
ಬೆಂಗಳೂರು, (ಅ.25): ಒಂದೆಡೆ ಹಾನಗಲ್, ಸಿಂದಗಿ ಉಪಚುನಾವಣೆಯಲ್ಲಿ (By Election) ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪ ಜೋರಾಗಿದೆ. ಇದರ ಮಧ್ಯೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಟ್ವಿಟರ್ ವಾರ್ ನಡೆದಿದೆ.
ಬಿಜೆಪಿ ಆಡಳಿತದಲ್ಲಿ 'ಡ್ರಗ್ ಸಿಟಿ'ಯಾದ ಬೆಂಗಳೂರು ಎಂಬ ಕಾಂಗ್ರೆಸ್ (Congress) ಟೀಕೆಗೆ ಟ್ವಿಟರ್ ನಲ್ಲೇ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ (BJP), ಬೆಂಗಳೂರಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ (Drugs) ವ್ಯವಹಾರಕ್ಕೆ ನಮ್ಮ ಸರ್ಕಾರ ಬಂದ ಮೇಲೆ ಅಂಕುಶ ಹಾಕಿದೆ. ಪ್ರಭಾವಿಗಳು, ಪೆಡ್ಲರ್ ಗಳು ಜೈಲು ಸೇರುವಂತೆ ಮಾಡಿದ್ದು ಬಿಜೆಪಿ ಸರ್ಕಾರ ಎಂಬುದು ಗೊತ್ತೇ? ಎಂದು ತಿರುಗೇಟು ನೀಡಿದೆ.
'ಮುಸ್ಲಿಂ ಗಣವೇಷ, ಖಡ್ಗ ಹಿಡಿದು ಕುಣಿದ ಬಿಎಸ್‌ವೈ, ಅಶೋಕ್ ಹಿಂದುಕುಲ ತಿಲಕರೇ?'
ಕಾಂಗ್ರೆಸ್ ಅವಧಿಯಲ್ಲಿ ಸಿಲಿಕಾನ್ ಸಿಟಿ ಹಾಗೂ ಗಾರ್ಡ್ ನ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು, ಬಿಜೆಪಿ ಆಡಳಿತದಲ್ಲಿ 'ಡ್ರಗ್ಸ್ ಸಿಟಿ'ಯಾಗುತ್ತಿದೆ. ಬಿಜೆಪಿಗೂ ಡ್ರಗ್ಸ್ ಪೆಡ್ಲರ್ ಗಳಿಗೂ ಇರುವ ನಂಟೆ ಈ ಹಂತಕ್ಕೆ ಬರಲು ಕಾರಣ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ಇದಕ್ಕೆ ಸರಣಿ ಟ್ವೀಟ್ ಮೂಲಕವೇ ಬಿಜೆಪಿ ತಿರುಗೇಟು ಕೊಟ್ಟಿದ್ದು, ಅದು ಈ ಕೆಳಗಿನಂತಿದೆ ನೋಡಿ
ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮಾದಕ ದ್ರವ್ಯದ ಜಾಲ ಬಲವಾಗಿ ಬೇರು ಬಿಟ್ಟಿತ್ತು. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಕೈಕಟ್ಟಿ ಕುಳಿತಿತ್ತು ಎಂದು ಹೇಳಿದೆ.
ಕಾರಣ ಅಧಿಕಾರ ನಡೆಸುತ್ತಿದ್ದ ಮಹಾನುಭಾವರೊಬ್ಬರ ಮಗ-ಸೊಸೆ ಪಬ್ ನಲ್ಲಿ ನಡೆಯುತ್ತಿದ್ದಿದ್ದು ಅದೇ ದಂಧೆಯಲ್ಲವೇ? ಡ್ರಗ್ಸ್ ವ್ಯವಹಾರದ ಜತೆಗೆ ಡಾರ್ಕ್ ನೆಟ್, ಬಿಟ್ ಕಾಯಿನ್ ವ್ಯವಹಾರವೂ ತಳುಕು ಹಾಕಿಕೊಂಡಿರುವ ಬಗ್ಗೆ ಈ ಹಿಂದೆ ಪೊಲೀಸರು ಬಹಿರಂಗಪಡಿಸಿದ್ದರು. ಆಗ ಕಾಂಗ್ರೆಸ್ ಪ್ರಭಾವಿ ಶಾಸಕರ ಪುತ್ರನೊಬ್ಬ ಈ ಜಾಲದ ಹಿನ್ನೆಲೆಯಲ್ಲಿ ಪಬ್ ನಲ್ಲಿ ಹೊಡೆದಾಟ ಮಾಡಿದ್ದು ಮರೆತು ಹೋಯಿತೇ? ಅವರೀಗ ಭಾರೀ ಪ್ರಭಾವಿ ಎನಿಸಿಕೊಂಡಿದ್ದಾರೆ ಎಂದು ಟಾಂಗ್ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.