ಹಿರೇಕೆರೂರು JDS ಅಭ್ಯರ್ಥಿ ನಾಮಪತ್ರ ತೆಗೆಸಿ ಸಂತಸದಲ್ಲಿದ್ದ ಬಿಜೆಪಿಗೆ ಶಾಕ್ ಕೊಟ್ಟ HDK

By Web Desk  |  First Published Nov 22, 2019, 9:56 PM IST

ಹಿರೇಕೆರೂರು ಅಖಾಡಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲದಂತೆ ಮಾಡಿ ಖುಷಿಯಲ್ಲಿ ತೇಲಾಡುತ್ತಿರುವ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಸೋಲಿಸಲು ಜೆಡಿಎಸ್ ಮತ್ತೊಂದು ರಣತಂತ್ರ ರೂಪಿಸಿದೆ, ಅರೇ ಏನಿದು ಅಭ್ಯರ್ಥಿ ಇಲ್ಲದಿದ್ದರೂ ಜೆಡಿಎಸ್ ನ ತಂತ್ರವೇನು..? ಮುಂದೆ ಓದಿ


ಹಾವೇರಿ, [ನ.22]: ಹಿರೀಕೆರೂರು ಉಪಚುನಾವಣೆ ಕಣದಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲದಂತೆ ಮಾಡಿ ನಿರಾಳವಾಗಿರುವ ಬಿಜೆಪಿಗೆ ಕುಮಾರಸ್ವಾಮಿ ಶಾಕ್ ಕೊಟ್ಟಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಹಿರೇಕೆರೂರು ಅಖಾಡದಲ್ಲಿರುವ ಉಜನೆಪ್ಪ ಕೋಡಿಹಳ್ಳಿಗೆ ಅವರಿಗೆ ಬೆಂಬಲ ನೀಡಲು ಕುಮಾರಸ್ವಾಮಿ ಮುಂದಾಗಿದ್ದಾರೆ.

Latest Videos

undefined

ಹಿರೇಕೆರೂರು: ನಾಮಪತ್ರ ವಾಪಸ್ ಪಡೆದ ಶಿವಲಿಂಗ ಶಿವಾಚಾರ್ಯ ಶ್ರೀ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸುರವ ಉಜನೆಪ್ಪ, ಜೆಡಿಎಸ್ ಪಕ್ಷದ ವರಿಷ್ಠರು ನಮಗೆ ಬೆಂಬಲ ಕೊಡುವುದಾಗಿ ಹೇಳಿದ್ದು, ನಾನು ಚುನಾವಣೆ ಕಣದಲ್ಲಿದ್ದು ಜೆಡಿಎಸ್ ಕಾರ್ಯಕರ್ತರು ನನ್ನ ಪರವಾಗಿ ಶ್ರಮಿಸಲು ಸಿದ್ಧರಿದ್ದಾರೆ. ಈಗಾಗಲೇ ನಮ್ಮ ಸುಪ್ರೀಂ ದೇವೆಗೌಡರು ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ಸದ್ಯ ಜೆಡಿಎಸ್ ಮುಖಂಡ ಎನ್ ಹೆಚ್ ಕೋನರೆಡ್ಡಿ ಘೋಷಣೆ ಮಾಡಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಹಾವೇರಿ ಉಪಚುನಾವಣೆಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಶಿವಚಾರ್ಯ ಸ್ವಾಮೀಜಿಗಳು ನಾಮಪತ್ರ ಸಲ್ಲಿಸಿದ್ದರು. ಬಳಿಕ ಬಿಎಸ್ ವೈ ಪುತ್ರ ಬಿ ವೈ ರಾಘವೇಂದ್ರ ಮನವೊಲಿಕೆಯಿಂದಾಗಿ ಶವಚಾರ್ಯ ಸ್ವಾಮೀಜಿಗಳು ಗುರುವಾರ ನಾಮಪತ್ರ ವಾಪಸ್ ತೆಗೆದುಕೊಂಡಿದ್ದಾರೆ. 

ಈ ಮೂಲಕ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ನಿಟ್ಟುಸಿರು ಬಿಟ್ಟರೇ ಕೊನೆಗಳಿಗೆಯಲ್ಲಿ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದರಿಂದ ಜೆಡಿಎಸ್ ಗೆ ಸಂಕಟವಾಗಿತ್ತು. 

ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವೇಳೆ ಉಜನೆಪ್ಪ ಕೋಡಿಹಳ್ಳಿಗೆ ಅವರ ಹೆಸರು ಇತ್ತು. ಬಳಿಕ ಶಿವಲಿಂಗ ಶಿವಾಚಾರ್ಯ ಅವರಿಗೆ ಬಿ.ಫಾರಂ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ  ಉಜನೆಪ್ಟ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.

ಇದೀಗ ಜೆಡಿಎಸ್ ಗೆ ಉಜನೆಪ್ಪ ಅವರೇ ಗತಿಯಾಗಿದ್ದು, ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅವರನ್ನು ಸೋಲಿಸಲು ಪಣತೊಟ್ಟಿರುವ ಕುಮಾರಸ್ವಾಮಿಗೆ ವಿಧಿ ಇಲ್ಲದೇ ಉಜನಪ್ಪಗೆ ಬೆಂಬಲ ಘೋಷಿಸುವ ಅನಿವಾರ್ಯತೆ ಎದುರಾಗಿದೆ.

click me!