Karnataka Politics: 2023ಕ್ಕೆ ಜೆಡಿಎಸ್‌ ಅಧಿಕಾರಕ್ಕೆ ಬರೋದು ಪಕ್ಕಾ: ದೇವೇಗೌಡ

By Kannadaprabha NewsFirst Published Jan 5, 2022, 12:07 PM IST
Highlights

*  ಪ್ರಾದೇಶಿಕ ಪಕ್ಷ ಉಳಿಸಲು, ಅಧಿ​ಕಾರಕ್ಕೆ ತರುವುದೇ ನನ್ನ ಗುರಿ: ದೇವೇಗೌಡ
*  ದೇಶದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸರ್ಕಾರದಲ್ಲಿ ಎಲ್ಲ ಸಮಾಜಕ್ಕೆ ನ್ಯಾಯ ಸಿಗುತ್ತಿಲ್ಲ
*  ಜೆಡಿಎಸ್‌ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನವನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಮಾಡುತ್ತಿವೆ 
 

ಚಿಂಚೋಳಿ(ಜ.05): ಕೇಂದ್ರ ಬಿಜೆಪಿ ಸರ್ಕಾರದಲ್ಲಿ(BJP Government) ಆಡಳಿತ ವ್ಯವಸ್ಥೆ ಕುಸಿಯುತ್ತಿದೆ. ಪ್ರಾದೇಶಿಕ ಪಕ್ಷಗಳಿಂದಲೇ(Regional Parties) ಆಡಳಿತ ಸುಧಾರಣೆ ಬದಲಾಯಿಸಲು ಸಾಧ್ಯವಿದೆ. 2023 ರಾಜ್ಯದಲ್ಲಿ(Karnataka) ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌(JDS) ಅಧಿಕಾರಕ್ಕೆ ಬರುವುದು ಖಚಿತ. ಅದಕ್ಕಾಗಿ ಪಕ್ಷದ ಸಂಘಟನೆ ಅತಿ ಮುಖ್ಯವಾಗಿದೆ ಎಂದು ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ.ದೇವೇಗೌಡರು(HD Devegowda) ಹೇಳಿದ್ದಾರೆ. 

ಪಟ್ಟಣದ ಹಾರಕೂಡ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಚಿಂಚೋಳಿ-ಕಾಳಗಿ ತಾಲೂಕಿನ ಜೆಡಿಎಸ್‌ ಕಾರ್ಯಕರ್ತರ ಸಮಾವೇಶವನ್ನು(JDS Activists Conference) ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್‌(Congress) ಮತ್ತು ಬಿಜೆಪಿ ಸರ್ಕಾರದಲ್ಲಿ ಎಲ್ಲ ಸಮಾಜಕ್ಕೆ ನ್ಯಾಯ ಸಿಗುತ್ತಿಲ್ಲ. ಅಲೆಮಾರಿ ಸಮಾಜಕ್ಕೂ ದೇಶದ ರಾಜಕೀಯ(Politics) ವ್ಯವಸ್ಥೆಯಲ್ಲಿ ಸೌಲಭ್ಯಗಳು ದೊರಕುತ್ತಿಲ್ಲ. ರಾಷ್ಟ್ರೀಯ ಪಕ್ಷಗಳು(National Parties) ಬರೀ ಕಥೆ ಹೇಳಿಕೊಳ್ಳುತ್ತಿವೆ. ಸಾಮಾನ್ಯ ಜನರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಬಿಜೆಪಿ ತಾನೂ ಮಾಡಿದ್ದೇ ಸರಿ ಎಂದು ಹೇಳಿಕೊಳ್ಳುತ್ತಿದೆ. ಜೆಡಿಎಸ್‌ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನವನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಮಾಡುತ್ತಿವೆ. ಪ್ರಾದೇಶಿಕ ಪಕ್ಷ ಉಳಿಸುವುದಕ್ಕಾಗಿ ಹೋರಾಟ ನಡೆಸಲಾಗುತ್ತಿದೆ ಮತ್ತು ಅಧಿ​ಕಾರಕ್ಕೆ ತರುವುದು ನನ್ನ ಗುರಿಯಾಗಿದೆ ಎಂದರು.

