2023ರಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ : ಮತ್ತೊಂದು ವಿಚಾರವು ಸ್ಪಷ್ಟ

By Kannadaprabha NewsFirst Published Oct 26, 2021, 6:24 AM IST
Highlights
  • ಕಾಂಗ್ರೆಸ್ಸಿಗೆ ಯೋಗ್ಯ ಅಭ್ಯರ್ಥಿ ಸಿಗದೆ ಜೆಡಿಎಸ್‌ ಅಭ್ಯರ್ಥಿಯನ್ನು ತೆಗೆದುಕೊಂಡು ಹೋಗಿದೆ
  •  ಅದು ನಂಬಿಕೆ ದ್ರೋಹಿಗಳ ಪಕ್ಷ ಎಂದು ಶಾಸಕ ಎಚ್‌.ಡಿ.ರೇವಣ್ಣ ಆಕ್ರೋಶ 

ವಿಜಯಪುರ (ಅ.26): ಕಾಂಗ್ರೆಸ್ಸಿಗೆ (Congress) ಯೋಗ್ಯ ಅಭ್ಯರ್ಥಿ ಸಿಗದೆ ಜೆಡಿಎಸ್‌ (JDS) ಅಭ್ಯರ್ಥಿಯನ್ನು ತೆಗೆದುಕೊಂಡು ಹೋಗಿದೆ. ಅದು ನಂಬಿಕೆ ದ್ರೋಹಿಗಳ ಪಕ್ಷ ಎಂದು ಶಾಸಕ ಎಚ್‌.ಡಿ.ರೇವಣ್ಣ (Revanna) ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸೋಮವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಜೆಡಿಎಸ್‌ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗಿಲ್ಲ. ಸೂಟ್‌ಕೇಸ್‌ ಸಂಸ್ಕೃತಿ ಜೆಡಿಎಸ್‌ಗೆ ಬೇಕಿಲ್ಲ. ಅದು ಕಾಂಗ್ರೆಸ್‌ ಸಂಸ್ಕೃತಿ ಎಂದು ತಿಳಿಸಿದರು. 

ಎಲೆಕ್ಷನ್‌ ಬಂದಾಗ ಮಾತ್ರ ಬಿಎಸ್‌ವೈಗೆ ಮುಸ್ಲಿಮರು ನೆನಪಾಗ್ತಾರೆ: ಖಾದರ್‌

ದೇವೇಗೌಡ (HD Devegowda), ಕುಮಾರಸ್ವಾಮಿ (HD Kumaraswamy), ಜೆಡಿಎಸ್‌ಗೆ ಬೈಯದೇ ಇದ್ದರೆ ಕಾಂಗ್ರೆಸ್ಸಿಗರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಕಾಂಗ್ರೆಸ್‌ ನಂಬಿಕೆದ್ರೋಹಿಗಳ ಪಕ್ಷ ಎಂದು ಜರಿದರು. 2023ರಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ ಮಾಡಲಿದ್ದು, ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದರು.

ಮಾಜಿ ಸಿಎಂ ಕುಮಾರಸ್ವಾಮಿ  ಕಸ ಹೊಡೆಯುತ್ತಿದ್ದರು ಎಂಬ ಜಮೀರ್‌ (zameer) ಹೇಳಿಕೆ ಪ್ರಸ್ತಾಪಿಸಿದ ಅವರು, ನಾವು ರೈತರು, ಜಮೀನಿನಲ್ಲಿ ಕಸ ಹೊಡಿತೀವಿ. ಎಲ್ಲ ಕೆಲಸವನ್ನು ಮಾಡುತ್ತೇವೆ. ಜಮೀರ್‌ ಹಾಗೇ ನಾವಲ್ಲ ಎಂದರು.

ನಮಗೆ ಗೊತ್ತಿದೆ

ಸಿಂದಗಿ ಉಪಚುನಾವಣಾ ಕಣದಲ್ಲಿ ಮೂರೂ ಪಕ್ಷದವರ ಆರೋಪ, ಪ್ರತ್ಯಾರೋಪ, ವಾಕ್ಸಮರ ಜೋರಾಗಿದೆ. ಜಮೀರ್ ಅಹ್ಮದ್  (Zameer Ahmad) ಎಚ್‌ಡಿಕೆ (HD Kumaraswamy) ವಿರುದ್ಧ ಸೂಟ್‌ಕೇಸ್ ರಾಜಕಾರಣದ ಆರೋಪ ಮಾಡಿರುವುದು ದಿನವಿಡೀ ಚರ್ಚೆಯಾಗಿದೆ. ಜಮೀರ್ ಹೇಳಿಕೆಗೆ ಎಚ್‌ ಡಿ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

'ಬೊಗಳುವ ನಾಯಿಗಳಿಗೆಲ್ಲಾ ಉತ್ತರ ನೀಡಲಿಕ್ಕೆ ಆಗುತ್ತಾ'

' ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಈ ಪರಿಸ್ಥಿತಿ ಬಂತಲ್ಲ ಎಂದು ನನಗೆ ವ್ಯಥೆಯಾಗುತ್ತಿದೆ. ಸೂಟ್‌ಕೇಸ್‌ ಸಂಸ್ಕೃತಿ ಯಾರಿಗಿದೆ ಎಂದು ಇಡೀ ರಾಜ್ಯಕ್ಕೆ ಗೊತ್ತಿದೆ. ನಮ್ಮನ್ನ ಬಿಜೆಪಿಯ ಬಿ ಟೀಂ ಎಂದು ಅಂದು ಕರೆದಿದ್ದ ನೀವು, ಅದೇ ಬಿ ಟೀಂ ಮನೆ ಬಾಗಿಲಿಗೆ ಬಂದಿದ್ದೀರಿ ಅಲ್ವಾ..?' ಎಂದು ರೇವಣ್ಣ ಪ್ರಶ್ನಿಸಿದ್ದಾರೆ. 

ಕಾಂಗ್ರೆಸ್ ತಪ್ಪಿನಿಂದ ಬಿಜೆಪಿಗೆ ಅಧಿಕಾರ

 

ಕಾಂಗ್ರೆಸ್‌ನ ತಪ್ಪಿನಿಂದಾಗಿ ರಾಜ್ಯದಲ್ಲಿ ಬಿಜೆಪಿ(BJP) ಸರ್ಕಾರ ಅಧಿಕಾರಕ್ಕೆ ಬಂದಿದೆ. ಈ ಬಗ್ಗೆ ಕಾಂಗ್ರೆಸ್‌ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೋಮುವಾದಿ ಪಕ್ಷವನ್ನು ದೂರ ಇಡಲು ಜಾತ್ಯ​ತೀ​ತ ಪಕ್ಷ ಒಗ್ಗೂಡುವುದು ಅಗ​ತ್ಯ ಎಂಬುದು ನಮ್ಮ ಆಶಯ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ(HD Revanna) ಹೇಳಿದ್ದಾರೆ. 

ತಾಲೂಕಿನಲ್ಲಿ ಜೆಡಿಎಸ್‌(JDS) ಅಭ್ಯರ್ಥಿ ನಾಜಿಯಾ ಅಂಗಡಿ ಪರ ಪ್ರಚಾರ(Campaign) ನಡೆಸಿದ ಅವರು, ಕಾಂಗ್ರೆಸ್‌(Congress) ಇಬ್ಬಗೆ ನೀತಿಯಿಂದ ದೇಶದಲ್ಲಿ ಕಾಂಗ್ರೆಸ್‌ ನೆಲಕಚ್ಚಿದೆ ಎಂದು ತಿಳಿಸಿದ್ದಾರೆ.

click me!