ಎಲ್ಲಾ ಸಮುದಾಯಗಳನ್ನು ಸಮಾನವಾಗಿ ತನ್ನ ಜತೆ ತೆಗೆದುಕೊಂಡು ಹೋಗುತ್ತಿದ್ದಾರೆ. ಶರಣಗೌಡರಂತಹ ಉತ್ತಮ ನಾಯಕರನ್ನು ಈ ಕ್ಷೇತ್ರದ ಜನರು ಕಳೆದುಕೊಳ್ಳಬಾರದು. ಹಾಗೆ ಮಾಡಿದರೆ ನೀವು ಒಬ್ಬ ಉತ್ತಮ ನಾಯಕನನ್ನು ಕಳೆದುಕೊಳ್ಳುವಿರಿ. ಅದಕ್ಕಾಗಿ ಅವರನ್ನು ಬೆಂಬಲಿಸಬೇಕು ಎಂದು ತಿಳಿಸಿದ ನಿಖಿಲ್ ಕುಮಾರಸ್ವಾಮಿ
ಗುರುಮಠಕಲ್(ಡಿ.22): ಜೆಡಿಎಸ್ ವಿಧಾನಸಭೆ ಅಭ್ಯರ್ಥಿ ಶರಣಗೌಡ ಕಂದಕೂರು ದೊಡ್ಡ ಅಂತರದ ಬಹುಮತದಿಂದ ಗೆಲ್ಲಿಸಿ, ಅವರನ್ನು ಮುಂದಿನ ದಿನಗಳಲ್ಲಿ ಮಂತ್ರಿಯಾಗಿ ಕಾಣುವಂತೆ ಗುರುಮಠಕಲ್ ಕ್ಷೇತ್ರದ ಜನರು ಆರ್ಶಿವಾದಿಸಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಪಟ್ಟಣದ ಶಾಸಕರ ನಿವಾಸದಲ್ಲಿ ಆಯೋಜಿಸಿದ್ದ ಶರಣಗೌಡ ಕಂದಕೂರು ಕನ್ಯಾಸ್ವಾಮಿ ಅವರ ಮಹಾಪಡಿಪೂಜೆ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡಿದ ಅವರು, ಯುವ ನಾಯಕ ಶರಣಗೌಡ ಕಂದಕೂರು ಅವರು ಕ್ಷೇತ್ರದಲ್ಲಿ ಕಳೆದ 4 ವರ್ಷಗಳಿಂದ ಜನರ ಸಮಸ್ಯೆಗಳನ್ನು ಅಲಿಸಿ ಸ್ಪಂದಿಸುತ್ತಿದ್ದಾರೆ. ಕ್ಷೇತ್ರವನ್ನು ಅಭಿವೃದ್ಧಿ ಮಾದರಿ ಮಾಡುವ ಉತ್ಸವ ಯುವಕರಾಗಿದ್ದಾರೆ ಎಂದರು.
ಎಲ್ಲಾ ಸಮುದಾಯಗಳನ್ನು ಸಮಾನವಾಗಿ ತನ್ನ ಜತೆ ತೆಗೆದುಕೊಂಡು ಹೋಗುತ್ತಿದ್ದಾರೆ. ಶರಣಗೌಡರಂತಹ ಉತ್ತಮ ನಾಯಕರನ್ನು ಈ ಕ್ಷೇತ್ರದ ಜನರು ಕಳೆದುಕೊಳ್ಳಬಾರದು. ಹಾಗೆ ಮಾಡಿದರೆ ನೀವು ಒಬ್ಬ ಉತ್ತಮ ನಾಯಕನನ್ನು ಕಳೆದುಕೊಳ್ಳುವಿರಿ. ಅದಕ್ಕಾಗಿ ಅವರನ್ನು ಬೆಂಬಲಿಸಬೇಕು ಎಂದು ತಿಳಿಸಿದರು.
