ಸಿಎಂ ಸಿದ್ದರಾಮಯ್ಯ ಮುಸ್ಲಿಂ ಸಮಾಜಕ್ಕೆ ಏನು ಮಾಡಿದ್ದಾರೆ? ಸಿಎಂ ಇಬ್ರಾಹಿಂ ಪ್ರಶ್ನೆ

By Ravi Janekal  |  First Published Nov 11, 2024, 6:13 PM IST

ಸಿದ್ದರಾಮಯ್ಯ ಮುಸ್ಲಿಮರ ಪರವಾಗಿ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂದೆಮುಂದೆ ನೋಡುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಟೀಕಿಸಿದರು.


ವಿಜಯಪುರ (ನ.11): ಸಿದ್ದರಾಮಯ್ಯ ಮುಸ್ಲಿಮರ ಪರವಾಗಿ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂದೆಮುಂದೆ ನೋಡುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಟೀಕಿಸಿದರು.

ಸಿದ್ದರಾಮಯ್ಯ ಸಿಎಂ ಇರುವಾಗಲೇ ಮುಸ್ಲಿಮರು ಏನಾದರೂ ಮಾಡಿಕೊಳ್ಳಬೇಕು, ಇಲ್ಲದಿದ್ರೆ ಮುಸ್ಲಿಮರಿಗೆ ಚೊಂಬೇ ಗತಿ ಎಂಬ ಮಾಜಿ ಸಚಿವ ಅನ್ಸಾರಿ ಹೇಳಿಕೆ ವಿಚಾರವಾಗಿ ಇಂದು ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ ಅವರು, ಸಿದ್ದರಾಮಯ್ಯ ಸಿಎಂ ಆಗಿ ಒಂದೂವರೆ ವರ್ಷವಾಯ್ತು. ನಾವು ಸಿದ್ದರಾಮಯ್ಯ ಮೇಲೆ ನಿರೀಕ್ಷೆ ಇಟ್ಟಿಷ್ಟು ಆಗಲಿಲ್ಲ. ಮುಸ್ಲಿಮರಿಗೆ ರಿಸರ್ವೇಶನ್ ಆಗಿಲ್ಲ, ಹಿಜಾಬ್ ಬಗ್ಗೆ ಸುಪ್ರೀಂಕೋರ್ಟ್ ಆದೇಶವಾಗಿದ್ರು ನೋಟಿಫಿಕೇಶನ್ ಮಾಡಿಲ್ಲ. ಸಿದ್ದರಾಮಯ್ಯ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂದೆಮುಂದೆ ನೋಡುತ್ತಿದ್ದಾರೆ. ಅವರಿಗೆ ಏನು ಒತ್ತಡವಿದೆ ಅಂತ ನನಗೆ ಗೊತ್ತಿಲ್ಲ ಎಂದರು.

Tap to resize

Latest Videos

undefined

'ಮಿಸ್ಟರ್ ಸಿದ್ದರಾಮಯ್ಯ ರೈತರ ಭೂಮಿ ವಾಪಸ್ ಕೊಟ್ರೆ ಸರಿ ಇಲ್ಲದಿದ್ರೆ.., ಸಿಎಂಗೆ ಡೆಡ್‌ಲೈನ್ ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್!

