ಜನತೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಈ ಬಾರಿ ಕುಮಾರಸ್ವಾಮಿ ಅವರ ಕೈ ಹಿಡಿಯಬೇಕು ಎಂದು ಮನವಿ ಮಾಡಿದ: ಅರಿಕೆರೆ ಮಂಜುನಾಥಗೌಡ
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಏ.22): ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕುಮಾರಸ್ವಾಮಿ ಜಾರಿಗೆ ತಂದಿರುವ ಜನತಾ ಜಲಧಾರೆ ಮತ್ತು ಪಂಚರತ್ನ ಯೋಜನೆಗಳು ಪೂರಕವಾಗಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಮಾತ್ರ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಜೆಡಿಎಸ್ ರಾಜ್ಯ ವಕ್ತಾರ ಅರಿಕೆರೆ ಮಂಜುನಾಥಗೌಡ ಅಭಿಪ್ರಾಯ ಪಟ್ಟರು.
undefined
ಇಂದು(ಶನಿವಾರ) ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಕಳೆದ 35 ವರ್ಷಗಳಿಂದ ಜೆಡಿಎಸ್ ಪಕ್ಷದ ಕಟ್ಟಾಳುವಾಗಿದ್ದು ದೇವೇಗೌಡರ ಆಶಯಗಳನ್ನು ಆದರ್ಶಗಳನ್ನು ಮೈಗೂಡಿಸಿಕೊಂಡು ಬೆಳೆದು ಬಂದವನು, ರೈತರ ಬಗ್ಗೆ ಧ್ವನಿ ಎತ್ತುವ ಮೂಲಕ ದೇಶದ ಇತಿಹಾಸ ಬದಲಾಯಿಸಿದ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆ. ಅವರ ಪ್ರಧಾನಮಂತ್ರಿಗಳಾಗಿದ್ದಾಗಿನ ಅಧಿಕಾರಾವಧಿಯಲ್ಲಿ ಅವರು ಚಿಂತನೆಗಳು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿತ್ತು ಅಂತಹ ಪ್ರಧಾನ ಮಂತ್ರಿ ಮತ್ತೆ ಸಿಗುವುದಿಲ್ಲ ಎಂದರು.
ಕರ್ನಾಟ ವಿಧಾನಸಭೆ ಚುನಾವಣೆ: ಕಾಂಗ್ರೆಸ್ 224 ಅಭ್ಯರ್ಥಿಗಳ ಪಟ್ಟಿ
ರಾಜ್ಯದ ವಿಚಾರಕ್ಕೆ ಬಂದಾಗ 20 ತಿಂಗಳು ಆಡಳಿತ ನಡೆಸಿದ ಕುಮಾರಸ್ವಾಮಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು, ಸಾರಾಯಿ, ಜೂಜು ಇತ್ಯಾದಿ ಸಮಾಜದ ಮಾರಕ ವಿಚಾರಗಳನ್ನು ತಡೆಯುವ ಮೂಲಕ ಮಾಧ್ಯಮ ಹಾಗೂ ಕಡುಬಡ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸಲು ಅನುವಾಗುವಂತೆ ಮಾಡಿಕೊಟ್ಟರು. ಮತ್ತೆ 14 ತಿಂಗಳ ಅವಧಿಯಲ್ಲಿ ರಾಜ್ಯದ ರೈತರ ಪಾಲಿಗೆ ವರದಾನವಾಗಿ ಸುಮಾರು 26,000 ಕೋಟಿ ಸಾಲ ಮನ್ನಾ ಮಾಡುವ ಮೂಲಕ ಆಶಾಕಿರಣವಾಗಿ ಹೊರಹೊಮ್ಮಿದರು. ಇದೀಗ ಜನತಾ ಜಲಧಾರೆ ಮತ್ತು ಪಂಚರತ್ನ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಹಾಗೂ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವ ಭರವಸೆ ನೀಡಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಮುಂಬರುವ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದು, ಜನತೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಈ ಬಾರಿ ಅವರ ಕೈ ಹಿಡಿಯಬೇಕು ಎಂದು ಮನವಿ ಮಾಡಿದರು.
ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಸುಸಂಸ್ಕೃತ ವ್ಯಕ್ತಿ, ವಿದ್ಯಾವಂತ, ಬುದ್ದಿವಂತ, ನಾಲಿಗೆ ಮೇಲೆ ಹಿಡಿತ ಇರುವ ವ್ಯಕ್ತಿ.ಕೋಲಾರ ವಿಧಾನಸಭಾ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಬೇಕೆಂಬ ಆಶಯವನ್ನು ಇಟ್ಟುಕೊಂಡು ಬಂದಿರುವ ರೈತಾಪಿ ವರ್ಗದ ಕುಡಿ,ಕಳೆದ ಐದು ವರ್ಷಗಳಿಂದ ನಿರಂತರವಾಗಿ ತಮ್ಮ ಸ್ವಂತ ಹಣದಲ್ಲಿ ಸಮಾಜ ಸೇವೆಯನ್ನು ಮಾಡುವ ಮೂಲಕ ಎಲ್ಲರ ಮನ ಗೆದ್ದಿರುವ ಹೃದಯವಂತ ರಾಜಕಾರಣಿ,ಈ ಬಾರಿ ಇವರಿಗೊಂದು ಅವಕಾಶ ಮಾಡಿಕೊಡುವ ಮೂಲಕ ಹದಗೆಟ್ಟ ಕೋಲಾರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕೊನೆ ಗಳಿಗೆಯಲ್ಲಿ ಬಂದ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಹಣದ ಮದದಿಂದ ಗೆಲುವು ಸಾಧಿಸುವ ನಿಟ್ಟಿನಲ್ಲಿ, ಎಲ್ಲವನ್ನು ಕೊಂಡುಕೊಳ್ಳುತ್ತೇವೆ ಎಂಬ ದರ್ಪದ ಮಾತುಗಳನ್ನಾಡುತ್ತಿದ್ದು, ದಲಿತರ ಹಕ್ಕುಗಳನ್ನು ಕಸಿದ, ದಲಿತರನ್ನು ತಾವು ಧರಿಸುವ ಲೇಲೇಕರ್ ಶೂಗೆ ಹೋಲಿಸಿದ ಕೊತ್ತೂರು ಮಂಜುನಾಥ್ ರವರೇ ಕೋಲಾರಕ್ಕೆ ನಿಮ್ಮ ಕೊಡುಗೆ ಏನು? ಹಿರಿಯ ರಾಜಕಾರಣಿ ಕೆ ಎಚ್ ಮುನಿಯಪ್ಪನವರನ್ನು ವ್ಯವಸ್ಥಿತವಾಗಿ ಮುಗಿಸಲು ಬಿಜೆಪಿಗೆ ಬೆಂಬಲ ನೀಡಿದ ನೀವು ಇದೇ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿ ನಿಂತು ಮಣ್ಣುಮುಕ್ಕುವುದು ಗ್ಯಾರಂಟಿ. ಕೋಲಾರದಲ್ಲಿ ಕಾಂಗ್ರೆಸ್ ಇಲ್ಲ , ಇಲ್ಲಿ ಮುಸ್ಲಿಂ ಮತ್ತು ದಲಿತರ ಮತಗಳನ್ನು ದಾಳವಾಗಿಸಿಕೊಂಡು ರಾಜಕಾರಣ ಮಾಡುವುದಾದರೆ ಅದು ನಿಮ್ಮ ಭ್ರಮೆ, ಕೋಲಾರದ ಪ್ರಜ್ಞಾವಂತ ಮತದಾರರು ಈ ಬಾರಿ ಸೇವಕನಿಗೆ ಮಣೆ ಹಾಕುತ್ತಾರೆ ಹೊರತು ಧನದಾಹಿಗಳಿಗಲ್ಲ ದಯವಿಟ್ಟು ಕೋಲಾರ ವಿಧಾನಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮನ್ನಣೆ ನೀಡಬೇಡಿ ಎಂದು ತೀಕ್ಷ್ಣವಾಗಿ ಹೇಳಿದರು.