undefined
ಕಾಂಗ್ರೆಸ್ ಮುಳುಗುವ ಹಡಗು: ಚಿಂಚನಸೂರ್
ಪ್ರಸಕ್ತ ದಿನಗಳಲ್ಲಿ ದೇಶದಲ್ಲಿ ಹಲವಾರು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗುವ ಮೂಲಕ ಆಯಾ ರಾಜ್ಯಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಕರ್ನಾಟಕಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡ ಅವರು ನೀಡಿರುವ ಕೊಡಗೆ ಅಪಾರ. ಅವರ ಮಾರ್ಗದರ್ಶನದಲ್ಲಿ ನಮ್ಮ ತಂದೆಯವರು 2 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ, ಗ್ರಾಮ ವಾಸ್ತವ್ಯ, ಜನತಾ ದರ್ಶನ, ರೈತರ ಸಾಲಮನ್ನಾ, ಲಾಟರಿ, ಸಾರಾಯಿ ನಿಷೇದ ಮಾಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಗಡಿ ಭಾಗದ ಗುರುಮಠಕಲ್ ಮತಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟುಅನುದಾನ ನೀಡುವ ಮೂಲಕ ಬದಲಾವಣೆಗೆ ಸಹಕರಿಸಿದ್ದಾರೆ ಎಂದರು.
ಕುಮಾರಸ್ವಾಮಿ ಸರಕಾರ ಪತನವಾಗದಂತೆ ಆಪತ್ಭಾಂಧವನಾಗಿ ಸರಕಾರವನ್ನು ಶರಣಗೌಡ ಉಳಿಸಿದ್ದಾರೆ. ಅಂದಿನಿಂದ ನಮ್ಮ ಕುಟುಂಬದ ಒಬ್ಬ ಸದಸ್ಯರಾಗಿದ್ದಾರೆ. ಅವರ ಬೆಂಬಲಕ್ಕೆ ನಿಲ್ಲಲು ನಾನು ಸದಾಸಿದ್ಧನಾಗಿದ್ದೇನೆ, ನಿವು ಕೂಡ ಸಹಕರಿಸಬೇಕು ಎಂದರು.
ಬಿಜೆಪಿ ಪಕ್ಷದವರು ದೇಶದ ಪ್ರಧಾನಿ ಮಂತ್ರಿ ಅವರನ್ನು ರಾಜ್ಯದಲ್ಲಿ 10 ಸುತ್ತು ಹಾಕಿದರೆ ಸಾಕು ನಾವು ಗೆಲ್ಲುತ್ತೇವೆ ಎಂಬ ಅಂಧ ವಿಶ್ವಾಸದಲ್ಲಿದ್ದಾರೆ. ಜನರ ಕಲ್ಯಾಣಕ್ಕಾಗಿ ಯೋಜನೆಗಳು ಇವರಲ್ಲಿ ಕೊರತೆ ಇದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಕ್ರಾಂತಿಕಾರವಾಗಿ ಬದಲಾವಣೆ ಆಗಬೇಕಾದರೆ ಕುಮಾರಸ್ವಾಮಿ ಸರಕಾರ ರಚನೆಯಾಗಬೇಕಾಗಿದೆ. ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ ಹಾಗೂ ರೈತರ ಮತ್ತು ಮಹಿಳಾ ಸಂಘಗಳ ಸಾಲಮನ್ನಾ ಮುಂತಾದ ಪಂಚರಥ ಯೋಜನೆಗಳ ಮೂಲಕ ರಾಜ್ಯದ ಮುಂದೆ ಬರುತ್ತಿದ್ದಾರೆ. ಉತ್ತಮ ಮತ್ತು ವ್ಯವಸ್ಥಿತಿ ಅಭಿವೃದ್ಧಿಯ ಕನಸನ್ನು ಕುಮಾರಣ್ಣ ಹೊಂದಿದ್ದಾರೆ. ಇದರಿಂದ ನಮ್ಮ ಜೆಡಿಎಸ್ ಪಕ್ಷವು ರಾಜ್ಯದಲ್ಲಿ 123 ಮಿಷನ್ ಗುರಿಯನ್ನು ಸಾಧಿಸಲು ರಾಜ್ಯದ ಜನರು ಕುಮಾರಣ್ಣ ಬೆಂಬಲವಾಗಿರಬೇಕಾಗಿದೆ ಎಂದರು.
