ಪುತ್ರನ ವಿರುದ್ದದ ಲೈಂಗಿಕ ದೌರ್ಜನ್ಯ ಕೃತ್ಯದ ಸಂತ್ರಸ್ತೆಯ ಅಪಹರಣ ಪ್ರಕರಣ ಸಂಬಂಧ ವಿಚಾರಣೆಗೆ ಗೈರಾದ ಬೆನ್ನಲ್ಲೇ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಅವರ ಪತ್ತೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಮೂರು ಜಿಲ್ಲೆಗಳ್ಲಲಿ ತೀವ್ರ ಹುಡುಕಾಟ ನಡೆಸಿದೆ. ಬಂಧನ ಭೀತಿಯಿಂದ ಭವಾನಿ ತಲೆಮರೆಸಿಕೊಂಡಿದ್ದಾರೆ.
ಬೆಂಗಳೂರು (ಜೂ.3): ಪುತ್ರನ ವಿರುದ್ದದ ಲೈಂಗಿಕ ದೌರ್ಜನ್ಯ ಕೃತ್ಯದ ಸಂತ್ರಸ್ತೆಯ ಅಪಹರಣ ಪ್ರಕರಣ ಸಂಬಂಧ ವಿಚಾರಣೆಗೆ ಗೈರಾದ ಬೆನ್ನಲ್ಲೇ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ರೇವಣ್ಣ ಅವರ ಪತ್ತೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ಮೂರು ಜಿಲ್ಲೆಗಳ್ಲಲಿ ತೀವ್ರ ಹುಡುಕಾಟ ನಡೆಸಿದೆ. ಬಂಧನ ಭೀತಿಯಿಂದ ಭವಾನಿ ತಲೆಮರೆಸಿಕೊಂಡಿದ್ದಾರೆ.
ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಭವಾನಿ ರೇವಣ್ಣ ಅರೆಸ್ಟ್ ಆಗಬೇಕು ಅಂತಾ ಜಾಮೀನು ತಿರಸ್ಕಾರ ಆಗಿದೆ. ಜೆಡಿಎಸ್‌ನವರು ನೈತಿಕತೆ ಬಗ್ಗೆ ಮಾತಾಡ್ತಾರೆ. ಆದರೀಗ ಪ್ರಜ್ವಲ್ ಎಲ್ಲಿದ್ದಾರೆ? ಯಾಕಿದ್ದಾರೆ? ನಮ್ಮ ಕುಟುಂಬ ಮುಗಿಸೋಕೆ ಷಡ್ಯಂತ್ರ ನಡೆದಿದೆ ಅಂತಾ ರೇವಣ್ಣ ಹೇಳ್ತಾರೆ, ನಾವು ಏನೂ ಮಾಡಿಲ್ಲ ಅಂತಿದ್ದಾರೆ ಹಾಗಾದರೆ ತಪ್ಪಿಸಿಕೊಳ್ತಿರೋದ್ಯಾಕೆ ಎಂದು ಪ್ರಶ್ನಿಸಿದರು.
undefined
ಎಸ್‌ಐಟಿ ಕೈಗೆ ಸಿಗದೆ ಭವಾನಿ ರೇವಣ್ಣ ಮತ್ತೆ ಕಳ್ಳಾಟ..!
ನ್ಯಾಯಯುತವಾಗಿ ಹೊರ ಬರ್ತೀವಿ ಅಂತಾರೆ. ಹಾಗಾದರೆ ಕಾನೂನಿನಿಂದ ತಪ್ಪಿಸಿಕೊಳ್ತಿರೋದ್ಯಾಕೆ ಅವರೇ ಹೇಳಬೇಕು. ರೇವಣ್ಣ ಆಂಟಿಸಿಪೇಟರಿ ಬೇಲ್ ಕೇಳ್ತಾರೆ, ವಿಚಾರಣೆಗೆ ಬರೋಲ್ಲ. ಪ್ರಜ್ವಲ್ ರಾಹುಲ್ ಗಾಂಧಿ ಹೆಸರು ಹೇಳಿಕೊಂಡು ಮೂವತ್ತು ದಿನ ಆದ್ಮೇಲೆ ಬರ್ತಾರೆ. ಆದರೀಗ ಭವಾನಿ ಕೈಗೆ ಸಿಗ್ತಿಲ್ಲ. ಇದು ಸಾಧಾರಣವಾದ ಕುಟುಂಬ ಅಲ್ಲ, ಮಾಜಿ ಪ್ರಧಾನಿ, ಮಾಜಿ ಮಂತ್ರಿಗಳ ಕುಟುಂಬ ಇದು. ಸಂಸದರು, ಶಾಸಕರು ಒಂದೇ ಕುಟುಂಬದಲ್ಲಿದ್ದಾರೆ. ಎಲ್ಲರಿಗೂ ಮಾದರಿ ಆಗಬೇಕು ಅಂತಾ ಇವರಿಗೆ ಅನ್ನಿಸಲಿಲ್ಲವ? ನೈತಿಕತೆ ಹೊತ್ತು ಬೇರೆಯವರಿಗೆ ಉದಾಹರಣೆ ಆಗಬೇಕಿತ್ತು. ಆದರೆ ಇವರು ಹೇಳೋದೊಂದು, ಮಾಡೋದೊಂದು ಆಗ್ತಿದೆ. ಸಂತ್ರಸ್ತರಿಗೆ ನ್ಯಾಯ ಒದಗಿಸೋದು ಅಷ್ಟೇ ನಮ್ಮ ಕೆಲಸ ವಿಚಾರಣೆಗೆ ಬಂದು ಹಾಜರಾಗಿ ಎಂದ ಪ್ರಿಯಾಂಕ್ ಖರ್ಗೆ.