ಅನುಮಾನ ಬೇಡ ಬಿಜೆಪಿ ಗೆಲ್ಲುತ್ತೆ, ಮೋದಿ ಮೂರನೇ ಬಾರಿ ಪ್ರಧಾನಿ ಆಗ್ತಾರೆ: ನಿಖಿಲ್ ಕುಮಾರಸ್ವಾಮಿ

By Ravi Janekal  |  First Published Jun 3, 2024, 2:37 PM IST

ಚುನಾವಣೋತ್ತರ ಸಮೀಕ್ಷೆಯಲ್ಲಿ ಸ್ಪಷ್ಟ ಸಂದೇಶ ನೀಡಿದೆ. ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಎನ್‌ಡಿಎ ಮೈತ್ರಿ ಪರ ಸಮೀಕ್ಷೆ ಕೂಡ 360-380 ಸ್ಥಾನಗಳು ಗೆಲ್ಲುವ ಬಗ್ಗೆ ಗೊತ್ತಾಗಿದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.


ರಾಮನಗರ (ಜೂ.3): ಚುನಾವಣೋತ್ತರ ಸಮೀಕ್ಷೆಯಲ್ಲಿ ಸ್ಪಷ್ಟ ಸಂದೇಶ ನೀಡಿದೆ. ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಎನ್‌ಡಿಎ ಮೈತ್ರಿ ಪರ ಸಮೀಕ್ಷೆ ಕೂಡ 360-380 ಸ್ಥಾನಗಳು ಗೆಲ್ಲುವ ಬಗ್ಗೆ ಗೊತ್ತಾಗಿದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.

ನಾಳೆ ಲೋಕಸಭಾ ಚುನಾವಣಾ ಫಲಿತಾಂಶ ವಿಚಾರ ಇಂದು ರಾಮನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೂರನೇ ಬಾರಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಆಗ್ತಾರೆ. ನಾವು ಇದೇ ಮೊದಲ ಬಾರಿ ಬಿಜೆಪಿ ಜೆಡಿಎಸ್ ಜೊತೆಗೂಡಿ ಚುನಾವಣೆ ಎದುರಿಸಿದ್ದೇವೆ. ಸಮೀಕ್ಷೆಗಳಲ್ಲಿ ಹೇಳಿದ್ದಕ್ಕಿಂತ ಇನ್ನೂ ಹೆಚ್ಚಿನ ಸ್ಥಾನಗಳು ಕೂಡ ನಮ್ಮ ಪರವಾಗಿ ಬರುವ ನಿರೀಕ್ಷೆ ಇದೆ ಎಂದರು 

Tap to resize

Latest Videos

ಸಿಎಂ ಸಿದ್ದರಾಮಯ್ಯ ಎಚ್‌ಡಿಕೆ ಮುಖಾಮುಖಿ: ನೋಡದೇ ಮುಂದೆ ಸಾಗಿದ ಕುಮಾರಸ್ವಾಮಿ!

ಎಕ್ಸಿಟ್ ಪೋಲ್ ಮೇಲೆ ನಂಬಿಕೆ ಇಲ್ಲ ಎನ್ನುತ್ತಿರೋ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ಕಳೆದ ವಿಧಾನಸಭಾ ಚುನಾವಣೆ ವೇಳೆ ಇದೇ ಕಾಂಗ್ರೆಸ್ ಪಕ್ಷದ ಪರ ಇಂಡಿಯಾ ಟುಡೇ ಆಕ್ಸಿಸ್ ಅನ್ನೋ ಸಮೀಕ್ಷೆ ಮಾಡಿದ್ರು. ಆಗ ಕೊಟ್ಟ 136 ಸ್ಥಾನ ಸಮೀಕ್ಷೆ ಸರಿಯಾಗಿತ್ತಾ? ಆಗ ಸರಿಯಿದ್ದ ಸಮೀಕ್ಷೆ ಈಗ ತಪ್ಪಾಗಿ ಕಾಣ್ತಿದೆಯಾ? ಕಾಂಗ್ರೆಸ್‌ ನಾಯಕರಲ್ಲಿ ಸೋಲಿನ ಹತಾಶೆ ಮನೋಭಾವ ಇದೆ ಇನ್ನೂ ಕೇವಲ 24 ಗಂಟೆಯಲ್ಲಿ ಫಲಿತಾಂಶ ಹೊರಬರುತ್ತೆ. ಜನ ನಮ್ಮ ಪರವಾಗಿ ನಿಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಶಿಕ್ಷಣ ಕ್ಷೇತ್ರಕ್ಕೆ ಏನಾದ್ರೂ ಕೊಡುಗೆ ನೀಡಿದ್ರೆ ಅದು ಕುಮಾರಸ್ವಾಮಿ ಮಾತ್ರ: ಎಚ್‌ಡಿ ರೇವಣ್ಣ

ಇನ್ನು ಚುನಾವಣಾ ಆಯೋಗಕ್ಕೆ ಮೈತ್ರಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಪತ್ರ ಬರೆದಿರುವ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿಖಿಲ್ ಗೌಡ, ಚುನಾವಣೆ ಆರೋಗ್ಯಕರ, ಶಾಂತಿಯುತವಾಗಿ ನಡೆಯಬೇಕು ಎಂದು ಹಿಂದೆಯೂ ಡಾ. ಮಂಜುನಾಥ್ ಅವ್ರು ಹೇಳಿದ್ರು. ಅದೇ ರೀತಿ ನಾಳೆ ಕೂಡ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬುದು ಮಂಜುನಾಥ್ ಅವ್ರ ಭಾವನೆ. ಅದನ್ನೇ ಪತ್ರದ ಮೂಲಕ ವ್ಯಕ್ತಪಡಿಸಿದ್ದಾರೆ ಎಂದರು. ಇದೇ ವೇಳೆ ವಾಲ್ಮೀಕಿ ಸಮುದಾಯದ ಹಣ ವರ್ಗಾವಣೆ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದ ನಿಖಿಲ್, ಎಸ್‌ಸಿ ಎಸ್ಟಿ ಅಭಿವೃದ್ಧಿ ನಿಗಮಕ್ಕೆ ಮೀಸಲಿಟ್ಟಿರುವ ಹಣ ದುರುಪಯೋಗ ಆಗಿದೆ. ಇದರಲ್ಲಿ ಮಂತ್ರಿಗಳ ಭ್ರಷ್ಟಾಚಾರ ಎದ್ದು ಕಾಣ್ತಿದೆ ಹೀಗಾಗಿ ಈ ಪ್ರಕರಣದ ತನಿಖೆಯನ್ನ ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿದರು.

click me!