ಸಿದ್ದರಾಮಯ್ಯ ಮುಸ್ಲಿಮರನ್ನು ಒಲೈಸಿದ್ದಾರೆ ಎಂಬ ಮಾತು ಹೇಳ್ತಿದ್ದಾರೆ. ಎಲ್ಲಿ ಓಲೈಕೆ ಮಾಡಿದ್ದಾರೆ. ಸವಣೂರಿನಲ್ಲಿ 50 ಜನ ಮುಸ್ಲಿಂರನ್ನು ಒದ್ದು ಹೊರಗೆ ಹಾಕಿದ್ದಾರೆ ಇದು ಓಲೈಕೆನಾ!? ಸವಣೂರಿನಲ್ಲಿ ಇಲ್ಲ ಅವರೀಗ ಹಳ್ಳಿಗೆ ಹೋಗಿದ್ದಾರೆ. ಇಷ್ಟೆಲ್ಲ ಆದ್ರೂ ಇದುವರೆಗೆ ಒಂದೂ ಎಫ್‌ಐಆರ್ ಆಗಿಲ್ಲ. ಇದು ಓಲೈಕೆನಾ!? ಓಲೈಸಿ ಏನು ಕೊಟ್ಟಿದ್ದಾರೆ ಅಂತ ಹೇಳಲಿ. ಏನಾದರೂ ಹೆಚ್ಚುವರಿ ಮುಸ್ಲಿಮರಿಗೆ ಕೊಟ್ಟಿದ್ದಾರಾ? ಬಜೆಟ್ ನಲ್ಲಿ ಮೈನಾರಿಟಿಗೆ ಅನುದಾನ ಕೊಟ್ಟಿದ್ದಾರಾ? ಏನು ಇಲ್ಲ ಓಲೈಕೆ ಅಂತ ನೀವು ಹಿಂಗೆ ಹೇಳ್ತೀರಾ, ಅವರು ಹಂಗೆ ಹೇಳ್ತಾರೆ. ಕಾಂಗ್ರೆಸ್ ಬಿಜೆಪಿ ಪಕ್ಷದವರು ಮುಸ್ಲಿಮರನ್ನು ಕೈಬಿಟ್ಟು ಬಿಡಿ. ನಿಮ್ಮ ಓಲೈಕೆನೂ ಬೇಡಾ ತೆಗಳಿಕೆಯೂ ಬೇಡಾ‌. ನಾವು ಸೌತೆಕಾಯಿ, ತೆಂಗಿನಕಾಯಿ ಮಾರಾಟ ಮಾಡಿ ಜೀವನ ಸಾಗಿಸುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಒಳ್ಳೆ ಕೆಲ್ಸ ಮಾಡ್ತಿದ್ದಾರೆ, ಮಾಡಿಲ್ಲ ಅಂತಾ ಹೇಳೊಲ್ಲ. ಆದರೆ ಒಬ್ಬ ವ್ಯಕ್ತಿಯಿಂದ ಆಗುತ್ತೆ ಅನ್ನೋದು ತಪ್ಪು. ಸಿಎಂ ಇಬ್ರಾಹಿಂ ಸತ್ತರೆ ಸಾಬರಿಗೆ ಯಾರಿದ್ದಾರೆ ಅಂದ್ರೆ ಏನರ್ಥ? ಇನ್ನೊಬ್ಬ ಇಬ್ರಾಹಿಂ ಹುಟ್ಟುತ್ತಾರೆ. ಮುಸ್ಲಿಂ  ಸಮಾಜ ತತ್ವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟುಕೊಂಡಿದೆ‌. ಯಾರೂ ಅನಿವಾರ್ಯರಲ್ಲ ಎಂದರು.

ಮುಡಾ ತೀರ್ಪು ರಾಜಕೀಯ ಪ್ರೇರಿತ ಹೇಳಿಕೆ: ಜಮೀರ್‌ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಗೌರ್ನರ್‌ ಸೂಚನೆ

ಇನ್ನು ಸಿಎಂ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರಲಿದ್ದಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಕಾಂಗ್ರೆಸ್ ಗೆ ಗೊತ್ತಿರೋದು, ನನಗೇನು ಗೊತ್ತು? ನಾನು ಕಾಂಗ್ರೆಸ್‌ನಲ್ಲಿಲ್ಲ. ನಾನು ಅದನ್ನು ಹೇಳಲಿಕ್ಕೆ ಹೋದ್ರೆ ವಿವಾದ ಆಗುತ್ತೆ. ಸಿದ್ದರಾಮಯ್ಯ ಈಗ ಸಿಎಂ ಆಗಿದ್ದಾರೆ ಅಷ್ಟೆ. ಅವರ ಮೇಲೆ ಆರೋಪ ಕೇಳಿ ಬಂದಾಗ ಅವರ ಪರವಾಗಿ ಮಾತನಾಡಿದೆ. ಸಿದ್ದರಾಮಯ್ಯ ಮೇಲೆ ಅಪಾದನೆ ಬಂದಿದ್ದು ತಪ್ಪು ಅವರ ಆ ರೀತಿ ಕೆಲಸ ಮಾಡಿಲ್ಲ. ಸಿದ್ದರಾಮಯ್ಯರ ಮೇಲೆ ಮುಡಾ ಒಂದು ಪ್ರಕರಣವಷ್ಟೇ.  ಅದನ್ನ ಈಗ ಬಿಜೆಪಿಯವರು ಎತ್ತಿದ್ದಾರೆ . ಇದರಲ್ಲಿ ಸಿದ್ದರಾಮಯ್ಯರ ಯಾವ ತಪ್ಪು ಇಲ್ಲ ಎನ್ನುವ ಮೂಲಕ ಸಮರ್ಥನೆ ಮಾಡಿಕೊಂಡರು.

click me!