕೇಳಬಹುದಿತ್ತು. ಆದರೆ ನೀವು ಹೇಗೆ ನಡೆದುಕೊಂಡಿರಿ? ನನ್ನ ಮಕ್ಕಳು ಮಾಡಿದ್ದು ತಪ್ಪು ಅಂತಾ ಹೇಳಿದ್ರ? ಯಾರಿಗೋಸ್ಕರ ಇಲ್ಲಿಗೆ ಬಂದಿದ್ದೀರಿ? ಚನ್ನಪಟ್ಟಣದ ಜನರು ಮತ್ತು ಬಡವರಿಗಾಗಿ ಇಲ್ಲಿದ್ದೀರಾ? ನಿಮ್ಮ ಮೊಮ್ಮಗನ ಅಪಚಾರಕ್ಕೆ ಒಂದೂ ಕ್ಷಮೆ ಕೇಳಲಿಲ್ಲ. ಇದೀಗ ಮೊಮ್ಮಗ ಚುನಾವಣೆ ನಿಂತಿರೋದಕ್ಕೆ ಪ್ರಚಾರಕ್ಕೆ ಬಂದಿದ್ದೀರ? ನಿಮಗೆ ಮತ ಕೇಳಲು ನೈತಿಕತೆ ಇದೆಯಾ? ನಾನು ನಮ್ಮ ಅಣ್ಣ ಯಾವಾಗಲೂ ಒಂದೇ, ನಮ್ಮಿಬ್ಬರ ಮೇಲೆ ಆರೋಪ ಮಾಡಿ. ರಾಜಕಾರಣದಲ್ಲಿ ನೀವು ಯಾರ ಯಶಸ್ಸನ್ನು ಸಹಿಸಿಕೊಂಡವರಲ್ಲ. ಸಿದ್ದರಾಮಯ್ಯ ಬೊಮ್ಮಾಯಿ, ಜೆಹೆಚ್ ಪಟೇಲ್‌ನ ಬಿಟ್ರಾ, ಶ್ರೇಯಸ್ ಪಟೇಲ್ ತಾತನ್ನಾದ್ರೂ ಬಿಟ್ರಾ ನೀವು..? ನೀವು ಯಾರನ್ನೂ ಬೆಳೆಯೋದಕ್ಕೆ ಬಿಟ್ಟಿಲ್ಲ. ಅಂತದ್ರಲ್ಲಿ ನನ್ನ ಮತ್ತು ಸಹೋದರನ್ನು ಹೇಗೆ ಸಹಿಸಿಕೊಳ್ತಿರ? ಎಂದು ವಾಗ್ದಾಳಿ ನಡೆಸಿದರು.
'ಅಧಿಕಾರ ನಶ್ವರ, ಮತದಾರನೇ ಈಶ್ವರ..' ಯಾಸೀರ್ ಖಾನ್‌ಗೆ ಮತ ನೀಡುವಂತೆ ಡಿಕೆ ಶಿವಕುಮಾರ ಮನವಿ
ಯೋಗೇಶ್ವರ್ ನನ್ನ ಹಾಗೂ ಶಿವಕುಮಾರ್ ಮೇಲಿನ ಕೋಪಕ್ಕೆ ಹೋಗಿ ಜೆಡಿಎಸ್ ನವರ ತಬ್ಬಿಕೊಂಡಿದ್ದೇ ತಬ್ಬಿಕೊಂಡಿದ್ದು. ಆಮೇಲೆ ಏನಾಯ್ತು? ಡಾ. ಮಂಜುನಾಥ್ ಗೆಲ್ಲಿಸಿ ನನ್ನನ್ನು ಸೋಲಿಸಿದ್ರು. ಉಪಚುನಾವಣೆಯಲ್ಲಿ ಸಿಪಿವೈ ಗೇ ಟಿಕೆಟ್ ಕೊಡ್ತಾರೆ ಅಂತಾ ಅಪ್ಪ ಒಂದು ಹೇಳೋದು ಮಗ ಒಂದು ಹೇಳೋದು ಇದೆಲ್ಲ ಕುಟುಂಬದ ನಾಟಕ ಕೊನೆಗೆ ಸಿಪಿವೈಗೆ ಕೈಕೊಟ್ರಲ್ಲ? ನೀವು ಸಿದ್ದರಾಮಯ್ಯರನ್ನೇ ಬಿಟ್ಟಿಲ್ಲ ಸಿಪಿಐ ಯಾವ ಲೆಕ್ಕ? ಇನ್ನು ನಾನು ನಮ್ಮಣ್ಣ ಡಿಕೆ ಶಿವಕುಮಾರನ್ನ ಬಿಡ್ತೀರ? ದಿನ ಬೆಳಗಾದ್ರೆ ಡಿಕೆ ಬ್ರದರ್ಸ್ ಅಂತಾ ಹೇಳಿಕೊಂಡೇ ತಿರುಗುವುದಾಗಿದೆ. ನಾವು ಚುನಾವಣೆಯಲ್ಲಿ ಗೆದ್ದು ರಾಮನಗರವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡುತ್ತೇವೆ. ಜನರು ದಯವಿಟ್ಟು ಕಳ್ಳರು ಮತ್ತು ಜಾತಿ ವ್ಯಾಮೋಹಕ್ಕೆ ಹೋಗಬೇಡಿ. ನಾನು, ಯೋಗೇಶ್ವರ್, ಶಿವಕುಮಾರ್, ಚಲುವರಾಯಸ್ವಾಮಿ, ಬಾಲಕೃಷ್ಣ ಒಕ್ಕಲಿಗರೇ ಆಗಿದ್ದೇವೆ. ಅವರ ಮಾತಿಗೆ ನಾನು ತೀಕ್ಷ್ಣವಾಗಿಯೇ ಉತ್ತರ ಕೊಡಬಲ್ಲೇ. ಆದರೆ ಸಮಾಜಕ್ಕಾಗಿ ನನ್ನ ಮಾತನ್ನು ತಡೆದುಕೊಂಡಿದ್ಸೇನೆ. ಇವ್ರು ಬಾಲಗಂಗಾಧರ ನಾಥ ಸ್ವಾಮೀಜಿ ಗಳನ್ನೇ ಬಿಟ್ಟಿಲ್ಲ ಇನ್ನೂ ನಮ್ಮನ್ನು ಬಿಡ್ತಾರಾ? ದೇವೇಗೌಡ್ರು ಹಾಗೂ ಕುಮಾರಸ್ವಾಮಿಯವರ ಒಕ್ಕಲಿಗ ಅಸ್ತ್ರಕ್ಕೆ ಡಿಕೆ ಸುರೇಶ್ ತಿರುಗೇಟು ನೀಡಿದರು.