ಕಾರ್ಯಕ್ರಮದ ರೂವಾರಿ, ಜೆಡಿಎಸ್ ಗುರುಮಠಕಲ್ ಕ್ಷೇತ್ರದ ಅಭ್ಯರ್ಥಿ ಶರಣಗೌಡ ಕಂದಕೂರು ಮಾತನಾಡಿದರು. ಸೇಡಂ ಕ್ಷೇತ್ರದ ಅಭ್ಯರ್ಥಿ ಬಾಲರಾಜ ಗುತ್ತೇದಾರ, ತೆಲಂಗಾಣದ ಮಕ್ತಲ್ ಶಾಸಕ ರಾಮಮೋಹನರೆಡ್ಡಿ, ನಾರಾಯಣಪೇಟ್ ಶಾಸಕ ಎಸ್.ಆರ್. ರೆಡ್ಡಿ, ಕೊಡಂಗಲ್ ಶಾಸಕ ಪಟ್ನಂ ನರೇಂದ್ರರೆಡ್ಡಿ, ಬ್ಲಾಕ್ ಅಧ್ಯಕ್ಷ ಪ್ರಕಾಶ ನಿರೇಟಿ, ಯುವ ಘಟಕ ಅಧ್ಯಕ್ಷ ಜ್ಞಾನೇಶ್ವರರೆಡ್ಡಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಹಾಗೂ ಅಯ್ಯಪ್ಪ ಸ್ವಾಮಿ ಭಕ್ತರು ಇದ್ದರು.
Karnataka Assembly Elections 2023: ಪಕ್ಷ ಬಿಟ್ಟ ಮುಖಂಡರಿಗೆ ಮತ್ತೆ ಕಾಂಗ್ರೆಸ್ ಗಾಳ?
ಜೆಡಿಎಸ್ ಯುವ ಮುಖಂಡರಾಗಿರುವ ಶರಣಗೌಡ ಕಂದಕೂರ ಅವರಿಗೆ ಪಕ್ಷವು ಟಿಕೇಟ್ ಘೋಷಣೆ ಮಾಡಿದೆ. ಮತದಾರರು ಅವರನ್ನು ಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಜೊತೆಗೆ ಮತಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಅಂತ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ನಮ್ಮ ಭಾಗದಲ್ಲಿ ಅಯ್ಯಪ್ಪ ಸ್ವಾಮಿಯ ಮಹತ್ವವನ್ನು ಸಾರುವ ಕಾರ್ಯಕ್ರಮ ಇದಾಗಿದೆ. ಈ ಮಹಾಪಡಿಪೂಜೆಯಿಂದ ಮತಕ್ಷೇತ್ರದ ಜನತೆಗೆ ಒಳಿತಗಲಿ, ಜನತೆ ಸುಖ-ಶಾಂತಿ, ಸಮೃದ್ಧಿಗಳು ವೃದ್ಧಿಸಲಿ ಎಂದು ಅಯ್ಯಪ್ಪಸ್ವಾಮಿಯಲ್ಲಿ ಅರ್ಚನೆ ನಿವೇದನೆ ಮಾಡಿಕೊಂಡಿರುವೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಇದು ಸರ್ವಜನರ ಒಳಿತಿಗಾಗಿ ಆಗಿದೆ ಅಂತ ಜೆಡಿಎಸ್ ರಾಜ್ಯ ಯುವ ಮುಖಂಡ ಶರಣಗೌಡ ಕಂದಕೂರ ತಿಳಿಸಿದ್ದಾರೆ.