Mekedatu Congress Padayatra: ನಮ್ಮನ್ನು ಜೈಲಿಗೆ ಕಳುಹಿಸಬಹುದು, ಮಾನಸಿಕವಾಗಿ ಸಿದ್ಧರಾಗಿ: ಸಿದ್ದು

ಇಲ್ಲಿವರೆಗೂ ಚಿಂಚೋಳಿ ಬದಲಾಗಿಲ್ಲ:

ಚಿಂಚೋಳಿ ತಾಲೂಕಿಗೆ ಕಳೆದ 24 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದೆ. ಆದರೆ ಇಲ್ಲಿಯವರೆಗೆ ಯಾವುದೇ ಬದಲಾವಣೆ ಆಗಿಲ್ಲ. ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗೆ(Mullamari Irrigation Project) ಅನುದಾನ ನೀಡಿದ್ದೇನೆ. ದೇಶದ ಪ್ರಧಾನ ಮಂತ್ರಿಯಾಗಿದ್ದಾಗ ಚಿಂಚೋಳಿ ಸಕ್ಕರೆ ಕಾರ್ಖಾನೆಗೆ(Chincholi Sugar Factory) ಅನುಮತಿ ನೀಡಲಾಗಿದೆ. ಈ ಭಾಗದಲ್ಲಿ ನೀರಾವರಿ ಯೋಜನೆಗಳು ಕುಂಠಿತವಾಗಿರುವುದರಿಂದ ರೈತರ ಆರ್ಥಿಕ ಸ್ಥಿತಿ ಇನ್ನು ಬದವಲಾವಣೆ ಆಗಿಲ್ಲ. 1977ರಿಂದ ರಾಜ್ಯದ ರೈತರಿಗೋಸ್ಕರ ಹೋರಾಟ ಮಾಡುತ್ತಿದ್ದೇನೆ. ಕಾಂಗ್ರೆಸ್‌, ಬಿಜೆಪಿ ದೇಶವನ್ನಾಳಿವೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರಿಗೆ ದಲಿತರಿಗೆ, ಕ್ರಿಶ್ಚಿಯನ್‌ ಸಮುದಾಯವನ್ನು(Christian community) ಬಗ್ಗು ಬಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಪ್ರಾದೇಶಿಕ ಪಕ್ಷ ಅಧಿ​ಕಾರಕ್ಕೆ ಬರಬೇಕು:

ಕೇರಳ(Kerala), ತಮಿಳುನಾಡು(Tamil Nadu), ತೆಲಂಗಾಣ(Telangana), ಆಂಧ್ರಪ್ರದೇಶ(Andhra Pradesh), ಕೋಲ್ಕತ್ತಾ(Kolkata) ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಉತ್ತಮ ಆಡಳಿತ ನಡೆಯುತ್ತಿವೆ. ನಮ್ಮ ರಾಜ್ಯದಲ್ಲಿಯೂ ಪ್ರಾದೇಶಿಕ ಪಕ್ಷ ಅಧಿ​ಕಾರಕ್ಕೆ ಬರಬೇಕೆಂದು ಎಂದು ಜನರ ಬಯಕೆ ಇದೆ. ಮುಂದಿನ 2023 ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಅಧಿ​ಕಾರಕ್ಕೆ ತರಲು ಪಕ್ಷದ ಸಂಘಟನೆ ಅತಿ ಮುಖ್ಯವಾಗಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಸಮ್ಮಿಶ್ರ ಸರ್ಕಾರದಲ್ಲಿ(Coalition Government) ಅನೇಕ ಯೋಜನೆಗಳು ಜಾರಿಗೆ ತಂದಿದ್ದಾರೆ. ಬಡವರು, ರೈತರು, ದೀನ ದಲಿತರು, ಅಲ್ಪಸಂಖ್ಯಾತರ ಹಿಂದುಳಿದ ವರ್ಗಗಳ ಉದ್ಧಾರಕ್ಕಾಗಿ ಶ್ರಮಿಸಲಾಗುತ್ತಿದೆ ಎಂದರು.