ಕಳೆದ 2008ರಲ್ಲಿ ಕೋಲಾರಕ್ಕೆ ಬಂದ ಈಗಿನ ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್ ಗೆ ಬೆಂಬಲ ನೀಡಿದ್ದು ಇದೇ ಕಾಂಗ್ರೆಸ್ ಎಂಬುದನ್ನು ಯಾರು ಮರೆತಿಲ್ಲ. ಎರಡು ಬಾರಿ ಪಕ್ಷೇತರರಾಗಿ ಗೆದ್ದು ಕ್ಷೇತ್ರಕ್ಕೆ ನೀವು ಮಾಡಿದ್ದು ಏನು ಇಲ್ಲ.ಅದಕ್ಕೆ ನೀವು ಕಳೆದ ಬಾರಿ ಮೂರನೇ ಸ್ಥಾನಕ್ಕೆ ಹೋಗಿದ್ದೆ ನಿದರ್ಶನ.ಈ ಬಾರಿ ಬಿಜೆಪಿ ಶಾಲು ಹೊದ್ದು ಜನತೆಯ ಮುಂದೆ ಬಂದರೆ ನಂಬುವುದಕ್ಕೆ ಜನ ಮೂರ್ಖರಲ್ಲ. ನನ್ನನ್ನು ಕೊಂಡರಾಜನಹಳ್ಳಿ ದೇವಾಲಯದಿಂದ ಆಚೆ ಹೋಗಬೇಕು ಎಂದು ಹೇಳಿದ್ದೀರಲ್ಲ. ಯಾರು ಕ್ಷೇತ್ರ ಬಿಡುತ್ತಾರೆ ಎಂದು ಮೇ 13ರಂದು ಜನತೆ ತೀರ್ಮಾನ ನೀಡುತ್ತಾರೆ, ನಿಮ್ಮ ರಾಜಕೀಯ ಭವಿಷ್ಯ ಇಲ್ಲಿಗೆ ಅಂತ್ಯ ಎಂದು ವರ್ತೂರ್ ಪ್ರಕಾಶ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಕಾಂಗ್ರೆಸ್ ಬಡವರನ್ನೇ ನಿರ್ಮೂಲನೆ ಮಾಡುತ್ತಿದೆ: ಸುಧಾಕರ್ ವಾಗ್ದಾಳಿ
ಕೋಲಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಸ್ಪರ್ಧೆ ಇದ್ದು, ಕಾಂಗ್ರೆಸ್ ಇಲ್ಲಿ ಲೆಕ್ಕಕ್ಕಿಲ್ಲ. ದಲಿತರು ಅಲ್ಪಸಂಖ್ಯಾತರು ಯೋಚನೆ ಮಾಡಿ ಮತ ನೀಡುವ ಮೂಲಕ ಹಣವಂತರು ಮತ್ತು ಗುಣವಂತನ ನಡುವೆ ನಡೆಯುವ ಈ ಧರ್ಮ ಯುದ್ಧದಲ್ಲಿ ಗುಣವಂತ (ಸಿಎಂಆರ್ ಶ್ರೀನಾಥ್) ನನ್ನು ಕೈಹಿಡಿದು ಕೋಲಾರವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಸಹಕರಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಯುವ ಮುಖಂಡರಾದ ಕಡಗಟ್ಟೂರು ವಿಜಯ್ ಕುಮಾರ್, ಅಮ್ಮನಲ್ಲೂರು ಜಯರಾಂ, ರಾಮಸಂದ್ರ ತಿರುಮಲೇಶ್, ಮನು, ರಾಮಾಪುರ ಶ್ರೀನಾಥ್ ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.