ಕನಕಪುರದಲ್ಲಿ ನಾನು ಅಭ್ಯರ್ಥಿಯೇ ಅಲ್ಲ, ಪ್ರತಿ ಮನೆಯಲ್ಲೂ ಡಿ.ಕೆ. ಶಿವಕುಮಾರ್ ಇದ್ದಾನೆ ಅವರೇ ಅಭ್ಯರ್ಥಿಗಳು, ಅವರೇ ಚುನಾವಣೆ ಮಾಡಿಕೊಳ್ಳುತ್ತಾರೆ. ನಾನು ನಾಮಪತ್ರ ಸಲ್ಲಿಸಿದ್ದೇನೆ ಅಷ್ಟೇ ಉಳಿದಿದ್ದೆಲ್ಲ ಅವರೇ ಮಾಡಿಕೊಳ್ಳುತ್ತಾರೆ. ಎಲ್ಲಾ ವಿಘ್ನಗಳನ್ನು ನಿವಾರಣೆ ಮಾಡುವಂತೆ ವಿಘ್ನೇಶ್ವರನ ಬಳಿ ಬಂದಿದ್ದೇನೆ ಎಂದ ಡಿ.ಕೆ. ಶಿವಕುಮಾರ್.
ಚಿಕ್ಕಮಗಳೂರು(ಏ.22): ನನ್ನ ಚುನಾವಣಾ ಪ್ರಚಾರವನ್ನ ಶೃಂಗೇರಿ ಕ್ಷೇತ್ರದಿಂದ ಆರಂಭಿಸಿದ್ದೇನೆ. ಇಂದು(ಶನಿವಾರ) ಬೆಳಗ್ಗೆ ಮಂಜುನಾಥ ಸ್ವಾಮಿ ಈಗ ಶಾರದಾಂಬೆ ದರ್ಶನ ಮಾಡಿ ಪ್ರಾರ್ಥಿಸಿದ್ದೇನೆ. ಯಾವಾಗ ಯಾಗ ಪೂಜೆ ಮಾಡಬೇಕೆಂಬುದು ಭಕ್ತ ಹಾಗೂ ತಾಯಿಗೆ ಬಿಟ್ಟ ವಿಚಾರವಾಗಿದೆ. ಅದು ಬೇರೆ ಯಾರಿಗೂ ಸಂಬಂಧಿಸಿದ್ದಲ್ಲ. ಇಲ್ಲಿ ಯಾವುದೇ ಕಲ್ಮಶವೂ ಇಲ್ಲ, ರಾಜಕಾರಣವೂ ಇಲ್ಲ. ಯಾರು ಏನು ಬೇಕಾದರೂ ಪ್ರಾರ್ಥನೆ ಮಾಡಿಕೊಳ್ಳಬಹುದು ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇಂದು(ಶನಿವಾರ) ಜಿಲ್ಲೆಯ ಶೃಂಗೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೂಡ ಇಲ್ಲಿ ದೊಡ್ಡ ಹೋಮ-ಯಾಗ ನಡೆಸಿದ ಇತಿಹಾಸವಿದೆ. ಇಂದಿರಾ ಗಾಂಧಿ ಕಾಲದಿಂದಲೂ ಇಲ್ಲಿ ನಡೆದಿರುವುದು ಗೊತ್ತಿದೆ. ನಮಗೂ ಈ ಕ್ಷೇತ್ರಕ್ಕೂ ಭಾವನಾತ್ಮಕ ಸಂಬಂಧವಿದೆ ಅಂತ ಹೇಳಿದ್ದಾರೆ.
undefined
Karnataka election 2023: ಕಾಫಿನಾಡಿನಲ್ಲೂ ಹ್ಯಾಟ್ರಿಕ್ ಹಿರೋಗಳು!
ಕನಕಪುರದಲ್ಲಿ ನಾನು ಅಭ್ಯರ್ಥಿಯೇ ಅಲ್ಲ, ಪ್ರತಿ ಮನೆಯಲ್ಲೂ ಡಿ.ಕೆ. ಶಿವಕುಮಾರ್ ಇದ್ದಾನೆ ಅವರೇ ಅಭ್ಯರ್ಥಿಗಳು, ಅವರೇ ಚುನಾವಣೆ ಮಾಡಿಕೊಳ್ಳುತ್ತಾರೆ. ನಾನು ನಾಮಪತ್ರ ಸಲ್ಲಿಸಿದ್ದೇನೆ ಅಷ್ಟೇ ಉಳಿದಿದ್ದೆಲ್ಲ ಅವರೇ ಮಾಡಿಕೊಳ್ಳುತ್ತಾರೆ. ಎಲ್ಲಾ ವಿಘ್ನಗಳನ್ನು ನಿವಾರಣೆ ಮಾಡುವಂತೆ ವಿಘ್ನೇಶ್ವರನ ಬಳಿ ಬಂದಿದ್ದೇನೆ ಅಂತ ಡಿಕೆಶಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.