ತಾಲೂಕು ಜೆಡಿಎಸ್‌ಮುಖಂಡ ಸಂಜೀವನ್‌ ಯಾಕಾಪೂರ ಮಾತನಾಡಿ, ತಾಲೂಕು ಅತೀ ಹಿಂದುಳಿದ ಪ್ರದೇಶವಾಗಿರುವುದರಿಂದ ಜೆಡಿಎಸ್‌ ಸರ್ಕಾರದಲ್ಲಿ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ 80 ಕಿ.ಮೀ ಉದ್ದ ಮುಖ್ಯಕಾಲುವೆ ಅಭಿವೃದ್ಧಿಗೋಸ್ಕರ 45 ಕೋಟಿ ರು. ನೀಡಲಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮಂತ್ರಿಯಾಗಿದ್ದಾಗ 200 ಕೋಟಿ ಮಂಜೂರಿಗೊಳಿಸಿದ್ದರು. ಚೆಟ್ಟಿನಾಡ, ಕಲಬುರಗಿ(Kalaburagi) ಸಿಮೆಂಟ್‌ ಕಂಪನಿಗಳಲ್ಲಿ ಸ್ಥಳಿಯ ನಿರುದ್ಯೋಗಿ ಯುವಕರಿಗೆ ಉದ್ಯೋಗ(Job) ಸಿಗುತ್ತಿಲ್ಲ. ಹೊರ ರಾಜ್ಯಗಳ ಜನರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಶಾಸಕರು ಕೇವಲ ಕಮಿಷನ್‌ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಟೀಕಿಸಿದರು.

Karnataka Politics:'ರಾಮನಗರ ಜಿಲ್ಲೆ ಮಾಡಿದವನು ನಾನು, ಅವರಿಬ್ಬರು ಅಲ್ಲಿ ಕಿತ್ತಾಡ್ತಿದ್ದಾರೆ'

ಸಮಾವೇಶದಲ್ಲಿ ಬೀದರ್‌ ಶಾಸಕ ಬಂಡೆಪ್ಪ ಖಾಶಂಪೂರ, ಮಾಜಿ ವಿಧಾನ ಪರಿಷತ ಸದಸ್ಯ ಹೆಚ್‌.ಸಿ.ನೀರಾವರಿ, ಬಾಲರಾಜ ಗುತ್ತೆದಾರ, ಶಿವಕುಮಾರ ನಾಟೀಕಾರ, ಸಂಜೀವನ್‌ಯಾಕಾಪೂರ, ಹನುಮೆಗೌಡ, ಕೇದಾರಲಿಂಗಯ್ಯ ಹಿರೇಮಠ, ಶಾಮರಾವ ಸೂರನ, ಹಣಮಂತ ಪೂಜಾರಿ, ನಾಗೇಂದ್ರ ಗುರಂಪಳ್ಳಿ, ಬಸವರಾಜ ಶಿರಸಿ, ದೌಲಪ್ಪ ಸುಣಗಾರ, ಎಸ್‌.ಕೆ.ಮುಕ್ತಾರ, ವಿಷ್ಣುಕಾಂತ ಮೂಲಗಿ, ಸಿದ್ದು ಬುಬಲಿ, ಗೌರಿಶಂಕರ ಸೂರನ, ರಹೆಮತ ಪಾಶಾ, ನೀಲಕಂಠ ಹುಡುಗಿ, ಜಗದೀಶ ನಾಯಕ, ಯಶವಂತ, ಸುರೇಂದ್ರ ಶಿವರೆಡ್ಡಿಪಳ್ಳಿ, ಹೇಮಂತ ಶಾದೀಪೂರ, ರವಿಂದ್ರ ಮಾಳಗಿ, ಗುರುನಾಥ ಪೂಜಾರಿ, ಸಿದ್ದಯ್ಯಸ್ವಾಮಿ, ಗೌರಮ್ಮ ಕಲ್ಲೂರ ಇನ್ನಿತರಿದ್ದರು. ತಾಲೂಕು ಜೆಡಿಎಸ್‌ಅಧ್ಯಕ್ಷ ರವಿಶಂಕರ ಮುತ್ತಂಗಿ ಸ್ವಾಗತಿಸಿದರು. ದೌಲಪ್ಪ ಸುಣಗಾರ ರವಿ ಪಾಟೀಲ ಕೊಟಗಾ ವಂದಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಿಂದ ಹಾರಕೂಡ ಕಲ್ಯಾಣ ಮಂಟಪದವರೆಗೆ ಬೈಕ್‌ ರಾರ‍ಯಲಿ ನಡೆಸಲಾಯಿತು. ಬಸ್‌ ನಿಲ್ದಾಣ ಹತ್ತಿರ ಮಾಜಿ ಪ್ರಧಾನ ಮಂತ್ರಿ ದೇವೇಗೌಡರ ಕಾರಿನ ಮೇಲೆ ಹೂವು ಚೆಲ್ಲಿ ಜೆಡಿಎಸ್‌ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.
 

click me!